ಆಪತ್ಕಾಲವು ಅಶಾಶ್ವತ, ಆದರೆ ‘ಪರಾತ್ಪರ ಗುರು ಡಾ. ಆಠವಲೆ,  ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ರೂಪದಲ್ಲಿ ಕಾರ್ಯನಿರತವಾಗಿರುವ ಗುರುತತ್ತ್ವವೇ ಶಾಶ್ವತ !

ಸದ್ಯ ಇಡೀ ವಿಶ್ವವೇ ಆಪತ್ಕಾಲವನ್ನು ಅನುಭವಿಸುತ್ತಿದೆ. ಮನುಷ್ಯನು ಪೃಥ್ವಿ ಮತ್ತು ನಿಸರ್ಗವನ್ನು ನಾಶಗೊಳಿಸಿದನು; ಆದರೆ ಆಗ ಈಶ್ವರನು ಸಾಕ್ಷೀಭಾವದಿಂದ ನೋಡುತ್ತಿದ್ದನು. ಈಗ ಮನುಷ್ಯನು ಮಾಡಿರುವ ವಿನಾಶವು ಎಷ್ಟಾಗಿದೆಯೆಂದರೆ, ಈಶ್ವರನು ತನ್ನ ಸಾಕ್ಷೀಭಾವವನ್ನು ಬಿಟ್ಟು ಮನುಷ್ಯನಿಗೆ ದಂಡವನ್ನು ವಿಧಿಸುತ್ತಿದ್ದಾನೆ. ‘ಧರ್ಮಾಚರಣೆ ಮಾಡಿದರೆ ಸಮಷ್ಟಿ ದಂಡದ ಪ್ರಮಾಣವು ಕಡಿಮೆಯಾಗುತ್ತದೆ. ಇದೆಲ್ಲವೂ ಸಮಷ್ಟಿಯ ದೃಷ್ಟಿಯಲ್ಲಿ ಆಯಿತು; ಆದರೆ ಸನಾತನದ ಸಾಧಕರು ‘ಗುರುಕೃಪಾಯೋಗಾನುಸಾರ ಸಾಧನೆ ಮಾಡುತ್ತಿದ್ದಾರೆ ಹಾಗೂ ಪರಾತ್ಪರ ಗುರು ಡಾ. ಆಠವಲೆಯವರು ತೋರಿಸಿರುವ ಮಾರ್ಗದಲ್ಲಿ ನಡೆಯುತ್ತಿದ್ದಾರೆ, ಅವರಿಗೆ ಆಪತ್ಕಾಲವು ಹೇಗಿರುವುದು ಮತ್ತು ಈ ಆಪತ್ಕಾಲದಲ್ಲಿ ಸಾಧಕರಿಗೆ ಸನಾತನದ ಮೂರು ಗುರುಗಳು, ಅಂದರೆ ಪರಾತ್ಪರ ಗುರು ಡಾ. ಆಠವಲೆ,  ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಹೇಗೆ ಕೃಪೆ ಮಾಡುತ್ತಿದ್ದಾರೆ, ಎಂಬುದನ್ನು ಈಗ ನಾವು ನೋಡೋಣ….

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಶಾಶ್ವತವಾಗಿರುವ ‘ಗುರುತತ್ತ್ವದ ಚರಣವನ್ನು ಹಿಡಿಯೋಣ ಮತ್ತು ‘ಆ ಚರಣವನ್ನು ಎಂದಿಗೂ ಬಿಡುವುದಿಲ್ಲ, ಎಂದು ದೃಢನಿಶ್ಚಯ ಮಾಡೋಣ !

ಸಾಧಕರೆ, ಆಪತ್ಕಾಲದ ಮೊದಲು ಸಹ ಗುರುಗಳು ನಮ್ಮ ಜೊತೆಗಿದ್ದರು, ಆಪತ್ಕಾಲದಲ್ಲಿಯೂ ನಮ್ಮ ಜೊತೆಗೆ ಇರುವರು ಹಾಗೂ ಆಪತ್ಕಾಲದ ನಂತರವೂ ನಮ್ಮ ಜೊತೆಗೆ ಇರಲಿದ್ದಾರೆ. ಈ ಮೇಲಿನ ಮೂರು ಕಾಲಖಂಡವನ್ನು ಅವಲೋಕಿಸಿದರೆ ಆಪತ್ಕಾಲವು ಅಶಾಶ್ವತವಾಗಿದೆ ಹಾಗೂ ‘ಗುರುತತ್ತ್ವ ಮಾತ್ರ ಶಾಶ್ವತವಾಗಿದೆ ಎಂಬುದರ ಅರಿವಾಗುತ್ತದೆ. ಆದ್ದರಿಂದ ನಾವು ಶಾಶ್ವತವಾಗಿರುವ ಗುರುತತ್ತ್ವದ ಚರಣವನ್ನು ಹಿಡಿಯೋಣ ಹಾಗೂ ‘ಪರಿಸ್ಥಿತಿ ಹೇಗೂ ಇರಲಿ ಆ ಚರಣವನ್ನು ಬಿಡುವುದಿಲ್ಲ, ಎಂದು ನಿರ್ಧರಿಸೋಣ.

ಶಾಶ್ವತ ಗುರುತತ್ತ್ವವು ಮೋಕ್ಷದವರೆಗೆ ಸಾಧಕರನ್ನು ಜೋಪಾನ ಮಾಡಲಿದೆ

ಶ್ರೀ. ವಿನಾಯಕ ಶಾನಭಾಗ

ಶ್ರೀ. ವಿನಾಯಕ ಶಾನಭಾಗಆಪತ್ಕಾಲದಲ್ಲಿ ಜೀವವನ್ನು ರಕ್ಷಿಸಿಕೊಳ್ಳುವುದು ಮಹತ್ವದ್ದಾಗಿದೆ. ೨೦೨೦ ರಿಂದ ೨೦೨೫ ಈ ೫ ವರ್ಷಗಳ ಅವಧಿಯಲ್ಲಿ ತೀವ್ರ ಆಪತ್ಕಾಲವಿರುವುದು. ಈ ಕಾಲದಲ್ಲಿ ಎಲ್ಲಾ ಸಾಮಾನ್ಯ ಜನರಿಗೆ ಆಗುವ ಹಾಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳು ಕೆಲವು ಸಾಧಕರಿಗೆ ಆಗಬಹುದು. ಪ್ರಾರಬ್ಧನುಸಾರ ಕೆಲವು ಸಾಧಕರು ಕಾಯಿಲೆಯಿಂದ, ನೈಸರ್ಗಿಕ ಆಪತ್ತಿನಿಂದ ಅಥವಾ ಯುದ್ಧದಿಂದ ಮರಣ ಹೊಂದಬಹುದು. ಇವೆಲ್ಲ ಪರಿಸ್ಥಿತಿಯಲ್ಲಿ ಮಹತ್ವದ ವಿಷಯವೆಂದರೆ, ‘ಗುರುತತ್ತ್ವವು ಸನಾತನದ ಮೂರು ಗುರುಗಳ ರೂಪದಲ್ಲಿ, ಅಂದರೆ ಪರಾತ್ಪರ ಗುರು ಡಾ. ಆಠವಲೆ,  ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ರೂಪದಲ್ಲಿ ಸಾಧಕರ ಬೆಂಬಲಕ್ಕಿರಲಿದೆ. ‘ಗುರು ಶಿಷ್ಯನ ಕೇವಲ ಒಂದು ಜನ್ಮವನ್ನಲ್ಲ, ಮರಣದ ನಂತರದ ಜೀವನ ಮತ್ತು ಮುಂದಿನ ಎಲ್ಲ ಜನ್ಮಗಳಲ್ಲಿಯೂ ಯೋಗಕ್ಷೇಮವನ್ನು ವಹಿಸಿಕೊಳ್ಳುತ್ತಾರೆ. ಶಿಷ್ಯನನ್ನು ‘ಮೋಕ್ಷದ ವರೆಗೆ ಒಯ್ಯುವ ತನಕ ‘ಗುರು ಅವನ ಹಿಂದೆಯೇ ಇರುವುದರಿಂದ ಗುರುಗಳು ಮಾತ್ರ ಸರ್ವತೋಮುಖವಾಗಿ ಸಾಧಕರ ಯೋಗಕ್ಷೇಮ ವಹಿಸುವರು. – ಶ್ರೀ. ವಿನಾಯಕ ಶಾನಭಾಗ.

ಆಪತ್ಕಾಲ ಮತ್ತು ಸನಾತನದ ಮೂವರು ಗುರುಗಳ ಮಹಿಮೆ !

೧. ಸಾಧಕರ ಜ್ವರವನ್ನು ಮೂರೂ ಗುರುಗಳು ತಮ್ಮ ಮೇಲೆ ತೆಗೆದುಕೊಳ್ಳುವುದು : ಈ ಅವಧಿಯಲ್ಲಿ ಯಾವ್ಯಾವ ಸಾಧಕರಿಗೆ ಜ್ವರ ಬರುತ್ತದೆಯೆಂಬ ಸುದ್ದಿಯು ಈ ಮೂರೂ ಗುರುಗಳಿಗೆ ತಿಳಿದ ತಕ್ಷಣ ಅದರ ನಂತರದ ಕೆಲವು ದಿನಗಳವರೆಗೆ ಈ ಮೂರೂ ಗುರುಗಳ ಶರೀರಗಳು ಜ್ವರ ಬಂದಿರುವ ಹಾಗೆ ಬಿಸಿಯಾಗಿರುವುದನ್ನು ಅನುಭವಿಸಿದರು. ನಿಜವಾಗಿಯೂ ಅವರಿಗೆ ಜ್ವರವಿರಲಿಲ್ಲ; ಆದರೆ ಅವರ ಶರೀರವು ತುಂಬಾ ಬಿಸಿಯಾಗಿರುತ್ತಿತ್ತು. ‘ಈ ಸಮಯದಲ್ಲಿ ಮೂರೂ ಗುರುಗಳು ಅನೇಕ ಬಾರಿ ಸಾಧಕರ ಜ್ವರವನ್ನು ತಮ್ಮ ಶರೀರದ ಮೇಲೆ ತೆಗೆದುಕೊಂಡಿದ್ದಾರೆ, ಎಂದು ನನಗನಿಸಿತು.

೨. ಸಾಧಕರ ವಿವಿಧ ಕಾಯಿಲೆಗಳು ಹೆಚ್ಚಾದಾಗ ಮೂರೂ ಗುರುಗಳಿಗೂ ಉಷ್ಣತೆಯ ವಿವಿಧ ತೊಂದರೆಗಳಾಗುವುದು : ಈ ಅವಧಿಯಲ್ಲಿ ಅನೇಕ ಸಾಧಕರ ಮಧುಮೇಹ ಮತ್ತು ರಕ್ತದೊತ್ತಡದ ಕಾಯಿಲೆ ಹೆಚ್ಚಾಯಿತು. ನನ್ನ ನಿರೀಕ್ಷಣೆಗನುಸಾರ ಅದೇ ವೇಳೆ ಮೂರೂ ಗುರುಗಳಿಗೆ ಉಷ್ಣತೆಯ ತೊಂದರೆಯಾಗುವುದು, ಅವರ ರಕ್ತದೊತ್ತಡ ಹೆಚ್ಚಾಗುವುದು, ಬಾಯಿ ಒಣಗುವುದು ಇತ್ಯಾದಿ ತೊಂದರೆಗಳು ಅನಿರೀಕ್ಷಿತವಾಗಿ ಆರಂಭವಾಗುತ್ತಿತ್ತು. ಮೂರೂ ಗುರುಗಳಿಗೆ ಔಷಧೋಪಚಾರ ಮಾಡಿಯೂ ಹೆಚ್ಚಿನ ಲಾಭವಾಗುತ್ತಿರಲಿಲ್ಲ; ಆದರೆ ಕೆಲವೇ ದಿನಗಳ ನಂತರ ಎಲ್ಲ ಲಕ್ಷಣಗಳು ತನ್ನಿಂತಾನೆ ಕಡಿಮೆಯಾಗುತ್ತಿದ್ದವು.

೩. ಸಾಧಕರ ಆರೋಗ್ಯಕ್ಕಾಗಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಅನೇಕ ಹೋಮ-ಹವನಗಳನ್ನು ಮಾಡುತ್ತಿದ್ದಾರೆ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಅನೇಕ ಗಂಟೆ ಪ್ರವಾಸ ಮಾಡಿ ದೇವರಿಗೆ ಹರಕೆಯನ್ನು ಹೇಳಲು ದೇವಸ್ಥಾನಕ್ಕೆ ಹೋಗುವುದು : ಈ ಅವಧಿಯಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಅನೇಕ ಹೋಮ-ಹವನಗಳನ್ನು ಮಾಡಿದರು. ಇವೆಲ್ಲ ಹೋಮ- ಹವನಗಳಲ್ಲಿ ಸಾಧಕರ ಆರೋಗ್ಯಕ್ಕಾಗಿ ಸಂಕಲ್ಪವನ್ನು ಮಾಡಲಾಯಿತು. ಕೆಲವೊಮ್ಮೆ ಒಂದೇ ಸ್ಥಳದಲ್ಲಿ ಅನೇಕ ಗಂಟೆಗಳ ಕಾಲ ಕುಳಿತುಕೊಂಡು ಇಂತಹ ಯಾಗಗಳನ್ನು ಮಾಡಲಾಯಿತು. ಇದೇ ವೇಳೆಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸಾಧಕರ ಆರೋಗ್ಯಕ್ಕಾಗಿ ಹಗಲಿರುಳು ಕಷ್ಟಪಟ್ಟರು. ಅವರು ಅನೇಕ ಗಂಟೆ ಕಷ್ಟಪಟ್ಟು ಪ್ರಯಾಣ ಮಾಡಿ ದೇವಸ್ಥಾನಗಳಿಗೆ ಹೋಗಿ ಅಲ್ಲಿ ದೇವರಿಗೆ ಹರಕೆ ಹೇಳಿದರು. ಇವೆಲ್ಲವನ್ನೂ ಮಾಡುವಾಗ ಅವರು ಅನೇಕ ಶಾರೀರಿಕ ತೊಂದರೆಗಳನ್ನು ಸಹಿಸಿಕೊಳ್ಳಬೇಕಾಯಿತು.

೪. ಸಾಧಕರಿಗೆ ತೊಂದರೆಯಾಗುವ ಮೊದಲೇ ಗುರುಗಳು ಅವರನ್ನು ಜಾಗರೂಕಗೊಳಿಸುವುದು : ಕೆಲವೊಮ್ಮೆ ಒಬ್ಬರೇ ಸಾಧಕರಿಗೆ ತೊಂದರೆಯಾಗುವ ಮೊದಲೇ ಮೂರೂ ಗುರುಗಳು ಅವರನ್ನು ಜಾಗರೂಕಗೊಳಿಸುತ್ತಾರೆ. ಇಂತಹ ಸಮಯದಲ್ಲಿ ಅವರ ಮನಸ್ಸಿನಲ್ಲಿ ಆ ಸಾಧಕರ ನೆನಪಾಗಿ ಅವರು ಆ ಸಾಧಕನಿಗೆ ಇಂತಹ ಸ್ಥಳದಲ್ಲಿ ಸೇವೆಗೆ ಹೋಗುವಾಗ ಜಾಗರೂಕ ಇರಲು ಮತ್ತು ಎಲ್ಲ ನಾಮಜಪಾದಿ ಉಪಾಯ ಮಾಡಲು ಸೂಚಿಸಿದಂತಹ ಅನೇಕ ಪ್ರಸಂಗಗಳು ನೋಡಲು ಸಿಕ್ಕಿದವು.

೫. ಆಪತ್ಕಾಲದಲ್ಲಿ ಸಾಧಕರು ಗುರುಗಳಲ್ಲಿ ಮೊರೆಯಿಡುತ್ತಿರುವಾಗ ಮೂರೂ ಗುರುಗಳು ಸಾಧಕರದ್ದೇ ವಿಚಾರ ಮಾಡುತ್ತಿರುವುದು : ಈ ಮೇಲಿನ ಎಲ್ಲ ವಿಷಯವನ್ನು ಇಲ್ಲಿ ಬರೆಯುವ ಒಂದೇ ಒಂದು ಕಾರಣವೆಂದರೆ, ಈ ಆಪತ್ಕಾಲದಲ್ಲಿ ನಾವು ಸನಾತನದ ಸಾಧಕರು ‘ಗುರುದೇವ ಗುರುದೇವ ‘ಗುರುದೇವ, ಎಂದು ಮೊರೆಯಿಡುತ್ತಿರುವಾಗ ಸನಾತನದ ಮೂರೂ ಗುರುಗಳು ‘ನನ್ನ ಸಾಧಕರು ‘ನನ್ನ ಸಾಧಕರು ‘ನನ್ನ ಸಾಧಕರು, ಎಂದು ಜಪ ಮಾಡುತ್ತಿದ್ದರು. (ಸಾಧಕರ ರಕ್ಷಣೆಗಾಗಿ ಏನು ಮಾಡಬೇಕು, ಎನ್ನುವ ವಿಷಯದ ಧ್ಯಾಸ ತಗಲಿತ್ತು.) ಇವೆಲ್ಲವನ್ನೂ ನೋಡಿ ಪ.ಪೂ. ಭಕ್ತರಾಜ ಮಹಾರಾಜರ ಭಜನೆಯಲ್ಲಿನ ‘ದೇವಾ ಹೆ ಪ್ರೇಮ ಕಸೆ, (ದೇವರೇ ಇದು ಎಂತಹ ಪ್ರೇಮ ನಿಮ್ಮದು) ಈ ಸಾಲಿನ ನೆನಪಾಗುತ್ತದೆ.


ಆಪತ್ಕಾಲ ಬರುವ ಮೊದಲೇ ಸಾಧಕರಿಗೆ ವಿವಿಧ ದೈವೀ ಉಪಾಯಗಳನ್ನು ಹೇಳಿ ಅವರನ್ನು ಆಪತ್ಕಾಲಕ್ಕಾಗಿ ಸನ್ನದ್ಧಗೊಳಿಸಿರುವ ದಾರ್ಶನಿಕ ಗುರು ಪರಾತ್ಪರ ಗುರು ಡಾ. ಆಠವಲೆ !

೧. ಪರಾತ್ಪರ ಗುರು ಡಾಕ್ಟರರ ಕೃಪೆಯಿಂದ ಸಾತ್ತ್ವಿಕ ಉತ್ಪಾದನೆಗಳ ಸುಗಂಧದ ಮೂಲಕ ಶ್ವಾಸನಳಿಕೆಯ ಶುದ್ಧಿಯಾಗುವುದು

೨೦೦೬ – ೨೦೦೭ ರಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಕೆಲವು ಸಾಧಕರಿಗೆ ‘ಊದುಬತ್ತಿ, ಸಾಬೂನು ಮತ್ತು ಅತ್ತರ ಇವುಗಳನ್ನು ಹೇಗೆ ತಯಾರಿಸಬಹುದು ?, ಎಂಬುದರ ಅಧ್ಯಯನ ಮಾಡಲು ಹೇಳಿದರು. ಗುರದೇವರ ಕೃಪೆಯಿಂದ ಕೆಲವೇ ತಿಂಗಳೊಳಗೆ ಈ ಪ್ರಕ್ರಿಯೆಯು ಪೂರ್ಣವಾಗಿ ಸನಾತದ ಸಾಧಕರಿಗೆ ‘ಸನಾತನ ಊದುಬತ್ತಿ, ‘ಸನಾತನ ಅತ್ತರು ಮತ್ತು ‘ಸನಾತನ ಸಾಬೂನು ಸಿಕ್ಕಿತು. ಅನಂತರ ‘ಸನಾತನ ಅಷ್ಟಗಂಧ ಮತ್ತು ‘ಸನಾತನ ಉಟಣೆ ಇವು ಕೂಡ ಬಂದವು. ಸಾಧಕರಿಗೆ ಈ ಎಲ್ಲ ಸಾತ್ತ್ವಿಕ ಉತ್ಪಾದನೆಗಳ ಮೂಲಕ ಅನೇಕ ವರ್ಷಗಳಿಂದ ಇದ್ದ ಶ್ವಾಸನಳಿಕೆಯಲ್ಲಿ ದೈವೀ ಚೈತನ್ಯವು ಸಿಕ್ಕಿತು. ಈ ಸುಗಂಧ ರೂಪದ ದೈವೀ ಚೈತನ್ಯದಿಂದ ಸಾಧಕರ ಶ್ವಾಸನಳಿಕೆಯ ಶುದ್ಧೀಕರಣವಾಯಿತು.

೨. ಪರಾತ್ಪರ ಗುರು ಡಾ. ಆಠವಲೆಯವರು ಆಪತ್ಕಾಲದ ಮೊದಲೇ ಸಾಧಕರ ಶ್ವಾಸನಳಿಕೆಯಲ್ಲಿ ವೈಕುಂಠದಲ್ಲಿನ ದೈವೀ ಚೈತನ್ಯವನ್ನು ಸಂಗ್ರಹಿಸುವುದು

೨ ಅ ೧. ಪರಾತ್ಪರ ಗುರು ಡಾ. ಆಠವಲೆಯವರು ೨೦೧೦ ರಿಂದ ಭೀಮಸೇನಿ ಕರ್ಪೂರದಿಂದ ದೀರ್ಘ ಸುಗಂಧವನ್ನು ತೆಗೆದುಕೊಳ್ಳುವ ಉಪಾಯವನ್ನು ಹೇಳಿದ್ದಾರೆ : ಸದ್ಯ ಕೊರೊನಾ ವೈರಾಣು ಮನುಷ್ಯನನ್ನು ತಲ್ಲಣಗೊಳಿಸುತ್ತಿದೆ. ಈ ವೈರಾಣು ಶ್ವಾಸನಳಿಕೆಯ ಮೂಲಕ ಶರೀರದೊಳಗೆ ಹೋಗುತ್ತದೆ. ೨೦೧೦ ರಿಂದಲೇ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಭೀಮಸೇನಿ ಕರ್ಪೂರದ ಸುಗಂಧವನ್ನು ತೆಗೆದುಕೊಳ್ಳಲು ಹೇಳಿದ್ದರು ಹಾಗೂ ಸಾಧಕರು ಕರ್ಪೂರದ ಉಪಾಯ ಮಾಡಲು ಆರಂಭಿಸಿದ್ದರು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ೨೦೧೦ ರಲ್ಲಿ ಒಮ್ಮೆ ಶ್ರೀವಿಷ್ಣುವಿನ ನೀಲಿ ಬಣ್ಣದ ಕೈಗಳ ದರ್ಶನವಾಗಿತ್ತು. ಆಗ ಶ್ರೀವಿಷ್ಣುವಿನ ಕೈಯಲ್ಲಿ ಕರ್ಪೂರವಿತ್ತು. ಶ್ರೀವಿಷ್ಣು ಅವರಿಗೆ ‘ಭೀಮಸೇನಿ ಕರ್ಪೂರದಿಂದ ಸುಗಂಧವನ್ನು ಹೇಗೆ ತೆಗೆದುಕೊಳ್ಳುವುದು ?, ಎಂಬುದನ್ನು ತೋರಿಸಿದರು. ಅವರು ತಕ್ಷಣ ಇದೆಲ್ಲವನ್ನೂ ಪರಾತ್ಪರ ಗುರು ಡಾ. ಆಠವಲೆಯವರಿಗೆ ಹೇಳಿದರು. ಗುರುದೇವರು ಈ ಚೈತನ್ಯದಾಯಕ ಉಪಾಯವನ್ನು ‘ದೈನಿಕ ಸನಾತನ ಪ್ರಭಾತದಲ್ಲಿ ಮುದ್ರಿಸಲು ಹೇಳಿದರು ಹಾಗೂ ಈ ರೀತಿಯಲ್ಲಿ ಕರ್ಪೂರದ ಉಪಾಯವು ಆರಂಭವಾಯಿತು.

೨ ಅ ೨. ಕರ್ಪೂರದ ಉಪಾಯ ಮಾಡುವುದರಿಂದ ಸಾಧಕರಿಗೆ ‘ಹರಿ-ಹರ ಹೀಗೆ ಎರಡೂ ತತ್ತ್ವಗಳ ಲಾಭವಾಗುವುದು : ಭೀಮಸೇನಿ ಕರ್ಪೂರವು ಇಂಡೋನೇಶಿಯಾ ದೇಶದ ಸುಮಾತ್ರಾ ಮತ್ತು ಬೋರ್ನಿಯೋ  (Borneo) ಬೆಟ್ಟದ ಅರಣ್ಯಗಳಲ್ಲಿ ಗಜಗಾತ್ರ-ಕರ್ಪೂರದ ವೃಕ್ಷಗಳಲ್ಲಿ ಸಿಗುತ್ತದೆ. ಶಿವತತ್ತ್ವ ಇರುವ ‘ಚಂದ್ರಕಿರೀಟ ಎಂಬ ಹೆಸರಿನ ಒಂದು ಕೀಟವು ಕರ್ಪೂರದ ಮರದ ಒಳಗೆ ಹೋಗಿ ಅದನ್ನು ಕೊರೆಯುತ್ತದೆ. ಆಗ ಕರ್ಪೂರವು ತಯಾರಾಗುತ್ತದೆ. ಈ ರೀತಿಯಲ್ಲಿ ಶಿವತತ್ತ್ವ ಇರುವ ಕರ್ಪೂರದ ಉಪಾಯವನ್ನು ಭಗವಾನ ಶ್ರೀವಿಷ್ಣುವೇ ಸನಾತನ ಸಂಸ್ಥೆಗೆ ಹೇಳಿದ್ದಾರೆ; ಆದ್ದರಿಂದ ಕರ್ಪೂರದ ಸುಗಂಧವನ್ನು ತೆಗೆದುಕೊಂಡರೆ ಸಾಧಕರಿಗೆ ‘ಹರಿ-ಹರ ಈ ಎರಡು ತತ್ತ್ವಗಳ ಲಾಭವಾಗುತ್ತದೆ.

೩. ಕೊರೋನಾ ವೈರಾಣು ರೂಪೀ ಅನಿಷ್ಟ ಶಕ್ತಿಯಿಂದ ಸಪ್ತಚಕ್ರಗಳಲ್ಲಿ ನಿರ್ಮಾಣವಾಗಿರುವ ಆವರಣವು ದೂರವಾಗಲು ಗುರುದೇವರು ನಾಮಜಪಾದಿ ಉಪಾಯ ಹೇಳುವುದು

‘ಅಧರ್ಮ ಎವಮೂಲಂ ಸರ್ವ ರೋಗಾಣಾಮ್ | ಅಂದರೆ  ಅಧರ್ಮವೇ ಎಲ್ಲ ರೋಗಗಳಿಗೆ (ಆಧಿಭೌತಿಕ ಅಂದರೆ ಶಾರೀರಿಕ, ಆಧಿದೈವಿಕ ಅಂದರೆ ದೈವೀ ಶಕ್ತಿಯಿಂದಾದ, ಅಂದರೆ ಆಧ್ಯಾತ್ಮಿಕ ಮತ್ತು ಮಾನಸಿಕ) ಮೂಲವಾಗಿದೆ, ಎಂದು ಧರ್ಮಶಾಸ್ತ್ರವು ಹೇಳುತ್ತದೆ. ನಮ್ಮ ಋಷಿಮುನಿಗಳು ‘ಎಲ್ಲ ರೋಗದಲ್ಲಿ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಪರಿಣಾಮವಿರುತ್ತದೆ, ಎಂಬುದನ್ನು ಮೊದಲೇ ಕಂಡು ಹಿಡಿದಿದ್ದಾರೆ. ಹೇಗೆ ಇತರ ರೋಗಗಳಿಂದ ಶರೀರದ ಸಪ್ತಚಕ್ರಗಳಲ್ಲಿ ಕಪ್ಪು ಆವರಣ ಬರುತ್ತದೆಯೋ, ಅದೇ ರೀತಿ ಕೊರೊನಾ ವೈರಾಣು ರೂಪದ ಅನಿಷ್ಟಶಕ್ತಿಯಿಂದಲೂ ಶರೀರದ ಸಪ್ತಚಕ್ರಗಳಲ್ಲಿ ದಪ್ಪವಾದ ಕಪ್ಪು ಆವರಣವು ಬರುತ್ತದೆ, ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಂದ ಕಳೆದ ಅನೇಕ ವರ್ಷಗಳಿಂದ ಸಪ್ತಚಕ್ರಗಳಿಗೆ ಸಂಬಂಧಿಸಿದ ನಾಮಜಪಾದಿ ಉಪಾಯಗಳನ್ನು ಮಾಡಿಸಿಕೊಂಡಿದ್ದಾರೆ. ಅದರಲ್ಲಿ ಕೈಗಳಿಂದ ಸಪ್ತಚಕ್ರಗಳಿಗೆ ಬಂದ ಆವರಣವನ್ನು ತೆಗೆಯುವುದು, ಸಪ್ತಚಕ್ರಗಳಿಗೆ ಕೈಗಳಿಂದ ನ್ಯಾಸ ಮತ್ತು ಮುದ್ರೆಗಳನ್ನು ಮಾಡುವುದು, ಸಪ್ತಚಕ್ರ ಗಳಿಗೆ ದೇವತೆಗಳ ನಾಮಪಟ್ಟಿ ಅಥವಾ ಚಿತ್ರಗಳನ್ನು ಹಚ್ಚುವುದು ಇತ್ಯಾದಿ ಉಪಾಯಗಳನ್ನು ಗುರುದೇವರು ಸಾಧಕರಿಂದ ಮಾಡಿಸಿಕೊಂಡಿದ್ದಾರೆ.

ಅಣುಯುದ್ಧದೊಂದಿಗೆ ಹೋರಾಡಲು ‘ಆಕಾಶತತ್ತ್ವಕ್ಕೆ ಸಂಬಂಧಿಸಿದ ‘ಪೆಟ್ಟಿಗೆಗಳ ಉಪಾಯವನ್ನು ಹೇಳುವುದು

ಆಪತ್ಕಾಲವು ‘ಕೊರೊನಾ ವೈರಾಣುವಿನಿಂದ ಆರಂಭವಾಗಿದೆ. ಅನೇಕ ಸಂತರು, ಸಿದ್ಧಪುರುಷರು, ನಾಡಿಪಟ್ಟಿವಾಚಕರು, ಜ್ಯೋತಿಷಿಗಳು, ‘ಮುಂಬರುವ ಕಾಲದಲ್ಲಿ ವಿಶ್ವದಲ್ಲಿ ಅಣುಯುದ್ಧವಾಗಲಿಕ್ಕಿದೆ. ಅಣುಯುದ್ಧದಲ್ಲಿ ಪರಮಾಣು ಬಾಂಬ್ ಸ್ಫೋಟವಾಗುವಾಗ ಪ್ರಚಂಡ ಪ್ರಮಾಣದಲ್ಲಿ ನಾದಶಕ್ತಿಯು ಕಾರ್ಯನಿರತವಾಗುತ್ತದೆ. ನಾದಶಕ್ತಿಯು ಆಕಾಶತತ್ತ್ವಕ್ಕೆ ಸಂಬಂಧಿಸಿದೆ ಎಂದು ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಗುರುದೇವರು ಸಾಧಕರಿಗೆ ಆಕಾಶತತ್ತ್ವಕ್ಕೆ ಸಂಬಂಧಿಸಿದ ಪೆಟ್ಟಿಗೆಗಳ ಉಪಾಯವನ್ನು ಹೇಳಿದ್ದಾರೆ. ಅದೇ ರೀತಿ ಗುರುದೇವರು ಅಗ್ನಿಹೋತ್ರದ ಮಹತ್ವವನ್ನು ಹೇಳುವ ‘ಅಗ್ನಿಹೋತ್ರ ಹೆಸರಿನ ಗ್ರಂಥವನ್ನೂ ಪ್ರಕಾಶನ ಮಾಡಿದ್ದಾರೆ. ಅನೇಕ ಸಾಧಕರು ಅಗ್ನಿಹೋತ್ರದ ಅನುಭೂತಿಯನ್ನೂ ಪಡೆದುಕೊಂಡಿದ್ದಾರೆ.


ಆಪತ್ಕಾಲದಲ್ಲಿ ಮಾನಸಿಕ ಸ್ಥೈರ್ಯ ಮತ್ತು ಮನಸ್ಸು ಉತ್ಸಾಹಿಯಾಗಿರಲು ಗುರುದೇವರು ಸಾಧಕರಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಮಾಡಿಸಿಕೊಳ್ಳುವುದು

ಜಿಗುಟುತನದಂತಹ ಗುಣ ಬೆಳೆಸಿ ದೋಷ-ನಿರ್ಮೂಲನೆ ಮಾಡಿ

ಪಟ್ಟುಹಿಡಿಯುವಿಕೆ ಗುಣವನ್ನು ಅಂಗೀಕರಿಸಿ ದೋಷ-ನಿರ್ಮೂಲನ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಮಾಡಿರಿ !

ಈಶ್ವರಪ್ರಾಪ್ತಿಯಲ್ಲಿರುವ ಮುಖ್ಯ ಅಡಚಣೆಗಳೆಂದರೆ, ‘ಸ್ವಭಾವದೋಷ ಮತ್ತು ಅಹಂ ಇವುಗಳನ್ನು ಜಯಿಸಲು ಗುರುದೇವರು ಎಲ್ಲ ಸಾಧಕರಿಗೆ ಸ್ವಭಾವದೋಷ-ನಿರ್ಮೂಲನ ಪ್ರಕ್ರಿಯೆ ಮತ್ತು ‘ಅಹಂ-ನಿರ್ಮೂಲನ ಪ್ರಕ್ರಿಯೆಯನ್ನು ಕಲಿಸಿದರು. ಕಳೆದ ಕೆಲವು ವರ್ಷಗಳಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಎಲ್ಲ ಮಾರ್ಗದರ್ಶಕ ಸಂತರ ಮೂಲಕ ಸಾಧಕರಿಂದ ಈ ಎರಡೂ ಪ್ರಕ್ರಿಯೆಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಸಾಧಕ ರಲ್ಲಿದ್ದ ಚಿಂತೆ ಮಾಡುವ, ಭಾವನಾಶೀಲತೆ, ನಿರಾಶೆ, ಕಿರಿಕಿರಿಯಾಗುವುದು, ಆಲಸ್ಯ, ಗಾಂಭೀರ್ಯದ ಕೊರತೆ, ನಕಾರಾತ್ಮಕ ವಿಚಾರ ಮಾಡುವುದು, ಕೀಳರಿಮೆ, ಇತ್ಯಾದಿ ಸ್ವಭಾವದೋಷಗಳು ಮತ್ತು ಅಹಂನ ತೀವ್ರತೆಯು ಕಡಿಮೆ ಯಾಗಿವೆ. ಸಾಧಕರಿಗೆ ಸಂಚಾರಬಂದಿಯ (ಲಾಕ್ ಡೌನ್‌ನ) ಅವಧಿಯಲ್ಲಿ ಇವುಗಳ ಲಾಭದ ಅರಿವಾಯಿತು. ಕೊರೊನಾ ವ್ಯಾಧಿಯಿಂದ ಉದ್ಭವಿಸಿರುವ ಪರಿಸ್ಥಿತಿಯಿಂದ ಕೆಲವರಿಗೆ ಮುಂದೇನಾಗುವುದು ?, ಎನ್ನುವ ವಿಚಾರದಲ್ಲಿ ಹೊಸ ಕಾಯಿಲೆಯು ಆರಂಭವಾಯಿತು. ಇವೆಲ್ಲ ಸ್ಥಿತಿಯಲ್ಲಿ ಸನಾತನದ ಸಾಧಕರು ಸ್ಥಿರವಾಗಿದ್ದಾರೆ ಹಾಗೂ ಎಲ್ಲ ಪರಿಸ್ಥಿತಿಯನ್ನು ಆನಂದದಿಂದ ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ, ‘ಸ್ವಭಾವದೋಷ-ನಿರ್ಮೂಲನ ಪ್ರಕ್ರಿಯೆ ಮತ್ತು ‘ಅಹಂ ನಿರ್ಮೂಲನ ಪ್ರಕ್ರಿಯೆ.

-ಶ್ರೀ. ವಿನಾಯಕ ಶಾನಬಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೪.೨೦೨೧).