ಪರಾತ್ಪರ ಗುರು ಡಾ. ಆಠವಲೆಯವರ ೮೦ ನೇ ಜನ್ಮೋತ್ಸವದ ನಿಮಿತ್ತದಲ್ಲಿ ನೆರವೇರಿದ ರಥೋತ್ಸವದ ಬಗ್ಗೆ ಕು. ಮಧುರಾ ಭೋಸಲೆಯವರು ಮಾಡಿದ ಸೂಕ್ಷ್ಮ ಪರೀಕ್ಷಣೆ !

‘ಪರಾತ್ಪರ ಗುರು ಡಾ. ಆಠವಲೆಯವರ ೮೦ ನೇ ಜನ್ಮೋತ್ಸವದ ನಿಮಿತ್ತ ಮಹರ್ಷಿಗಳು ಹೇಳಿದಂತೆ ಅವರ ರಥೋತ್ಸವವನ್ನು ಆಚರಿಸಲಾಯಿತು. ದೇವರ ಕೃಪೆಯಿಂದ ಈ ರಥೋತ್ಸವದ ಬಗ್ಗೆ ನನ್ನಿಂದಾದ ಸೂಕ್ಷ್ಮ ಪರೀಕ್ಷಣೆಯನ್ನು ಇಲ್ಲಿ ಕೊಡಲಾಗಿದೆ.

೧. ಪಲ್ಲಕ್ಕಿ ಇಟ್ಟ ಸ್ಥಳಕ್ಕೆ ಪರಾತ್ಪರ ಗುರು ಡಾ. ಆಠವಲೆ ಇವರ ಶುಭಾಗಮನ

ಪಲ್ಲಕ್ಕಿಯ ಸ್ಥಳದಲ್ಲಿ ಪರಾತ್ಪರ ಗುರುದೇವರ ಶುಭಾಗಮನವಾದಾಗ ಸನಾತನದ ಸಂತರು ಅವರನ್ನು ಸ್ವಾಗತಿಸಿದರು. ಆಗ ವಿಷ್ಣುಸ್ವರೂಪಿ ಗುರು ದೇವರ ಸ್ವಾಗತಕ್ಕಾಗಿ ಸಂತರ ಸ್ಥಳದಲ್ಲಿ ಸೂಕ್ಷ್ಮಸ್ವರೂಪದಲ್ಲಿ ಅಷ್ಟದೇವತೆಗಳು ಮತ್ತು ಅನೇಕ ಋಷಿ-ಮುನಿಗಳು ಉಪಸ್ಥಿತರಿರುವುದು ಅರಿವಾಯಿತು. ಆದ್ದರಿಂದ ಪರಾತ್ಪರ ಗುರು ಡಾ. ಆಠವಲೆಯವರ ಮೇಲೆ ದೇವತೆಗಳ ಕೃಪೆ ಆಗಿರುವುದರಿಂದ ದೈವಬಲ ಮತ್ತು ಋಷಿಮುನಿಗಳ ಕೃಪೆಯಾಗಿರುವುದರಿಂದ ತಪೋ ಬಲ ಮತ್ತು ಜ್ಞಾನಬಲ ಈ ಮೂರೂ ಬಲಗಳು ವೃದ್ಧಿಯಾದುದರ ಅರಿವಾಯಿತು. ಈ ರೀತಿಯಲ್ಲಿ ಶ್ರೀವಿಷ್ಣುರೂಪಿ ಪರಾತ್ಪರ ಗುರುದೇವರು ಕೇವಲ ಸಾಧಕರು ಮತ್ತು ಸಂತರಿಗೆ ಮಾತ್ರವಲ್ಲ; ಋಷಿಮುನಿಗಳು ಮತ್ತು ದೇವತೆಗಳಿಗೂ ಪ್ರಿಯರಾಗಿರುವುದು ಅರಿವಾಯಿತು.

ಕು. ಮಧುರಾ ಭೋಸಲೆ

೨. ಪರಾತ್ಪರ ಗುರು ಡಾ. ಆಠವಲೆಯವರು ಪಲ್ಲಕ್ಕಿಯಲ್ಲಿದ್ದ ‘ಶ್ರೀರಾಮ ಸಾಲಿಗ್ರಾಮ’ದ ಭಾವಪೂರ್ಣ ದರ್ಶನ ಪಡೆದು ಹೂವುಗಳನ್ನು ಅರ್ಪಿಸಿದರು

ರಥೋತ್ಸವದ ಆರಂಭದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಪಲ್ಲಕ್ಕಿಯಲ್ಲಿ ಇಟ್ಟಿರುವ ‘ಶ್ರೀರಾಮ ಸಾಲಿಗ್ರಾಮ’ದ ಭಾವಪೂರ್ಣ ದರ್ಶನ ಪಡೆದು ಅದಕ್ಕೆ ಹೂವನ್ನು ಅರ್ಪಿಸಿದರು. ಆಗ ಪರಾತ್ಪರ ಗುರುದೇವರ ಭಕ್ತಿಮಯ ದೃಷ್ಟಿ ಸಾಲಿಗ್ರಾಮದ ಮೇಲೆ ಬಿದ್ದಾಗ ಅದರಲ್ಲಿ ಸುಪ್ತಾವಸ್ಥೆಯಲ್ಲಿದ್ದ ಶ್ರೀರಾಮನ ನಿರ್ಗುಣ ಸ್ತರದ ತತ್ತ್ವವು ಜಾಗೃತವಾಗಿ ಪ್ರಕಟವಾಯಿತು. ಆಗ ಸಾಲಿಗ್ರಾಮದಿಂದ ತೇಜಸ್ವಿ ನೀಲಿ ಬಣ್ಣದ ದಿವ್ಯ ಪ್ರಕಾಶವು ವಾತಾವರಣದಲ್ಲಿ ಪ್ರಕ್ಷೇಪಿಸುತ್ತಿರುವ ಸೂಕ್ಷ್ಮದೃಶ್ಯ ಕಾಣಿಸಿತು. ಅದೇ ರೀತಿ ಈ ಸಾಲಿಗ್ರಾಮದಲ್ಲಿ ಹಳದಿ ಬಣ್ಣದ ತೇಜಸ್ವಿ ಜ್ಯೋತಿ ಕಾಣಿಸಿತು. ಈ ಜ್ಯೋತಿಯೆಂದರೆ ಪ್ರಭು ಶ್ರೀರಾಮರ ಹೃದಯದಲ್ಲಿ ವಿರಾಜಮಾನವಾಗಿರುವ ಶಿವನ ಆತ್ಮಜ್ಯೋತಿಯಾಗಿತ್ತು. ಪರಾತ್ಪರ ಗುರುದೇವರು ಸಾಲಿಗ್ರಾಮಕ್ಕೆ ಹೂವುಗಳನ್ನು ಅರ್ಪಿಸಿದಾಗ ಸಾಲಿಗ್ರಾಮದಿಂದ ಸಂಪೂರ್ಣ ವಾತಾವರಣದಲ್ಲಿ ಚೈತನ್ಯ ಹಾಗೂ ಆನಂದದ ಲಹರಿಗಳ ಪ್ರಕ್ಷೇಪಿತವಾಗಿ ಸಂಪೂರ್ಣ ವಾತಾವರಣವು ಚೈತನ್ಯದಾಯಕ ಹಾಗೂ ಆನಂದಮಯವಾಯಿತು. ಸಾಲಿಗ್ರಾಮ ರೂಪಿ ಪ್ರಭು ಶ್ರೀರಾಮರು ಪರಾತ್ಪರ ಗುರು ಆಠವಲೆ ಮತ್ತು ಸಾಧಕರಿಗೆ ‘ಪೃಥ್ವಿಯ ಮೇಲೆ ಶೀಘ್ರದಲ್ಲಿಯೇ ರಾಮರಾಜ್ಯ ಸ್ಥಾಪನೆಯಾಗಲಿಕ್ಕಿದೆ’, ಎನ್ನುವ ಶುಭಾಶೀರ್ವಾದವನ್ನು ನೀಡಿದರು.

೩. ಪರಾತ್ಪರ ಗುರುದೇವರ ನಾರಾಯಣ ರೂಪವನ್ನು ನೋಡಲು ಋಷಿಮುನಿಗಳು ಮತ್ತು ದೇವತೆಗಳ ಸಹಿತ ಸೃಷ್ಟಿಯೇ ಆತುರವಾಗಿರುವುದು

ಪರಾತ್ಪರ ಗುರು ಡಾ. ಆಠವಲೆಯವರು ರಥದಲ್ಲಿ ವಿರಾಜಮಾನರಾದಾಗ ಸ್ವರ್ಗಲೋಕದ ದೇವತೆಗಳು ಪರಾತ್ಪರ ಗುರುದೇವರ ಮೇಲೆ ಸುಗಂಧಿತ ಪುಷ್ಪವೃಷ್ಟಿಗೈದರು ಹಾಗೂ ಶಂಖನಾದ ಮಾಡಿದರು. ಅದರಿಂದ ಸಂಪೂರ್ಣ ವಾತಾವರಣದಲ್ಲಿ ಹೂವುಗಳ ಮಂದವಾದ ದೈವೀ ಸುಗಂಧವು ಹರಡಿ ವಾತಾವರಣವು ಇನ್ನೂ ಹೆಚ್ಚು ಮಂಗಲಮಯ ಹಾಗೂ ದಿವ್ಯವಾಯಿತು. ಪರಾತ್ಪರ ಗುರುದೇವರು ಶ್ರೀವಿಷ್ಣುವಿನ ಹಾಗೆ ಉಡುಗೆಯನ್ನು ಧರಿಸಿದ್ದರು ಹಾಗೂ ಅವರು ಕಿರೀಟ ಸಹಿತ ಸುವರ್ಣಾಲಂಕಾರಗಳನ್ನು ಧರಿಸಿದ್ದರು. ಅದೇ ರೀತಿ ಪ.ಪೂ. ದಾಸ ಮಹಾರಾಜರು ಅವರಿಗೆ ಉಡುಗೊರೆಯಾಗಿ ನೀಡಿರುವ ಮರದ ಗದೆ ಮತ್ತು ತುಳಸಿಯ ಮಾಲೆಯನ್ನು ಧರಿಸಿದ್ದರು. ಆದ್ದರಿಂದ ಪರಾತ್ಪರ ಗುರುದೇವರ ದಿವ್ಯ ರೂಪವು ಇನ್ನೂ ಹೆಚ್ಚು ಹೊಳೆಯುತ್ತಿತ್ತು. ‘ಅವರ ಈ ನಾರಾಯಣ ರೂಪವನ್ನು ನೋಡಲು ಸಾಧಕರು, ಸಂತರು, ಋಷಿಮುನಿಗಳು ಮತ್ತು ದೇವತೆಗಳ ಸಹಿತ ಸಂಪೂರ್ಣ ಸೃಷ್ಟಿಯೇ ಆತುರವಾಗಿದೆ’, ಎಂಬುದು ಅರಿವಾಗುತ್ತಿತ್ತು.

೪. ‘ಹಿಂದೂ ರಾಷ್ಟ್ರ’ ಸ್ಥಾಪಿಸಲು ದೇವತೆಗಳ ತತ್ತ್ವಗಳು ಸನಾತನದ ೩ ಗುರುಗಳ ಮೂಲಕ ಕಾರ್ಯನಿರತವಾಗಿರುವುದು

ರಥೋತ್ಸವದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಸ್ಥಾನದಲ್ಲಿ ಶ್ರೀ ಮಹಾಲಕ್ಷ್ಮಿದೇವಿ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಸ್ಥಾನದಲ್ಲಿ ಶ್ರೀ ದುರ್ಗಾದೇವಿಯು ವಿರಾಜಮಾನಳಾಗಿರುವುದು ಅರಿವಾಯಿತು. ಪೃಥ್ವಿಯ ಮೇಲೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಶ್ರೀವಿಷ್ಣುವಿನ ಅವತಾರಿ ಕಾರ್ಯದಲ್ಲಿ ಜ್ಞಾನಶಕ್ತಿಸ್ವರೂಪಿ ಪರಾತ್ಪರ ಗುರುದೇವರು, ಇಚ್ಛಾಶಕ್ತಿಮಯ ಶ್ರೀಮಹಾಲಕ್ಷ್ಮಿ ಸ್ವರೂಪಿಣಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಕ್ರಿಯಾಶಕ್ತಿಮಯ ಶ್ರೀದುರ್ಗಾದೇವಿಸ್ವರೂಪಿಣಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಸಹಭಾಗವಿರುವುದು ಅರಿವಾಯಿತು. ಈ ಮೂರೂ ಅವತಾರಿ ಗುರುಗಳಿಂದಾಗಿ ಪೃಥ್ವಿಯ ಮೇಲಿನ ಪಾಪದ ಪ್ರಮಾಣ ಕಡಿಮೆಯಾಗಿ ಪೃಥ್ವಿಯ ಮೇಲೆ ಉಚ್ಚ ಲೋಕಗಳಿಂದ ದೈವೀ ಶಕ್ತಿಯ ಪ್ರವಾಹವಾಗುತ್ತಿದೆ. ಅದರಿಂದ ಸೂಕ್ಷ್ಮಯುದ್ಧದಲ್ಲಿ ಕೆಟ್ಟ ಶಕ್ತಿಗಳು ಸೋತು ಸಮಸ್ತ ದೇವತೆಗಳಿಗೆ ವಿಜಯವಾಗಲಿಕ್ಕಿದೆ ಹಾಗೂ ಪೃಥ್ವಿಯ ಮೇಲೆ ಮೊದಲು ಸೂಕ್ಷ್ಮದಿಂದ ನಂತರ ಸ್ಥೂಲದಿಂದ ರಾಮರಾಜ್ಯ ಅಂದರೆ ‘ಹಿಂದೂ ರಾಷ್ಟ್ರ’ ಸ್ಥಾಪನೆಯಾಗಲಿಕ್ಕಿದೆ.

೫. ಪರಾತ್ಪರ ಗುರು ಡಾ. ಆಠವಲೆಯವರ ರಥೋತ್ಸವದ ಬಗ್ಗೆ ಸೂಕ್ಷ್ಮದಲ್ಲಿ ಅರಿವಾದ ದಿವ್ಯ ಶೋಭೆ

ಶ್ರೀವಿಷ್ಣುಸ್ವರೂಪಿ ಪರಾತ್ಪರ ಗುರುದೇವರ ಶ್ರೀವಿಷ್ಣುಸ್ವರೂಪ ಮತ್ತು ಸದ್ಗುರುದ್ವಯಿಯರ ದೇವೀ ಸ್ವರೂಪವನ್ನು ಅನುಭವಿಸಲು ಬ್ರಹ್ಮಾಂಡದಲ್ಲಿನ ವಿವಿಧ ಲೋಕಗಳಲ್ಲಿನ ಸಾತ್ತ್ವಿಕ ಜೀವಗಳು ರಥೋತ್ಸವದಲ್ಲಿ ಸೂಕ್ಷ್ಮದಲ್ಲಿ ಉಪಸ್ಥಿತರಾಗಿರುವುದು ಅರಿವಾಯಿತು. ರಥದ ಹಿಂದೆ ಮಹರ್ಲೋಕ, ಜನಲೋಕ, ತಪೋಲೋಕ ಹಾಗೂ ಸತ್ಯಲೋಕದಿಂದ ಅನೇಕ ಋಷಿ-ಮುನಿಗಳು ಶಂಖನಾದ ಮಾಡುತ್ತಾ ಸೂಕ್ಷ್ಮದಿಂದ ನಡೆಯುತ್ತಿರುವುದು ಅರಿವಾಯಿತು, ಹಾಗೂ ಅದರ ಮೇಲೆ ರೆಕ್ಕೆಗಳಿರುವ ‘ಗಂಧರ್ವರು’ ಹಾಗೂ ‘ಶ್ರೀವಿಷ್ಣುವಿನ ದೂತರು’ ಹಾರುತ್ತಿರುವುದು ಸೂಕ್ಷ್ಮದಿಂದ ಕಾಣಿಸಿತು. ಪರಮ ವಿಷ್ಣುಭಕ್ತ ‘ದೇವರ್ಷಿ ನಾರದ’ ಹಾಗೂ ‘ತುಂಬರೂ’ (ಕುದುರೆಯ ಮುಖವುಳ್ಳ ‘ಗಂಧರ್ವ’ ಅವನು ಹಾಡುತ್ತಾನೆ ಹಾಗೂ ಅವನ ಕೈಯಲ್ಲಿ ಕುಂಬಳಕಾಯಿಯ ಹಾಗೆ ಕಾಣಿಸುವ ‘ತುಂಬರೂ’ ಎಂಬ ಹೆಸರಿನ ಹಣ್ಣಿನ ಮೃದಂಗದಂತೆ ಕಾಣಿಸುವ ವಾದ್ಯ ಇರುತ್ತದೆ ಅಥವಾ ವೀಣೆಯನ್ನು ನುಡಿಸುತ್ತಾನೆ.) ವೀಣೆಯನ್ನು ಹಿಡಿದು ಮಂಗಲಮಯ ಹಾಡನ್ನು ಹಾಡುತ್ತಾ ರಥದ ಮುಂದೆ ನಡೆಯುತ್ತಾ ಇರುವುದು ಸೂಕ್ಷ್ಮದಿಂದ ಕಾಣಿಸಿತು. ಎಲ್ಲರಿಗೂ ಶ್ರೀಮನ್ನಾರಾಯಣಸ್ವರೂಪಿ ಪರಾತ್ಪರ ಗುರುದೇವರ ರಥೋತ್ಸವದಲ್ಲಿ ಭಾಗವಹಿಸುವ ಆನಂದವನ್ನು ಅನುಭವಿಸಲಿಕ್ಕಿತ್ತು. ಆದ್ದರಿಂದ ಎಲ್ಲರೂ ಸಾವಿರಾರು ವರ್ಷಗಳಿಂದ ಈ ಸುವರ್ಣಾವಕಾಶವನ್ನು ವ್ಯಾಕುಲತೆಯಿಂದ ಕಾಯುತ್ತಿದ್ದರು ಎಂಬುದು ಅರಿವಾಯಿತು.

– ಕು. ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೩) (ಸೂಕ್ಷ್ಮದಿಂದ ಸಿಕ್ಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ ಗೋವಾ.