ವೈಶಾಖ ಕೃಷ್ಣ ಸಪ್ತಮಿಯಂದು ಮಹರ್ಷಿಗಳ ಆಜ್ಞೆಯಿಂದ ಪರಾತ್ಪರ ಗುರು ಡಾ. ಆಠವಲೆಯವರ ೮೦ ನೇ ಜನ್ಮೋತ್ಸವದ ನಿಮಿತ್ತ ಅವರ ಮಂಗಲಮಯ ರಥೋತ್ಸವವನ್ನು ಆಚರಿಸಲಾಯಿತು. ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ನೆರವೇರಿದ ಈ ರಥೋತ್ಸವದ ಛಾಯಾಚಿತ್ರಗಳನ್ನು ಗಣಕಯಂತ್ರದಲ್ಲಿ ನೋಡುತ್ತಿರುವಾಗ ನನಗೆ ಆ ಛಾಯಾಚಿತ್ರಗಳಲ್ಲಿ ಮುಂದಿನಂತೆ ವಿವಿಧ ಹಂತಗಳಿಗನುಸಾರ ಜೀವಂತಿಕೆಯ ಅರಿವಾಯಿತು. ಯಾವುದಾದರೊಂದು ಘಟನೆಯ ಚಲನಚಿತ್ರವನ್ನು (Video) ನೋಡುವಾಗ ಯಾವ ರೀತಿ ಎಲ್ಲ ಪ್ರಸಂಗಗಳು ಗತಿಮಾನವಾಗಿರುತ್ತವೆಯೋ, ಅದೇ ರೀತಿ ಈ ಛಾಯಾಚಿತ್ರಗಳನ್ನು ನೋಡುವಾಗಲೂ ‘ಪ್ರತಿಯೊಂದು ಪ್ರಸಂಗವೇ ಅಲ್ಲಿ ಘಟಿಸುತ್ತಿದೆ’, ಎಂದು ಅರಿವಾಗುತ್ತದೆ. ಛಾಯಾಚಿತ್ರಗಳು ಸಜೀವ ಕಾಣಿಸುವುದರ ಸಂದರ್ಭದಲ್ಲಿನ ಅನುಭೂತಿ ಮತ್ತು ಅವುಗಳ ಹಿಂದಿನ ಶಾಸ್ತ್ರವನ್ನು ಇಲ್ಲಿ ನೀಡುತ್ತಿದ್ದೇನೆ.
೧. ಛಾಯಾಚಿತ್ರಗಳಲ್ಲಿ ಜೀವಂತಿಕೆ ಅರಿವಾಗುವ ಸಂದರ್ಭದಲ್ಲಿನ ಅನುಭೂತಿಗಳು !
೧ ಅ. ರಥೋತ್ಸವ ಆಶ್ರಮದಲ್ಲಿ ಆಗಮಿಸುವಾಗಿನ ಛಾಯಾಚಿತ್ರಗಳು
೧ ಅ ೧. ‘ಗುರುದೇವರ ದಿವ್ಯ ರಥ, ಅದರ ಹಿಂದಿನ ಸಾಧಕರು, ಹೀಗೆ ಎಲ್ಲರೂ ಮುಂದೆ ಮುಂದೆ ಬರುತ್ತಿದ್ದಾರೆ’, ಎಂದು ಅನಿಸಿತು.
೧ ಅ ೨. ಈ ಛಾಯಾಚಿತ್ರದಲ್ಲಿ ಪರಾತ್ಪರ ಗುರುದೇವರು ಸಾಧಕರ ಭಾವ ಪೂರ್ಣ ಜಯಘೋಷಕ್ಕೆ ಪ್ರತಿಕ್ರಿಯೆ ನೀಡುತ್ತಿರುವುದು ಕಾಣಿಸುತ್ತದೆ. ಅದನ್ನು ನೋಡಿ ‘ಪರಾತ್ಪರ ಗುರುದೇವರು ಸಾಧಕರೊಂದಿಗೆ ಮಾತನಾಡುತ್ತಿದ್ದಾರೆ’ ಎಂದು ಅನಿಸುತ್ತದೆ. ‘ಆ ಮಾತುಗಳು ಪ್ರತ್ಯಕ್ಷ ನಡೆದಿವೆ’, ಈ ರೀತಿಯಲ್ಲಿ ನನಗೆ ಅವರ ಧ್ವನಿಯೂ ಕೇಳಿಸಿತು.
೧ ಅ ೩. ‘ಆಶ್ರಮದ ಪಕ್ಕದಲ್ಲಿರುವ ಗಿಡಗಳ ಎಲೆಗಳು ಅಲುಗಾಡುತ್ತಿರುವುದು’ ಅರಿವಾಯಿತು.
೧ ಆ. ನೃತ್ಯಾರಾಧನೆಯ ಛಾಯಾಚಿತ್ರಗಳು : ರಥೋತ್ಸವದಲ್ಲಿ ಭಗವಂತನ ನೃತ್ಯಾರಾಧನೆಯನ್ನು ಮಾಡುವ ಸಾಧಕಿಯರ ಛಾಯಾಚಿತ್ರ ಈ ಪುಟದಲ್ಲಿವೆ. ಆ ಛಾಯಾಚಿತ್ರವನ್ನು ನೋಡಿ ಅವು ಛಾಯಾಚಿತ್ರವಾಗಿರದೇ ‘ಆ ಸ್ಥಳದಲ್ಲಿ ಪ್ರತ್ಯಕ್ಷ ನೃತ್ಯ ನಡೆಯುತ್ತಿದೆ’, ಎಂದು ಅನಿಸಿತು. ‘ಹಾಡುಗಳು ನಡೆದಿವೆ. ಅವುಗಳ ತಾಳಕ್ಕನುಸಾರ ಸಾಧಕಿಯರು ನೃತ್ಯವನ್ನು ಮಾಡುತ್ತಿದ್ದಾರೆ’, ಎಂಬುದನ್ನು ಆ ಛಾಯಾಚಿತ್ರಗಳನ್ನು ನೋಡುವಾಗ ಅನುಭವಿಸಲು ಸಾಧ್ಯವಾಯಿತು.
೧ ಇ. ತಾಳಗಳನ್ನು ಬಾರಿಸುವ ಸಾಧಕಿಯರ ಛಾಯಾಚಿತ್ರ : ಈ ಛಾಯಾಚಿತ್ರವನ್ನು ನೋಡುವಾಗ ‘ಅವರು ಮುಂದೆ ಮುಂದೆ ಹೋಗುತ್ತಿದ್ದಾರೆ’, ಎಂದು ಕಾಣಿಸಿ ನನಗೆ ತಾಳಗಳ ನಾದವೂ ಕೇಳಿಸಿತು.
೧ ಈ. ನಾರಾಯಣನ ನಾಮಘೋಷವನ್ನು ಮಾಡುವ ಸಾಧಕಿಯರ ಛಾಯಾಚಿತ್ರ : ಈ ಛಾಯಾಚಿತ್ರವನ್ನು ನೋಡುವಾಗಲೂ ಚಲಿಸುವುದರ ಅರಿವಾಯಿತು. ‘ಸಾಧಕಿಯರು ಶ್ರೀಮನ್ನಾರಾಯಣನ ನಾಮಘೋಷವನ್ನು ಮಾಡುತ್ತಾ ಮುಂದೆ ಮುಂದೆ ಹೋಗುತ್ತಿದ್ದಾರೆ’, ಎಂದು ಅನಿಸಿತು.
ಈ ರೀತಿ ವಿವಿಧ ಛಾಯಾಚಿತ್ರಗಳನ್ನು ನೋಡುವಾಗ ‘ಆಯಾ ಛಾಯಾಚಿತ್ರಗಳು ಸಜೀವವಾಗಿವೆ ಮತ್ತು ಆ ಪ್ರಸಂಗಗಳು ಪ್ರತ್ಯಕ್ಷ ನಡೆದಿವೆ’, ಮತ್ತು ನಾವು ಒಂದು ಚಲನಚಿತ್ರ (Video) ವನ್ನು ನೋಡುತ್ತಿದ್ದೇವೆ ಎಂದು ಅನಿಸಿತು.
೨. ಶ್ರೀಮನ್ನಾರಾಯಣ ಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ರಥೋತ್ಸವವು ಈಶ್ವರೀತತ್ತ್ವದ ಅನುಭೂತಿಯನ್ನು ನೀಡುವುದಾಗಿರುವುದರಿಂದ ಅವುಗಳನ್ನು ನೋಡುವಾಗ ಪಂಚಮಹಾಭೂತಗಳ ಸ್ತರದ ಅನುಭೂತಿಗಳು ಬರುವುದು
‘ಪರಾತ್ಪರ ಗುರು ಡಾ. ಆಠವಲೆಯವರು ಸಾಕ್ಷಾತ್ ಶ್ರೀಮನ್ನಾರಾಯಣನ ಅವತಾರವಾಗಿದ್ದಾರೆ’, ಎಂದು ಸಪ್ತರ್ಷಿಗಳು ಪದೇ ಪದೇ ಹೇಳುತ್ತಾರೆ. ಇದರ ಅನುಭೂತಿಯನ್ನು ಸಾಧಕರೂ ಪಡೆಯುತ್ತಿದ್ದಾರೆ. ಯಾವುದು ಸಾಕ್ಷಾತ್ ಈಶ್ವರನಿಗೆ ಸಂಬಂಧಿಸಿರುತ್ತದೆಯೋ, ಅದು ಮಾಯೆಗೆ ಸಂಬಂಧಿಸಿರುವುದಿಲ್ಲ, ಅದು ಶಾಶ್ವತವಾಗಿರುತ್ತದೆ. ಅದು ಚಿರಂತನವಾಗಿ ಉಳಿಯುವ ಮತ್ತು ಆತ್ಮಾನಂದವನ್ನು ನೀಡುವುದಾಗಿರುತ್ತದೆ. ಆದ್ದರಿಂದ ಸಾತ್ತ್ವಿಕ ಘಟಕಗಳಲ್ಲಿ ಜೀವಂತಿಕೆಯು ಕಾಣಿಸುತ್ತದೆ. ಸಾಧಕರು, ಸಂತರು ಭಕ್ತಿಭಾವದಿಂದ ಅನುಭವಿಸಿದ ಈ ಪರಾತ್ಪರ ಗುರು ಡಾ. ಆಠವಲೆಯವರ ರಥೋತ್ಸವ, ಸಾಧಕರು ಮತ್ತು ಸಂತರ ಮನಮಂದಿರದಲ್ಲಿ ಶಾಶ್ವತವಾಗಿ ಕೊರೆಯಲಾಗಿದೆ. ಆದುದರಿಂದ ಈ ದಿವ್ಯ ರಥೋತ್ಸವದ ಛಾಯಾಚಿತ್ರಗಳಲ್ಲಿ ಜೀವಂತಿಕೆಯ (ತೇಜತತ್ತ್ವ) ಅರಿವಾಗಿ ಛಾಯಾಚಿತ್ರಗಳಲ್ಲಿನ ವ್ಯಕ್ತಿಗಳ ಚಲನವಲನ ಅರಿವಾಗುವುದು (ವಾಯುತತ್ತ್ವ), ತಾಳಗಳ ನಾದದ ಅರಿವಾಗುವುದು (ಆಕಾಶತತ್ತ್ವ) ಹೀಗೆ ಪಂಚಮಹಾಭೂತಗಳ ಸ್ತರದಲ್ಲಿನ ಅನುಭೂತಿಗಳು ಬಂದವು.
ಕೇವಲ ಕೆಲವು ಛಾಯಾಚಿತ್ರಗಳನ್ನು ನೋಡಿ ಇಂತಹ ಉಚ್ಚ ಸ್ತರದ ಅನುಭೂತಿಗಳು ಬರುತ್ತವೆ ಎಂದಾದರೆ, ದಿವ್ಯ ವಾತಾವರಣದಲ್ಲಿ ನೆರವೇರಿದ ರಥೋತ್ಸವದಲ್ಲಿ ಎಷ್ಟೊಂದು ಪ್ರಮಾಣದಲ್ಲಿ ಈಶ್ವರೀ ತತ್ತ್ವವು ಕಾರ್ಯನಿರತವಾಗಿರಬಹುದು, ಎಂಬುದರ ಕಲ್ಪನೆಯನ್ನು ಈ ಛಾಯಾಚಿತ್ರಗಳಿಂದ ಮಾಡಬಹುದು ! ಯಾರ ಕೇವಲ ಅಸ್ತಿತ್ವದಿಂದಲೇ ಛಾಯಾಚಿತ್ರಗಳಿಗೆ ಜೀವಂತಿಕೆ ಬರುವಂತಹ ವಿವಿಧ ಉಚ್ಚ ಅನುಭೂತಿಗಳನ್ನು ಅನುಭವಿಸಲು ಸಾಧ್ಯವಾಗುತ್ತದೆಯೋ, ಆ ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಅನಂತ ಕೋಟಿ ಕೃತಜ್ಞತೆಗಳು ! ಎಲ್ಲರಿಗೂ ‘ದಿವ್ಯ ರಥೋತ್ಸವದ ಚೈತನ್ಯಮಯ ಛಾಯಾಚಿತ್ರಗಳ ಲಾಭವು ಆಧ್ಯಾತ್ಮಿಕ ಸ್ತರದಲ್ಲಿ ಆಗಲಿ’, ಎಂದು ಪರಾತ್ಪರ ಗುರುದೇವರ ಚರಣಗಳಲ್ಲಿ ಪ್ರಾರ್ಥನೆ.
– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ (೨೭.೫.೨೦೨೨)