ಶ್ರೀವಿಷ್ಣುವಿನ ಯೋಗಮಾಯೆಗೆ ‘ಹರಿಮಾಯೆ’ ಎನ್ನುತ್ತಾರೆ. ಶ್ರೀವಿಷ್ಣುವಿನ ಮಾಯೆಯು ಅವನ ಭಕ್ತರ ಮೇಲೆ ಆವರಣವನ್ನು ತರುವುದರಿಂದ ಆ ಭಕ್ತರಿಗೆ ಭಗವಂತನ ಮೂಲ ಸ್ವರೂಪದ ವಿಸ್ಮರಣೆಯಾಗುತ್ತದೆ. ಸಾಧಕ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಸಂಬಂಧವು ‘ಗುರು-ಶಿಷ್ಯ’ನ ಸಂಬಂಧವಾಗಿದೆ. ಆದರೆ ನಾವೆಲ್ಲ ಸಾಧಕರು ಯಾರನ್ನು ‘ಗುರು’ ಎಂದು ಪೂಜಿಸುತ್ತೆವೆಯೋ, ಅವರು ಸಾಕ್ಷಾತ ಶ್ರೀವಿಷ್ಣುವಿನ ಕಲಿಯುಗದ ಅವತಾರವಾಗಿದ್ದಾರೆ ಎಂದು ಗೊತ್ತಾಗಲೇ ಇಲ್ಲ. ಇದು ಸಹ ‘ಶ್ರೀವಿಷ್ಣುವಿನ ಮಾಯೆ’ಯೇ ಅಲ್ಲವೇ ? ಆದರೆ ಈಗ ಮಾತ್ರ ನಮ್ಮೆಲ್ಲ ಸಾಧಕರಿಗೆ, ‘ನಮ್ಮ ಗುರುಗಳು ಶ್ರೀವಿಷ್ಣುವಿನ ಅವತಾರವಾಗಿದ್ದಾರೆಂದು ತಿಳಿದಿದೆ. ಇದು ಸಹ ಶ್ರೀವಿಷ್ಣುವಿನ ಮಾಯೆಯೇ ಆಗಿದೆ. ಇಂದು ನಾವು ಶ್ರೀವಿಷ್ಣುವಿನ ಈ ಅವತಾರಿ ಲೀಲೆಯ ಬಗ್ಗೆ ತಿಳಿದುಕೊಳ್ಳೋಣ.
೧. ಭಗವಂತನ ಅವತಾರಿ ಲೀಲೆಯ ಮಹತ್ವ
ಧರ್ಮಸಂಸ್ಥಾಪನೆಗಾಗಿ ಈಶ್ವರನು ಅವತಾರ ಧಾರಣೆಯನ್ನು ಮಾಡುತ್ತಾನೆ. ಸರಳ ಶಬ್ದಗಳಲ್ಲಿ ಹೇಳುವುದಾದರೆ, ಭಕ್ತರ ರಕ್ಷಣೆಗಾಗಿ ಮತ್ತು ದುರ್ಜನರ ನಾಶಕ್ಕಾಗಿ ಭಗವಂತನು ಅವತಾರ ಧಾರಣೆಯನ್ನು ಮಾಡುತ್ತಾನೆ. ಇದು ಅವತಾರದ ಮೂಲ (ಕಾರ್ಯ) ಕೆಲಸವಾಗಿದೆ; ಆದರೆ ಅವತಾರಿ ಲೀಲೆಯ ಇನ್ನೊಂದು ಅತ್ಯಂತ ಮಹತ್ವದ ಭಾಗವಿದೆ ಅದೇನೆಂದರೆ ಅವತಾರವು ಪೃಥ್ವಿಯ ಮೇಲೆ ಜನ್ಮ ತಾಳಿದ ನಂತರ ಅದು ಯುಗಯುಗಾಂತರ ಭಕ್ತರಿಗೆ ಭವಸಾಗರದಿಂದ ಮುಕ್ತರಾಗುವ ಮಾರ್ಗವನ್ನು ತೋರಿಸುತ್ತದೆ. ಅವತಾರವು ಪೃಥ್ವಿಯ ಮೇಲೆ ಇರುವುದರಿಂದ ಅವತಾರಿ ಲೀಲೆಗಳು ಘಟಿಸುತ್ತವೆ. ಆ ಲೀಲೆಗಳಿಂದಲೇ ರಾಮಾಯಣ, ಮಹಾಭಾರತ, ಮತ್ತು ಶ್ರೀಮದ್ಭಾಗವತದಂತಹ ಅಜರಾಮರ (ಶಾಶ್ವತವಾದ) ಕಥೆಗಳು ಸಿದ್ಧವಾಗುತ್ತವೆ. ಎಲ್ಲಕ್ಕಿಂತಲೂ ಮಹತ್ವದ್ದೆಂದರೆ ಅವತಾರದ ಲೀಲೆಗಳ ಸ್ಮರಣೆ, ಕೀರ್ತನೆ, ಮತ್ತು ಶ್ರವಣ ಇವುಗಳಿಂದ ಮನುಷ್ಯನು ಅಲ್ಪ ಕಾಲಾವಧಿಯಲ್ಲೇ ಸಂಸಾರದಿಂದ ಮುಕ್ತನಾಗಬಹುದು. ಇದೇ ಭಗವಂತನ ಅವತಾರಿ ಲೀಲೆಯ ಮಹತ್ವವಾಗಿದೆ.
೨. ಅವತಾರಗಳಿಂದಾಗಿಯೇ ಮನುಷ್ಯನ ಜೀವನದಲ್ಲಿ ಆನಂದವಿದೆ !
ಭಗವಂತನು ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಶ್ರೀರಾಮ, ಶ್ರೀಕೃಷ್ಣ, ಮೋಹಿನಿ, ಶ್ರೀನಿವಾಸ (ತಿರುಪತಿ ಬಾಲಾಜಿ) ಮತ್ತು ವೇದವ್ಯಾಸ ಹೀಗೆ ಅನೇಕ ಅವತಾರಗಳನ್ನು ತಾಳಿದುದರಿಂದ ಮನುಷ್ಯನ ಜೀವನಕ್ಕೆ ಆನಂದವು ದೊರಕಿತು ಮತ್ತು ಮನುಷ್ಯನ ಜೀವನಕ್ಕೆ ಒಂದು ಧ್ಯೇಯ ಸಿಕ್ಕಿತು. ಅವತಾರವಿಲ್ಲದಿದ್ದರೆ, ಮನುಷ್ಯನ ಜೀವನದಲ್ಲಿ ಆನಂದವೇ ಇರುತ್ತಿರಲಿಲ್ಲ ! ಇಂದು ಭಾರತದಲ್ಲಿ ಶ್ರೀಕೃಷ್ಣ ಮತ್ತು ಶ್ರೀರಾಮರು ಎಲ್ಲೆಲ್ಲಿ ಹೋದರೊ, ಆಯಾ ಊರುಗಳು ಅವರ ಆಗಮನದಿಂದ ನಮ್ಮ ನೆನಪಿನಲ್ಲಿ ಉಳಿದವು. ಮಥುರೆಗೆ ಹೋದರೆ ಶ್ರೀಕೃಷ್ಣನ ನೆನಪು ಬರುತ್ತದೆ ಮತ್ತು ಅಯೋಧ್ಯೆಯೆಂದರೆ ಶ್ರೀರಾಮನ ನೆನಪಾಗುತ್ತದೆ. ಇಷ್ಟೇ ಅಲ್ಲದೇ ನಮ್ಮ ಬಂಧು-ಬಾಂಧವರ ಮತ್ತು ಪೂರ್ವಜರಿಗೂ ಅವತಾರಗಳ ಹೆಸರೇ ಇಡಲಾಗಿದೆ.
೩. ಅವತಾರಿ ಲೀಲೆಯು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ !
ನದಿ, ಪರ್ವತ, ಸಮುದ್ರ, ಕೆರೆ, ಊರು, ವೃಕ್ಷ, ಕಲ್ಲು ಇವುಗಳೆಲ್ಲ ಅವತಾರಿ ಲೀಲೆಯಿಂದ ಜಾಗೃತಗೊಂಡಿವೆ. ಅವತಾರಿ ಲೀಲೆಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿವೆ. ತಾಯಿಯು ಮಕ್ಕಳಿಗೆ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಹೇಳುತ್ತಾಳೆ, ರಾಜ್ಯಶಾಸ್ತ್ರದಲ್ಲಿನ ತಜ್ಞರು ಇದರಿಂದಲೇ ಬೋಧನೆಯನ್ನು ಪಡೆಯುತ್ತಾರೆ. ‘ಶ್ರೀಕೃಷ್ಣನೀತಿ’ ಮತ್ತು ‘ರಾಮರಾಜ್ಯ’ ಈ ಎರಡು ಶಬ್ದಗಳು ಅವತಾರಿ ಲೀಲೆಯಿಂದಲೇ ಮೂಡಿ ಬಂದಿವೆ. ಕೃಷ್ಣಾಷ್ಟಮಿ, ರಾಮನವಮಿ, ದೀಪಾವಳಿ, ವಿಜಯದಶಮಿ, ಇತ್ಯಾದಿ ಹಬ್ಬಗಳ ಉಗಮವು ಅವತಾರಿ ಲೀಲೆಗಳಿಂದಲೇ ಆಗಿದೆ.
೪. ಶ್ರೀವಿಷ್ಣುವು ಕಲಿಯುಗದಲ್ಲಿ ತಾಳಿದ ಅವತಾರವೆಂದರೆ ಪರಾತ್ಪರ ಗುರು ಡಾ. ಆಠವಲೆ !
ಕಾಕಭುಶುಂಡಿ ಋಷಿಗಳು ಶ್ರೀವಿಷ್ಣುವಿನ ವಾಹನವಾದ ಗರುಡನಿಗೆ ಹೇಳುತ್ತಾರೆ, ಹೇ ಗರುಡಾ, ಭಗವಂತನು ನಟವರನಾಗರನಾಗಿದ್ದಾನೆ. ‘ನಟವರನಾಗರ’ ಎಂದರೆ ಒಬ್ಬನೇ ನಟ ಒಂದು ನಾಟಕದಲ್ಲಿ ಬೇರೆ ಬೇರೆ ಪಾತ್ರಗಳನ್ನು ವಹಿಸುತ್ತಾನೆ. ಆ ಪಾತ್ರದ ಅಭಿನಯವನ್ನು ನೋಡಿ ಪ್ರೇಕ್ಷಕರು ಪ್ರಭಾವಿತರಾಗುತ್ತಾರೆ; ಆದರೆ ನಟನು ಅಪ್ರಭಾವಿತನಾಗಿರುತ್ತಾನೆ. ಯಾರು ನಾಟಕವನ್ನು ನೋಡಲಿ ಅಥವಾ ನೋಡದೆ ಇರಲಿ, ಪಾತ್ರಧಾರಿಯು ನಾಟಕದಲ್ಲಿ ಅಭಿನಯವನ್ನು ಮಾಡಿ ಹೋಗಿಬಿಡುತ್ತಾನೆ. ನಂತರ ಜನರು ಆ ಪಾತ್ರದ ಜೊತೆಗೆ ತಮ್ಮನ್ನು ಹೋಲಿಸುತ್ತಾರೆ. ಆ ಪಾತ್ರದ ಬಗ್ಗೆ ಚರ್ಚೆಯನ್ನು ಮಾಡುತ್ತಾರೆ ಮತ್ತು ಆ ಪಾತ್ರದ ಜೊತೆಗೆ ಏಕರೂಪವಾಗುತ್ತಾರೆ. ಪ.ಪೂ. ಡಾಕ್ಟರ್, ಅಂದರೆ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ ಇದು ಈಗಿನ ಅವತಾರಿ ಲೀಲೆಯಲ್ಲಿನ ಅವತಾರದ ಹೆಸರಾಗಿದೆ. ಸನಾತನದ ಎಲ್ಲ ಸಾಧಕರು ಈ ಅವತಾರಿ ಲೀಲೆಯ ಸಾಕ್ಷಿದಾರರಾಗಿದ್ದಾರೆ. ಶ್ರೀವಿಷ್ಣು ಕಲಿಯುಗದಲ್ಲಿನ ಸನಾತನದ ಸಾಧಕರಿಗಾಗಿ ತೆಗೆದುಕೊಂಡ ಅವತಾರವೆಂದರೆ ಪರಾತ್ಪರ ಗುರು ಡಾ. ಆಠವಲೆ ಹೌದು ! ಆದುದರಿಂದ ಪರಾತ್ಪರ ಗುರು ಡಾ. ಆಠವಲೆಯವರು ‘ನಟವರನಾಗರಾಗಿದ್ದಾರೆ’.
೫. ನಾವು ಯಾರನ್ನು ಭೇಟಿಯಾದೆವೋ, ಮಾತನಾಡಿದೆವೋ, ಮತ್ತು ಯಾರ ಜೊತೆಯಲ್ಲಿ ಸೇವೆಯನ್ನು ಮಾಡಿದೆವೋ, ಅವರು ವೈಕುಂಠದಿಂದ ಬಂದ ಸಾಕ್ಷಾತ ಶ್ರೀವಿಷ್ಣು ಆಗಿದ್ದರು’, ಎಂದು ತಿಳಿಯಲು ಸ್ವಲ್ಪ ಸಮಯ ತಗಲುವುದು !
ಮುಂಬರುವ ಕಾಲದಲ್ಲಿ ಎಲ್ಲ ಸಾಧಕರು ಮತ್ತು ಸಮಾಜವು ಶ್ರೀವಿಷ್ಣುವಿನ ಈ ಅವತಾರದ ಜೊತೆಗೆ, ಅಂದರೆ ಪರಾತ್ಪರ ಗುರು ಡಾ. ಆಠವಲೆ (ಗುರುದೇವರೊಂದಿಗಿನ) ಇವರೊಂದಿಗಿದ್ದ ತಮ್ಮ ಪರಿಚಯವನ್ನು ಹೇಳುವರು, ಗುರುದೇವರ ಕಾರ್ಯದ ಬಗ್ಗೆ ಮಾತನಾಡುವರು ಮತ್ತು ಅವರ ನೆನಪುಗಳನ್ನು ಹೇಳುವರು; ಆದರೆ ‘ನಾವು ಯಾರನ್ನು ಪ್ರತ್ಯಕ್ಷವಾಗಿ ಭೇಟಿಯಾದೆವೋ, ಯಾರ ಜೊತೆಯಲ್ಲಿ ಮಾತನಾಡಿದೆವೋ, ಯಾರ ಜೊತೆಯಲ್ಲಿ ಊಟವನ್ನು ಮಾಡಿದೆವೋ, ಸೇವೆಯನ್ನು ಮತ್ತು ಪ್ರವಾಸವನ್ನು ಮಾಡಿದೆವೋ, ಅವರು ವೈಕುಂಠದಿಂದ ಬಂದ ಸಾಕ್ಷಾತ ಭಗವಾನ ಶ್ರೀವಿಷ್ಣು ಆಗಿದ್ದರು’, ಇದು ಎಲ್ಲರಿಗೂ ತಿಳಿಯಲು ಸ್ವಲ್ಪ ಸಮಯ ತಗಲುವುದು ! ಒಂದು ವಿಷಯ ನಿತ್ಯ ಮತ್ತು ಸತ್ಯವಾಗಿದೆ, ಅದೆಂದರೆ ‘ಭಗವಂತನ ನಾಟಕ’ವೆಂದರೆ ಮುಕ್ತಿಯ ಮಾರ್ಗವಾಗಿದೆ.
– ಶ್ರೀ. ವಿನಾಯಕ ಶಾನಬಾಗ (ಆಧ್ಯಾತ್ಮಿಕ ಮಟ್ಟ ಶೇ. ೬೬) ಚೆನ್ನೈ. (೧೧.೫.೨೦೨೨)
ಈಶ್ವರನ ನಿಯೋಜನೆಗನುಸಾರ ವಿಶ್ವ ಮಹಾಯುದ್ಧ ಆಗುವುದಿದೆ, ಆದುದರಿಂದ ಅದರ ವಿಚಾರ ಮಾಡಬೇಡಿ !‘ನಾವು ಚತುಶ್ಚಕ್ರ ವಾಹನದಲ್ಲಿ ಪ್ರವಾಸ ಮಾಡಲು ಆರಂಭಿಸಿದಾಗ ಕೂಡಲೇ ೧೦೦ ಕಿ.ಮೀ. ವೇಗದಲ್ಲಿ ಹೋಗುವುದಿಲ್ಲ. ಈ ವೇಗವನ್ನು ತಲುಪಲು ನಮಗೆ ಸ್ವಲ್ಪ ಸಮಯವನ್ನು ಕೊಡಬೇಕಾಗುತ್ತದೆ. ಅದೇ ರೀತಿ ಈಶ್ವರನ ನಿಯೋಜನೆಗನುಸಾರ ಪೃಥ್ವಿಯ ದಿಕ್ಕಿನಲ್ಲಿ ‘ಮಹಾಯುದ್ಧ ಮತ್ತು ಪಂಚಮಹಾಭೂತಗಳ ಪ್ರಕೋಪ (ನೈಸರ್ಗಿಕ ಆಪತ್ತುಗಳು) ಬರುತ್ತಿವೆ; ಆದರೆ ಅವು ಇನ್ನೂ ವೇಗವನ್ನು ಹಿಡಿದಿಲ್ಲ. ಸ್ವಲ್ಪ ಸಮಯದ ನಂತರ ಅವು ವೇಗವನ್ನು ಹಿಡಿಯುವವು ಮತ್ತು ಸಂಪೂರ್ಣ ಪೃಥ್ವಿಯ ಮೇಲೆ ನಮಗೆ ರಕ್ತದ ನದಿಗಳು ಹರಿಯುವುದು ಕಾಣಿಸುವುದು. ಮಾನವರ ಸಮೂಹಗಳು ಕ್ಷಣದಲ್ಲಿ ಬೂದಿಯಾಗುವುದು ಕಾಣಿಸುವುದು. ಈಗ ನಡೆಯಲಿರುವ ವಿಶ್ವ ಮಹಾಯುದ್ಧದ ಭಯಾನಕ ಸ್ವರೂಪವನ್ನು ಇಂದಿನವರೆಗೆ ಯಾರೂ ಅನುಭವಿಸಿಲ್ಲ. ‘ಈ ಯುದ್ಧದಲ್ಲಿ ಯಾರು ಜೀವಂತ ಉಳಿಯುವರು ಮತ್ತು ಯಾರು ಸಾಯುವರು ?’, ಎಂಬುದನ್ನು ಯಾರಿಗೂ ಹೇಳಲು ಆಗುವುದಿಲ್ಲ. – ಸಪ್ತರ್ಷಿ (ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ, ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೯೬ (೩.೨.೨೦೨೨) |