ಏಕಮೇವಾದ್ವಿತೀಯ ಗ್ರಂಥಗಳ ಲೇಖನದ ಕಾರ್ಯವನ್ನು ಮಾಡುವ ಪರಾತ್ಪರ ಗುರು ಡಾ. ಜಯಂತ ಆಠವಲೆ !

‘ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಗ್ರಂಥ ಲೇಖನದ ಕಾರ್ಯವು ವಿವಿಧ ರೂಪಗಳಲ್ಲಿ, ವಿವಿಧ ಭಾಷೆಗಳಲ್ಲಿ ಮತ್ತು ವಿವಿಧ ಮಾದರಿಗಳಲ್ಲಿದೆ, ಹಾಗೆಯೇ ಸಮುದ್ರದಂತೆ ವಿಶಾಲ ಮತ್ತು ಆಳವಾಗಿದೆ. ಈ ರೀತಿಯ ಗ್ರಂಥ ಲೇಖನದ ಕಾರ್ಯವನ್ನು ಜಗತ್ತಿನಲ್ಲಿ ಇತರ ಯಾರಾದರೂ ಮಾಡಿರಬಹುದು ಎಂದು ಅನಿಸುವುದಿಲ್ಲ !

ಪರಾತ್ಪರ ಗುರುದೇವರು ಮಾಡಿದ ಲೇಖನಗಳನ್ನು ಆಧುನಿಕ ಯುಗದಲ್ಲಿನ ಮಾನವರಿಗೆ ತಿಳಿಯುವಂತಹ ಭಾಷೆಯಲ್ಲಿ ಸಂಕಲನ ಮಾಡಲಾಗಿದೆ. ಅವರ ಈ ಅದ್ವಿತೀಯ ಕಾರ್ಯದ ವಿವಿಧ ಮಗ್ಗಲುಗಳಲ್ಲಿನ ಕೆಲವು ಆಯ್ದ ಮಗ್ಗಲುಗಳ ಬಗ್ಗೆ ಇಲ್ಲಿ ಪ್ರಕಾಶವನ್ನು ಚೆಲ್ಲಲಾಗಿದೆ.

(ಪರಾತ್ಪರ ಗುರು) ಡಾ. ಆಠವಲೆ

೧೦,೦೦೦ ಆಧ್ಯಾತ್ಮಿಕ ಗ್ರಂಥಗಳ ಲೇಖನವನ್ನು ಮೃತ್ಯುವಿನ ನಂತರವೂ ಪೂರ್ಣಗೊಳಿಸುವ ಸೆಳೆತವಿರುವ ಪರಾತ್ಪರ ಗುರು ಡಾ. ಆಠವಲೆ !

‘ಮಹಾಮೃತ್ಯುಯೋಗದಿಂದ ನನ್ನ ಮೃತ್ಯುವಾದರೆ, ‘೧೦,೦೦೦ ಆಧ್ಯಾತ್ಮಿಕ ಗ್ರಂಥಗಳ ಯಾವ ಮಾಹಿತಿ ನನ್ನ ಸಂಗ್ರಹದಲ್ಲಿದೆಯೋ, ‘ಅದನ್ನು ಗ್ರಂಥಗಳಲ್ಲಿ ರೂಪಾಂತರಿಸಲು ನನಗೆ ಪುನರ್ಜನ್ಮವನ್ನು ಪಡೆಯಬೇಕು’, ಎಂದು ಅನಿಸುತ್ತದೆ.’

– (ಪರಾತ್ಪರ ಗುರು) ಡಾ. ಆಠವಲೆ

೧. ಹೇರಳವಾದ ಮತ್ತು ಬಹುಭಾಷೆಯ ಗ್ರಂಥಸಂಪತ್ತು  !

ಇಲ್ಲಿಯವರೆಗೆ ಜಗತ್ತಿನಲ್ಲಿ ಕೆಲವು ಸಂತರ ‘ಅಧ್ಯಾತ್ಮ’ದ ಬಗೆಗಿನ ಕೆಲವು ಗ್ರಂಥಗಳು ಕೆಲವು ಭಾಷೆಗಳಲ್ಲಿ ಮಾತ್ರ ಪ್ರಕಟಗೊಂಡಿವೆ. ತದ್ವಿರುದ್ಧ ಕೇವಲ ೨೦ ವರ್ಷಗಳಲ್ಲಿ (ಏಪ್ರಿಲ್ ೨೦೨೧ ರ ವರೆಗೆ) ಪರಾತ್ಪರ ಗುರು ಡಾ. ಜಯಂತ ಆಠವಲೆಯವರಿಂದ ವಿವಿಧ ವಿಷಯಗಳ ೩೩೭ ಗ್ರಂಥಗಳು ಪ್ರಕಟವಾಗಿವೆ. ಇವುಗಳಲ್ಲಿ ಕೆಲವು ಗ್ರಂಥಗಳು ಮರಾಠಿ, ಕನ್ನಡ, ಹಿಂದಿ, ಆಂಗ್ಲ, ಗುಜರಾತಿ, ತಮಿಳು, ತೆಲುಗು, ಮಲಯಾಳಮ್, ಬಂಗಾಲಿ, ಓಡಿಯಾ, ಆಸಾಮಿ, ಗುರುಮುಖಿ, ಜರ್ಮನ್, ಸ್ಪ್ಯಾನಿಶ್, ಫ್ರೆಂಚ್ ಮತ್ತು ನೇಪಾಳಿ ಮುಂತಾದ ೧೭ ಭಾಷೆಗಳಲ್ಲಿ ೮೧ ಲಕ್ಷದ ೯೯ ಸಾವಿರ ಪ್ರತಿಗಳು ಪ್ರಕಾಶಿತಗೊಂಡಿವೆ. ಇಷ್ಟೇ ಅಲ್ಲದೇ, ಇನ್ನೂ ೧೦ ಸಾವಿರಗಳಿಗಿಂತಲೂ ಹೆಚ್ಚು ಗ್ರಂಥಗಳನ್ನು ಪ್ರಕಾಶಿಸುವಷ್ಟು ಬರವಣಿಗೆಯನ್ನು ಅವರು ಗಣಕಯಂತ್ರದಲ್ಲಿ ವಿಷಯಗಳಿಗನುಸಾರ ವರ್ಗೀಕರಣ ಮಾಡಿಟ್ಟಿದ್ದಾರೆ !

೨. ವಿವಿಧ ವಿಷಯಗಳ ಗ್ರಂಥಸಂಪತ್ತು !

ಪರಾತ್ಪರ ಗುರು ಡಾಕ್ಟರರು ಕೇವಲ ‘ಅಧ್ಯಾತ್ಮ’ ಈ ಒಂದೇ ವಿಷಯದ ಮೇಲಲ್ಲ, ಅವರು ಹಿಂದೂ ಧರ್ಮ, ಹಿಂದೂ ಸಂಸ್ಕೃತಿ, ಕಲೆ, ರಾಷ್ಟ್ರ, ಬಾಲಸಂಸ್ಕಾರ, ನಾಮಜಪಾದಿ ಆಧ್ಯಾತ್ಮಿಕ ಉಪಾಯಗಳು, ಆಪತ್ಕಾಲದಲ್ಲಿ ಜೀವರಕ್ಷಣೆ ಇವುಗಳಂತಹ ವಿವಿಧ ವಿಷಯಗಳ ಗ್ರಂಥಗಳ ಲೇಖನವನ್ನು ಮಾಡಿದ್ದಾರೆ.

೩. ಆಧುನಿಕ ವಿಜ್ಞಾನಯುಗದಲ್ಲಿ ಮಾನವನನ್ನೂ ಸಾಧನೆಯ ಕಡೆಗೆ ಹೊರಳಿಸುವ ನಾವೀನ್ಯಪೂರ್ಣ ಈಶ್ವರೀ ಜ್ಞಾನದ ಗ್ರಂಥಗಳು !

(ಪೂ.) ಶ್ರೀ. ಸಂದೀಪ ಆಳಶಿ,

ಪರಾತ್ಪರ ಗುರು ಡಾಕ್ಟರರ ಕೃಪೆಯಿಂದ ಸನಾತನದ ಕೆಲವು ಸಾಧಕರಿಗೆ ವಿವಿಧ ವಿಷಯಗಳ ಕುರಿತು ಸೂಕ್ಷ್ಮದಿಂದ ವೈಜ್ಞಾನಿಕ ಪರಿಭಾಷೆಯಲ್ಲಿ ಆಳವಾದ ಮತ್ತು ವಿನೂತನ ಈಶ್ವರೀ ಜ್ಞಾನ ಪ್ರಾಪ್ತವಾಗುತ್ತದೆ. ‘ಈ ಜ್ಞಾನದ ಮಹತ್ವ ಇಷ್ಟೇಕಿದೆ ?’, ಎಂಬುದು ಮುಂದೆ ನೀಡಲಾದ ಕೇವಲ ಒಂದು ಉದಾಹರಣೆಯಿಂದಲೇ ಗಮನಕ್ಕೆ ಬರುತ್ತದೆ. ಸದ್ಯದ ಆಧುನಿಕ ವಿಜ್ಞಾನಯುಗದ ಪೀಳಿಗೆಗೆ ‘ಏಕೆ ? ಹೇಗೆ ?’, ಎಂಬ ಪ್ರಶ್ನೆಯನ್ನು ಕೇಳುವ ಅಭ್ಯಾಸ ಇರುತ್ತದೆ. ಆ ಪ್ರಶ್ನೆಗಳಿಗೆ ವೈಜ್ಞಾನಿಕ ಪರಿಭಾಷೆಯಲ್ಲಿ ಉತ್ತರಗಳು ಸಿಕ್ಕಿದರೆ, ಅವುಗಳ ಬಗ್ಗೆ ಸಮಾಧಾನವಾಗಿ ಅವರು ಅಧ್ಯಾತ್ಮದ ಕಡೆಗೆ ಹೊರಳುತ್ತಾರೆ. ಸ್ತ್ರೀಯು ಹಣೆಯಲ್ಲಿ ಕುಂಕುಮವನ್ನು ಹಚ್ಚಿಕೊಳ್ಳುವುದು, ಸ್ತ್ರೀಯರು ಕೂದಲುಗಳ ಹೆರಳು ಅಥವಾ ತುರುಬು ಕಟ್ಟಿಕೊಳ್ಳುವುದು ಇವುಗಳಂತಹ ಅನೇಕ ಸಾತ್ತ್ವಿಕ ಕೃತಿಗಳನ್ನು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಕಾಲದ ಪ್ರವಾಹದಲ್ಲಿ ಧರ್ಮಶಿಕ್ಷಣದ ಅಭಾವದಿಂದ ಇಂತಹ ಕೃತಿಗಳ ಮಹತ್ವವು ಹಿಂದೂ ಸಮಾಜಕ್ಕೆ ತಿಳಿದಿಲ್ಲ; ಹಾಗಾಗಿ ಸದ್ಯ ಇಂತಹ ಕೃತಿಗಳನ್ನು ಹಿಂದೂಗಳು ಮಾಡುವುದಿಲ್ಲ. ತದ್ವಿರುದ್ಧ ಶರ್ಟ್-ಪ್ಯಾಂಟ್ ಧರಿಸುವುದು, ಪಿಝ್ಝಾ-ಬರ್ಗರ್ ಮುಂತಾದ ಪದಾರ್ಥಗಳನ್ನು ತಿನ್ನುವುದು ಇವುಗಳಂತಹ ಹಿಂದೂ ಧರ್ಮದಲ್ಲಿ ಹೇಳದಿರುವ ತಾಮಸಿಕ ಕೃತಿಗಳನ್ನು ಪಾಶ್ಚಾತ್ಯರ ಅಂಧಾನುಕರಣೆಯಿಂದ ಇಂದು ಹಿಂದೂಗಳು ಸಹಜವಾಗಿ ಮಾಡುತ್ತಿದ್ದಾರೆ. ಪರಾತ್ಪರ ಗುರು ಡಾಕ್ಟರರು ಬರೆದ ಗ್ರಂಥಗಳಲ್ಲಿ ‘ಸಾತ್ತ್ವಿಕ ಕೃತಿಗಳನ್ನು ಏಕೆ ಮಾಡಬೇಕು ಮತ್ತು ತಾಮಸಿಕ ಕೃತಿಗಳನ್ನು ಏಕೆ ಮಾಡಬಾರದು’, ಇವುಗಳ ಹಿಂದಿನ ಅಧ್ಯಾತ್ಮಶಾಸ್ತ್ರವನ್ನು ಹೇಳಿದ್ದರಿಂದ ಅದು ಕಲಿಯುಗದ ಮಾನವರಿಗೆ ಮನವರಿಕೆಯಾಗುತ್ತದೆ ಮತ್ತು ಅವರು ಬೇಗನೆ ಅಧ್ಯಾತ್ಮದ ಕಡೆಗೆ ಹೊರಳುತ್ತಾರೆ.

೪. ಸಮಾಜ, ರಾಷ್ಟ್ರ ಮತ್ತು ಧರ್ಮದ ಸದ್ಯದ ದುಃಸ್ಥಿತಿಯನ್ನು ಬದಲಾಯಿಸಲು ಆವಶ್ಯಕವಿರುವ ಗ್ರಂಥಗಳು !

ಸದ್ಯ ಕಲಿಯುಗಾಂತರ್ಗತ ಕಲಿಯುಗ ನಡೆಯುತ್ತಿದೆ. ಈ ಕಲಿಯುಗ ದಲ್ಲಿ ಧರ್ಮ ಮತ್ತು ಸಂಸ್ಕೃತಿಯ ಉಲ್ಲಂಘನೆ, ಧರ್ಮದ್ರೋಹ, ಭ್ರಷ್ಟಾಚಾರ ಮುಂತಾದ ಸಮಸ್ಯೆಗಳು ಮುಗಿಲು ಮುಟ್ಟಿವೆ. ಸರ್ವ ಸಾಮಾನ್ಯ ವ್ಯಕ್ತಿಗೆ ಸುಖಕರ ಜೀವನವನ್ನು ನಡೆಸುವುದೂ ಕಠಿಣವಾಗಿದೆ, ಹೀಗಿರುವಾಗ ಶಾಂತ ಮನಸ್ಸಿನಿಂದ ಸಾಧನೆಯನ್ನು ಮಾಡುವುದಂತೂ ದೂರದ ಮಾತಾಯಿತು ! ಸಮಾಜ, ರಾಷ್ಟ್ರ ಮತ್ತು ಧರ್ಮದ ಈ ದುಃಸ್ಥಿತಿಯನ್ನು ಬದಲಾಯಿಸಲು ನ್ಯಾಯಸಮ್ಮತ ಮಾರ್ಗದಿಂದ ‘ಹಿಂದೂ ರಾಷ್ಟ್ರವನ್ನು (ಸನಾತನ ಧರ್ಮ ರಾಜ್ಯ, ಈಶ್ವರೀ ರಾಜ್ಯ)’ ಸ್ಥಾಪಿಸುವುದೇ ಏಕೈಕ ಮಾರ್ಗವಾಗಿದೆ. ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಮಾಡಲು ಪ್ರಯತ್ನಿಸುವುದು ಕಾಲಾನುಸಾರ ಸಮಷ್ಟಿ ಸಾಧನೆಯೇ ಆಗಿದೆ. ಈ ಸಂದರ್ಭದಲ್ಲಿ ಸಮಾಜಕ್ಕೆ ಮಾರ್ಗದರ್ಶನ ದೊರಕಿ ಅದು ಕೃತಿಶೀಲವಾಗಬೇಕೆಂದು ಗ್ರಂಥಗಳನ್ನು ಬರೆಯುವ ಪರಾತ್ಪರ ಗುರು ಡಾಕ್ಟರರು ಏಕೈಕರಾಗಿದ್ದಾರೆ !

೫. ಇತರ ಸಂಪ್ರದಾಯಗಳು ಅಥವಾ ಸಂಸ್ಥೆಗಳ ಸಂತರ ಗ್ರಂಥಗಳು !

ಸಾಮಾನ್ಯವಾಗಿ ಬಹಳಷ್ಟು ಸಂಪ್ರದಾಯ ಅಥವಾ ಸಂಸ್ಥೆಗಳ ಸಂತರು ತಮ್ಮ ಸಾಧನಾಮಾರ್ಗ, ಬೋಧನೆ ಇತ್ಯಾದಿಗಳಿಗೆ ಸಂಬಂಧಿಸಿದ ಗ್ರಂಥಗಳನ್ನೇ ಪ್ರಕಟಿಸುವುದು ಕಂಡುಬರುತ್ತದೆ. ಪರಾತ್ಪರ ಗುರು ಡಾಕ್ಟರರು ತಮ್ಮ ಗ್ರಂಥಕಾರ್ಯಕ್ಕೆ ಇಂತಹ ಚೌಕಟ್ಟನ್ನು ಹಾಕಿಲ್ಲ. ಅವರು ಇತರ ಸಂಪ್ರದಾಯ ಅಥವಾ ಸಂಸ್ಥೆಗಳ ಸಂತರು ಮಾಡಿದ ವೈಶಿಷ್ಟ್ಯಪೂರ್ಣ ಸಾಧನೆ, ಕಾರ್ಯ ಅಥವಾ ಅವರ ಬೋಧನೆಯನ್ನು ಸಮಾಜಕ್ಕೆ ತಿಳಿಸಲು ಸಹ ಗ್ರಂಥಗಳನ್ನು ಸಂಕಲನ ಮಾಡುತ್ತಾರೆ. ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ವಿವಿಧ ನಾಮಜಪಾದಿ ಆಧ್ಯಾತ್ಮಿಕ ಉಪಾಯಪದ್ಧತಿಗಳನ್ನು ಕಲಿಸುವ ಶ್ರೀ ಮಲಂಗಶಾಹಬಾಬಾ, ಸಂಖ್ಯಾಶಾಸ್ತ್ರದ ದೊಡ್ಡ ಅಧಿಕಾರಿಗಳಾದ ಪ.ಪೂ. ಭಾವೂ ಮಸೂರಕರ, ಸಿದ್ಧಿಗಳ ಅದ್ಭುತ ಸಾಮರ್ಥ್ಯವಿರುವ ಪ.ಪೂ. ಶಾಮರಾವ್ ಮಹಾರಾಜರು, ಕಲಿಯಗದಲ್ಲಿನ ದಾರ್ಶನಿಕ ಋಷಿ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರು ಇಂತಹ ಕೆಲವು ಸಂತರ ಗ್ರಂಥಗಳನ್ನು ಪರಾತ್ಪರ ಗುರು ಡಾಕ್ಟರರು ಸಂಕಲನ ಮಾಡಿದ್ದಾರೆ.

೬. ಇತರ ಸಂಪ್ರದಾಯ ಅಥವಾ ಸಂಸ್ಥೆಗಳ ಸಂತರಿಗೆ ‘ನಮ್ಮ ಗ್ರಂಥಗಳನ್ನು ಪರಾತ್ಪರ ಗುರು ಡಾಕ್ಟರರು ಪ್ರಕಟಿಸುವರು’, ಎಂದು ದೃಢ ಶ್ರದ್ಧೆ ಇರುವುದು !

ಒಂದು ಬಾರಿ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಪೂ. (ಹ.ಭ.ಪ) ಬಾಂದ್ರೆ ಮಹಾರಾಜರ ಭೇಟಿಯಾಯಿತು. ಆಗ ಅವರು ನನಗೆ, ‘ಕಳೆದ ಕೆಲವು ವರ್ಷಗಳಿಂದ ನನಗೆ ಈಶ್ವರೀ ಶಕ್ತಿಯು ಅಧ್ಯಾತ್ಮಕ್ಕೆ ಸಂಬಂಧಿಸಿದ ಸೂಕ್ಷ್ಮದಲ್ಲಿನ ಜ್ಞಾನವನ್ನು ನೀಡುತ್ತಿತ್ತು ಮತ್ತು ಅದೆಲ್ಲವನ್ನು ನಾನು ಪುಸ್ತಕಗಳಲ್ಲಿ ಬರೆದಿಡುತ್ತಿದ್ದೆನು. ಇಂತಹ ೨೬ ದೊಡ್ಡ ಪುಸ್ತಕಗಳು ಜ್ಞಾನದಿಂದ ತುಂಬಿವೆ. ನಾನು ಬಹಳ ವಿದ್ಯಾಭ್ಯಾಸ ಮಾಡಿಲ್ಲ. ನಾನು ನನಗೆ ದೊರಕಿದ ಜ್ಞಾನವನ್ನು ಹರುಕು-ಮುರುಕು ಭಾಷೆಯಲ್ಲಿ ಬರೆದಿಟ್ಟಿದ್ದೇನೆ ಮತ್ತು ಆ ಬರವಣಿಗೆಯ ಭಾಷೆ-ವ್ಯಾಕರಣವೂ ಶುದ್ಧವಾಗಿಲ್ಲ. ಹೀಗಿರುವಾಗಲೂ ಪರಾತ್ಪರ ಗುರು ಡಾಕ್ಟರರು ನನಗೆ, “ನಾವು ಆ ಎಲ್ಲ ಜ್ಞಾನವನ್ನು ಸರಿಯಾಗಿ ಸಂಕಲನ ಮಾಡೋಣ ಮತ್ತು ನಿಮ್ಮ ಹೆಸರಿನಲ್ಲಿ ಗ್ರಂಥಗಳನ್ನು ಪ್ರಕಟಿಸೋಣ. ನೀವು ನಿಮ್ಮ ಎಲ್ಲ ಪುಸ್ತಕಗಳನ್ನು ನನಗೆ ಕಳುಹಿಸಿರಿ, ಎಂದು ಹೇಳಿದರು. ಆಗ ನನಗೆ, ‘ಪರಾತ್ಪರ ಗುರು ಡಾಕ್ಟರರು ಈ ಪುಸ್ತಕಗಳನ್ನು ಸ್ವೀಕರಿಸದಿದ್ದರೆ, ಈ ಅಮೂಲ್ಯ ಈಶ್ವರೀ ಜ್ಞಾನವು ಮಣ್ಣಿಗೆ ಸಮನಾಗುತ್ತಿತ್ತು; ಏಕೆಂದರೆ ಈ ಜ್ಞಾನವನ್ನು ಗ್ರಂಥಗಳ ಮಾಧ್ಯಮದಿಂದ ಪ್ರಕಟಿಸುವಷ್ಟು ಆರ್ಥಿಕ ಪರಿಸ್ಥಿತಿ ನನ್ನಲ್ಲಿಲ್ಲ. ಸಮಾಜದಲ್ಲಿನ ಜನರಿಗೆ ಈ ಜ್ಞಾನದ ಯಾವುದೇ ಮೌಲ್ಯವು ತಿಳಿದಿಲ್ಲ. ಇದರ ಮೌಲ್ಯವು ಕೇವಲ ಪರಾತ್ಪರ ಗುರುದೇವರಿಗೆ ಮಾತ್ರ ಅರಿವಾಯಿತು. ‘ಪರಾತ್ಪರ ಗುರು ಡಾಕ್ಟರರು ಈ ಗ್ರಂಥವನ್ನು ವ್ಯವಸ್ಥಿತವಾಗಿಯೇ ಪೂರ್ಣಗೊಳಿಸುವರು’, ಎಂದು ನನಗೆ ಖಾತ್ರಿ ಇದೆ. ಆದುದರಿಂದ ಈಗ ನಾನು ನಿಶ್ಚಿಂತನಾಗಿದ್ದೇನೆ”, ಎಂದು ಹೇಳಿದರು.

– (ಪೂ.) ಶ್ರೀ. ಸಂದೀಪ ಆಳಶಿ (೨೪.೪.೨೦೨೧)

ವಾಚಕರಿಗೆ ಸವಿನಯ ವಿನಂತಿ !

‘ಕೊರೊನಾ’ ಮಹಾಮಾರಿಯ ಹಿನ್ನೆಲೆಯಲ್ಲಿ ಕಳೆದ ವರ್ಷ ಸನಾತನದ ಗ್ರಂಥಗಳು ಎಂದಿನಂತೆ ಮಾರಾಟಕೇಂದ್ರಗಳಿಂದ ವಿತರಣೆಯಾಗಲಿಲ್ಲ. ಹೀಗಿದ್ದರೂ ‘sanatanshop.com’, ನಿಯತಕಾಲಿಕೆ ‘ಸನಾತನ ಪ್ರಭಾತ’ ಮುಂತಾದವುಗಳ ಮಾಧ್ಯಮಗಳಿಂದ ಮೊದಲಿನ ತುಲನೆಯಲ್ಲಿ ಕಳೆದ ವರ್ಷ ಸನಾತನದ ಗ್ರಂಥಗಳು ಬಹಳ ಹೆಚ್ಚು ಮಾರಾಟವಾದವು ! ಇದರಿಂದ ಸನಾತನದ ಮೇಲಿರುವ ಈಶ್ವರನ ಕೃಪೆ ಮತ್ತು ಸಮಾಜದ ಮನಸ್ಸಿನಲ್ಲಿ ಸನಾತನದ ಗ್ರಂಥಗಳ ಬಗ್ಗೆ ಇರುವ ಮಹತ್ವವು ಗಮನಕ್ಕೆ ಬರುತ್ತದೆ. ಮುಂಬರುವ ಕಾಲವು ‘ಕೊರೊನಾ’ಗಿಂತಲೂ ಮಹಾಭಯಂಕರ ಸಂಕಟಗಳ ಕಾಲವಾಗಿರಲಿದೆ. ಈ ಸಮಯದಲ್ಲಿ ಕೇವಲ ‘ಧರ್ಮಾಚರಣೆ ಮತ್ತು ಸಾಧನೆ’, ಇವುಗಳೇ ಮನುಷ್ಯನಿಗೆ ತಾರಣಹಾರವಾಗುವವು. ಕಾಲಾನುಸಾರ ಯೋಗ್ಯ ಧರ್ಮಾಚರಣೆ ಮತ್ತು ಸಾಧನೆಯನ್ನು ಕೇವಲ ಸನಾತನದ ಗ್ರಂಥಗಳೇ ಕಲಿಸುತ್ತವೆ. ಆದುದರಿಂದ ‘ಎಲ್ಲರೂ ಸನಾತನದ ಗ್ರಂಥಗಳ ಲಾಭವನ್ನು ಪಡೆಯಬೇಕು, ಹಾಗೆಯೇ ಅವುಗಳ ಹೆಚ್ಚೆಚ್ಚು ಪ್ರಸಾರವಾಗಲು ಪ್ರಯತ್ನಿಸಬೇಕು’, ಎಂದು ಸವಿನಯ ವಿನಂತಿ ! ಗ್ರಂಥಪ್ರಸಾರದ ಮೂಲಕ ಸಮಷ್ಟಿ ಸಾಧನೆಯನ್ನು ಮಾಡಿ ಈಶ್ವರನ ಕೃಪೆಯ ಲಾಭವನ್ನೂ ಪಡೆಯಿರಿ !’

– (ಪೂ.) ಶ್ರೀ. ಸಂದೀಪ ಆಳಶಿ (೨೪.೪.೨೦೨೧)