ಆನಂದ ಸ್ವರೂಪ, ಸಾಧಕಹೃದಯಾಧಿರಾಜ, ಹಿಂದೂ ರಾಷ್ಟ್ರ-ಸಂಘಟಕ, ಧರ್ಮಸಂಸ್ಥಾಪಕ, ಜ್ಞಾನಗುರು, ಮೋಕ್ಷಗುರು ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಚರಣಗಳಲ್ಲಿ ಕೋಟಿ-ಕೋಟಿ ವಂದನೆಗಳು
ಸಮಷ್ಟಿಯ ಕಲ್ಯಾಣದ ಧ್ಯಾಸವನ್ನಿಟ್ಟು ಅಖಂಡವಾಗಿ ಕಾರ್ಯನಿರತವಾಗಿರುವ, ಸಾಧಕರಿಗಾಗಿ ಮಾತಾ-ಪಿತಾ, ಬಂಧು, ಸಖಾ ಹೀಗೆ ಎಲ್ಲವೂ ಆಗಿರುವ, ಸಾಧಕರಿಗೆ ಸುಖ-ದುಃಖಗಳ ಆಚೆಗೆ ಹೋಗಿ ಆನಂದದ ಅನುಭೂತಿ ಪಡೆಯಲು ಕಲಿಸುವ, ಸಾಧಕರ ಆಧ್ಯಾತ್ಮಿಕ ಪ್ರಗತಿಗಾಗಿ ಆತುರವಾಗಿರುವ ಪ್ರತಿಯೊಂದು ಜೀವವನ್ನು ಸೀಮಾತೀತವಾಗಿ ನಿರಪೇಕ್ಷವಾಗಿ ಪ್ರೀತಿಸುವ ಮತ್ತು ‘ಸಪ್ತರ್ಷಿ’ ಜೀವನಾಡಿಪಟ್ಟಿಯಲ್ಲಿ ಕಲಿಯುಗದ ಶ್ರೀವಿಷ್ಣುವಿನ ‘ಶ್ರೀಜಯಂತಾವತಾರ’ವೆಂದು ಗೌರವಿಸಲ್ಪಡುವ ಪರಾತ್ಪರ ಗುರು ಡಾ. ಆಠವಲೆ ! ಹೀಗೆ ಶ್ರೇಷ್ಠ ವಿಭೂತಿಯಾಗಿರುವ ಪರಾತ್ಪರ ಗುರು ಡಾ. ಆಠವಲೆಯವರ ೮೦ ನೇ ವರ್ಷದ ಜನ್ಮೋತ್ಸವದ (ವೈಶಾಖ ಕೃಷ್ಣ ಸಪ್ತಮಿ (೨೨ ಮೇ ೨೦೨೨) ನಿಮಿತ್ತ ಅವರ ಚರಣಗಳಲ್ಲಿ ಕೃತಜ್ಞತೆ !
ಕೃತಜ್ಞತೆ !! ಕೃತಜ್ಞತೆ !!!
ಹೇ ಜಗತ್ಪಾಲಕ ಮಹಾವಿಷ್ಣುಸ್ವರೂಪ ಗುರುದೇವರೇ, ಇಡೀ ಜಗತ್ತು ವಿವಿಧ ಬಿಕ್ಕಟ್ಟುಗಳಿಂದ ನಲುಗುತ್ತಿದೆ. ಎಲ್ಲೆಡೆ ಅನಾಚಾರ ಮತ್ತು ಅಧರ್ಮದ ಕತ್ತಲೆ ಆವರಿಸಿದೆ. ಅಖಿಲ ಮನುಕುಲವು ಚಿಂತೆ ಮತ್ತು ಅಸುರಕ್ಷಿತತೆಯಿಂದ ಬಳಲುತ್ತಿದೆ. ನೈಸರ್ಗಿಕ ವಿಪತ್ತುಗಳು, ಸಾಂಕ್ರಾಮಿಕ ರೋಗಗಳು, ಸಾಮಾಜಿಕ ಅಸುರಕ್ಷಿತತೆ, ಕೌಟುಂಬಿಕ ಕಲಹಗಳು, ಆರ್ಥಿಕ ಬಿಕ್ಕಟ್ಟುಗಳು ಇತ್ಯಾದಿಗಳು ಎಲ್ಲೆಡೆ ಕಂಡುಬರುತ್ತವೆ ! ಗುರುದೇವರೇ, ಈ ಘೋರ ಆಪತ್ಕಾಲದಲ್ಲಿ ಏನೆಲ್ಲ ಸಂಭವಿಸುತ್ತದೆಯೋ ಅದೆಲ್ಲವನ್ನು ಸ್ವೀಕರಿಸಲು ನಮಗೆ ಶಕ್ತಿಯನ್ನು ನೀಡಿ ! ವಿಪತ್ತು ಎಷ್ಟೇ ದೊಡ್ಡದಿರಲಿ, ತಮ್ಮ ಕೃಪಾಛತ್ರವು ಅವುಗಳಿಗಿಂತ ಅನೇಕ ಪಟ್ಟು ದೊಡ್ಡದಾಗಿದೆ ! ಹೇ ಗುರುದೇವರೇ, ಕಳೆದ ಹಲವು ವರ್ಷಗಳಿಂದ ನೀವು ನಮ್ಮ ಮನಸ್ಸಿನಲ್ಲಿ ಮಾಡಿದ ಸಾಧನೆಯ ಸಂಸ್ಕಾರಗಳನ್ನು ನೀವೇ ಆವಿಷ್ಕರಿಸಿ ! ಗುರುದೇವರೇ ನಮ್ಮ ಶ್ರದ್ಧೆ ಮತ್ತು ಭಕ್ತಿಯನ್ನು ಇನ್ನಷ್ಟು ಬಲಪಡಿಸಿ ! ಸಾಧಕರಿಗಾಗಿ ಕಾಲದೊಂದಿಗೂ ಹೋರಾಡುವ ಸಾಕ್ಷಾತ್ ಶ್ರೀಮನ್ನಾರಾಯಣಸ್ವರೂಪ ಗುರುದೇವರಿರುವಾಗ ನಮಗೇಕೆ ಕಾಲದ ಭಯ ? ಹೇ ಭಗವಂತ, ನೀವು ನಮ್ಮ ಜೀವನದಲ್ಲಿ ಬಂದಿದ್ದೀರಿ, ಇದಕ್ಕಿಂತ ದೊಡ್ಡಭಾಗ್ಯ ಇನ್ನೇನಿಲ್ಲ ! ನಿಮ್ಮ ಕೋಮಲ ಚರಣಗಳಲ್ಲಿ ಅನಂತಾನಂತ ಕೃತಜ್ಞತೆಗಳು !