ಗಣೇಶೋತ್ಸವದ ನಿಮಿತ್ತ ಊರಿಗೆ ಹೋಗುವಾಗ, ಹಾಗೇ ಇತರ ಸಮಯಗಳಲ್ಲಿ ಪ್ರಯಾಣ ಮಾಡುವಾಗ, ಸನಾತನದ ಗ್ರಂಥಗಳು, ಕಿರುಗ್ರಂಥಗಳು ಜೊತೆಗಿಟ್ಟುಕೊಳ್ಳಿ ಮತ್ತು ಅವುಗಳ ಪ್ರಸಾರ ಮಾಡಿ !

ಸಾಧಕರಿಗೆ ಸೂಚನೆ

೧. ಪ್ರಯಾಣದ ಸಮಯದಲ್ಲಿ ತಮ್ಮ ಬಳಿ ಗ್ರಂಥಗಳು, ಕಿರುಗ್ರಂಥಗಳು ಹಾಗೂ ‘ಸನಾತನ ಪ್ರಭಾತ’ನ ಪತ್ರಿಕೆಗಳನ್ನು ಇಟ್ಟುಕೊಳ್ಳಿ !

‘ಗಣೇಶೋತ್ಸವವು ಸೆಪ್ಟೆಂಬರ್‌ ೧೯ ರಿಂದ ೨೮ ೨೦೨೩ ರವರೆಗೆ ನಡೆಯಲಿದೆ. ಆ ಸಂದರ್ಭದಲ್ಲಿ, ಅನೇಕ ಸಾಧಕರು ತಮ್ಮ ತಮ್ಮ ಊರಿಗೆ ಹೋಗುತ್ತಾರೆ. ಪ್ರಯಾಣದ ಸಮಯದಲ್ಲಿ ಸಾಧ್ಯವಾದರೆ ತಮ್ಮ ಬಳಿ ಸನಾತನ ಸಂಸ್ಥೆಯು ಪ್ರಕಾಶಿಸಿರುವ ಗ್ರಂಥಗಳು, ಕಿರುಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಇಟ್ಟುಕೊಳ್ಳಿ. ಸಹ ಪ್ರಯಾಣಿಕರಿಗೆ ಅದರ ಮಹತ್ವವನ್ನು ತಿಳಿಸಿ. ಅದೇ ರೀತಿ ‘ಸನಾತನ ಪ್ರಭಾತ’ ಪತ್ರಿಕೆಗಳ ೨-೩ ಸಂಚಿಕೆಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಮತ್ತು ಅವುಗಳನ್ನು ತೋರಿಸಿ ಅದರ ಚಂದಾದಾರರಾಗಲು ಉದ್ಯುಕ್ತಗೊಳಿಸಿ.

೨. ರಾಷ್ಟ್ರ ಮತ್ತು ಧರ್ಮದ ಕಾರ್ಯದಲ್ಲಿ ಭಾಗವಹಿಸಲು ಇಚ್ಛಿಸುವವರ ಮಾಹಿತಿ ತಿಳಿಸಿ !

ಸಾಧಕರು ಸಹ ಪ್ರಯಾಣಿಕರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಸಾಧನೆ, ರಾಷ್ಟ್ರ ಮತ್ತು ಧರ್ಮದ ಕಾರ್ಯಗಳ ಬಗ್ಗೆ ತಿಳಿಸಬೇಕು. ಅವರು ರಾಷ್ಟ್ರ ಮತ್ತು ಧರ್ಮದ ಕಾರ್ಯದಲ್ಲಿ ಭಾಗವಹಿಸಲು ಸಿದ್ಧರಿದ್ದಲ್ಲಿ ಅಥವಾ ಪತ್ರಿಕೆಗಳ ಚಂದಾದಾರರಾಗಲು ಉತ್ಸುಕರಾಗಿದ್ದರೆ, ಅವರ ಮಾಹಿತಿಯನ್ನು ಸಂಬಂಧಿಸಿದ ಜವಾಬ್ದಾರ ಸಾಧಕರಿಗೆ ತಿಳಿಸಬೇಕು.

೩. ಸಾಧಕರು ಮತ್ತು ಧರ್ಮಪ್ರೇಮಿಗಳು ಪ್ರಯಾಣದ ಸಮಯದಲ್ಲಿ ಗ್ರಂಥ ಮತ್ತು ಕಿರುಗ್ರಂಥಗಳ ಪ್ರಸಾರ ಮಾಡಿದ ನಂತರ ಅವರಿಗೆ ಉತ್ಸಾಹಪೂರ್ಣ ಪ್ರತಿಕ್ರಿಯೆ ಸಿಗುವುದು : ಕೆಲವು ಸಾಧಕರು ಮತ್ತು ಧರ್ಮಪ್ರೇಮಿಗಳು ಪ್ರಯಾಣ ಮಾಡುವಾಗ ಕೆಲವು ಸನಾತನ ಗ್ರಂಥಗಳು ಮತ್ತು ಕಿರುಗ್ರಂಥಗಳನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದರು. ಅವರು ತಮ್ಮ ಸಹ ಪ್ರಯಾಣಿಕರಿಗೆ ಗ್ರಂಥಗಳನ್ನು ತೋರಿಸಿ ಮುಂಬರುವ ಹಬ್ಬಗಳಿಗೆ ಅನುಗುಣವಾಗಿ ಅವುಗಳ ಬಗ್ಗೆ ಮಾಹಿತಿಯನ್ನು ನೀಡಿ ಅದರ ಪ್ರಸಾರ ಮಾಡಿದರು. ಸಹಪ್ರಯಾಣಿಕರಿಂದ ಸಹ ಇದಕ್ಕೆ ಉತ್ಸಾಹಪೂರ್ಣ ಪ್ರತಿಕ್ರಿಯೆ ದೊರೆತಿದೆ.

(೨೭.೮.೨೦೨೩)