ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ಮಹರ್ಷಿಗಳ ಕುರಿತಾದ ಶಿಷ್ಯಭಾವ ಮತ್ತು ಮಹರ್ಷಿಗಳಿಗೆ ಪರಾತ್ಪರ ಗುರು ಡಾ. ಆಠವಲೆಯವರು ‘ಶ್ರೀಮನ್ನಾರಾಯಣನ ಅವತಾರ’ವೆಂದು ಇರುವ ಗೌರವಭಾವ !

ಪರಾತ್ಪರ ಗುರು ಡಾ. ಆಠವಲೆಯವರ ರಥೋತ್ಸವದ ಸಂದರ್ಭದಲ್ಲಿ ಘಟಿಸಿದ ಸುಂದರ ನಿಸರ್ಗದ ಲೀಲೆ !

೧. ಮಳೆ ಬರುತ್ತಿರುವುದರಿಂದ ಮಹರ್ಷಿಗಳು ಹೇಳಿದ ರಥೋತ್ಸವದ ದಿನಾಂಕವನ್ನು ಮುಂದೂಡುವ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರು ಅವರಲ್ಲಿ ವಿಚಾರಿಸಲು ಹೇಳುವುದು; ಆದರೆ ಅನಂತರ ‘ಹಾಗೆ ಮಾಡುವುದು ಎಂದರೆ ಮಹರ್ಷಿಗಳ ಮೇಲೆ ಅವಿಶ್ವಾಸವನ್ನು ತೋರಿಸಿದಂತಾಗುವುದು’, ಎಂದೆನಿಸಿ ಅವರು ಮಹರ್ಷಿಗಳಲ್ಲಿ ಮೂರು ಸಲ ಕ್ಷಮೆ ಯಾಚಿಸುವುದು

ಪರಾತ್ಪರ ಗುರು ಡಾ. ಆಠವಲೆ

೧ ಅ. ೧೮.೫.೨೦೨೨ ರಂದು ‘ಗೋವಾದಲ್ಲಿ ಮುಂದಿನ ೨ ದಿನಗಳು ಗುಡುಗು ಸಿಡಿಲು ಸಹಿತ ಮಳೆ ಬರಲಿದೆ’, ಎಂದು ದೈನಿಕದಲ್ಲಿ ಸುದ್ದಿ ಇರುವುದರಿಂದ ಮತ್ತು ಅದರಂತೆ ಮಳೆ ಬಂದುದರಿಂದ ‘೨೨ ಮೇ ರಂದು ಮಹರ್ಷಿಗಳು ಹೇಳಿದ ರಥೋತ್ಸವದ ದಿನಾಂಕವನ್ನು ಮುಂದೂಡಬಹುದೇ ?, ಎಂದು ವಿಚಾರಿಸಬೇಕು’, ಎಂದು ಪರಾತ್ಪರ ಗುರು ಡಾ. ಆಠವಲೆ ಯವರ ಮನಸ್ಸಿನಲ್ಲಿ ವಿಚಾರ ಬರುವುದು :

‘೨೨.೫.೨೦೨೨ ರಂದು ನನ್ನ ಜನ್ಮತಿಥಿ ಇತ್ತು. ಆ ದಿನ ನನ್ನ ರಥೋತ್ಸವವನ್ನು ಮಾಡಬೇಕೆಂದು ಮಹರ್ಷಿಗಳು ‘ಸಪ್ತರ್ಷಿ ಜೀವನಾಡಿ ಪಟ್ಟಿ’ಯ ಮೂಲಕ ಪೂ. ಓಂ ಉಲಗನಾಥನ್‌ರ ಮಾಧ್ಯಮದಿಂದ ನನಗೆ ತಿಳಿಸಿದ್ದರು. ೧೭.೫.೨೦೨೨ ರಂದು ಗೋವಾದಲ್ಲಿ ತುಂಬಾ ಮಳೆ ಬಂದಿತ್ತು. ೧೮.೫.೨೦೨೨ ರಂದು ದೈನಿಕ ‘ಸನಾತನ ಪ್ರಭಾತ’ದಲ್ಲಿ ಗೋವಾದಲ್ಲಿ ಮುಂದಿನ ೨ ದಿನಗಳು ಗುಡುಗು ಸಿಡಿಲುಗಳ ಸಹಿತ ಮಳೆ ಬರಲಿದೆ ಮತ್ತು ಆ ಸಮಯದಲ್ಲಿ ಗಾಳಿಯ ವೇಗವು ಹೆಚ್ಚಾಗಿರುವುದು, ಎಂಬ ಸುದ್ದಿಯನ್ನು ಮುದ್ರಿಸಲಾಗಿತ್ತು. ೨೦.೫.೨೦೨೨ ರಂದು ಗೋವಾದಲ್ಲಿ ತುಂಬಾ ಮಳೆ ಬಂತು ಮತ್ತು ಬಿರುಸಾಗಿ ಗಾಳಿಯೂ ಬೀಸುತ್ತಿತ್ತು. ಆಗ ನನ್ನ ಮನಸ್ಸಿನಲ್ಲಿ, “೨೨ ನೇ ತಾರೀಖಿಗೆ ಹೀಗಾದರೆ ಜನ್ಮೋತ್ಸವದ ರಥೋತ್ಸವವನ್ನು ಮಾಡಲು ಸಾಧ್ಯವಿಲ್ಲ; ಎಂದು ನಾವು ‘ಮಹರ್ಷಿಗಳಿಗೆ ರಥೋತ್ಸವದ ದಿನಾಂಕವನ್ನು ಮುಂದೂಡಬಹುದೇ ?’, ಎಂದು ಕೇಳಬೇಕೆಂಬ ವಿಚಾರ ಬಂದಿತು. ಅದರಂತೆ ಅವರಿಗೆ ತಿಳಿಸಲು ನಾನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ತಿಳಿಸಿದೆನು.

೧ ಆ. ‘ಮಹರ್ಷಿಗಳು ಹೇಳಿದ ರಥೋತ್ಸವದ ದಿನಾಂಕವನ್ನು ಮುಂದೂಡುವ ಬಗ್ಗೆ ಅವರಲ್ಲಿ ವಿಚಾರಿಸುವುದೆಂದರೆ, ಅವರ ಮೇಲೆ ಅವಿಶ್ವಾಸವನ್ನು ತೋರಿಸದಂತಾಗುವುದು, ಎಂದು ಅನಿಸಿ ಪರಾತ್ಪರ ಗುರು ಡಾ. ಆಠವಲೆಯವರು ಮಹರ್ಷಿಗಳಲ್ಲಿ ಮೂರು ಸಲ ಕ್ಷಮೆ ಯಾಚಿಸುವುದು : ಅನಂತರ ಒಂದು ಗಂಟೆಯೊಳಗೆ ನನ್ನ ಮನಸ್ಸಿನಲ್ಲಿ, ‘ಮಹರ್ಷಿಗಳು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಇದು ವರೆಗೆ ೭ ವರ್ಷ ಸತತವಾಗಿ ಮಾರ್ಗದರ್ಶನವನ್ನು ಮಾಡುತ್ತಿದ್ದಾರೆ, ಹೀಗಿದ್ದಾಗ ನಾವು ಅವರಲ್ಲಿ ವಿಚಾರಿಸುವುದೆಂದರೆ ಅವರ ಮೇಲೆ ಅವಿಶ್ವಾಸ ತೋರಿದಂತಾಗುತ್ತದೆ, ಅದಕ್ಕಿಂತ ಆಗುವುದೆಲ್ಲವನ್ನೂ ಸಾಕ್ಷಿಭಾವದಿಂದ ನೋಡಬೇಕು ಎಂಬ ವಿಚಾರ ಬಂದಿತು. ಆಗ, ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಮಹರ್ಷಿಗಳಿಗೆ ಈಗಾಗಲೇ ತಿಳಿಸಿದ್ದರೆ ‘ಹಾಗೆ ತಿಳಿಸಿದ ಬಗ್ಗೆ ಅವರಿಗೆ ‘ನಾನು ಮೂರು ಸಲ ಕ್ಷಮೆ ಯಾಚಿಸಿದ್ದೇನೆ’, ಎಂದು ತಿಳಿಸಬೇಕು ಎಂದು ಹೇಳಿದೆ.

– (ಪರಾತ್ಪರ ಗುರು) ಡಾ. ಆಠವಲೆ (೨೫.೫.೨೦೨೨)

೨. ಪರಾತ್ಪರ ಗುರು ಡಾ. ಆಠವಲೆಯವರಿಂದ ಕಲಿಯಲು ಸಿಕ್ಕಿದ ಮಹರ್ಷಿಗಳ ಬಗೆಗಿನ ಶಿಷ್ಯಭಾವ, ಆಜ್ಞಾಪಾಲನೆಯ ಮಹತ್ವ, ಅವರ ಅಹಂಶೂನ್ಯತೆ ಮತ್ತು ನಮ್ರತೆ !

ಶ್ರೀಚಿತ್‌ಶಕ್ತಿ(ಸೌ.) ಅಂಜಲೀ ಗಾಡಗೀಳ

ಮೇಲಿನ ಸಂದರ್ಭದಲ್ಲಿ ನನಗೆ ಪರಾತ್ಪರ ಗುರು ಡಾ. ಆಠವಲೆಯವರ ಸಂಚಾರವಾಣಿ ಕರೆ ಬಂದಿತು, ಆಗ ಅವರು, ‘ನನ್ನಿಂದ ಒಂದು ದೊಡ್ಡ ತಪ್ಪಾಗಿದೆ. ಮಹರ್ಷಿಗಳಿಗೆ ನಾವು ‘ರಥೋತ್ಸವದ ದಿನಾಂಕ ಮುಂದೆ ಹಾಕೋಣವೇ ?’, ಎಂದು ವಿಚಾರಿಸುವುದು ಎಂದರೆ ಅವರ ಮೇಲೆ ಅವಿಶ್ವಾಸವನ್ನು ತೋರಿಸಿದಂತಾಗುತ್ತದೆ. ಅಧ್ಯಾತ್ಮದಲ್ಲಿ ಆಜ್ಞಾಪಾಲನೆಗೆ ತುಂಬ ಮಹತ್ವವಿದೆ. ಇಲ್ಲಿ ಸಾಕ್ಷಾತ್ ಮಹರ್ಷಿಗಳು ನಮಗೆ ಹೇಳುತ್ತಿದ್ದಾರೆ. ನಾವು ಯಾವಾಗಲೂ ಶಿಷ್ಯಭಾವದಲ್ಲಿಯೇ ಇರಬೇಕು. ಮಹರ್ಷಿಗಳಿಗೆ ನಾನು “ಕ್ಷಮಿಸಿ ಕ್ಷಮಿಸಿ, ಕ್ಷಮಿಸಿ ಎಂದು ಮೂರು ಸಲ ಹೇಳಿದ್ದೇನೆಂದು ತಿಳಿಸಿ !” ಎಂದು ಹೇಳಿದರು.

ಪರಾತ್ಪರ ಗುರು ಡಾ. ಆಠವಲೆಯವರು ಸಂಚಾರಿವಾಣಿಯಲ್ಲಿ ಮಾತನಾಡಿದ ನಂತರ ನಾನು ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರು ‘ಇದರಿಂದ ಈಶ್ವರನು ನಮಗೆ ಏನೋ ಕಲಿಸುತ್ತಿದ್ದಾನೆ. ಗುರುದೇವರು ಸಾಕ್ಷಾತ್ ಶ್ರೀಮನ್ನಾರಾಯಣನಾಗಿದ್ದೂ ಅವರು ಮಹರ್ಷಿಗಳಲ್ಲಿ ಕ್ಷಮೆ ಕೇಳುತ್ತಿದ್ದಾರೆ, ಅಂದರೆ ನಾವು ಎಷ್ಟು ವಿನಯದಿಂದಿರಬೇಕು. ಅದೆಷ್ಟು ಈ ಗುರುದೇವರ ಅಹಂಶೂನ್ಯತೆ ! ಎಂದು ಮಾತನಾಡಿಕೊಂಡೆವು. ಇದರಿಂದ, ‘ಒಂದು ಕಡೆಗೆ ಗುರುದೇವರು ರಥೋತ್ಸವದ ಬಗೆಗಿನ ಸಮಷ್ಟಿಯ ವಿಚಾರವನ್ನು ಮಾಡುತ್ತಿದ್ದಾರೆ ಮತ್ತು ಮಹರ್ಷಿಗಳ ಆಜ್ಞಾಪಾಲನೆ ಮಾಡುವುದನ್ನೂ ಕಲಿಸುತ್ತಿದ್ದಾರೆ.’ ಎಂಬುದು ಕಲಿಯಲು ಸಿಗುತ್ತದೆ. ನಮಗೆ ಆಜ್ಞಾಪಾಲನೆಯೆಂದು ಗುರುದೇವರ ಸಂದೇಶವನ್ನು ಮಹರ್ಷಿಗಳ ಬಳಿ ತಲುಪಿಸುವುದಿದೆ ಮತ್ತು ಮಹರ್ಷಿಗಳ ಹಾಗೂ ಗುರುದೇವರ ಈ ಇಬ್ಬರ ಆಜ್ಞಾಪಾಲನೆಯನ್ನೂ ಮಾಡುವುದಿದೆ.

೩. ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದಂತೆ ಸಪ್ತರ್ಷಿಗಳಲ್ಲಿ ವಿಚಾರಿಸಿದಾಗ ಅವರು ಹೇಳಿದ ಅಂಶಗಳು

೩ ಅ. ಪರಾತ್ಪರ ಗುರು ಡಾಕ್ಟರರ ಮನಸ್ಸಿನಲ್ಲಿ ಮಳೆಯ ವಿಚಾರವು ಬರುವುದು, ಎಂದರೆ ‘ಆ ದಿನ ಮಳೆಯ ಸಂಕಟವು ಬರಲಿದೆ’, ಎಂದು ಅವರು ಸೂಚಿಸುತ್ತಿದ್ದಾರೆ ! : ‘ಗುರುದೇವರ ಮನಸ್ಸಿನಲ್ಲಿ ಬಂದಿರುವ ವಿಚಾರ ಮತ್ತು ಗುರುದೇವರು ಮಹರ್ಷಿಗಳ ಚರಣಗಳಲ್ಲಿ ಮೂರು ಸಲ ಕ್ಷಮೆ ಯಾಚಿಸಿದ ಬಗ್ಗೆ ನಾವು ‘ಸಪ್ತರ್ಷಿಗಳು ಜೀವನಾಡಿಪಟ್ಟಿ’ಯ ವಾಚಕರಾದ ಪೂ. ಡಾ. ಓಂ ಉಲಗನಾಥನ್ ಇವರಿಗೆ ಹೇಳಿದೆವು. ಪೂ. ಡಾ. ಓಂ ಉಲಗನಾಥನ್ ಇವರು ತಕ್ಷಣ ನಾಡಿಪಟ್ಟಿಯನ್ನು ತೆರೆದು ಓದಿದರು. ‘ಪರಾತ್ಪರ ಗುರು ಡಾ. ಆಠವಲೆಯವರು ಸಾಕ್ಷಾತ್ ನಾರಾಯಣನೇ ಆಗಿದ್ದಾರೆ. ಅವರ ಮನಸ್ಸಿನಲ್ಲಿ ಬರುವ ವಿಚಾರಗಳು ಮತ್ತು ಪ್ರಶ್ನೆಗಳು ಕಲ್ಯಾಣಕಾರಿಯೇ ಆಗಿರುತ್ತವೆ. ಅವರ ಮನಸ್ಸಿನಲ್ಲಿ ಯಾವುದೇ ನಿರರ್ಥಕ ವಿಚಾರಗಳು ಬರುವುದಿಲ್ಲ. ಅವರು ಸಪ್ತರ್ಷಿಗಳಲ್ಲಿ ಕ್ಷಮೆಯಾಚನೆ ಮಾಡಿದ್ದಾರೆಂದರೆ ನಾವೇ ಎಲ್ಲಿಯೋ ಕಡಿಮೆ ಬೀಳುತ್ತಿದ್ದೇವೆ ಎಂದು ಅದರಲ್ಲಿ ಬರೆದಿತ್ತು. ‘ಶ್ರೀಮನ್ನಾರಾಯಣನ ಈ ರಥೋತ್ಸವವಾಗುವುದು’, ಇದು ಅತ್ಯಂತ ಮಹತ್ವದ್ದಾಗಿದೆ. ಗುರುದೇವರ ಮನಸ್ಸಿನಲ್ಲಿ ಮಳೆಯ ವಿಚಾರವು ಬರುವುದೆಂದರೆ ‘ಆ ದಿನ ಮಳೆಯ ಸಂಕಟವು ಬರಲಿದೆ’, ಎಂದು ಅವರು ಸೂಚಿಸುತ್ತಿದ್ದಾರೆ.

೩ ಆ. ‘ಮಳೆ ಬರಬಾರದು’, ಅದಕ್ಕಾಗಿ ಎಲ್ಲರೂ ಆರ್ತತೆಯಿಂದ ಶ್ರೀಮನ್ನಾರಾಯಣನನ್ನೇ ಪ್ರಾರ್ಥಿಸೋಣ ! : ಸಪ್ತರ್ಷಿಗಳು, ಎಲ್ಲ ಸಂತರು ಮತ್ತು ಎಲ್ಲ ಸಾಧಕರು ಸೇರಿ ಗುರುದೇವರಿಗೇ ಶರಣಾಗೋಣ ಮತ್ತು ಆ ಶ್ರೀಮನ್ನಾರಾಯಣನನ್ನೇ ಪ್ರಾರ್ಥಿಸೋಣ. ನಾವು ಆರ್ತರಾಗಿ ಪ್ರಾರ್ಥಿಸಿ ಶ್ರೀಮನ್ನಾರಾಯಣನಿಗೆ ಶರಣಾಗೋಣ. ರಥೋತ್ಸವದ ಸಮಯವು ಮಧ್ಯಾಹ್ನ ೪ ರಿಂದ ಸಾಯಂಕಾಲ ೬.೩೦ ಹೀಗಿದೆ; ಆದರೆ ಈಗ ನಾವು ಆ ಸಮಯವನ್ನು ಬದಲಾಯಿಸೋಣ. ಆದಷ್ಟು ಬೇಗ ರಥೋತ್ಸವವನ್ನು ಪ್ರಾರಂಭಿಸೋಣ. ಶ್ರೀಮನ್ನಾರಾಯಣನು ನಮ್ಮೆಲ್ಲರ ಪ್ರಾರ್ಥನೆಯನ್ನು ಖಂಡಿತ ಕೇಳುತ್ತಾನೆ ! ರಥೋತ್ಸವ ಪ್ರಾರಂಭವಾಗುವ ಮೊದಲು ನಾವು ಗುರುದೇವರಿಗೆ ಪ್ರಾರ್ಥಿಸೋಣ’, ಎಂದರು.

೪. ಪರಾತ್ಪರ ಗುರು ಡಾಕ್ಟರರು ಸಪ್ತರ್ಷಿಗಳ ಅಂಶಗಳನ್ನು ಕೇಳಿ ‘ಒಳ್ಳೆಯದಾಯಿತು !’, ಎಂದು ಹೇಳುವುದು ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘ಈ ಪ್ರಸಂಗಗಳಿಂದ ನಮಗೆ ತುಂಬಾ ಕಲಿಯಲು ಸಿಕ್ಕಿತು’, ಎಂದು ಹೇಳುವುದು

ಮರುದಿನ ನಾನು ಗುರುದೇವರಿಗೆ ಸಪ್ತರ್ಷಿಗಳು ಹೇಳಿದ ಎಲ್ಲ ಅಂಶಗಳನ್ನು ಹೇಳಿದೆನು. ಆ ಅಂಶಗಳನ್ನು ಕೇಳಿ ಗುರುದೇವರು ನಗುತ್ತಾ ‘ಒಳ್ಳೆಯದಾಯಿತು !’, ಎಂದು ಹೇಳಿದರು. ಆಗ ನಾನು ಗುರುದೇವರಿಗೆ, “ಈ ಪ್ರಸಂಗಗಳಿಂದ ನಮಗೆ ತುಂಬ ಕಲಿಯಲು ಸಿಕ್ಕಿತು. ‘ಸಪ್ತರ್ಷಿಗಳು ದೇವರನ್ನು ಹೇಗೆ ಗೌರವಿಸುತ್ತಾರೆ ಮತ್ತು ದೇವರು ಸಹ ಸಪ್ತರ್ಷಿಗಳನ್ನು ಹೇಗೆ ಗೌರವಿಸುತ್ತಾರೆ ?’, ಎಂಬುದು ನಮಗೆ ಸಪ್ತರ್ಷಿಗಳ ಮತ್ತು ಗುರುದೇವರ ಸಂಭಾಷಣೆಯಿಂದ ಕಲಿಯಲು ಸಿಕ್ಕಿತು” ಎಂದೆನು.

೫. ‘ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ಆಯೋಜಿಸಲಾದ ರಥೋತ್ಸವದ ದಿನದಂದು ಮಳೆಯ ಸಂಕೇತವಾಗಿದ್ದರೂ ಮಳೆ ಬೀಳದಿರುವುದು’, ಇದು ಶ್ರೀಮನ್ನಾರಾಯಣನ ಅದ್ಭುತ ನಿಸರ್ಗಲೀಲೆಯೇ ಆಗಿದೆ !

೫ ಅ. ಸಪ್ತರ್ಷಿಗಳು, ಸಂತರು ಮತ್ತು ಎಲ್ಲ ಸಾಧಕರು ಶ್ರೀಮನ್ನಾರಾಯಣನನ್ನು ಪ್ರಾರ್ಥಿಸುವುದು ಮತ್ತು ರಥೋತ್ಸವದ ದಿನ ಮಳೆಯ ಮೋಡಗಳು ಕಾಣಿಸದಂತಾಗಿ ಎಲ್ಲೆಡೆ ಸುಂದರ ಸೂರ್ಯಪ್ರಕಾಶವು ಹರಡುವುದು :

೨೧ ಮತ್ತು ೨೨ ಮೇ ೨೦೨೨ ರಂದು ಎಲ್ಲ ಸಾಧಕರು ಶ್ರೀಮನ್ನಾರಾಯಣನನ್ನು ‘ನಿಸರ್ಗವು ಅನುಕೂಲವಾಗಿರಲಿ. ರಥೋತ್ಸವದಲ್ಲಿ ಮಳೆ ಮತ್ತು ಗಾಳಿಯ ತೊಂದರೆ ಆಗಬಾರದು’, ಎಂದು ಪ್ರಾರ್ಥನೆಯನ್ನು ಮಾಡಿದರು. ರಥೋತ್ಸವದ ಹಿಂದಿನ ರಾತ್ರಿ ಬಹಳ ಹೊತ್ತಿನ ತನಕ ಮಳೆ ಬರುತ್ತಲೇ ಇತ್ತು. ಇನ್ನೊಂದು ಕಡೆಗೆ ರಥೋತ್ಸವದ ಸಿದ್ಧತೆಯು ಸಹ ಅಷ್ಟೇ ಉತ್ಸಾಹದಿಂದ ನಡೆದಿತ್ತು. ರಥೋತ್ಸವದ ದಿನ ಬೆಳಗ್ಗೆ ೬ ಗಂಟೆಯಿಂದ ಆಕಾಶವು ಸ್ವಚ್ಛವಾಗಿತ್ತು. ಮಳೆಯ ಮೋಡಗಳು ಕಾಣಿಸದಂತಾಗಿ ಎಲ್ಲೆಡೆ ಸುಂದರ ಸೂರ್ಯಪ್ರಕಾಶವು ಹರಡಿತ್ತು.

೫ ಆ. ‘ರಥೋತ್ಸವವು ಮುಗಿದ ನಂತರ ಮಳೆ ಬರಲಿದೆ ಹಾಗಾಗಿ ಸಾಯಂಕಾಲ ೬ ಗಂಟೆಯ ಒಳಗೆ ರಥೋತ್ಸವವು ಮುಗಿದು ರಥವನ್ನು ರಾಮನಾಥಿ ಆಶ್ರಮದ ಒಳಗೆ ಒಯ್ಯಬೇಕು’, ಎಂದು ಸಪ್ತರ್ಷಿಗಳು ಹೇಳುವುದು : ಮಧ್ಯಾಹ್ನ ೩ ಗಂಟೆಗೆ ರಥೋತ್ಸವ ಪ್ರಾರಂಭವಾಗಲಿತ್ತು. ರಥೋತ್ಸವದ ದಿನ ಬೆಳಗ್ಗೆ, ‘ಶ್ರೀಮನ್ನಾರಾಯಣಸ್ವರೂಪ ಗುರುದೇವರು ನಮ್ಮೆಲ್ಲರ ಪ್ರಾರ್ಥನೆಯನ್ನು ಕೇಳಿದ್ದಾರೆ. ನಿಸರ್ಗವು ಅನುಕೂಲವಾಗಿದೆ. ಮಳೆಯ ಮೋಡಗಳು ಸಂಪೂರ್ಣ ಕಡಿಮೆಯಾಗಿ ಗುರುದೇವರು ಅದನ್ನು ಸಾಧಕರಿಂದ ದೂರವಾಗಿಟ್ಟರು. ನಮಗೆ ಸಾಯಂಕಾಲ ೬ ಗಂಟೆಯ ಒಳಗೆ ರಥೋತ್ಸವವು ಮುಗಿದು ರಥವನ್ನು ರಾಮನಾಥಿ ಆಶ್ರಮದ ಒಳಗೆ ಇಡಬೇಕು. ಎಂದು ಸಪ್ತರ್ಷಿಗಳು ಸಂದೇಶವನ್ನು ನೀಡಿದರು.

೫ ಇ. ಹೀಗೆ ಅನುಭವಿಸಿದೆವು ಶ್ರೀಮನ್‌ನಾರಾಯಣದ ನಿಸರ್ಗಲೀಲೆ

೫ ಇ ೧. ರಥೋತ್ಸವವು ನಿರ್ವಿಘ್ನವಾಗಿ ನೆರವೇರಿ ಪರಾತ್ಪರ ಗುರು ಡಾ. ಆಠವಲೆಯವರು ತಮ್ಮ ಕೋಣೆಯೊಳಗೆ ಹೋದ ನಂತರ ಸಣ್ಣದಾಗಿ ಮಳೆ ಬರುವುದು ಮತ್ತು ಇದರ ಹಿಂದಿನ ಕಾರ್ಯಕಾರಣಭಾವವು ಸಪ್ತರ್ಷಿಗಳು ಹೇಳುವುದು : ರಥೋತ್ಸವದ ದಿನ ಆಕಾಶವು ಸ್ವಚ್ಛವಾಗಿತ್ತು. ಆ ದಿನ ಪಕ್ಷಿಗಳ ಕಲರವ ನಾದವು ಕೇಳಿ ಬರುತ್ತಿತ್ತು. ಸಂಪೂರ್ಣ ರಥೋತ್ಸವದಲ್ಲಿ ಮಳೆಯ ಒಂದು ಹನಿಯೂ ಬೀಳಲಿಲ್ಲ; ಬದಲಾಗಿ ಎಲ್ಲೆಡೆ ಬಿಸಿಲಿತ್ತು. ಸಪ್ತರ್ಷಿಗಳು ಹೇಳಿದಂತೆ ರಥೋತ್ಸವವು ಸಾಯಂಕಾಲ ೬ ಗಂಟೆಯ ಒಳಗೆ ಪೂರ್ಣವಾಯಿತು. ಗುರುದೇವರು ರಥದಿಂದ ಇಳಿದ ನಂತರ ಪುಷ್ಪಾರ್ಚನೆ ಆಯಿತು ಮತ್ತು ಅವರು ತಮ್ಮ ಕೋಣೆಯೊಳಗೆ ಹೋದರು. ಗುರುದೇವರು ಕೋಣೆಗೆ ಹೋದ ನಂತರ ತಕ್ಷಣವೇ ಆಶ್ರಮದ ಪರಿಸರದಲ್ಲಿ ಸಣ್ಣದಾಗಿ ಮಳೆ ಬೀಳಲು ಪ್ರಾರಂಭವಾಯಿತು. ಆ ಸಮಯದಲ್ಲಿ ಶ್ರೀಮನ್ನಾರಾಯಣನ ಅಪಾರ ಲೀಲೆಯನ್ನೇ ಅನುಭವಿಸಿದೆವು.

ಈ ಕುರಿತು ಸಪ್ತರ್ಷಿಗಳಿಗೆ ಹೇಳಿದ ನಂತರ ಅವರು, ‘ದೊಡ್ಡ ಮೈದಾನದಲ್ಲಿನ ಕಾರ್ಯಕ್ರಮಕ್ಕಾಗಿ ಬರುವ ಜನರಿಗೆ ಅವರ ವಾಹನಗಳನ್ನು ಕಾರ್ಯಕ್ರಮದ ಸ್ಥಳದಿಂದ ಹೇಗೆ ದೂರ ನಿಲ್ಲಿಸಬೇಕಾಗುತ್ತದೆಯೋ, ಅದೇ ರೀತಿ ಶ್ರೀಮನ್ನಾರಾಯಣಸ್ವರೂಪ ಗುರುದೇವರು ಮೋಡಗಳನ್ನು ರಥೋತ್ಸವದ ಪರಿಸರದಿಂದ ದೂರ ನಿಲ್ಲಿಸಿದ್ದರು ಎಂದು ಹೇಳಿದರು. ಮಳೆಯು ‘ರಥೋತ್ಸವವು ಎಂದು ಮುಗಿಯುತ್ತದೆ ಮತ್ತು ನಾವು ಎಂದು ವೇಗದಿಂದ ಹೋಗುವೆವು ?’, ಎಂಬ ದಾರಿಯನ್ನೇ ನೋಡುತ್ತಿತ್ತು. ಇದೆಲ್ಲವೂ ಶ್ರೀಮನ್ನಾರಾಯಣನ ನಿಸರ್ಗದ ಲೀಲೆಯೇ ಆಗಿತ್ತು.

೫ ಇ ೨. ‘ಗುರುದೇವರಿಗೆ ಪಂಚಮಹಾಭೂತಗಳ ಮೇಲೆ ಎಷ್ಟು ಅಧಿಕಾರವಿದೆ. ಅವರು ನಿಸರ್ಗವನ್ನೂ ನಿಯಂತ್ರಣದಲ್ಲಿಡುತ್ತಾರೆ ಆದುದರಿಂದಲೇ ಅವರು ಶ್ರೀಮನ್ನಾರಾಯಣನ ಅವತಾರವಾಗಿದ್ದಾರೆ !’ ಎಂದು ಇದರಿಂದ ಗಮನಕ್ಕೆ ಬಂದಿತು.

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ (೨೪.೫.೨೦೨೨)