ಸಪ್ತರ್ಷಿಗಳ ಆಜ್ಞೆಯಂತೆ ಪರಾತ್ಪರ ಗುರು ಡಾ. ಆಠವಲೆಯವರ ರಥೋತ್ಸವವನ್ನು ಆಚರಿಸುವ ಮೊದಲು ಈಶ್ವರನು ರಥೋತ್ಸವದ ಸಂದರ್ಭದಲ್ಲಿ ಹೇಗೆ ಲೀಲೆಯನ್ನು ಮಾಡಿದನು, ಈ ವಿಷಯದ ಬಗ್ಗೆ ಈ ಲೇಖದಿಂದ ತಿಳಿದುಕೊಳ್ಳೋಣ.
ಶ್ರೀಕಾಕುಲಮ್ (ಆಂಧ್ರಪ್ರದೇಶ) ಮತ್ತು ಶ್ರೀ ಜಗನ್ನಾಥಪುರಿಯಲ್ಲಿನ ರಥೋತ್ಸವದ ಸಂಬಂಧವು ಪರಾತ್ಪರ ಗುರು ಡಾ. ಆಠವಲೆಯವರ ದಿವ್ಯ ರಥೋತ್ಸವಕ್ಕಿರುವುದು ಇದು ಈಶ್ವರೀ ನೀಯೋಜನೆಯಾಗಿದೆ !
೧. ರಥೋತ್ಸವದ ಹಿನ್ನೆಲೆ
‘೩.೨.೨೦೨೨ ರಂದು ಆದ ಸಪ್ತರ್ಷಿ ಜೀವನಾಡಿಪಟ್ಟಿಯ ೧೯೬ ನೇಯ ವಾಚನದಲ್ಲಿ ಸಪ್ತರ್ಷಿಗಳು ‘ಈ ವರ್ಷ ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತವಾಗಿ ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಜನ್ಮತಿಥಿಗೆ (ವೈಶಾಖ ಕೃಷ್ಣ ಸಪ್ತಮಿಗೆ (೨೨.೫.೨೦೨೨ ಈ ದಿನದಂದು) ನಮಗೆ ಗುರುದೇವರ ರಥೋತ್ಸವವನ್ನು ಆಚರಿಸುವುದಿದೆ. ಅದಕ್ಕೆ ಮೊದಲು ಸಪ್ತರ್ಷಿಗಳ ಆಜ್ಞೆಯಂತೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಆಂಧ್ರಪ್ರದೇಶದಲ್ಲಿನ ಶ್ರೀಕಾಕುಲಂ ಜಿಲ್ಲೆಯ ಶ್ರೀ ಇಂದ್ರಾಕ್ಷಿದೇವಿಯ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆಯನ್ನು ಮಾಡಬೇಕೆಂದು ಹೇಳಿದರು. ೧೨.೨.೨೦೨೨ ಈ ದಿನದಂದು ಸಪ್ತರ್ಷಿಗಳ ಆಜ್ಞೆಯಂತೆ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಆಂಧ್ರಪ್ರದೇಶ ರಾಜ್ಯದ ಶ್ರೀಕಾಕುಲಂ ಜಿಲ್ಲೆಯ ಶ್ರೀ ಇಂದ್ರಾಕ್ಷಿ ದೇವಿಯ ದೇವಸ್ಥಾನಕ್ಕೆ ಹೋಗಿ ದೇವಿಗೆ ಪ್ರಾರ್ಥನೆ ಮಾಡಿದರು.
೨. ಮ್ಯಾನ್ಮಾರ ಇಲ್ಲಿಂದ ಬಂಗಾರದ ಬಣ್ಣದ ರಥವು ತೇಲುತ್ತಾ ಬರುವುದು, ಇದು ಈಶ್ವರನ ನಿಯೋಜನೆಯಾಗಿದೆ !
೨ ಅ. ಸಪ್ತರ್ಷಿಗಳ ಆಜ್ಞೆಯಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಭಾರತ-ಮ್ಯಾನ್ಮಾರ ಗಡಿಗೆ ಹೋಗಿ ಭಾರತಕ್ಕಾಗಿ ಪ್ರಾರ್ಥನೆಯನ್ನು ಮಾಡುವುದು ಮತ್ತು ಅದಾದ ನಂತರ ಕೆಲವೇ ದಿನಗಳಲ್ಲಿ ಮ್ಯಾನ್ಮಾರನಿಂದ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಸಮುದ್ರದಲ್ಲಿ ರಥವು ತೇಲುತ್ತಾ ಬರುವುದು : ೧೦.೫.೨೦೨೨ ರಂದು ಬಂಗಾಲದ ಸಮುದ್ರದಲ್ಲಿ ‘ಆಸಾನೀ’ ಎಂಬ ಹೆಸರಿನ ಚಂಡಮಾರುತವು ನಿರ್ಮಾಣವಾಯಿತು ಮತ್ತು ೧೧.೫.೨೦೨೨ ಈ ದಿನದಂದು ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಸಮುದ್ರತೀರದಲ್ಲಿ ಸಮುದ್ರದಿಂದ ಬಂಗಾರದ ಬಣ್ಣದ ಒಂದು ದೊಡ್ಡ ರಥವು ತೇಲುತ್ತಾ ಬಂದಿತು. ಅಂದು ಸಮುದ್ರದಿಂದ ರಥವು ತೇಲುತ್ತಾ ಬರುವ ವಾರ್ತೆಯು ರಾಷ್ಟ್ರೀಯ ವಾರ್ತೆಯಾಗಿತ್ತು. ಕೆಲವು ಜನರು “ಈ ರಥವು ಮ್ಯಾನ್ಮಾರ ದೇಶದ್ದಾಗಿರಬಹುದು”, ಎನ್ನುತ್ತಿದ್ದರು. ವೈಶಿಷ್ಟ್ಯವೆಂದರೆ ಈ ರಥವು ಸಮುದ್ರದಲ್ಲಿ ಸಿಗುವ ಕೆಲವೇ ದಿನಗಳ ಹಿಂದೆ ಸಪ್ತರ್ಷಿಗಳ ಆಜ್ಞೆಯಂತೆ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಮಣಿಪುರ ರಾಜ್ಯದಲ್ಲಿನ ಭಾರತ-ಮ್ಯಾನ್ಮಾರ ಗಡಿಗೆ ಹೋಗಿ ದೇಶಕ್ಕಾಗಿ ಪ್ರಾರ್ಥನೆಯನ್ನು ಮಾಡಿ ಬಂದಿದ್ದರು.
೨ ಆ. ‘ಪರಾತ್ಪರ ಗುರು ಡಾ. ಆಠವಲೆಯವರ ರಥೋತ್ಸವವನ್ನು ಆಚರಿಸುವ ಕೆಲವು ದಿನ ಮೊದಲು ಸಮುದ್ರದಿಂದ ರಥವು ತೇಲಿಕೊಂಡು ಬರುವುದು, ಇದು ಈಶ್ವರನ ಸಂಕೇತವಾಗಿದೆ’, ಎಂದು ಸಪ್ತರ್ಷಿಗಳು ಹೇಳುವುದು : ನಾವು ಸಪ್ತರ್ಷಿಗಳಿಗೆ ಈ ರಥದ ಬಗ್ಗೆ ಹೇಳಿದೆವು. ಆಗ ಸಪ್ತರ್ಷಿಗಳು, ‘೨೨.೫.೨೦೨೨ ರಂದು ನಮಗೆ ಪರಾತ್ಪರ ಗುರು ಡಾ. ಆಠವಲೆಯವರ ರಥೋತ್ಸವವನ್ನು ಆಚರಿಸುವುದಿದೆ. ಅದಕ್ಕಾಗಿ ಮೊದಲು ‘ಸಮುದ್ರದಿಂದ ಈ ರಥವು ತೇಲುತ್ತಾ ಬರುವುದು, ಇದು ಸಾಮಾನ್ಯವಾದ ಸಂಗತಿಯಲ್ಲ. ಮ್ಯಾನ್ಮಾರ ದೇಶದ ಜನರು ಎಷ್ಟೋ ತಿಂಗಳು ಹಿಂದೆ ಆ ರಥವನ್ನು ಹರಕೆ ಎಂದು ಸಮುದ್ರದಲ್ಲಿ ಬಿಟ್ಟಿರಬಹುದು; ಆದರೆ ‘ಗುರುದೇವರ ರಥೋತ್ಸವದ ಕೆಲವು ದಿನ ಮೊದಲು ಅದು ತೇಲುತ್ತಾ ಬರುವುದು ಇದು ಕೇವಲ ಯೋಗಾಯೋಗವಲ್ಲ. ಇದು ದೈವೀ ಅನುಭೂತಿಯಾಗಿದೆ. ಇಷ್ಟು ದಿನಗಳಲ್ಲಿ ಆ ರಥವು ಸಮುದ್ರದಲ್ಲಿ ಮುಳುಗಲಿಲ್ಲ ಮತ್ತು ಭಾರತ ದೇಶದ ನೌಕಾದಳಕ್ಕೂ ಆ ರಥವು ಕಾಣಿಸಲಿಲ್ಲ. ಇದೆಲ್ಲ ಈಶ್ವರನ ನಿಯೋಜನೆಯಾಗಿದೆ’, ಎಂದರು.
೨ ಇ. ಗುರುದೇವರ ಜನ್ಮನಕ್ಷತ್ರದ ದಿನದಂದು ಜಗನ್ನಾಥಪುರಿಯ ಜಗನ್ನಾಥನ ರಥ ನಿರ್ಮಿತಿಯ ಶುಭಾರಂಭವಾಗುವುದು : ೨೦.೫.೨೦೨೨ ರಂದು ಪರಾತ್ಪರ ಗುರು ಡಾ. ಆಠವಲೆಯವರ ಉತ್ತರಾಷಾಢ ಈ ಜನ್ಮನಕ್ಷತ್ರವಿತ್ತು ಮತ್ತು ಆ ದಿನವೇ ಸಪ್ತರ್ಷಿಗಳು ರಾಮನಾಥಿ ಆಶ್ರಮದಲ್ಲಿ ‘ಮಹಾಮೃತ್ಯುಂಜಯ’ ಹೋಮವನ್ನು ಮಾಡಲು ಹೇಳಿದ್ದರು. ಮಹಾಮೃತ್ಯುಂಜಯ ಹೋಮ ಪ್ರಾರಂಭವಾಯಿತು ಮತ್ತು ‘ಈ ವರ್ಷ ೨೦೨೨ ರ ಜಗನ್ನಾಥಪುರಿಯ ಜಗನ್ನಾಥನ ರಥೋತ್ಸವಕ್ಕಾಗಿ ಮಾಡುವ ಕಟ್ಟಿಗೆಯ ರಥದ ಕೆಲಸಕ್ಕೆ ಶುಭಾರಂಭವಾಯಿತೆಂದು ಇಂದು (೨೦.೫.೨೦೨೨ ಈ ದಿನದಂದು) ನಮಗೆ ತಿಳಿಯಿತು.
‘ಇದೆಲ್ಲವೂ ‘೨೨.೫.೨೦೨೨ ಈ ದಿನದಂದು ಆಗುವ ಗುರುದೇವರ ರಥೋತ್ಸವಕ್ಕೆ ಸಂಬಂಧಿಸಿದ ಶುಭ ಸಂಕೇತ ಮತ್ತು ಮುನ್ಸೂಚನೆಗಳಾಗಿದ್ದವು’, ಎಂದು ನನಗೆ ಅನಿಸಿತು.
೩. ‘ಪರಾತ್ಪರ ಗುರು ಡಾ. ಆಠವಲೆಯವರ ರಥೋತ್ಸವವಾಗುವುದು’, ಶ್ರೀಮನ್ನಾರಾಯಣನು ಮಾಡಿದ ರಥಲೀಲೆ !
‘ವರ್ಷ ೨೦೨೨ ರ ಗುರುದೇವರ ಜನ್ಮೋತ್ಸವವು ಹೇಗಿರಬಹುದು ?’, ಇದರ ಬಹಳಷ್ಟು ಕುತೂಹಲವು ಎಲ್ಲ ಸಾಧಕರಿಗಿತ್ತು. ಆದರೆ ‘ಗುರುದೇವರ ರಥೋತ್ಸವವಿರಬಹುದು ಎಂದು ಯಾರಿಗೂ ಅನಿಸಿರಲಿಲ್ಲ. ಮೇಲಿನ ಘಟನೆಗಳನ್ನು ನೋಡಿದರೆ ‘ಶ್ರೀಮನ್ನಾರಾಯಣಸ್ವರೂಪಿ ಗುರುದೇವರು ರಥದಲ್ಲಿ ಆರೂಢರಾಗಿ ಸಾಧಕರಿಗೆ ದರ್ಶನವನ್ನು ಕೊಡುವುದು’, ಇದು ಬ್ರಹ್ಮಾಂಡದಲ್ಲಿನ ದೈವೀ ನಿಯೋಜನೆಯಾಗಿತ್ತು. ‘ಇದು ಶ್ರೀಮನ್ನಾರಾಯಣನ ರಥಲೀಲೆಯೇ ಆಗಿತ್ತು’, ಎಂದು ನನ್ನ ಗಮನಕ್ಕೆ ಬಂದಿತು.
– ಶ್ರೀ ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೬), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೩.೫.೨೦೨೨)
ಪ್ರಾರ್ಥನೆ
‘ಹೇ ಶ್ರೀಮನ್ನಾರಾಯಣಸ್ವರೂಪಿ ಗುರುದೇವರೇ, ‘ಈ ದೇಹದಿಂದ ಮತ್ತು ಇದೇ ಕಣ್ಣಿನಿಂದ ನಮಗೆ ನಿಮ್ಮ ರಥೋತ್ಸವವನ್ನು ಪೃಥ್ವಿಯ ಮೇಲೆ ನೋಡಲು ಸಿಕ್ಕಿತು. ನಮ್ಮ ಜೀವನವು ಕೃತಾರ್ಥವಾಯಿತು. ‘ನ ಭೂತೋ ನ ಭವಿಷ್ಯತಿ’ ಹೀಗೆ ನೆರವೇರಿದ ನಿಮ್ಮ ರಥೋತ್ಸವದಿಂದ ನೀವು ನಮಗೆ ಅಪೂರ್ವ ಮತ್ತು ಅವಿಸ್ಮರಣೀಯ ಆನಂದವನ್ನು ನೀಡಿದಿರಿ. ಗುರುದೇವರೆ, ನಿಮ್ಮ ರಥವು ಹೇಗೆ ಮುಂದೆ ಮುಂದೆ ಸಾಗುತ್ತಿತ್ತೋ, ಹಾಗೆ ನೀವು ಎಲ್ಲ ಸಾಧಕರಿಗೆ, ನಾನು ಹೀಗೆ ಎಲ್ಲ ಸಾಧಕರನ್ನು ಕಲಿಯುಗದ ಈ ಭೀಕರ ಆಪತ್ಕಾಲದಿಂದ ರಾಮರಾಜ್ಯದ ಕಡೆಗೆ (ಹಿಂದೂ ರಾಷ್ಟ್ರದ ಕಡೆಗೆ) ಒಯ್ಯುತ್ತಿದ್ದೇನೆ ! ಎಂಬ ಭರವಸೆಯನ್ನು ನೀಡಿದಿರಿ. ನಾವು ಸಾಧಕರು ನಿಮ್ಮ ಚರಣಗಳಲ್ಲಿ ಪ್ರಾರ್ಥನೆಯನ್ನು ಮಾಡುತ್ತಿದ್ದೇವೆ, ‘ಹೇ ಗುರುದೇವರೆ, ಕೊನೆಯ ಶ್ವಾಸವಿರುವವರೆಗೂ ನಮ್ಮೆಲ್ಲ ಸಾಧಕರಿಗೆ ನಿಮ್ಮ ಚರಣಗಳಲ್ಲಿ ಕೃತಜ್ಞತೆಯ ಭಾವದಿಂದ ಸೇವೆಯನ್ನು ಮಾಡಲು ಬರಲಿ’, ಹೀಗೆ ನಮ್ಮ ಪ್ರಾರ್ಥನೆಯನ್ನು ಸ್ವೀಕರಿಸಿ, ಗುರುದೇವಾ, ಸ್ವೀಕರಿಸಿ !
– ಶ್ರೀ. ವಿನಾಯಕ ಶಾನಭಾಗ (೨೩.೫.೨೦೨೨)