೧೧.೫.೨೦೧೯ ರಂದು ರಾಮನಾಥಿ, ಗೋವಾದ ಸನಾತನದ ಆಶ್ರಮದಲ್ಲಿ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ೭೭ ನೇ ಜನ್ಮೋತ್ಸವ ಸಮಾರಂಭವನ್ನು ಭಾವಪೂರ್ಣ ವಾತಾವರಣದಲ್ಲಿ ಆಚರಿಸಲಾಯಿತು. ಪೂ. (ಡಾ.) ಉಲಗನಾಥನ ಇವರ ಮಾಧ್ಯಮದಿಂದ ಮಯನ ಮಹರ್ಷಿಯವರು ನೀಡಿದ ಆಜ್ಞೆಗನುಸಾರ ಈ ಸಮಾರಂಭದಲ್ಲಿ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಸನಾತನದ ಸಾಧಕರಿಗೆ ‘ಶ್ರೀಸತ್ಯನಾರಾಯಣ ರೂಪದಲ್ಲಿ ದರ್ಶನ ನೀಡಿದರು. ಎಸ್.ಎಸ್.ಆರ್.ಎಫ್.ನ ಸಾಧಕಿ ಸೌ. ಯೋಯಾ ವಾಲೆಯವರು ಬಿಡಿಸಿದ ಪರಾತ್ಪರ ಗುರುಗಳ ಸೂಕ್ಷ್ಮಚಿತ್ರ ಮತ್ತು ಅದರ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.
೧. ವಿಷ್ಣುತತ್ತ್ವ
೧ ಅ. ವಿಷ್ಣುತತ್ತ್ವದ ಪ್ರವಾಹವು ಆಶೀರ್ವಾದದ ಸ್ವರೂಪದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ಆಕರ್ಷಿತವಾಗುವುದು
೧ ಆ. ವಿಷ್ಣುತತ್ತ್ವದ ನಿರ್ಗುಣ ವಲಯವು ಪರಾತ್ಪರ ಗುರು ಡಾ. ಆಠವಲೆಯವರ ಆಜ್ಞಾಚಕ್ರದಲ್ಲಿ ತೇಜಸ್ವೀ ಸ್ವರೂಪದಲ್ಲಿ ಕಾರ್ಯನಿರತವಾಗುವುದು : ‘ಈಶ್ವರೀ ರಾಜ್ಯವನ್ನು ಸ್ಥಾಪಿಸುವುದು ಪರಾತ್ಪರ ಗುರು ಡಾ. ಆಠವಲೆಯವರ ಸಮಷ್ಟಿ ಧ್ಯೇಯವಾಗಿದೆ. ಈ ಧ್ಯೇಯವನ್ನು ಪೂರ್ಣಗೊಳಿಸಲು ಅವರ ಸಂಕಲ್ಪವು ಕಾರ್ಯನಿರತವಾಗಿರುವುದರಿಂದ ಹೀಗೆ ಆಯಿತು.
೧ ಇ. ಪರಾತ್ಪರ ಗುರು ಡಾ. ಆಠವಲೆಯವರ ದೇಹದ ಸುತ್ತಲು ವಿಷ್ಣುತತ್ತ್ವದ ಕವಚವು ಇರುವುದು : ಇದಕ್ಕೆ ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ವಿಷ್ಣುತತ್ತ್ವವಿರುವುದೇ ಕಾರಣವಾಗಿದೆ.
೧ ಈ. ವಿಷ್ಣುತತ್ತ್ವದ ವಲಯವು ಪರಾತ್ಪರ ಗುರು ಡಾ. ಆಠವಲೆಯವರ ಮುಖದ ಸುತ್ತಲೂ ಕಾರ್ಯನಿರತವಾಗಿ ಪ್ರಕಾಶ ಸ್ವರೂಪದಲ್ಲಿ ಪ್ರಕ್ಷೇಪಿತವಾಗುವುದು
೧ ಉ. ವಿಷ್ಣುತತ್ತ್ವದ ವಲಯವು ವಾತಾವರಣದಲ್ಲಿ ಕಾರ್ಯನಿರತವಾಗಿ ಪ್ರಕ್ಷೇಪಿಸುವುದು : ಇದರಿಂದ ‘ನಾವು ಸಾಕ್ಷಾತ ವೈಕುಂಠ ಲೋಕದಲ್ಲಿ ಇದ್ದೇವೆ, ಎಂದು ಸಾಧಕರಿಗೆ ಅನುಭೂತಿ ಬರುತ್ತಿತ್ತು.
೨. ತಾರಕ ಶಕ್ತಿ
೨ ಅ. ತಾರಕ ಶಕ್ತಿಯ ವಲಯವು ಪರಾತ್ಪರ ಗುರು ಡಾ. ಆಠವಲೆಯವರ ಅನಾಹತ ಚಕ್ರದ ಬಳಿ ಕಾರ್ಯನಿರತವಾಗುವುದು
೨ ಆ. ತಾರಕ ಶಕ್ತಿಯ ಕಣಗಳು ಪರಾತ್ಪರ ಗುರು ಡಾ. ಆಠವಲೆಯವರಿಂದ ವಾತಾವರಣದಲ್ಲಿ ಪ್ರಕ್ಷೇಪಿಸುವುದು : ಪರಾತ್ಪರ ಗುರು ಡಾ. ಆಠವಲೆಯವರು ಆರಂಭಿಸಿದ ‘ಈಶ್ವರೀ ರಾಜ್ಯದ ಸ್ಥಾಪನೆಯ ಕಾರ್ಯದಲ್ಲಿ ಸಹಭಾಗಿಯಾಗಿರುವ ಸಾಧಕರಿಗೆ ಈ ಮಾಧ್ಯಮದಿಂದ ಆಶೀರ್ವಾದವು ಸಿಕ್ಕಿದೆ. ಅದರ ಜೊತೆಗೆ ಪರಾತ್ಪರ ಗುರು ಡಾ. ಆಠವಲೆಯವರು ಸತತವಾಗಿ ಸಾಧಕರ ಕಲ್ಯಾಣದ ಬಗ್ಗೆ ವಿಚಾರ ಮಾಡುತ್ತಿರುವುದರಿಂದ ಸಾಧಕರಿಗೆ ಸಾಧನೆ ಮಾಡಲು ಉತ್ತಮ ಆರೋಗ್ಯ ಹಾಗೂ ಸಮೃದ್ಧಿ ಸಿಕ್ಕಿದೆ.
೩. ಸಗುಣ ಚೈತನ್ಯ
೩ ಅ. ಸಗುಣ ಚೈತನ್ಯದ ವಲಯವು ಪರಾತ್ಪರ ಗುರು ಡಾ. ಆಠವಲೆಯವರ ಅನಾಹತ ಚಕ್ರದ ಸ್ಥಾನದಲ್ಲಿ ಕಾರ್ಯನಿರತವಾಗುವುದು.
೩ ಆ. ಸಗುಣ ಚೈತನ್ಯದ ವಲಯವು ಪ್ರಕಾಶಮಯ ಸ್ವರೂಪದಲ್ಲಿ ವಾತಾವರಣದಲ್ಲಿ ಪ್ರಕ್ಷೇಪಿತವಾಗುವುದು : ಸಾಧಕರಿಗೆ ಚೈತನ್ಯದ ಅನುಭೂತಿ ಸಿಗುವಂತಾಗಬೇಕೆಂದು ಹಾಗೆ ಆಯಿತು.
೪. ನಿರ್ಗುಣ ಚೈತನ್ಯ
೪ ಅ. ನಿರ್ಗುಣ ಚೈತನ್ಯದ ವಲಯವು ಪ್ರಕಾಶಮಯ ಸ್ವರೂಪದಲ್ಲಿ ವಾತಾವರಣದಲ್ಲಿ ಪ್ರಕ್ಷೇಪಿತವಾಗುವುದು
೫. ಆನಂದ
೫. ಅ. ಆನಂದದ ವಲಯವು ಪರಾತ್ಪರ ಗುರು ಡಾ. ಆಠವಲೆಯವರ ಮುಖದಸುತ್ತಲೂ ತೇಜಸ್ವೀ ಸ್ವರೂಪದಲ್ಲಿ ಕಾರ್ಯನಿರತವಾಗುವುದು : ಪರಾತ್ಪರ ಗುರು ಡಾ. ಆಠವಲೆಯವರು ನಿರ್ಗುಣಾವಸ್ಥೆಯಲ್ಲಿ ಇರುವುದರಿಂದ ಹಾಗಾಗುತ್ತದೆ.
೬. ಇತರ ಅಂಶಗಳು
೬ ಅ. ಪರಾತ್ಪರ ಗುರು ಡಾ. ಆಠವಲೆಯವರು ಸತತ ನಿರ್ಗುಣಾವಸ್ಥೆಯಲ್ಲಿರುತ್ತಾರೆ. ಆದ್ದರಿಂದ ಅವರು ಸ್ಥೂಲದಿಂದ ಅಲ್ಲಿದ್ದರೂ ಅವರ ಸ್ಥಳದಲ್ಲಿ ಕೇವಲ ಶ್ರೀಸತ್ಯನಾರಾಯಣ ದೇವರ ಅಸ್ತಿತ್ವವಿರುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರು ಆರಂಭಿಸಿದ ‘ಈಶ್ವರೀ ರಾಜ್ಯದ ಸ್ಥಾಪನೆಯ ಕಾರ್ಯದಲ್ಲಿ ಸ್ಥೂಲ ಹಾಗೂ ಸೂಕ್ಷ್ಮ ಈ ಎರಡೂ ಸ್ತರದಲ್ಲಿ ಸಹಾಯ ಮಾಡಲು ಎಲ್ಲಾ ದೇವತೆಗಳು ಸದಾ ಕಾಲ ತತ್ಪರರಾಗಿರುತ್ತಾರೆ.
೬ ಆ. ಶ್ರೀಸತ್ಯನಾರಾಯಣ ದೇವರು ಅಗತ್ಯಕ್ಕನುಸಾರ ಒಂದು ವಿಶಿಷ್ಟ ಶಕ್ತಿಯನ್ನು ನಿರ್ಮಿಸಬಲ್ಲರು. ಈ ಶಕ್ತಿಯಿಂದ ವ್ಯಕ್ತಿಗೆ ಶಾರೀರಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ. ಸದ್ಯದ ಕಲಿಯುಗದಲ್ಲೇ ಶ್ರೀಸತ್ಯನಾರಾಯಣ ದೇವರ ತತ್ತ್ವ(ಶಕ್ತಿ) ಕಾರ್ಯನಿರತವಾಗಿದೆ, ಇದು ಸಂಪೂರ್ಣ ಮನುಕುಲಕ್ಕೆ ತುಂಬಾ ಲಾಭದಾಯಕವಾಗಿರುತ್ತದೆ. ‘ಈಶ್ವರೀ ರಾಜ್ಯದ ಸ್ಥಾಪನೆಯ ಕಾರ್ಯಕ್ಕಾಗಿ ಈ ಸಮಾರಂಭದಲ್ಲಿ ಈ ಶಕ್ತಿಯು ಸೂಕ್ಷ್ಮದಿಂದ ಸದ್ಗುರು (ಸೌ.) ಅಂಜಲಿ ಗಾಡಗೀಳ ಹಾಗೂ ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರತ್ತ ಹರಿಯಿತು.
ಇ. ಸಮಾರಂಭದ ಸಮಯದಲ್ಲಿ ಕು. ಶರ್ವರಿ ಕಾನಸ್ಕರ ಇವಳು ಪರಾತ್ಪರ ಗುರು ಡಾಕ್ಟರರ ಮುಂದೆ ನೃತ್ಯ ಮಾಡಿದಳು. ಈ ಸಮಯದಲ್ಲಿ ಅವಳಿಂದ ತುಂಬಾ ಪ್ರಮಾಣದಲ್ಲಿ ಭಾವವು ಪ್ರಕ್ಷೇಪಿತವಾಗುತ್ತಿತ್ತು. ಅವಳಲ್ಲಿರುವ ಭಾವದಿಂದ ಈ ಸಮಾರಂಭವನ್ನು ನೋಡುವ ಸಾಧಕರ ಭಾವವೂ ಜಾಗೃತವಾಗುತ್ತಿತ್ತು. ಇದರಿಂದಾಗಿ ‘ಪರಾತ್ಪರ ಗುರು ಡಾಕ್ಟರರ ಮುಂದೆ ನಾವೂ ಸಹ ನೃತ್ಯ ಮಾಡಬೇಕು, ಹೀಗೆ ಪ್ರತಿಯೊಬ್ಬ ಸಾಧಕರ ಮನಸ್ಸಿನಲ್ಲಿ ಉತ್ಕಟವಾದ ಇಚ್ಛೆ ಆಗಿತ್ತು. – ಎಸ್.ಎಸ್.ಆರ್.ಎಫ್.ನ ಸಾಧಕಿ ಸೌ. ಯೊಯಾ ವಾಲೆ (೬.೫.೨೦೨೦)
ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. ಸೂಕ್ಷ್ಮಜ್ಞಾನದ ಚಿತ್ರ : ಕೆಲವು ಸಾಧಕರಿಗೆ ಯಾವುದಾದರೊಂದು ವಿಷಯದ ಬಗ್ಗೆ ಯಾವುದು ಅರಿವಾಗುತ್ತದೆಯೋ ಮತ್ತು ಅಂತರ್ದೃಷ್ಟಿಗೆ ಕಾಣಿಸುತ್ತದೆಯೋ, ಅದರ ಬಗ್ಗೆ ಅವರು ಕಾಗದದ ಮೇಲೆ ಬಿಡಿಸಿದ ಚಿತ್ರಕ್ಕೆ ‘ಸೂಕ್ಷ್ಮಜ್ಞಾನದ ಚಿತ್ರ ಎಂದು ಹೇಳುತ್ತಾರೆ. ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ. ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು |