ಶ್ರೀಮನ್ನಾರಾಯಣನ ಅವತಾರರಾದ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಸಾಧಕರ ಆರ್ತ ಮತ್ತು ಕಳಕಳಿಯ ಪ್ರಾರ್ಥನೆ !

ಶ್ರೀ. ವಿನಾಯಕ ಶಾನಭಾಗ

‘ಹೇ ಶ್ರೀಮನ್ನಾರಾಯಣಾ, ಇಂದು ಶ್ರೀಜಯಂತ ಅವತಾರಕ್ಕೆ ಶರೀರ ಧಾರಣೆಯನ್ನು ಮಾಡಿ ೮೦ ವರ್ಷಗಳು ಪೂರ್ಣವಾದವು. ಇಂದು ನಮೆಲ್ಲ ಸಾಧಕರಿಗೆ ‘ಶ್ರೀಜಯಂತ ಅವತಾರದ ೮೦ ನೆಯ ಜನ್ಮೋತ್ಸವವನ್ನು ಆಚರಿಸುವ ಅವಕಾಶವು ಸಿಕ್ಕಿದೆ. ಅದರಲ್ಲಿನ ಬಹಳಷ್ಟು ಸಾಧಕರಿಗೆ ೨೦ ರಿಂದ ೩೦ ವರ್ಷಗಳ ವರೆಗೆ ಭಗವಂತನ ಸಗುಣ ರೂಪದ ಸಹವಾಸ ದೊರಕಿತು. ಭಗವಂತಾ, ‘ನೀವೇ ನಮಗೆ ಗುರುರೂಪದಲ್ಲಿ ಸಿಕ್ಕಿರುವೆಯೆಂದು ನಮಗೆ ತಿಳಿಯಲಿಲ್ಲ. ಈ ವಿಶಾಲ ಸನಾತನದ ಕುಟುಂಬದ ತಂದೆಯಾಗಿರುವಂತೆ ನಾವು ನಿಮ್ಮೊಂದಿಗೆ ನಡೆದುಕೊಂಡೆವು, ಮಾತನಾಡಿದೆವು ಮತ್ತು ಒಮ್ಮೊಮ್ಮೆ ಹಟವನ್ನೂ ಸಹ ಹಿಡಿದೆವು; ಆದರೆ ಭಗವಂತ ನೀನು ನಮಗೆ ಬಹಳಷ್ಟು ಆನಂದವನ್ನು ಕೊಟ್ಟೆ. ನಾವು ಸಾಧಕರು ನಿನ್ನ ಜೊತೆಗಿದ್ದೆವು ಎಂದಿರದೇ ಹೇ ಶ್ರೀಹರಿ, ನೀನೇ ನಮ್ಮನ್ನು ನಿನ್ನ ಸಹವಾಸದಲ್ಲಿಟ್ಟಿರುವೆ. ಹೇ ವೈಕುಂಠಾಧಿಪತಿ, ನೀನು ವೈಕುಂಠದಿಂದ ಕೇವಲ ಸನಾತನದ ಸಾಧಕರಿಗಾಗಿ ಬಂದಿರುವೆ. ದೇವಾ, ನಿನಗೆ ಇದು ಗೊತ್ತಿತ್ತು, ನಾವು ಸಾಧಕರು ಪ್ರಳಯಕಾರಿ ಆಪತ್ಕಾಲದಲ್ಲಿ ನಿನ್ನ ಛಾಯೆಯಿಲ್ಲದೆ ಬದುಕಿರಲು ಸಾಧ್ಯವಿಲ್ಲ; ಆದುದರಿಂದ ನೀನು ‘ಗುರು’ ರೂಪದ ಧಾರಣೆಯನ್ನು ಮಾಡಿರುವೆ. ನಾವು ಇಂದು ಈ ಪ್ರಳಯಕಾರಿ ಆಪತ್ಕಾಲದ ಹೊಸ್ತಿಲಿನಲ್ಲಿ ನಿಂತಿರುವೆವು. ನಮಗೆ ಕೇವಲ ನಿನ್ನ ಚರಣಗಳೇ ಆಧಾರವಾಗಿವೆ. ನಿನ್ನ ಸುಂದರ ಮಂದಹಾಸ ನಮ್ಮ ದುಃಖವನ್ನು ದೂರ ಮಾಡುತ್ತದೆ ಮತ್ತು ನಿನ್ನ ಮಾತುಗಳು ನಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ನಮ್ಮೆಲ್ಲ ಸಾಧಕರ ರಕ್ಷಣೆಯನ್ನು ಮಾಡು !

– ಶ್ರೀ. ವಿನಾಯಕ ಶಾನಬಾಗ, ಚೆನೈ, ತಮಿಳುನಾಡು.