ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ ಅಂಜಲಿ ಗಾಡಗೀಳ ಇವರಿಂದ  ಸತ್ತ್ವಗುಣಿ ಸನಾತನ ಧರ್ಮರಾಜ್ಯದ ಸ್ಥಾಪನೆಯಾಗುವುದು !

ಪರಾತ್ಪರ ಗುರು ಡಾ. ಆಠವಲೆ ಮತ್ತು ಸದ್ಗುರುದ್ವಯರ ಧರ್ಮಸಂಸ್ಥಾಪನೆಯ ಕಾರ್ಯ

ಅ. ಸನಾತನ ಸಂಸ್ಥೆಯ ಗುರುಗಳು ‘ಧರ್ಮಸಂಸ್ಥಾಪನೆಯನ್ನು ಮಾಡಲಿದ್ದಾರೆ ಎಂದು ಅನೇಕ ಋಷಿಗಳು ನಾಡಿಪಟ್ಟಿಯಲ್ಲಿ ಬರೆದಿಟ್ಟಿದ್ದಾರೆ : ‘ಇಲ್ಲಿಯವರೆಗೆ ಸಪ್ತರ್ಷಿ ಜೀವನಾಡಿಪಟ್ಟಿಯ ಮಾಧ್ಯಮದಿಂದ ಸನಾತನ ಸಂಸ್ಥೆಗಾಗಿ ೨೦೦ ಕ್ಕಿಂತ ಹೆಚ್ಚು ನಾಡಿವಾಚನಗಳಾಗಿವೆ. ಇದಲ್ಲದೇ, ಕೌಶಿಕ ನಾಡಿ, ಭೃಗು ನಾಡಿ, ಶಿವ ನಾಡಿ, ವಸಿಷ್ಠ ನಾಡಿ, ಕಾಕಭುಶುಂಡಿ ನಾಡಿ ಮತ್ತು ಅತ್ರಿ ನಾಡಿ ಹೀಗೆ ಅನೇಕ ಋಷಿಗಳು ಬರೆದಿರುವ ನಾಡಿಪಟ್ಟಿಯಲ್ಲಿ ಸನಾತನ ಸಂಸ್ಥೆಯ ಮೂವರು ಗುರುಗಳು ಅಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಶ್ರೀವಿಷ್ಣುವಿನ ಅವತಾರವಾಗಿದ್ದು, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘ಶ್ರೀ ವಿಷ್ಣುವಿನ ಶಕ್ತಿ, ಅಂದರೆ ಶ್ರೀ ಮಹಾಲಕ್ಷ್ಮಿಯ ಅವತಾರಗಳಾಗಿದ್ದಾರೆ ಎಂದು ಹೇಳಲಾಗಿದೆ. ಇಷ್ಟೇ ಅಲ್ಲ, ಈ ಹೆಚ್ಚಿನ ನಾಡಿಪಟ್ಟಿಗಳಲ್ಲಿ ಋಷಿಮುನಿಗಳು ಸನಾತನದ ಮೂವರು ಗುರುಗಳು ‘ಧರ್ಮಸಂಸ್ಥಾಪನೆ ಮಾಡಲಿದ್ದಾರೆ ಎಂದು ಬರೆದಿದ್ದಾರೆ. ‘ಧರ್ಮ ಸಂಸ್ಥಾಪನೆ ಎಂದರೆ ಯಾವುದಾದರೊಂದು ದೇಶದಲ್ಲಿ ಘಟಿಸಿದ ಕ್ರಾಂತಿಯಾಗಿರದೇ, ಅದು ವಿಶ್ವಸಂಚಾಲನೆಗಾಗಿ ಈಶ್ವರನು ಮಾಡಿರುವ ಲೀಲಾಮಯ ಪರಿವರ್ತನೆಯಾಗಿರುತ್ತದೆ.

ಆ. ಸ್ಥೂಲದಲ್ಲಿ ಯಾವುದೇ ಆರ್ಥಿಕ, ಸಾಮಾಜಿಕ, ಹಾಗೆಯೇ ರಾಜನೈತಿಕ ಬೆಂಬಲವಿಲ್ಲದಿರುವಾಗಲೂ ಸನಾತನ ಸಂಸ್ಥೆಯ ಗುರುಗಳು ಅವತಾರಿಗಳು ಆಗಿರುವುದರಿಂದ ಅವರಿಂದ ಧರ್ಮಸಂಸ್ಥಾಪನೆ ಸಾಧ್ಯವಿದೆ ! : ಸ್ಥೂಲದೃಷ್ಟಿಯಿಂದ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾಕ್ಟರರಿಗೆ ೭೯ ವರ್ಷಗಳಾಗಿದ್ದು, ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಈ ಇಬ್ಬರೂ ಸ್ತ್ರೀಯರು ಸಾಮಾನ್ಯ ಗೃಹಿಣಿಯರಾಗಿದ್ದಾರೆ. ಸನಾತನ ಸಂಸ್ಥೆಯು ಕೆಲವು ಸಾವಿರ ಸಾಧಕರಿರುವ ಒಂದು ಚಿಕ್ಕ ಸಂಸ್ಥೆಯಾಗಿದೆ. ಈ ಸಂಸ್ಥೆಗೆ ಯಾವುದೇ ಆರ್ಥಿಕ, ಸಾಮಾಜಿಕ, ರಾಜನೈತಿಕ ಅಥವಾ ಇನ್ನಿತರ ಯಾವುದೇ ಸಹಾಯವಿಲ್ಲ. ಸನಾತನದ ಸಾಧಕರೂ ಸರಳ ಸಾಮಾನ್ಯರಾಗಿದ್ದಾರೆ.

ಶ್ರೀ. ವಿನಾಯಕ ಶಾನಭಾಗ

ಶ್ರೀರಾಮನು ರಾಜನಾಗಿದ್ದ, ಅವನಲ್ಲಿ ಸೈನ್ಯ, ಇತರ ರಾಜರು, ಶಸ್ತ್ರಾಸ್ತ್ರ ಇತ್ಯಾದಿಗಳಿದ್ದವು. ಶ್ರೀಕೃಷ್ಣನೂ ರಾಜನಾಗಿದ್ದ, ಪಾಂಡವರೂ ರಾಜಮನೆತನದವರಾಗಿ ದ್ದರಿಂದ ಅವರಲ್ಲಿ ಸೈನ್ಯ, ಶಸ್ತ್ರಾಸ್ತ್ರ, ಸಹಾಯಕ್ಕಾಗಿ ಇತರ ರಾಜರು, ಸಂಪತ್ತುಗಳಿತ್ತು. ಸ್ಥೂಲದಲ್ಲಿ ನೋಡಿದರೆ ‘ಸನಾತನ ಸಂಸ್ಥೆಯ ಗುರುಗಳ ಬಳಿ ಇವು ಯಾವುದೂ ಇಲ್ಲ. ಆದರೂ ಅವರು ಧರ್ಮಸಂಸ್ಥಾಪನೆಯನ್ನು ಹೇಗೆ ಮಾಡುವರು ?, ಎನ್ನುವ ಪ್ರಶ್ನೆ ಸಾಧಕರ ಮನಸ್ಸಿನಲ್ಲಿ ಬರಬಹುದು. ಆದುದರಿಂದ ಕೇವಲ ಸಾಧಕರಿಗಾಗಿ ಮಾತ್ರವಲ್ಲ, ಎಲ್ಲರಿಗಾಗಿ ಇಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಮತ್ತು ಸದ್ಗುರುದ್ವಯರ ಅವತಾರತ್ವವನ್ನು ಉಲ್ಲೇಖಿಸಬೇಕೆಂದು ಅನಿಸುತ್ತದೆ.

ಇ. ಅವತಾರಗಳಿಗೆ ಸೂಕ್ಷ್ಮದಲ್ಲಿನ ಬಂಧನಗಳು ಇಲ್ಲ ದಿರುವುದರಿಂದ ಅವರು ಒಂದೇ ಸಮಯದಲ್ಲಿ ಅನೇಕ ಸ್ಥಳಗಳಲ್ಲಿ ಸೂಕ್ಷ್ಮದಲ್ಲಿ ಅನೇಕ ಕಾರ್ಯಗಳನ್ನು ಮಾಡುತ್ತಾರೆ: ‘ಅವತಾರ ಈ ಶಬ್ದ ‘ಅವತೃ, ಅಂದರೆ ‘ಧಾರಣೆ ಮಾಡುವುದು, ಈ ಶಬ್ದದಿಂದ ಬಂದಿದೆ. ಯಾವಾಗ ದೇವರು ಪೃಥ್ವಿಯ ಮೇಲೆ ಅವತಾರ ಧರಿಸುತ್ತಾನೆಯೋ, ಆಗ ಅವನ ಮೂಲ ರೂಪ ವೈಕುಂಠದಲ್ಲಿರುತ್ತದೆ ಮತ್ತು ಅವನು ಕೇವಲ ಲೀಲಾಮಯ ರೂಪವನ್ನು ಧರಿಸಿ ಪೃಥ್ವಿಯ ಮೇಲೆ ಬಂದಿರುತ್ತಾನೆ. ಈ ಲೀಲಾಮಯ ರೂಪದ ಅವತಾರದಲ್ಲಿಯೂ ಅವನು ಪೃಥ್ವಿಯ ಮೇಲಿದ್ದು, ಏಕಕಾಲಕ್ಕೆ ೧೪ ಲೋಕಗಳಲ್ಲಿ (ಭುವನಗಳಲ್ಲಿ) ಉಪಸ್ಥಿತನಿದ್ದು, ಕಾರ್ಯನಿರತನಾಗಿರುತ್ತಾನೆ. ಅವತಾರಕ್ಕೆ ಸ್ಥೂಲದ ಬಂಧನಗಳಿದ್ದರೂ, ಅವನಿಗೆ ಸೂಕ್ಷ್ಮದ ಬಂಧನಗಳಿರುವುದಿಲ್ಲ ಮತ್ತು  ಇದರಿಂದ ಒಂದೇ ಸಮಯದಲ್ಲಿ ಅವತಾರ ಅನೇಕ ಸ್ಥಳಗಳಲ್ಲಿ ಸೂಕ್ಷ್ಮದಿಂದ ಅನೇಕ ಕಾರ್ಯಗಳನ್ನು ಮಾಡುತ್ತಿರುತ್ತಾನೆ. ಸನಾತನದ ಗುರುಗಳೂ ಹೀಗೆಯೇ ಇದ್ದಾರೆ. ಸ್ಥೂಲದಲ್ಲಿ ‘ಅವರು ರಾಮನಾಥಿ ಆಶ್ರಮದಲ್ಲಿ ವಾಸ್ತವ್ಯಕ್ಕಿದ್ದಾರೆ ಎಂದು ಕಾಣಿಸಿದರೂ, ಸೂಕ್ಷ್ಮದಲ್ಲಿ ಅವರ ಕಾರ್ಯ ಅನೇಕ ಪಟ್ಟುಗಳಲ್ಲಿ ನಡೆದಿರುತ್ತದೆ. ಅವರ ಸೂಕ್ಷ್ಮ ಕಾರ್ಯ ಅನಂತವಾಗಿದೆ; ಆದರೆ ಅದು ಕಣ್ಣಿಗೆ ಕಾಣಿಸುವುದಿಲ್ಲ. ಅವರ ಸ್ಥೂಲ ವೈಶಿಷ್ಟ್ಯಗಳು ಕಾಣಿಸುತ್ತವೆ; ಆದರೆ ಅವರ ಸೂಕ್ಷ್ಮದಲ್ಲಿನ ಅನಂತ ವೈಶಿಷ್ಟ್ಯಗಳು ಅವರ ಮಾಯೆಯಿಂದಾಗಿಯೇ ನಮ್ಮ ಗಮನಕ್ಕೆ ಬರುವುದಿಲ್ಲ.

ಈ. ಕಲಿಯುಗದಲ್ಲಿ ಕೆಟ್ಟ ಶಕ್ತಿಗಳು ಸ್ಥೂಲಕ್ಕಿಂತ ಸೂಕ್ಷ್ಮದಲ್ಲಿ ಅಧಿಕ ಕಾರ್ಯನಿರತವಾಗಿದ್ದು, ಪೃಥ್ವಿಯು ಸದ್ಯಕ್ಕೆ ಅವರ ಅಧೀನದಲ್ಲಿದೆ : ಕೆಟ್ಟ ಶಕ್ತಿಗಳು ಸತ್ಯ, ತ್ರೇತಾ ಮತ್ತು ದ್ವಾಪರ ಯುಗಗಳಲ್ಲಿ ಸ್ಥೂಲದಲ್ಲಿ ಅಧಿಕ ಕಾರ್ಯನಿರತವಾಗಿದ್ದವು; ಆದರೆ ಈಗ ಕಲಿಯುಗದಲ್ಲಿ ಅವು ಸ್ಥೂಲಕ್ಕಿಂತ ಸೂಕ್ಷ್ಮದಲ್ಲಿ ಅಧಿಕ ಕಾರ್ಯನಿರತವಾಗಿವೆ. ಕೆಟ್ಟ ಶಕ್ತಿಗಳು ಯಾವಾಗಲೂ ಮಾಯಾವಿ ಆಗಿರುತ್ತವೆ. ಅವು ಧರ್ಮವನ್ನು ವಿರೋಧಿಸುತ್ತವೆ ಅಥವಾ ಧರ್ಮವು ಹಾಕಿರುವ ಬಂಧನಗಳನ್ನು ಮುರಿದು ಹೊಸ ನಿಯಮಗಳನ್ನು ಸಿದ್ಧಗೊಳಿಸುತ್ತವೆ. ಕಳೆದ ೨ ಸಾವಿರ ವರ್ಷಗಳಲ್ಲಿ ಅವು ಮಾಯೆಯ ಆಧಾರದಿಂದ ಮನುಷ್ಯರ ಮಾಧ್ಯಮದಿಂದ ವಿಶ್ವದ ಮೇಲೆ ನಿಯಂತ್ರಣವನ್ನು ಸಾಧಿಸಿವೆ. ಸದ್ಯ ಪೃಥ್ವಿಯು ಅವರ ಅಧೀನದಲ್ಲಿದೆ. ನಿಸರ್ಗವನ್ನು ನಾಶ ಮಾಡುವ, ಬೇರೆ ಬೇರೆ ಮಾನವರ ಸಮೂಹಗಳಲ್ಲಿ ಕಲಹವನ್ನುಂಟು ಮಾಡುವ, ಅಲ್ಲದೇ ದುರ್ಬಲ ಜೀವ, ಇತರ ಜನರು ಮತ್ತು ಸ್ತ್ರೀಯರನ್ನು ಶೋಷಣೆ ಮಾಡುವ ಎಲ್ಲ ಮನುಷ್ಯರ ಹಿಂದೆ ಸೂಕ್ಷ್ಮದಲ್ಲಿನ ಬಲಾಢ್ಯ ಕೆಟ್ಟ ಶಕ್ತಿಗಳು ಕಾರ್ಯನಿರತವಾಗಿರುವ ಸಾಧ್ಯತೆಯಿದೆ.

ಸನಾತನದ ಧರ್ಮಗ್ರಂಥಗಳ ಮಾಧ್ಯಮದಿಂದ ಶುದ್ಧ ಧರ್ಮಬೀಜ, ಅಂದರೆ ಶುದ್ಧ ಜ್ಞಾನವನ್ನು ಮುಂದಿನ ಪೀಳಿಗೆಗೆ ನೀಡಲು ಮಹಾ, ಜನ ಮತ್ತು ತಪ ಈ ಲೋಕಗಳಲ್ಲಿನ ಜೀವಗಳು ಪೃಥ್ವಿಯ ಮೇಲೆ ಜನಿಸುತ್ತಿವೆ

ಪರಾತ್ಪರ ಗುರು ಡಾ. ಆಠವಲೆ ಮತ್ತು ಸದ್ಗುರುದ್ವಯರ ಅವತಾರಿ ಕಾರ್ಯವು ಈ ಯುದ್ಧಕ್ಕಷ್ಟೇ ಸೀಮಿತವಾಗಿಲ್ಲ, ಎಲ್ಲಿಯವರೆಗೆ ಶುದ್ಧ ಧರ್ಮಬೀಜ ಪೃಥ್ವಿಯ ಮೇಲೆ ಬರುವುದಿಲ್ಲವೋ, ಅಲ್ಲಿಯವರೆಗೆ ಅವತಾರಗಳು ಕಾರ್ಯನಿರತವಾಗಿರುತ್ತವೆ. ಹೇಗೆ ‘ಶ್ರೀರಾಮ ಮತ್ತು ರಾಮಾಯಣ, ಹೇಗೆ ‘ಶ್ರೀಕೃಷ್ಣ ಮತ್ತು ಗೀತಾ-ಭಾಗವತ, ಹಾಗೆಯೇ, ‘ಪರಾತ್ಪರ ಗುರು ಡಾ. ಆಠವಲೆ ಮತ್ತು ಸನಾತನದ ಗ್ರಂಥಗಳಾಗಿವೆ. ಸನಾತನದ ಗ್ರಂಥಗಳು ‘ಧರ್ಮಗ್ರಂಥಗಳೇ ಆಗಿವೆ. ಈ ಗ್ರಂಥಗಳು ಮುಂಬರುವ ಪೀಳಿಗೆಗಳಿಗೆ ಮಾರ್ಗದರ್ಶನ ಮಾಡಿ ಅವರನ್ನು ಶುದ್ಧ ಧರ್ಮದೆಡೆಗೆ ಕರೆದೊಯ್ಯುವವು. ಆದರೆ ಸನಾತನದ ಗ್ರಂಥಗಳ ಮಾಧ್ಯಮದಿಂದ ಮೂರನೇ ಮತ್ತು ನಾಲ್ಕನೇ ಪೀಳಿಗೆಗೆ ಶುದ್ಧ ಜ್ಞಾನವನ್ನು ಒಯ್ಯಲು ಉಚ್ಚ ಜೀವಗಳ ಅವಶ್ಯಕತೆ ಯಿದೆ. ಮುಂಬರುವ ಕಾಲದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ, ಮಹಾ, ಜನ ಮತ್ತು ತಪ ಈ ಲೋಕಗಳಲ್ಲಿನ ಉಚ್ಚ ಜೀವಗಳು ಪೃಥ್ವಿಯ ಮೇಲೆ ವಿವಿಧ ಸ್ಥಳಗಳಲ್ಲಿ ಜನಿಸುವರು. ಅವರ ಸಂಖ್ಯೆಯು ಕೆಲವು ಸಾವಿರಗಳಷ್ಟು ಇರುವುದು. ಉಚ್ಚ ಲೋಕದ ಈ ಜೀವಗಳು ಅವತಾರಗಳು ನೀಡಿರುವ ಜ್ಞಾನವನ್ನು ಮುಂದಿನ ಪೀಳಿಗೆಗೆ ಕೊಡುವವು ಮತ್ತು ಪೃಥ್ವಿಯ ಮೇಲೆ ಸತ್ತ್ವಗುಣಿ ಸನಾತನ ಧರ್ಮರಾಜ್ಯ ಸ್ಥಾಪನೆಯಾಗುವುದು.

– ಶ್ರೀ. ವಿನಾಯಕ ಶಾನಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ.

ಪಂಚಮಹಾಭೂತಗಳೇ ಪ್ರಳಯದ ಕಾರಣವಾಗಿದ್ದು, ‘ಯಜ್ಞ-ಯಾಗಗಳು ಕುರುಕ್ಷೇತ್ರದ ಯುದ್ಧ ಭೂಮಿಯಾಗಿವೆ !

ಪಂಚಮಹಾಭೂತಗಳಿಂದ ಈ ಚರಾಚರ ಸೃಷ್ಟಿ ಮತ್ತು ಮನುಷ್ಯನ ನಿರ್ಮಿತಿಯಾಗಿದೆ. ಪಂಚಮಹಾಭೂತಗಳೇ ಈಶ್ವರನ ಪ್ರಳಯದ ಮಾಧ್ಯಮವಾಗಿವೆ. ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿಯೂ ಪಂಚಮಹಾಭೂತಗಳನ್ನು ಆಧ್ಯಾತ್ಮಿಕ ದೃಷ್ಟಿಯಿಂದ ನಿಯಂತ್ರಿಸುವ ಕ್ಷಮತೆಯಿದೆ ಎಂದು ಮಹರ್ಷಿಗಳು ಹೇಳಿದ್ದಾರೆ. ಹೀಗಿರುವಾಗ ಸಾಧಕರಿಗೆ ಯಾರ ಮತ್ತು ಎಂತಹ ಭಯ ?

ಸನಾತನದ ಮೂವರು ಗುರುಗಳಿಗೆ ‘ಯಜ್ಞ-ಯಾಗಗಳೇ ಕುರುಕ್ಷೇತ್ರದ ಸೂಕ್ಷ್ಮ ಯುದ್ಧಭೂಮಿ ಯಾಗಿವೆ. ಅವರ ಕೈಯಿಂದ ಕೊಡುವ ಒಂದೊಂದು ಆಹುತಿ ಎಂದರೆ, ಒಂದೊಂದು ಸೂಕ್ಷ್ಮ ಕೆಟ್ಟ ಶಕ್ತಿಯ ಸ್ವಾಹಾಕಾರವೇ ಆಗಿದೆ. ಯಾವ ರೀತಿ ಶ್ರೀಕೃಷ್ಣನು ಅರ್ಜುನನಿಂದ ಮಹಾಭಾರತದ ಯುದ್ಧವನ್ನು ಮಾಡಿಸಿಕೊಂಡನೋ, ಅದೇ ರೀತಿ ಪರಾತ್ಪರ ಗುರು ಡಾ. ಆಠವಲೆಯವರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಮಾಧ್ಯಮದಿಂದ ಯಜ್ಞ-ಯಾಗಗಳನ್ನು ಮಾಡಿಸಿಕೊಂಡು ಸೂಕ್ಷ್ಮ ಯುದ್ಧವನ್ನು ಕೊನೆಗೊಳಿಸುತ್ತಿದ್ದಾರೆ. – ಶ್ರೀ. ವಿನಾಯಕ ಶಾನಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ (೫.೫.೨೦೨೧)

ಪರಾತ್ಪರ ಗುರು ಡಾ. ಆಠವಲೆ ಮತ್ತು ಸದ್ಗುರುದ್ವಯರ ಅವತಾರಿ ಕಾರ್ಯ

ಅ. ಸಪ್ತಪಾತಾಳದಲ್ಲಿ ಕಾರ್ಯನಿರತವಾಗಿರುವ ಸೂಕ್ಷ್ಮ ಕೆಟ್ಟ ಶಕ್ತಿಗಳ ಶಕ್ತಿಯನ್ನು ಕಡಿಮೆ ಮಾಡುವ ಪರಾತ್ಪರ ಗುರು ಡಾ. ಆಠವಲೆಯವರು ! : ಕಳೆದ ೨೦ ವರ್ಷಗಳಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಸೂಕ್ಷ್ಮ ಕೆಟ್ಟ ಶಕ್ತಿಗಳ ವಿರುದ್ಧ ನಡೆಸಿರುವ ಹೋರಾಟವು ಅವರ್ಣನೀಯವಾಗಿದೆ. ಸಪ್ತಪಾತಾಳಗಳಲ್ಲಿದ್ದು ಕಾರ್ಯನಿರತವಾಗಿರುವ ಎಲ್ಲ ಮಾಯಾವಿ ಶಕ್ತಿಗಳನ್ನು ಅವರು ಸೂಕ್ಷ್ಮದಿಂದ ಶೋಧಿಸಿ ಅವರ ಶಕ್ತ್ತಿಯನ್ನು ಸಂಪೂರ್ಣ ನಾಶ ಮಾಡಿದ್ದಾರೆ. ಈ ಎಲ್ಲ ಯುದ್ಧಗಳಲ್ಲಿ ಸನಾತನದ ಸಾಧಕರು ಕೇವಲ ಈಶ್ವರೀ ಮಾಧ್ಯಮವಾಗಿದ್ದರು. ಶೇ. ೯೦ ರಷ್ಟು ಸೂಕ್ಷ್ಮ ಯುದ್ಧವನ್ನು ಗುರುದೇವರು ಮೊದಲೇ ಜಯಿಸಿದ್ದಾರೆ. ಅವರು ಮಾಯಾವಿ ಕೆಟ್ಟ ಶಕ್ತಿಗಳ ಶಕ್ತಿಯನ್ನು ಎಷ್ಟು ಕಡಿಮೆ ಮಾಡಿದ್ದಾರೆಂದರೆ, ಕಲಿಯುಗದಲ್ಲಿ ಮುಂದಿನ ೧ ಸಾವಿರ ವರ್ಷಗಳವರೆಗೆ ಅವುಗಳಿಗೆ ತಲೆಯೆತ್ತಲು ಸಾಧ್ಯವಾಗಲಾರದು.

ಆ. ಪರಾತ್ಪರ ಗುರು ಡಾಕ್ಟರರ ಅವತಾರ ಮಹಿಮೆಯನ್ನು ಸಾಧಕರಿಗೆ ತೋರಿಸಿಕೊಡುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ! : ರಾಮನಾಥಿ ಆಶ್ರಮದಲ್ಲಿರುವ ಸಾಧಕರಿಗೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಗೆ ಈಗ ಗುರುದೇವರು ಜಗತ್ತಿನಾದ್ಯಂತದ ಎಲ್ಲ ಸಾಧಕರಿಗೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡಲು ಹೇಳಿದ್ದಾರೆ. ಪ್ರತಿಯೊಂದು ಕಾಲದಲ್ಲಿ ಅವತಾರಗಳು ಸಾಧಕ-ಜೀವಗಳ ಉದ್ಧಾರವನ್ನು ಮಾಡುತ್ತಿರುತ್ತವೆ. ಶ್ರೀರಾಮನು ಋಷಿ, ಋಷಿಪತ್ನಿ, ವಾನರ, ರಾಕ್ಷಸರು ಮತ್ತು ಪ್ರಜೆ ಇವರೆಲ್ಲರ ಉದ್ಧಾರವನ್ನು ಮಾಡಿದನು. ಶ್ರೀಕೃಷ್ಣನು ಗೋಪ-ಗೋಪಿಯರು, ಪಾಂಡವ-ಕೌರವರು ಮತ್ತು ಅನೇಕ ಭಕ್ತರ ಉದ್ಧಾರವನ್ನು ಮಾಡಿದನು. ಅದೇ ರೀತಿ ಈಗ ‘ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಆತ್ಮೋದ್ಧಾರಕ್ಕಾಗಿ ಪೃಥ್ವಿಯ ಮೇಲೆ ಬಂದಿದ್ದಾರೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ತಮ್ಮ ಮಧುರ ವಾಣಿ ಮತ್ತು ಕೃತಿಯಿಂದ ಸಾಧಕರಿಗೆ ಇದನ್ನು ತೋರಿಸಿಕೊಡುತ್ತಿದ್ದಾರೆ. ಸಾಕ್ಷಾತ್ ಶ್ರೀವಿಷ್ಣುವಿನ ಶಕ್ತಿಯಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರನ್ನು ಹೊರತುಪಡಿಸಿ ಈಶ್ವರನ ಸತ್ಯವನ್ನು ತಿಳಿಯಲು ಇತರರಿಗೆ ಸಾಧ್ಯವಿಲ್ಲ. ‘ಶ್ರದ್ಧಾವಂತ ಸಾಧಕರನ್ನು ಶ್ರೀವಿಷ್ಣುವಿನ ಚರಣಗಳವರೆಗೆ ಕರೆದೊಯ್ಯುವವರೆಗೆ ಅವರು ವಿಶ್ರಾಂತಿಯನ್ನು ಪಡೆಯುವುದಿಲ್ಲ, ಇದೇ ಸತ್ಯವಾಗಿದೆ.

ಇ. ಭಗವಂತನು ಪೃಥ್ವಿಯ ಮೇಲೆ ಯಾವ, ಯಾವ ಸ್ಥಳಗಳಲ್ಲಿ ತನ್ನ ಶಕ್ತಿಯನ್ನು ಇಟ್ಟಿದ್ದಾನೆಯೋ, ಆಯಾ ಸ್ಥಳಗಳಿಗೆ ಹೋಗಿ ದೇವತೆಗಳ ತತ್ತ್ವಗಳನ್ನು ಜಾಗೃತಗೊಳಿಸುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ! : ಸನಾತನದ ಇತಿಹಾಸದಲ್ಲಿ ‘ಸೂಕ್ಷ್ಮ-ಜ್ಞಾನವನ್ನು ಪಡೆದುಕೊಳ್ಳುವ ಸಾಧಕಿ ಎಂದು ಗುರುತಿಸಲ್ಪಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ಗುರುದೇವರು ಆಶ್ರಮದಿಂದ ಆಧ್ಯಾತ್ಮಿಕ ಪ್ರವಾಸಕ್ಕೆ ಕಳುಹಿಸಿದರು. ಕಳೆದ ೯ ವರ್ಷಗಳ ಈ ಪ್ರವಾಸದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸಾವಿರಾರು ತೀರ್ಥಕ್ಷೇತ್ರಗಳ ದರ್ಶನವನ್ನು ಪಡೆದಿದ್ದಾರೆ. ರಾಮಾಯಣ, ಮಹಾಭಾರತ, ಶ್ರೀಮದ್ಭಾಗವತ ಮತ್ತು ಪುರಾಣಗಳಲ್ಲಿ ಯಾವೆಲ್ಲ ಮುಖ್ಯ ಅವತಾರಿ ಸ್ಥಾನಗಳ ಉಲ್ಲೇಖ ಬರುತ್ತದೆಯೋ, ಅವುಗಳಲ್ಲಿ ಹೆಚ್ಚಿನ ಎಲ್ಲ ತೀರ್ಥಕ್ಷೇತ್ರಗಳಿಗೆ ಅವರು ಹೋಗಿ ಬಂದಿದ್ದಾರೆ.

ಭಗವಂತನು ಎಂದಿಗೂ ‘ಶಕ್ತಿಯ ಅಪವ್ಯಯವನ್ನು ಮಾಡುವುದಿಲ್ಲ ಇದು ಅವನ ವೈಶಿಷ್ಟ್ಯವಾಗಿದೆ. ಹಿಂದಿನ ಅವತಾರದಲ್ಲಿ ಭಗವಂತನು ತನ್ನ ಶಕ್ತಿಯನ್ನು ಮುಂದಿನ ಕಾರ್ಯಕ್ಕಾಗಿ ಪೃಥ್ವಿಯ ಮೇಲೆ ಇಟ್ಟಿರುತ್ತಾನೆ. ಈಗ ಪರಾತ್ಪರ ಗುರು ಡಾ. ಆಠವಲೆಯವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಮಾಧ್ಯಮದಿಂದ ಆ ಕ್ಷೇತ್ರದಲ್ಲಿ ಅವರು ಹಿಂದಿನ ಅವತಾರದಲ್ಲಿ ಇಟ್ಟಿದ್ದ ಶಕ್ತಿ, ಅಂದರೆ ದೇವತೆಗಳ ತತ್ತ್ವವನ್ನು ಜಾಗೃತಗೊಳಿಸುತ್ತಿದ್ದಾರೆ. ಈ ಈಶ್ವರೀ ಶಕ್ತಿ ಕಾರ್ಯನಿರತವಾದ ಮೇಲೆ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿದೆ. ಕೆಟ್ಟ ಶಕ್ತಿಗಳು ಈಶ್ವರೀ ಸ್ರೋತವಾಗಿರುವ ಎಲ್ಲ ತೀರ್ಥಕ್ಷೇತ್ರಗಳಲ್ಲಿ ಮಾನವನನ್ನು ಮಾಧ್ಯಮವನ್ನಾಗಿ ಮಾಡಿಕೊಂಡು ಅಲ್ಲಿ ತೊಂದರೆ ನೀಡುವ ಶಕ್ತಿಯ ಆವರಣವನ್ನು ತಂದಿವೆ. ಸಾಕ್ಷಾತ್ ಶ್ರೀವಿಷ್ಣುವಿನ ಶಕ್ತಿಯಾಗಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಆ ಸ್ಥಳಗಳಿಗೆ ಹೋಗಿ ಬಂದ ಬಳಿಕ ಅಲ್ಲಿನ ತೊಂದರೆದಾಯಕ ಸ್ಪಂದನಗಳು ದೂರವಾಗುತ್ತವೆ. ಇದರಲ್ಲಿ ಯಾವುದೇ ಸಂಶಯವಿಲ್ಲ.

ಸನಾತನದ ಮೂವರು ಗುರುಗಳ ಚರಣಗಳಲ್ಲಿ ಸಾಧಕರೆಲ್ಲರ ಪ್ರಾರ್ಥನೆ ಎಂದರೆ ‘ನಾವು ಕೇವಲ ನಿಮಿತ್ತ ಮಾತ್ರವಾಗಿದ್ದು, ಈಶ್ವರನ ಕೈಗೊಂಬೆಯಾಗಿದ್ದೇವೆ, ಎನ್ನುವ ಅರಿವು ಸತತ ನಮ್ಮಲ್ಲಿರಲಿ ಮತ್ತು ನಮ್ಮ ಕೊನೆಯ ಉಸಿರಿನ ತನಕ ನಮಗೆ ತಮ್ಮ ಸೇವೆ ಮಾಡಲು ಸಾಧ್ಯವಾಗಲಿ. – ಶ್ರೀ. ವಿನಾಯಕ ಶಾನಭಾಗ

ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ಪ್ರಕಾಶಿಸಲಾಗುವ ವಿಶೇಷಾಂಕದ ನಿರ್ವಹಣೆ ಮತ್ತು ಸಂಗ್ರಹ ಒಳ್ಳೆಯ ರೀತಿಯಲ್ಲಿ ಮಾಡಿ !

ಕಳೆದ ವರ್ಷ ಕೊರೋನಾ ಮಹಾಮಾರಿಯಿಂದ ಅನೇಕ ತಿಂಗಳು ಸಾಪ್ತಾಹಿಕ ಸನಾತನ ಪ್ರಭಾತದ ಮುದ್ರಣ ಮಾಡಿರಲಿಲ್ಲ. ಆಗ ಸನಾತನದ ಗ್ರಂಥ, ಈ ಹಿಂದೆ ಪ್ರಕಾಶಿಸಲಾಗಿದ್ದ ‘ಸನಾತನ ಪ್ರಭಾತ ನಿಯತಕಾಲಿಕೆ ಗಳೇ ಸಾಧಕರಿಗೆ ಆಧಾರ ವಾಗಿತ್ತು. ಈಗಲೂ ಕೊರೊನಾ ಮಹಾಮಾರಿಯ ಭೀಕರತೆಯು ಹೆಚ್ಚಾಗುತ್ತಲೇ ಇದೆ. ಇದರಿಂದ ಮುಂದಿನ ಆಪತ್ಕಾಲ ಹೇಗಿರಬಹುದು ಎಂಬುದರ ಬಗ್ಗೆ ನಮಗೆ ಕಲ್ಪನೆ ಬರುತ್ತದೆ. ಇದನ್ನು ಗಮನದಲ್ಲಿಟ್ಟು ಈ ಸಲ ಪರಾತ್ಪರ ಗುರು ಡಾ. ಆಠವಲೆ ಇವರ ಜನ್ಮೋತ್ಸವದ ನಿಮಿತ್ತ ಪ್ರಕಾಶಿಸಲಾಗುವ ಬಣ್ಣದ ವಿಶೇಷಾಂಕವನ್ನು ಅತ್ಯುತ್ತಮ ದರ್ಜೆಯ ಕಾಗದದಲ್ಲಿ ಮುದ್ರಿಸಲಾಗಿದೆ. ಇದರಿಂದ ಆಪತ್ಕಾಲದ ಮುಂದಿನ ಕೆಲವು ವರ್ಷಗಳ ಕಾಲ ಸಾಧಕರು ಅದನ್ನು ಸಂಗ್ರಹಿಸಿಡ ಬಹುದು. ಈ ವಿಶೇಷಾಂಕ ಉಪಯೋಗಿಸುವಾಗ ಮಾಡುವಾಗ ಏನೆಲ್ಲ ಕಾಳಜಿ ವಹಿಸಬೇಕು, ಇದರ ಬಗ್ಗೆ ಕೆಲವು ಸೂಚನೆಗಳನ್ನು ಇಲ್ಲಿ ನೀಡಲಾಗುತ್ತಿದೆ.

೧. ವಿಶೇಷಾಂಕವನ್ನು ಓದಿದ ನಂತರ ಅದನ್ನು ಪ್ಲಾಸ್ಟಿಕ್‌ನ ಗಾಳಿಯಾಡದ ಚೀಲದಲ್ಲಿ ಇಡಬೇಕು.

. ಈ ಸಂಚಿಕೆಯನ್ನು ವರ್ಷಕ್ಕೊಮ್ಮೆ ೧೦ ನಿಮಿಷಗಳ ಕಾಲ ಬಿಸಿಲಿನಲ್ಲಿ ಇಡಬೇಕು. ನಂತರ ಅದನ್ನು ಕೂಡಲೇ ಚೀಲದಲ್ಲಿ ಇಡದೇ ಅದು ಪೂರ್ಣ ತಣ್ಣಗಾದ ನಂತರವೇ ಚೀಲದಲ್ಲಿಡಬೇಕು.

. ಈ ವಿಶೇಷಾಂಕದಲ್ಲಿ ಭಾವಜಾಗೃತಿ ಆಗುವ ಪರಾತ್ಪರ ಗುರುದೇವರ ಹಾಗೂ ಸಂತರ ವಿಶೇಷ ಛಾಯಾಚಿತ್ರಗಳು ಇರುವುದರಿಂದ ಅದನ್ನು ಆವರಣ ತೆಗೆಯುವುದು ಇತ್ಯಾದಿಗಳಿಗಾಗಿ ಉಪಯೋಗಿಸಬೇಡಿ.

. ಸಂಚಿಕೆಯನ್ನು ತುಂಬಾ ಮಡಚದಿರಿ.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಕೆಟ್ಟ ಶಕ್ತಿ :  ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ.  ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

ಸೂಕ್ಷ್ಮದಲ್ಲಿ ಕಾಣಿಸುವುದು, ಕೇಳಿಸುವುದು ಇತ್ಯಾದಿ (ಪಂಚಸೂಕ್ಷ್ಮಜ್ಞಾನೇಂದ್ರಿಯಗಳಿಂದ ಜ್ಞಾನಪ್ರಾಪ್ತಿಯಾಗುವುದು) : ಕೆಲವು ಸಾಧಕರ ಅಂತರ್ದೃಷ್ಟಿ ಜಾಗೃತವಾಗುತ್ತದೆ, ಅಂದರೆ ಅವರಿಗೆ ಕಣ್ಣಿಗೆ ಕಾಣಿಸದಿರುವುದು ಕಾಣಿಸುತ್ತದೆ ಮತ್ತು ಇನ್ನು ಕೆಲವರಿಗೆ ಸೂಕ್ಷ್ಮದಲ್ಲಿನ ನಾದ ಅಥವಾ ಶಬ್ದಗಳು ಕೇಳಿಸುತ್ತವೆ.

ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು