ರಥೋತ್ಸವ ನೆರವೇರಿದ ನಂತರ ಸಪ್ತರ್ಷಿಗಳ ಪ್ರೀತಿಮಯ ವಾಣಿಯಿಂದ ಬೆಳಕಿಗೆ ಬಂದ ಪರಾತ್ಪರ ಗುರು ಡಾ. ಆಠವಲೆಯವರ ಅವತಾರಿ ಕಾರ್ಯದ ಮಹತ್ವ !

ನಾಡಿವಾಚಕ ಪೂ. ಡಾ. ಓಂ ಉಲಗನಾಥ

‘ಸಪ್ತರ್ಷಿಗಳ ಆಜ್ಞೆಯಂತೆ ವೈಶಾಖ ಕೃಷ್ಣ ಸಪ್ತಮಿ (೨೨.೫.೨೦೨೨) ತಿಥಿಯಂದು ಪರಾತ್ಪರ ಗುರು ಡಾ. ಆಠವಲೆಯವರ ೮೦ ನೇ ಜನ್ಮೋತ್ಸವವನ್ನು ‘ರಥೋತ್ಸವ’ದ ಸ್ವರೂಪದಲ್ಲಿ ಆಚರಿಸಲಾಯಿತು. ರಥೋತ್ಸವ ನೆರವೇರಿದ ನಂತರ ಸಾಯಂಕಾಲ ಸಪ್ತರ್ಷಿ ಜೀವನಾಡಿಪಟ್ಟಿಯ ವಾಚಕರಾದ ಪೂ. ಡಾ. ಓಂ ಉಲಗನಾಥನ್ ಇವರು ಸಂಚಾರವಾಣಿಯಲ್ಲಿ ನಾಡಿವಾಚನ ಮಾಡಿದರು. ಆ ಸಮಯದಲ್ಲಿ ‘ಸಪ್ತರ್ಷಿಗಳ ವಾಣಿಯಿಂದ ಗುರುದೇವರ ರಥೋತ್ಸವದ ಸಮಯದಲ್ಲಿ ಸ್ಥೂಲ ಮತ್ತು ಸೂಕ್ಷ್ಮದಿಂದ ಏನೇನು ಘಟಿಸಿತು ?’, ಎಂಬುದನ್ನು ಅವರು ಹೇಳಿದರು. ಇದಕ್ಕಾಗಿ ಸಪ್ತರ್ಷಿಗಳ ಚರಣಗಳಲ್ಲಿ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ, ಅದು ಕಡಿಮೆಯೇ ಆಗುತ್ತದೆ. – ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೬), ಸನಾತನ ಆಶ್ರಮ, ರಾಮನಾಥಿ, ಗೋವಾ.

ಶ್ರೀ. ವಿನಾಯಕ ಶಾನಭಾಗ

 

ರಾತ್ರಿಯೆಲ್ಲ ಮಳೆ ಆಗಿದ್ದರಿಂದ ಇಬ್ಬನಿ ಹರಡಿದ್ದರೂ ಮೇ ೨೨ ಈ ದಿನದಂದು ಮನೋಹರವಾಗಿರುವ ಸೂರ್ಯೋದಯ

೧. ಪರಾತ್ಪರ ಗುರು ಡಾ. ಆಠವಲೆಯವರ ರಥವು ಹೊರಗೆ ಬಂದ ತಕ್ಷಣ ಪೃಥ್ವಿಯ ಮೇಲಿನ ಎಲ್ಲ ತೀರ್ಥಕ್ಷೇತ್ರಗಳಲ್ಲಿನ ಚೈತನ್ಯಕ್ಕೆ ಜಾಗೃತಿ ದೊರಕಿತು !

ಶ್ರೀಮನ್ನಾರಾಯಣನ ಅವತಾರವಾಗಿರುವ ಪರಾತ್ಪರ ಗುರು ಡಾ. ಆಠವಲೆಯವರ (ಗುರುದೇವರ) ರಥವು ಆಶ್ರಮದಿಂದ ಹೊರಗೆ ಬಂದ ಕ್ಷಣವೇ, ಪೃಥ್ವಿಯ ಮೇಲಿನ ಎಲ್ಲ ಜಾಗೃತ ದೇವಸ್ಥಾಗಳ, ತೀರ್ಥಕ್ಷೇತ್ರಗಳ, ೫೧ ಶಕ್ತಿಪೀಠಗಳ, ೧೨ ಜ್ಯೋತಿರ್ಲಿಂಗಗಳಲ್ಲಿನ ಚೈತನ್ಯಕ್ಕೆ ನವಜಾಗೃತಿ ದೊರಕಿತು.

೨. ಮೂವರು ಗುರುಗಳ ಅವತಾರದ ಮಹತ್ವವನ್ನು ನಿಸರ್ಗವೇ ಹೇಳಲಿದೆ !

ಪಂಚಮಹಾಭೂತಗಳಲ್ಲಿನ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಇವರು ಒಬ್ಬೊಬ್ಬರಾಗಿ ರಥಾರೂಢವಾಗಿರುವ ಪರಾತ್ಪರ ಗುರುದೇವರನ್ನು ನಮಸ್ಕಾರ ಮಾಡಿ ಹೋದರು. ನಿಸರ್ಗಕ್ಕೆ ಇಂದು ಆನಂದವು ತುಂಬಿ ತುಳುಕುತ್ತಿತ್ತು. ಕಲಿಯುಗದಲ್ಲಿ ಶ್ರೀಮನ್ನಾರಾಯಣನು ಪೃಥ್ವಿಯ ಮೇಲೆ ಪರಾತ್ಪರ ಗುರು ಡಾ. ಆಠವಲೆಯವರ ರೂಪದಲ್ಲಿ ಬಂದಿದ್ದಾರೆ. ಇದನ್ನು ಹೇಳುವ ಕಾರ್ಯವು ಸಪ್ತರ್ಷಿಗಳು ನಿಸರ್ಗಕ್ಕೆ ಒಪ್ಪಿಸಿದ್ದಾರೆ. ಮುಂಬರುವ ಕಾಲದಲ್ಲಿ ಅವತಾರಿ ಗುರುಗಳ ಶ್ರೇಷ್ಠತೆಯನ್ನು ನಿಸರ್ಗವೇ ಎಲ್ಲರಿಗೂ ಹೇಳಲಿದೆ.

೩. ಸೂರ್ಯನಾರಾಯಣನು ಎಲ್ಲ ಸಾಧಕರಿಗೆ ಸಾಕಷ್ಟು ಆಶೀರ್ವಾದ ಮಾಡಿದನು !

ರಥೋತ್ಸವದ ಹಿಂದಿನ ದಿನದ ತುಲನೆಯಲ್ಲಿ ಇಂದಿನ, ಅಂದರೆ ೨೨.೫.೨೦೨೨ ರಂದು ವಾತಾವರಣವು ಸಂಪೂರ್ಣ ವಿರುದ್ಧವಾಗಿತ್ತು. ಇಂದು ರಥೋತ್ಸವದ ದಿನ ಸೂರ್ಯನಾರಾಯಣನು ಎಲ್ಲ ಸಾಧಕರಿಗೆ ಸಾಕಷ್ಟು ಆಶೀರ್ವಾದವನ್ನು ಮಾಡಿದನು. (‘ರಥೋತ್ಸವದ ಹಿಂದಿನ ದಿನ ಸತತವಾಗಿ ಮಳೆ ಬೀಳುತ್ತಿತ್ತು ಮತ್ತು ಮೋಡಗಳು ತುಂಬಾ ಕೆಳಗೆ ಬಂದಿದ್ದವು. ತಡರಾತ್ರಿಯ ವರೆಗೆ ಮಳೆ ಬೀಳುತ್ತಿತ್ತು. ಸಪ್ತರ್ಷಿಗಳ ಮತ್ತು ಗುರುದೇವರ ಕೃಪೆಯಿಂದ ೨೨.೫.೨೦೨೨ ರಂದು ಬೆಳಗ್ಗೆ ೬ ಗಂಟೆಯ ನಂತರ ಸೂರ್ಯನ ಕಿರಣಗಳು ಕಾಣಿಸಿದವು ಮತ್ತು ಆಕಾಶವು ಶುಭ್ರವಾಗಿತ್ತು. ಎಲ್ಲ ಸಾಧಕರು ‘ಇದು ಶ್ರೀಮನ್ನಾರಾಯಣನ ಲೀಲೆಯೇ ಆಗಿತ್ತು’, ಎಂಬುದರ ಅನುಭವವನ್ನು ಪಡೆದರು. – ಸಂಕಲನಕಾರರು)

೪. ‘ಸನಾತನದ ೩ ಗುರುಗಳು ಅವತಾರವಾಗಿದ್ದೂ ಈ ಮೂವರು ಗುರುಗಳಿಗೆ ಆಶೀರ್ವಾದವನ್ನು ನೀಡಲು ಸ್ವಯಂ ನಿಸರ್ಗವು ಬರುತ್ತದೆ, ಇದಕ್ಕಿಂತ ದೊಡ್ಡ ಅನುಭೂತಿ ಯಾವುದಿದೆ ?’, ಎಂದು ಸಪ್ತರ್ಷಿಗಳು ಹೇಳುವುದು !

ನಿನ್ನೆ ರಾತ್ರಿಯ ವರೆಗೆ ಆಕಾಶದಲ್ಲಿ ಕಪ್ಪು ಮೋಡಗಳಿದ್ದವು ಮತ್ತು ರಥೋತ್ಸವದ ದಿನ ಆಕಾಶದಲ್ಲಿ ಒಂದು ಮೋಡವೂ ಇರಲಿಲ್ಲ. ‘ಸನಾತನದ ಮೂವರು ಗುರುಗಳು ಅವತಾರಿ ಆಗಿದ್ದಾರೆ’, ಎಂಬುದು ಮನುಷ್ಯನಿಗೆ ತಿಳಿಯಲಿ ಅಥವಾ ತಿಳಿಯದಿರಲಿ; ಆದರೆ ನಿಸರ್ಗಕ್ಕೆ ಇದು ತಿಳಿದಿದೆ. ಆದುದರಿಂದಲೇ ನಿಸರ್ಗವು ಕೃಪೆ ತೋರಿಸಿತು. ಇದು ನಿಸರ್ಗವು ನೀಡಿದ ಅವತಾರಿ ಅನುಭೂತಿಯೇ ಆಗಿದೆ. ‘ಮೂರು ಗುರುಗಳಿಗೆ ಆಶೀರ್ವಾದ ಮಾಡಲು ಸ್ವಯಂ ನಿಸರ್ಗವು ಬಂದಿತ್ತು, ಇದಕ್ಕಿಂತ ದೊಡ್ಡ ಅನುಭೂತಿ ಯಾವುದು ? ರಥೋತ್ಸವ ಮುಗಿದ ನಂತರ ಆಶ್ರಮದಲ್ಲಿನ ಸಾಧಕರು ಕೃತಜ್ಞತೆಯಿಂದ, ‘ಪರಾತ್ಪರ ಗುರುದೇವರು ರಥದಿಂದ ಇಳಿದು ಕೋಣೆಯೊಳಗೆ ಹೋದ ನಂತರವೇ ಮಳೆ ಬಂದಿತು’ ಎಂದು ಮಾತನಾಡುತ್ತಿದ್ದರು. ಈ ಅನುಭೂತಿಯ ನಂತರ ಆಶ್ರಮದಲ್ಲಿನ ಎಲ್ಲ ಸಾಧಕರು ‘ನಿಸರ್ಗ’ ಮತ್ತು ‘ನಾರಾಯಣ’ ಇವರ ಬಗ್ಗೆಯೇ ಮಾತನಾಡುತ್ತಿದ್ದಾರೆ.

(‘ಹೌದು. ಸರಿಯಿದೆ. ಗುರುದೇವರು ಕೋಣೆಯೊಳಗೆ ಹೋಗುವ ತನಕ ಆಕಾಶದಿಂದ ಮಳೆಯ ಒಂದು ಹನಿಯೂ ಬೀಳಲಿಲ್ಲ. ಗುರುದೇವರು ಕೋಣೆಯೊಳಗೆ ಹೋದ ನಂತರವೇ ಮಳೆ ಬಂದಿತು. ಈ ಕುರಿತು ಅನೇಕ ಸಾಧಕರು ಪರಸ್ಪರರಲ್ಲಿ ಮಾತನಾಡುತ್ತಿದ್ದರು. ಎಲ್ಲ ಸಾಧಕರಿಗೆ ಶ್ರೀಮನ್ನಾರಾಯಣರೂಪಿ ಗುರುದೇವರ ಬಗ್ಗೆ ಕೃತಜ್ಞತೆ ಎನಿಸುತ್ತಿತ್ತು. – ಸಂಕಲನಕಾರರು)

೫. ಶ್ರೀಕೃಷ್ಣನು ಇರುವಲ್ಲಿಯೇ ಗರುಡವು ಬರುತ್ತದೆ !

ರಥೋತ್ಸವದ ಹಿಂದಿನ ದಿನ ಮತ್ತು ಮರುದಿನವೂ ಗರುಡವು ಬಂದಿತ್ತು. (‘ರಥೋತ್ಸವದ ಸಮಯದಲ್ಲಿ ಅನೇಕ ಬಾರಿ ಗರುಡವು ರಥಯಾತ್ರೆಯ ಸಮೀಪಕ್ಕೆ ಬಂದಿತ್ತು. – ಸಂಕಲನಕಾರರು) ಶ್ರೀಕೃಷ್ಣನು ಎಲ್ಲಿ ಇರುತ್ತಾನೆಯೋ, ಅಲ್ಲಿಯೇ ಗರುಡವು ಬರುತ್ತದೆ. ಇದರಿಂದ ‘ಗುರುದೇವರಲ್ಲಿ ಶ್ರೀಕೃಷ್ಣನ ತತ್ತ್ವವಿದೆ, ಇದರಲ್ಲಿ ಯಾವ ಸಂದೇಹವೇ ಇಲ್ಲ ! (ರಥೋತ್ಸವದ ಹಿಂದಿನ ದಿನದಿಂದ ರಾಮನಾಥಿ ಆಶ್ರಮದ ಮೇಲೆ ೨-೩ ಗರುಡಗಳು ಸುತ್ತಾಡುತ್ತಿದ್ದವು. ಹಿಂದಿನ ದಿನ ಸಾಯಂಕಾಲ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರೊಂದಿಗೆ ಮಾತನಾಡುವಾಗ ಕೆಲವು ಕಾರಣಗಳಿಂದ ನಾನು ಕೋಣೆಯ ಮೊಗಸಾಲೆಗೆ ಬಂದೆನು. ಆ ಸಮಯದಲ್ಲಿ ೭-೮ ಅಡಿ ಅಗಲವಾಗಿರುವ (‘ಸಾಮಾನ್ಯವಾಗಿ ಗರುಡವು ೨ – ೩ ಅಡಿ ಅಗಲವಿರುತ್ತದೆ. – ಸಂಕಲನಕಾರರು) ಗರುಡವು ನನ್ನ ಅತೀ ಸಮೀಪದಲ್ಲಿ ಬಂದು ಹೋಯಿತು. ೨೦೧೫ ರಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಹಿಮಾಚಲ ಪ್ರದೇಶದ ಪ್ರವಾಸದಲ್ಲಿರುವಾಗ ನಮಗೆ ಇದೇ ರೀತಿ ಗರುಡನ ದರ್ಶನವಾಗಿತ್ತು. ಇದೆಲ್ಲವನ್ನೂ ಮಹರ್ಷಿಗಳಿಗೆ ಹೇಳಿದ ನಂತರ ಅವರು, ‘೨೦೧೫ ರಲ್ಲಿ ಬಂದ ದೇವರ ಗರುಡವು ಇಂದು ರಾಮನಾಥಿ ಆಶ್ರಮದ ಸಮೀಪಕ್ಕೆ ಬಂದಿದೆ’ ಎಂದು ಹೇಳಿದರು. – ಶ್ರೀ. ವಿನಾಯಕ ಶಾನಭಾಗ)

೬. ಶ್ರೀವಿಷ್ಣುಸ್ವರೂಪ ಗುರುದೇವರ ಚರಣಗಳಲ್ಲಿ ಸಪ್ತರ್ಷಿಗಳ ಪ್ರಾರ್ಥನೆ !

‘ಹೇ ಶ್ರೀಮನ್ನಾರಾಯಣಾ, ಸಂಪೂರ್ಣ ಪೃಥ್ವಿಯ ಮೇಲಿನ ಕೋಟಿ ಕೋಟಿ ಜೀವಗಳಲ್ಲಿ ತಮ್ಮ ಕೀರ್ತಿಯನ್ನು ಹಬ್ಬಿಸುವ, ಎರಡು ಜೀವಗಳಾಗಿದ್ದು ಅವರ ಹೆಸರು ‘ಶ್ರೀಸತ್‌ಶಕ್ತಿ’ ಮತ್ತು ‘ಶ್ರೀಚಿತ್‌ಶಕ್ತಿ’. ಗುರುದೇವರ ಕೀರ್ತಿಯನ್ನು ಸಂಪೂರ್ಣ ಜಗತ್ತಿನಲ್ಲಿ ಹರಡಿಸಲು ಸಾಕ್ಷಾತ್ ಶ್ರೀ ಮಹಾಲಕ್ಷ್ಮಿದೇವಿಯು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ರೂಪದಲ್ಲಿ ಮತ್ತು ಸಾಕ್ಷಾತ್ ಶ್ರೀ ಸರಸ್ವತಿದೇವಿಯು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ರೂಪದಲ್ಲಿ ಪೃಥ್ವಿಯ ಮೇಲೆ ಬಂದಿದ್ದಾರೆ. ‘ಶ್ರೀಸತ್‌ಶಕ್ತಿ’ ಮತ್ತು ‘ಶ್ರೀಚಿತ್‌ಶಕ್ತಿ’ ಇವರು ಗುರುದೇವರ ಕೀರ್ತಿಯನ್ನು ಯುಗಾನುಯುಗಗಳಲ್ಲಿ ಉಳಿಯುವಂತೆ ಮಾಡುವರು, ಇದು ಸಪ್ತರ್ಷಿಗಳ ಸತ್ಯವಚನವಾಗಿದೆ !’

‘ಅವತಾರವಾಗಿರುವ ಸನಾತನದ ಮೂವರು ಗುರುಗಳು ‘ಸಪ್ತ-ಋಷಿಗಳಿಗೆ ತಮ್ಮ ಕೃಪಾಛತ್ರದಲ್ಲಿಡಬೇಕು’, ಎಂದು ನಾವು ಮೂವರು ಗುರುಗಳನ್ನು ಪ್ರಾರ್ಥಿಸುತ್ತೇವೆ’. –  ಸಪ್ತರ್ಷಿ (ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ, ೨೨.೫.೨೦೨೨, ರಾತ್ರಿ ೮ ಗಂಟೆಗೆ)

೭. ‘ಸನಾತನದ ಮೂವರು ಗುರುಗಳು ‘ಸಪ್ತ-ಋಷಿ’ಗಳನ್ನು ಕೃಪಾಛತ್ರದಲ್ಲಿಡಬೇಕು’, ಎಂದು ಸಪ್ತರ್ಷಿಗಳು ಹೇಳುವ ಕಾರಣ

ಪರಾತ್ಪರ ಗುರು ಡಾ. ಆಠವಲೆ : ಸಪ್ತರ್ಷಿಗಳ ಸತ್ಯವಚನದ ನಾಡಿವಾಚನವನ್ನು ಪೂ. ಡಾ. ಓಂ ಉಲಗನಾಥನ್ ಇವರು ಮಾಡುತ್ತಾರೆ. ಅವರು ನಾಡಿವಾಚನದಲ್ಲಿ ಹೇಳಿದಂತೆ ಸನಾತನದ ಮೂವರು ಗುರುಗಳು ಮಾಡುತ್ತಾರೆ. ‘ಅವತಾರವಾಗಿರುವ ಸನಾತನದ ಮೂವರು ಗುರುಗಳು ‘ಸಪ್ತ-ಋಷಿಗಳನ್ನು ತಮ್ಮ ಕೃಪಾಛತ್ರದಲ್ಲಿಡಬೇಕು’, ಎಂದು ಪೂ. ಡಾ. ಓಂ ಉಲಗನಾಥನ್ ಇವರು ನಾಡಿವಾಚನದಲ್ಲಿ ಹೇಗೆ ಹೇಳುತ್ತಾರೆ ?

ಸಪ್ತರ್ಷಿಗಳು : ‘ಸಪ್ತರ್ಷಿಗಳಿಗೆ ಈ ಸತ್ಯವಚನವನ್ನು ಬರೆಯಲು ಹೇಳುವವರು ಶ್ರೀಮನ್ನಾರಾಯಣನೇ ಆಗಿದ್ದಾನೆ. ಶ್ರೀಮನ್ನಾರಾಯಣನು ಬರೆಯಲು ಹೇಳಿದ್ದೆಲ್ಲವನ್ನು ನಾವು ಬರೆದೆವು. ಸಪ್ತರ್ಷಿಗಳು ಬರೆದಿರುವ ‘ಸತ್ಯ’ವನ್ನು ಮಾಡಿ ತೋರಿಸುವ, ಅಂದರೆ ನಾವು ಬರೆದಿರುವಂತೆ ಕೃತಿಯನ್ನು ಮಾಡುವವರೂ ಶ್ರೀಮನ್ನಾರಾಯಣನೇ ಆಗಿದ್ದಾನೆ. ಶ್ರೀಮನ್ನಾರಾಯಣನ ಹೃದಯವೇ ನಮ್ಮ ಸಪ್ತರ್ಷಿಗಳ ಸ್ಥಾನವಾಗಿದೆ. ಪ್ರತಿಯೊಂದು ಯುಗದಲ್ಲಿ ಶ್ರೀದೇವಿ ಮತ್ತು ಭೂದೇವಿ ಇವರ ಸಹಿತ ಶ್ರೀಮನ್ನಾರಾಯಣನ ಅವತಾರವಾಗುತ್ತದೆ. ಆಗ ನಾವು ಸಪ್ತರ್ಷಿಗಳು, ದೇವರು ನಮ್ಮನ್ನು ಯಾವಾಗಲೂ ತನ್ನ ಹೃದಯದಲ್ಲಿಟ್ಟುಕೊಳ್ಳಬೇಕು. ಪರಾತ್ಪರ ಗುರು ಡಾ. ಆಠವಲೆಯವರು ಶ್ರೀಮನ್ನಾರಾಯಣನ ಅವತಾರರಾಗಿದ್ದಾರೆ, ಹಾಗೆಯೇ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಕ್ರಮವಾಗಿ ‘ಭೂದೇವಿ’ ಮತ್ತು ‘ಶ್ರೀದೇವಿ’ಯ ಅವತಾರರಾಗಿದ್ದಾರೆ; ಆದುದರಿಂದ ನಾವು ಸಪ್ತ-ಋಷಿಗಳು ‘ಸನಾತನದ ಮೂವರು ಗುರುಗಳ ಕೃಪಾಛತ್ರದಲ್ಲಿ, ಅಂದರೆ ನಮ್ಮನ್ನು ಮೂವರು ಗುರುಗಳ ಹೃದಯದಲ್ಲಿಟ್ಟುಕೊಳ್ಳಬೇಕು’, ಎಂದು ಪ್ರಾರ್ಥಿಸಿದೆವು.  – ಸಪ್ತರ್ಷಿ (ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ, ೨೪.೫.೨೦೨೨, ಮಧ್ಯಾಹ್ನ ೧.೩೫)

ಪರಾತ್ಪರ ಗುರು ಡಾ. ಆಠವಲೆಯವರ ಮೇಲೆ ಉಚ್ಚ ಕೋಟಿಯ ಶ್ರದ್ಧೆಯಿರುವ ಪೂ. ಡಾ. ಓಂ ಉಲಗನಾಥನ್‌ಜಿ !

‘ಪರಾತ್ಪರ ಗುರು ಡಾ. ಆಠವಲೆ ಇವರ ಬಗ್ಗೆ ನಾಡಿಪಟ್ಟಿಯನ್ನು ಬರೆಯುವವರು ಸಪ್ತರ್ಷಿಗಳಿದ್ದಾರೆ. ನಾನು ಕೇವಲ ನಾಡಿಪಟ್ಟಿ ಓದಲು ಒಂದು ಮಾಧ್ಯಮನಾಗಿದ್ದೇನೆ. ಸಪ್ತರ್ಷಿಗಳು ನಾಡಿಪಟ್ಟಿಯಲ್ಲಿ ಬರೆದಂತೆ ಮಾಡಿಸಿಕೊಳ್ಳುವವರು ಗುರುದೇವರು ಶ್ರೀಮನ್ನಾರಾಯಣನೇ ಆಗಿದ್ದಾರೆ. – ಪೂ. ಡಾ. ಓಂ ಉಲಗನಾಥನ್, (೨೨.೫.೨೦೨೨, ರಾತ್ರಿ ೮)

ಟಿಪ್ಪಣಿ – ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘ನಾನು ಅವತಾರವಾಗಿದ್ದೇನೆ’, ಎಂದು ಹೇಳಲಿಲ್ಲ. ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಭಗವಂತನ ಅವತಾರವಾಗಿದ್ದಾರೆ, ಎಂದು ಮಹರ್ಷಿಗಳು ನಾಡಿಪಟ್ಟಿಯಲ್ಲಿ ಹೇಳಿದ್ದಾರೆ. ‘ಸನಾತನ ಪ್ರಭಾತ’ದ ಸಂಪಾದಕರಿಗೆ ಮಹರ್ಷಿಗಳ ಬಗ್ಗೆ ಭಾವವಿರುವುದರಿಂದ ನಾವು ಈ ವಿಶೇಷಾಂಕದಲ್ಲಿ ಪ್ರಕಟಿಸುತ್ತಿದ್ದೇವೆ. – ಸಂಪಾದಕರು

 ಕರುವು ಅತೀ ಸಮೀಪದಿಂದ ಹೋಗುವುದು, ಒಂದು ಶುಭಸಂಕೇತ

ರಥೋತ್ಸವದಲ್ಲಿ ನೃತ್ಯವನ್ನು ಸಾದರ ಪಡಿಸುವ ಸಾಧಕಿಯರು ಕು. ಶರ್ವರಿ ಕಾನಸ್ಕರ  ಮತ್ತು ಕು. ಅಪಾಲಾ ಔಂಧಕರ ಇವರ ಅತೀ ಸಮೀಪದಿಂದ ಹೋಗುತ್ತಿರುವ ಒಂದು ಕರು

ಸಾಧಕರ ಕಣ್ಣುಗಳಿಂದ ಬರುವ ಭಾವಾಶ್ರುಗಳೆಂದರೆ ‘ಭಾವದ ಮುತ್ತು’ಗಳಾಗಿವೆ !

ರಥೋತ್ಸವವನ್ನು ನೋಡಿ ಭಾವ ಜಾಗೃತವಾಗಿರುವ ಸಾಧಕರು

 ಗುರುದೇವರ ರಥವು ಸಾಗುವಾಗ ಎರಡೂ ಕಡೆಗೆ ನಿಂತಿರುವ ಸಾಧಕರಿಗೆ, ನಾವು ಪೃಥ್ವಿಯ ಮೇಲೆದ್ದೇವೆಯೋ ಅಥವಾ ದೇವಲೋಕದಲ್ಲಿದ್ದೇವೆಯೋ ? ಎಂದೆನಿಸುತಿತ್ತು ರಥಾರೂಢವಾಗಿರುವ ಗುರುದೇವರನ್ನು ನೋಡುವ ಸಾಧಕರ ಕಣ್ಣುಗಳಿಂದ ಹೊರಗೆ ಬೀಳುವ ಒಂದೊಂದು ಭಾವಾಶ್ರುಗಳೆಂದರೆ ‘ಭಾವದ ಮುತ್ತು’ಗಳೇ ಆಗಿವೆ. ‘ಸಾಕ್ಷಾತ್ ಈಶ್ವರನ ದರ್ಶನವನ್ನು ಪಡೆದ ನಂತರ ಭಕ್ತನು ಹೇಗೆ ಮೈಮರೆಯುತ್ತಾನೆಯೋ, ಅದೇ ರೀತಿ ಸಾಧಕರ ಸ್ಥಿತಿಯಾಗಿತ್ತು.

ಪಶು-ಪಕ್ಷಿಗಳು, ನಿಸರ್ಗ ಮತ್ತು ಪಂಚಮಹಾಭೂತಗಳಿಗೆ ತುಂಬಾ ಆನಂದವಾಗಿತ್ತು !

ರಥೋತ್ಸವದ ಸಮಯದಲ್ಲಿ ಆಕಾಶದಲ್ಲಿ ಕಾಣಿಸುವ ಗರುಡ

ರಥೋತ್ಸವದ ಸಮಯದಲ್ಲಿ ಪಕ್ಷಿಗಳ ರೂಪದಲ್ಲಿ ಋಷಿಮುನಿಗಳು ಬಂದಿದ್ದರು. ಪಕ್ಷಿ, ನಿಸರ್ಗ ಮತ್ತು ಪಂಚಮಹಾಭೂತಗಳಿಗೆ ತುಂಬಾ ಆನಂದವಾಗಿತ್ತು. ಭಗವಂತನು ಇಂದು ಪಕ್ಷಿ ಮತ್ತು ಗರುಡಗಳ ರೂಪದಲ್ಲಿ ಬಂದಿದ್ದನು. (‘ಅನೇಕ ಸ್ಥಳಗಳಲ್ಲಿ ರಥದ ಎದುರಿಗೆ ಪಕ್ಷಿಗಳ ಗುಂಪು ಹೋಗುತ್ತಿದ್ದವು’. – ಸಂಕಲನಕಾರರು) ಪರಾತ್ಪರ ಗುರು ಡಾ. ಆಠವಲೆಯವರು ರಥದಲ್ಲಿ ಕುಳಿತಾಗ ಪಕ್ಷಿಗಳ ಕಲರವವು ಕೇಳುತ್ತಿತ್ತು (‘ಹೌದು. ಸಾಧಕರು ಇದರ ಅನುಭೂತಿ ಪಡೆದರು’. – ಸಂಕಲನಕಾರರು)

– ಸಪ್ತರ್ಷಿ (ಪೂ. ಡಾ. ಓಂ ಉಲಗನಾಥನ್‌ಜಿಯವರ ಮಾಧ್ಯಮದಿಂದ, ೨೪.೫.೨೦೨೨, ಮಧ್ಯಾಹ್ನ ೧.೩೫)