ಸಾಧಕ ಜೀವಗಳನ್ನು ಭಕ್ತರಸದಲ್ಲಿ ಮುಳುಗಿಸುವ ಶ್ರೀಮನ್ ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ದಿವ್ಯ ಆನಂದಮಯ ‘ರಥೋತ್ಸವ’

ಗುರುಗಳ ದಯೆಯ ದೃಷ್ಟಿ ಶಿಷ್ಯರ ಮೇಲೆ ಬಿದ್ದಿತು | ಭೂಮಿಯ ಮೇಲಿನ ಎಲ್ಲ ಸಾಧಕರ ಉದ್ಧಾರವಾಯಿತು |

ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ೫ ಬಣ್ಣದ ಪುಷ್ಪಗಳನ್ನು ಅರ್ಪಿಸುತ್ತಿರುವ (ಎಡಗಡೆ) ಶ್ರೀಚಿತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ  (ಸೌ.) ಅಂಜಲಿ ಗಾಡಗೀಳ (ಬಲಗಡೆ)

ರಾಮನಾಥಿ (ಗೋವಾ) – ತಾಳಗಳ ಸುಮಧುರ ಧ್ವನಿ, ಬಾಯಿಯಲ್ಲಿ ಶ್ರೀಮನ್ನಾರಾಯಣನ ಜಯ ಘೋಷ, ಕೈಯಲ್ಲಿ ಕೇಸರಿ ಧ್ವಜ ಮತ್ತು ರಥದಲ್ಲಿ ವಿರಾಜಮಾನರಾದ ಶ್ರೀವಿಷ್ಣುಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರು ಮತ್ತು ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಇಂತಹ ಭಕ್ತಿಮಯ ವಾತಾವರಣದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ೮೦ ನೇಯ ಜನ್ಮೋತ್ಸವದ ನಿಮಿತ್ತ ದಿವ್ಯ ಆನಂದಮಯ ‘ರಥೋತ್ಸವವನ್ನು ೨೨ ಮೇ ೨೦೨೨ ರಂದು ಆಚರಿಸಲಾಯಿತು. ಮೇ ೨೨ ರ (ಜನ್ಮೋತ್ಸವದ) ಮೊದಲು ೨ ದಿನ ಧಾರಾಕಾರ ಮಳೆ ಸುರಿಯುತ್ತಿತ್ತು. ರಥೋತ್ಸವದ ದಿನ ಮಳೆಯು ವಿಶ್ರಾಂತಿಯನ್ನು ಪಡೆದುದರಿಂದ ಮಳೆಯಿಂದ ಸಾಧಕರ ರಕ್ಷಣೆಯಾಯಿತು; ಆದರೆ ಕೇವಲ ಗುರುದೇವರ ದರ್ಶನದಿಂದ ಭಾವಜಾಗೃತವಾಗಿ ಭಾವಾಶ್ರುಗಳಿಂದ ಸಾಧಕರು ಮಿಂದು ಹೋದರು.

ದಿವ್ಯ ರಥೋತ್ಸವದ ಮೊದಲು ಸಾಧಕರ ಕುತೂಹಲ ಗಗನಕ್ಕೇರುವುದು !

ಸಪ್ತರ್ಷಿಗಳ ಆಜ್ಞೆಯಿಂದ ಕಳೆದ ಕೆಲವು ವರ್ಷ ಗಳಿಂದ ಸನಾತನದ ಎಲ್ಲ ಸಾಧಕರ ಪ್ರಾಣಪ್ರಿಯ ಗುರುಗಳ ಜನ್ಮೋತ್ಸವದ ದಿನ ಗುರುಗಳು ಶ್ರೀವಿಷ್ಣು, ಶ್ರೀರಾಮ, ಶ್ರೀಕೃಷ್ಣ ಹೀಗೆ ಬೇರೆ ಬೇರೆ ರೂಪಗಳಲ್ಲಿ ದರ್ಶನವನ್ನು ನೀಡಿದ್ದಾರೆ. ಆದುದರಿಂದ ಈ ವರ್ಷವೂ ಸಾಧಕರ ಮನಸ್ಸಿನಲ್ಲಿ ‘ಈ ಬಾರಿ ನಮ್ಮ ಗುರುಗಳು ನಮಗೆ ಯಾವ ರೂಪದಲ್ಲಿ ದರ್ಶನವನ್ನು ನೀಡುವವರಿದ್ದಾರೆ ?, ಎಂಬ ಕುತೂಹಲ ನಿರ್ಮಾಣವಾಗಿತ್ತು. ಕೊನೆಗೆ ವೈಶಾಖ ಕೃಷ್ಣ ಪಕ್ಷ ಸಪ್ತಮಿ, ಅಂದರೆ ಗುರುಗಳ ಜನ್ಮೋತ್ಸವದ ಮಂಗಲಮಯ ದಿನ ಬಂದಿತು ! ಸಾಧಕರಿಗೆ ಭೂವೈಕುಂಠವಾಗಿರುವ ರಾಮನಾಥಿಯಲ್ಲಿ ಸನಾತನ ಆಶ್ರಮದ ಸಾಧಕರೆಲ್ಲರೂ ಆ ದಿನ ಭಕ್ತಿರಸದಿಂದ ತುಂಬಿ ತುಳುಕುತ್ತಿದ್ದರು. ಆಗಾಗ ಶ್ರೀಗುರುಗಳ ಮಹಾತ್ಮೆಯನ್ನು ವರ್ಣಿಸುವ ಭಜನೆಗಳನ್ನು ಆಶ್ರಮದ ಧ್ವನಿವರ್ಧಕಗಳಲ್ಲಿ ಹಾಕುವುದರಿಂದ ಎಲ್ಲ ಸಾಧಕರು ಗುರುಸ್ಮರಣೆಯಿಂದ ವೈಕುಂಠದ ಅನುಭೂತಿಯನ್ನೇ ಪಡೆಯುತ್ತಿದ್ದರು.

ಗುರುಗಳ ಶ್ರೀವಿಷ್ಣುರೂಪದಲ್ಲಿನ ದರ್ಶನದಿಂದ ಸಾಧಕರು ಧನ್ಯಧನ್ಯರಾದರು !

ಆಶ್ರಮದಲ್ಲಿನ ಸಾಧಕರಿಗೆ ಜನ್ಮೋತ್ಸವದ ದಿನ ಶ್ರೀರಾಮಶಿಲೆಯ ಪಲ್ಲಕ್ಕಿ ಉತ್ಸವವಿದ್ದು, ಅವರಿಗೆ ಅದರಲ್ಲಿ ಭಾಗವಹಿಸುವುದಿದೆ, ಎಂದು ತಿಳಿದ ಆನಂದಕ್ಕೆ ಮಿತಿಯೇ ಇರಲಿಲ್ಲ ವಾಸ್ತವದಲ್ಲಿ ಸಾಧಕರು ರಾಮನಾಥಿಯ ಪರಿಸರದಲ್ಲಿ ಪಲ್ಲಕ್ಕಿಯ ಉತ್ಸವಕ್ಕಾಗಿ ಸೇರಿದ್ದರು; ಆದರೆ ಪಲ್ಲಕ್ಕಿಯ ಆನಂದವನ್ನು ಸಾವಿರಪಟ್ಟು ಹೆಚ್ಚಿಸಲು ಶ್ರೀಮನ್ನಾರಾಯಣಸ್ವರೂಪ ಗುರುದೇವರು ಈ ಉತ್ಸವದಲ್ಲಿ ದಿವ್ಯ ರಥದಲ್ಲಿ ವಿರಾಜಮಾನರಾಗಿದ್ದಾರೆ, ಎಂಬುದು ತಿಳಿದ ಮೇಲೆ ಸಾಧಕರ ಭಾವ ಮುಗಿಲು ಮುಟ್ಟಿತು. ಸಪ್ತರ್ಷಿಗಳ ಆಜ್ಞೆಗನುಸಾರ ಶ್ರೀ ಗುರುದೇವರು ಶ್ರೀವಿಷ್ಣುವಿನ ರೂಪದಲ್ಲಿ ದಿವ್ಯರಥ ದಲ್ಲಿ ವಿರಾಜಮಾನರಾಗಿದ್ದರು. ರಥದಲ್ಲಿ ಅವರ ಎದುರು ಬಲಗಡೆಗೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಎಡಗಡೆಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಕುಳಿತಿದ್ದರು.

ಶ್ರೀಗುರುಗಳ ದಿವ್ಯ ರಥದ ಹಿಂದಿರುವ ಸಾಧಕರಿಗೆ ಗುರುದೇವರು ಪ್ರತ್ಯಕ್ಷ ರಥದಲ್ಲಿ ವಿರಾಜಮಾನ ರಾಗಿದ್ದಾರೆ ಎಂಬುದು ಗೊತ್ತಿಲ್ಲದಿದ್ದರೂ ಅವರ ಭಾವಜಾಗೃತವಾಗುತ್ತಿತ್ತು. ರಥೋತ್ಸವದಲ್ಲಿ ಭಾಗವಹಿಸಿದ ಸಾಧಕರ ಮುಖದ ಮೇಲಿನ ಭಾವ ಮತ್ತು ಆನಂದ, ಅವರು ಧರಿಸಿದ ಸಾತ್ತ್ವಿಕ ಮತ್ತು ಪರಂಪರಾಗತ ವೇಶಭೂಷಗಳು, ಕೈಯಲ್ಲಿ ಹಿಡಿದ ಕೇಸರಿ ಧ್ವಜ, ಆಕರ್ಷಕ ಫಲಕಗಳು, ಶ್ರಿರಾಮ ಸಾಲಿಗ್ರಾಮದ ಪಲ್ಲಕ್ಕಿ ಮತ್ತು ಎಲ್ಲರ ಬಾಯಿಯಲ್ಲಿ ಶ್ರೀಮನ್ನಾರಾಯಣನ ಜೈಘೋಷ, ಹೀಗೆ ಭಕ್ತಿಮಯ ವಾತಾವರಣದಲ್ಲಿ ಈ ರಥೋತ್ಸವ ಪ್ರಾರಂಭವಾಯಿತು.

ಭಕ್ತರ ಮತ್ತು ಭಗವಂತನ ಭೇಟಿಯ ಅದ್ಭುತ ಕ್ಷಣ !

ಶಂಖನಾದ ಮತ್ತು ವೇದಮಂತ್ರಗಳ ಘೋಷಣೆಯಲ್ಲಿ ಶ್ರೀಗುರುಗಳ ರಥೋತ್ಸವವು ಪ್ರಾರಂಭವಾಯಿತು. ಶ್ರೀಗುರುಗಳ ದಿವ್ಯ ರಥವು ಆಶ್ರಮದ ಪ್ರವೇಶದ್ವಾರದಲ್ಲಿ ನಿಂತಿದ್ದ ಬಾಲಕರ ಎದುರಿಗೆ ಬಂದಾಗ ಶ್ರೀವಿಷ್ಣುವಿನ ರೂಪದಲ್ಲಿನ ಶ್ರೀಗುರುಗಳನ್ನು ನೋಡಿ ಬಾಲಸಾಧಕರ ಭಾವಜಾಗೃತವಾಯಿತು. ಮುಂದೆ ಧರ್ಮ ಪ್ರಸಾರದ ಸೇವೆಯನ್ನು ಮಾಡುವ ಸಾಧಕರು ಮಾರ್ಗದ ಎರಡೂ ಬದಿಯಲ್ಲಿ ನಿಂತಿದ್ದರು. ರಥದಲ್ಲಿನ ಶ್ರೀಗುರುಗಳ ನಯನಮನೋಹರ ರೂಪವನ್ನು ನೋಡಿ ಸಾಧಕರು ಸ್ತಬ್ಧರಾದರು ! ಸಾಧಕರ ವಿಲಕ್ಷಣ ಭಾವಜಾಗೃತಿಯಾಯಿತು. ಗುರುಗಳನ್ನು ಶ್ರೀವಿಷ್ಣುವಿನ ರೂಪದಲ್ಲಿ ನೋಡಿದ ಸಾಧಕರ ಮುಖದ ಮೇಲಿನ ಕೃತಜ್ಞತಾಭಾವವು ಶಬ್ದಾತೀತವಾಗಿತ್ತು ! ರಾಮನಾಥಿ ಪರಿಸರದಲ್ಲಿ ನೂರಾರು ಸಾಧಕರು ಮತ್ತು ಜಿಜ್ಞಾಸುಗಳು ರಥೋತ್ಸವದ ದಿವ್ಯ ದರ್ಶನದ ಲಾಭ ಪಡೆದರು.

ನೃತ್ಯ ಆರಾಧನೆಯಿಂದ ಶ್ರೀಮನ್ನಾರಾಯಣನ ಗುಣಗಾನ !

ಗುರುಗಳ ದಿವ್ಯರಥ ಶ್ರೀ ರಾಮನಾಥ ದೇವರ ದೇವಸ್ಥಾನದ ಎದುರಿಗೆ ಬಂದ ಮೇಲೆ ಅಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ನೃತ್ಯ ವಿಭಾಗದ ಸಾಧಕಿ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಕು. ಅಪಾಲಾ ಔಂಧಕರ (ವಯಸ್ಸು ೧೫ ವರ್ಷ) ಮತ್ತು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಕು. ಶರ್ವರಿ ಕಾನಸ್ಕರ (ವಯಸ್ಸು ೧೫ ವರ್ಷ) ಇವರು ‘ಜಯ ಜನಾರ್ಧನಾ… ಈ ಗೀತೆಯಿಂದ  ಶ್ರೀಮನ್ನಾರಾಯಣನ ನೃತ್ಯಾರಾಧನೆಯನ್ನು ಮಾಡಿ ದರು. ರಥೋತ್ಸವದ ಮಾರ್ಗದಲ್ಲಿ ಒಟ್ಟು ೩ ಸ್ಥಳಗಳಲ್ಲಿ ನೃತ್ಯಾರಾಧನೆಯನ್ನು ಮಾಡಲಾಯಿತು. ಈ ಸಮಯದಲ್ಲಿ ನೃತ್ಯ ಮಾಡುವ ಸಾಧಕಿಯರ ಮುಖದ ಮೇಲಿನ ಉತ್ಕಟ ಭಾವವನ್ನು ನೋಡಿ ಎರಡೂ ಬದಿಗಳಲ್ಲಿ ನಿಂತಿರುವ ಸಾಧಕರ ಭಾವ ಜಾಗೃತವಾಗುತ್ತಿತ್ತು.

ನಾಗೇಶಿಯ ಸಾಧಕರೂ ಶ್ರೀಗುರುಗಳ ಭಾವಪೂರ್ಣ ದರ್ಶನವನ್ನು ಪಡೆದರು !

ರಥೋತ್ಸವವು ನಾಗೇಶಿಯಲ್ಲಿ ಸಾಧಕರು ವಾಸಿಸುವ ವಾಸ್ತುಗಳ ಕಡೆಗೆ ಮಾರ್ಗಕ್ರಮಣ ಮಾಡಲು ಪ್ರಾರಂಭಿಸಿತು. ಅಲ್ಲಿ ವಾಸಿಸುವ ಸಾಧಕರು ವಿವಿಧ ಕಟ್ಟಡಗಳ ಬಾಲ್ಕನಿಗಳಲ್ಲಿ ಮತ್ತು ಟ್ಯಾರೆಸಗಳ ಮೇಲೆ ರಥೋತ್ಸವದ ದರ್ಶನವನ್ನು ಪಡೆಯಲು ಮೊದಲಿನಿಂದಲೇ ನಿಂತಿದ್ದರು. ‘ಶ್ರೀಗುರುಗಳು ನಮ್ಮನ್ನು ಭೇಟಿಯಾಗಲು ನಮ್ಮ ಕಡೆ ಬಂದಿದ್ದಾರೆ, ಈ ಒಂದೇ ವಿಚಾರದಿಂದ ಎಲ್ಲರ ಭಾವವು ಉಕ್ಕಿ ಬಂದಿತು.

ಆನಂದ ಉತ್ಸವದ ಹಿಂದೆ ತಿರುಗಿ ಹೋಗುವ ಮಾರ್ಗ

ನಾಗೇಶಿಯಲ್ಲಿನ ಎಲ್ಲ ಸಾಧಕರಿಗೆ ಭೇಟಿಯನ್ನು ನೀಡಿ ಶ್ರೀಗುರುಗಳ ರಥೋತ್ಸವು ಪುನಃ ರಾಮನಾಥಿಯ ಸನಾತನದ ಆಶ್ರಮದ ಕಡೆಗೆ ಹೊರಟಿತು. ರಸ್ತೆಯ ಎರಡೂ ಬದಿಗಳಲ್ಲಿ ನಿಂತಿದ್ದ ಸಾಧಕರಿಗೆ ಮತ್ತೊಮ್ಮೆ ಶ್ರೀಗುರುಗಳ ದರ್ಶನ ಪಡೆಯುವ ಅವಕಾಶ ಸಿಕ್ಕಿತು. ಮುಂದೆ ರಾಮನಾಥಿ ಆಶ್ರಮದಲ್ಲಿನ ಸಾಧಕರು ಮತ್ತು ಸಂತರು ರಥ ಮರಳಿ ಬರುವುದನ್ನು ನೋಡುತ್ತಾ ನಿಂತಿದ್ದರು ! ರಥೋತ್ಸವವು ಆಶ್ರಮಕ್ಕೆ ಮರಳಿ ಬಂದ ನಂತರ ಎಲ್ಲರೂ ಮತ್ತೊಮ್ಮೆ ಭಾವಪೂರ್ಣ ದರ್ಶವನ್ನು ಪಡೆದರು.

ಗಮನಾರ್ಹ ಅಂಶಗಳು

ರಥೋತ್ಸವದಲ್ಲಿ ಶ್ರೀ ರಾಮನಾಥ ದೇವರು, ಶ್ರೀ ಶಾಂತಾದುರ್ಗಾ ದೇವಿ, ಶ್ರೀ ನಾಗೇಶ ಮಹಾರುದ್ರ, ಶ್ರೀ ಮಹಾಲಕ್ಷ್ಮಿದೇವಿ ಮತ್ತು ಶ್ರೀ ದತ್ತಗುರುಗಳ ಭಾವಪೂರ್ಣ ಜಯಘೋಷವನ್ನು ಮಾಡಲಾಯಿತು. ಇದರಿಂದ ಈ ದೇವತೆಗಳ ಆಶೀರ್ವಾದವನ್ನು ಪಡೆಯಲಾಯಿತು.  ರಥೋತ್ಸವದ ಸಮಯದಲ್ಲಿ ಮಾರ್ಗದಲ್ಲಿ ಅನೇಕರು ಮನೆಯಿಂದ ಹೊರಗೆ ಬಂದು ಕುತೂಹಲದಿಂದ ರಥದ ದರ್ಶನವನ್ನು ಪಡೆದರು.

ಸಂತರು ಪರಾತ್ಪರ ಗುರು ಡಾ. ಆಠವಲೆಯವರನ್ನು ಅವತಾರವೆಂದು ಕರೆಯುವುದರ ಕಾರಣ

‘ಪರಾತ್ಪರ ಗುರು ಡಾ. ಆಠವಲೆಯವರು ಎಂದಿಗೂ ತಮ್ಮನ್ನು ಅವತಾರವೆಂದು ಹೇಳಿಲ್ಲ. ಸನಾತನ ಸಂಸ್ಥೆಯೂ ಎಂದಿಗೂ ಹೀಗೆ ಹೇಳುವು ದಿಲ್ಲ. ‘ನಾಡಿಭವಿಷ್ಯ ಎಂಬ ಪ್ರಾಚೀನ ಮತ್ತು ಪ್ರಗಲ್ಭ ಜ್ಯೋತಿಷ್ಯಶಾಸ್ತ್ರದಲ್ಲಿ ಸಪ್ತರ್ಷಿಗಳು ಸಾವಿರಾರು ವರ್ಷಗಳ ಹಿಂದೆ ಪ್ರತಿಯೊಬ್ಬ ವ್ಯಕ್ತಿಯ ಭವಿಷ್ಯವನ್ನು ಬರೆದಿಟ್ಟಿದ್ದಾರೆ. ತಮಿಳುನಾಡಿನ ಜೀವನಾಡಿಪಟ್ಟಿ ವಾಚಕರಾದ ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಸಪ್ತರ್ಷಿಗಳು ಜೀವನಾಡಿ ಪಟ್ಟಿಗಳಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಶ್ರೀವಿಷ್ಣುವಿನ ಅವತಾರವಾಗಿದ್ದಾರೆ ಎಂದು ಬರೆದಿಟ್ಟಿದ್ದಾರೆ. ಸಪ್ತರ್ಷಿಗಳು ಮಾಡಿದ ಆಜ್ಞೆಯಿಂದ ಮತ್ತು ನಾಡಿಪಟ್ಟಿಯಲ್ಲಿ ಹೇಳಿದಂತೆ ಜನ್ಮೋತ್ಸವದ ದಿನ ಪರಾತ್ಪರ ಗುರು ಡಾ. ಆಠವಲೆಯವರು ಶ್ರೀವಿಷ್ಣುವಿನ ರೂಪದಲ್ಲಿ ವಸ್ತ್ರಾಲಂಕಾರಗಳನ್ನು ಧರಿಸಿದ್ದರು.

ಶ್ರೀವಿಷ್ಣುವಿನ ವಸ್ತ್ರಾಲಂಕಾರಗಳನ್ನು ಧರಿಸುವುದರ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ವಿಚಾರಗಳು !

‘ವೃದ್ಧಾವಸ್ಥೆ’ ಅಂದರೆ ಎರಡನೆಯ ಬಾಲ್ಯಾವಸ್ಥೆ ಎಂದು ಹೇಳುತ್ತಾರೆ. ಇದರ ಅನುಭೂತಿಯನ್ನು ನಾನು ೮೦ ವರ್ಷದ ಹುಟ್ಟುಹಬ್ಬದ ದಿನದಂದು ಪಡೆದೆನು. ಚಿಕ್ಕ ಮಕ್ಕಳನ್ನು ‘ರಾಮ ಮತ್ತು ಕೃಷ್ಣ’ನಂತೆ ಹೇಗೆ ಅಲಂಕರಿಸುತ್ತಾರೆಯೋ, ಹಾಗೆ ೮೦ ವರ್ಷದ ಹುಟ್ಟುಹಬ್ಬದ ನಿಮಿತ್ತದಿಂದ ಸಪ್ತರ್ಷಿಗಳ ಆಜ್ಞೆಯಂತೆ ಸಾಧಕರು ನನ್ನನ್ನು ಶ್ರೀವಿಷ್ಣುವಿನ ವೇಷದಲ್ಲಿ ಅಲಂಕರಿಸಿದರು.

– (ಪರಾತ್ಪರ ಗುರು) ಡಾ. ಆಠವಲೆ (೨೨.೫.೦೨೦೨೨)

ರಥೋತ್ಸವದ ಬಗ್ಗೆ ಪೊಲೀಸರ ಅಭಿಪ್ರಾಯ

‘ನಾನು ಸ್ವತಃ ರಥೋತ್ಸವ ನಡೆಯುತ್ತಿರುವಾಗ ಅಲ್ಲಿ ಬಂದು ಹೋದೆ. ನಿಮ್ಮ ಪ್ರತಿಯೊಂದು ಕಾರ್ಯಕ್ರಮವು ಶಿಸ್ತುಬದ್ಧವಾಗಿರುತ್ತದೆ. ಆದುದರಿಂದ ನಮಗೆ ಹೆಚ್ಚು ಒತ್ತಡ ಇರುವುದಿಲ್ಲ.  – ಓರ್ವ ಪೊಲೀಸ ಅಧಿಕಾರಿ