೨೦೧೫ ರಿಂದ ಸನಾತನ ಸಂಸ್ಥೆಯಲ್ಲಿ ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಿ ಋಷಿ-ಮುನಿಗಳು ಬರೆದಿಟ್ಟಿರುವಂತೆ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಜನ್ಮೋತ್ಸವವನ್ನು ಆಚರಿಸಲಾಗುತ್ತಿದೆ. ಈ ಜನ್ಮೋತ್ಸವವನ್ನು ಆರಂಭದಲ್ಲಿ ಒಂದೇ ದಿನ ಆಚರಿಸಲಾಗುತ್ತಿತ್ತು. ೨೦೧೯ ರಲ್ಲಿ ಅದನ್ನು ೬-೭ ದಿನಗಳ ಕಾಲ ಆಚರಿಸಲಾಯಿತು. ಈಗ ಪ್ರತ್ಯಕ್ಷ ಧಾರ್ಮಿಕ ವಿಧಿಯನ್ನು ಮಾಡಲು ಮಿತಿ ಇದ್ದರೂ ಪ್ರತಿಯೊಬ್ಬ ಸಾಧಕನು ಎಲ್ಲಿ ಇರುವನೋ, ಅಲ್ಲಿಯೇ ತನ್ನ ಅಂತರ್ಮನದಲ್ಲಿ ಗುರುದೇವರ ಜನ್ಮೋತ್ಸವವನ್ನು ನಿಶ್ಚಿತವಾಗಿಯೂ ಆಚರಿಸುವನು !
೧. ಶ್ರೀ ಗುರುಗಳ ಜನ್ಮೋತ್ಸವವನ್ನು ಏಕೆ ಆಚರಿಸಬೇಕು ?
‘ಗುರು’ ಅಂದರೆ ಶರೀರವಲ್ಲ ಅದೊಂದು ‘ತತ್ತ್ವ’ವಾಗಿದೆ. ಶ್ರೀ ಗುರುಗಳಿಗೆ ಆದಿ ಇಲ್ಲ, ಅಂತ್ಯವಿಲ್ಲ ! ಹೀಗಾದರೆ ‘ಅವರ ಜನ್ಮೋತ್ಸವವನ್ನು ಏಕೆ ಆಚರಿಸಬೇಕು ?’ ಪರಾತ್ಪರ ಗುರು ಡಾ. ಆಠವಲೆಯವರು ಎಂದಿಗೂ ತಮ್ಮ ಜನ್ಮೋತ್ಸವನ್ನು ಆಚರಿಸುವ ಕುರಿತು ಹೇಳಿಲ್ಲ, ಆದರೂ ‘ನಾವು ಸಮಾಜದಲ್ಲಿನ ಸಂತರು, ಜ್ಯೋತಿಷಿಗಳು ಮತ್ತು ನಾಡಿವಾಚಕರು ಹೇಳಿದಂತೆ ಅವರ ಜನ್ಮೋತ್ಸವವನ್ನು ಏಕೆ ಆಚರಿಸಲಾಗುತ್ತದೆ ?’, ಎಂಬ ಪ್ರಶ್ನೆಯು ಯಾರ ಮನಸ್ಸಿನಲ್ಲಿಯಾದರೂ ಬರಬಹುದು. ಈ ಪ್ರಶ್ನೆಗಳಿಗೆ ಹೊಳೆದ ಉತ್ತರಗಳನ್ನು ಇಲ್ಲಿ ನೀಡುತ್ತಿದ್ದೇನೆ.
೧ ಅ. ಶ್ರೀಗುರುಗಳು ಶಿಷ್ಯನಿಗಾಗಿ ಎಲ್ಲವನ್ನೂ ಮಾಡುತ್ತಿರುವುದರಿಂದ ‘ಶ್ರೀಗುರುಗಳ ಜನ್ಮೋತ್ಸವವನ್ನು ಆಚರಿಸುವುದು’, ಇದು ಅವರ ಬಗ್ಗೆ ಅಂಶಾತ್ಮಕ ಕೃತಜ್ಞತೆಯನ್ನು ವ್ಯಕ್ತಪಡಿಸುವ ಒಂದು ಅವಕಾಶ : ‘ಶ್ರೀ ಗುರುಗಳು ಭಾವ ಮತ್ತು ಭಾವನೆ ಇವೆರಡರ ಆಚೆಗೆ ಹೋಗಿರುತ್ತಾರೆ. ಆದುದರಿಂದ ಅವರಿಗೆ ಶಿಷ್ಯರು ‘ತಮ್ಮ ಜನ್ಮೋತ್ಸವ ವನ್ನು ಆಚರಿಸಬೇಕು’, ಎಂದು ಯಾವಾಗಲೂ ಅನಿಸಲಿಲ್ಲ; ಆದರೆ ಯಾವ ಶ್ರೀ ಗುರುಗಳು ಶಿಷ್ಯನಿಗಾಗಿ ಎಲ್ಲವನ್ನೂ ಮಾಡಿರುವರೋ ಮತ್ತು ಎಲ್ಲವನ್ನೂ ನೀಡಿರುವರೋ, ಅಂತಹ ಶ್ರೀ ಗುರುಗಳ ಬಗ್ಗೆ ಅಂಶಾತ್ಮಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಇದೊಂದು ಅವಕಾಶವಿರುತ್ತದೆ; ಎಂದು ಶ್ರೀ ಗುರುಗಳ ಜನ್ಮೋತ್ಸವವು ನಿಜವಾದ ಅರ್ಥದಲ್ಲಿ ಶಿಷ್ಯರಿಗಾಗಿಯೇ ಇರುತ್ತದೆ. ಶ್ರೀ ಗುರುಗಳ ಜನ್ಮೋತ್ಸವವು ಕೇವಲ ಶಿಷ್ಯರಿಗೆ ಆನಂದವನ್ನು ನೀಡಲೆಂದೇ ಇರುತ್ತದೆ; ಆದುದರಿಂದ ಶ್ರೀ ಗುರುಗಳು ತಮ್ಮ ಜನ್ಮೋತ್ಸವವನ್ನು ಆಚರಿಸಿಕೊಳ್ಳುತ್ತಾರೆ.
೧ ಆ. ಪ್ರತ್ಯಕ್ಷ ದೃಶ್ಯವನ್ನು ನೋಡುವಾಗ ಮನುಷ್ಯನ ಭಾವವು ಜಾಗೃತವಾಗುತ್ತದೆ, ಅದರಂತೆ ಶ್ರೀಗುರುಗಳ ಜನ್ಮೋತ್ಸವವನ್ನು ಪ್ರತ್ಯಕ್ಷ ನೋಡುವಾಗ ಶಿಷ್ಯರ ಭಾವವು ಜಾಗೃತವಾಗುವುದು : ‘ರಾಮಾಯಣ’, ‘ಮಹಾಭಾರತ’, ಶ್ರೀಕೃಷ್ಣನ ಬಾಲಲೀಲೆ, ಭಾಗವತದಲ್ಲಿನ ಕಥೆ ಇವೆಲ್ಲವೂ ಪ್ರತ್ಯಕ್ಷದಲ್ಲಿ ಘಟಿಸಿದವು. ಇವೆಲ್ಲ ದೃಶ್ಯಗಳು ರೂಪದಲ್ಲಿ ಘಟಿಸಿದವು. ಈ ದೃಶ್ಯಗಳನ್ನು ನೋಡುವಾಗ ಮನುಷ್ಯನ ಭಾವವು ಜಾಗೃತವಾಗುತ್ತದೆ ಮತ್ತು ಅವನ ಮನಸ್ಸಿನಲ್ಲಿ ಈಶ್ವರನ ಕುರಿತು ಪ್ರೀತಿಯು ನಿರ್ಮಾಣವಾಗುತ್ತದೆ. ಶ್ರೀಗುರುಗಳ ಜನ್ಮೋತ್ಸವವು ಪ್ರತ್ಯಕ್ಷದಲ್ಲಿ ಘಟಿಸುವ ದೃಶ್ಯವಾಗಿರುವುದರಿಂದ ಆ ದೃಶ್ಯವನ್ನು ನೋಡುವಾಗ ಸಾವಿರಾರು ಜೀವಗಳಲ್ಲಿ ಭಾವದ ಸ್ಥಿತಿಯು ಉತ್ಪನ್ನವಾಗಿ ಕಲ್ಯಾಣಕಾರಿ ಪರಿವರ್ತನೆಯಾಗುತ್ತದೆ. ಈ ಜಗತ್ತಿನಲ್ಲಿ ಗುರುದರ್ಶನಕ್ಕಿಂತ ಮೇಲಿನ ಸರ್ವೋಚ್ಚ ಸಾತ್ತ್ವಿಕ ದೃಶ್ಯವು ಎಲ್ಲಿಯಾದರೂ ಇರಬಹುದೇ ?
೧ ಇ. ಶ್ರೀಗುರುಗಳ ಜನ್ಮೋತ್ಸವದ ನಿಮಿತ್ತ ಸೇವೆ-ಸಾಧನೆಯನ್ನು ಮಾಡುವಾಗ ಶಿಷ್ಯನ ಭಾವವು ಅನೇಕ ಪಟ್ಟುಗಳಲ್ಲಿ ಹೆಚ್ಚಾಗುತ್ತಿರುವುದು : ದೇವರಿಗೆ ಭಾವದ ಹಸಿವೆ ಇರುತ್ತದೆ. ಗುರುಗಳು ಮತ್ತು ದೇವರು ಒಂದೇ ಆಗಿದ್ದಾರೆ. ಆದುದರಿಂದ ಎಲ್ಲಿ ಭಾವವಿರುತ್ತದೋ, ಅಲ್ಲಿ ಗುರುತತ್ತ್ವವು ಆಕರ್ಷಿತವಾಗುತ್ತದೆ. ಅದಕ್ಕಾಗಿ ಶಿಷ್ಯನು ತನ್ನ ಶ್ರೀಗುರುಗಳ ಬಗೆಗಿನ ಭಾವವನ್ನು ವ್ಯಕ್ತಪಡಿಸಲು ದೊರಕಿದ ಒಂದೂ ಅವಕಾಶವನ್ನು ಬಿಡಬಾರದು. ‘ಶ್ರೀಗುರುಗಳ ಜನ್ಮೋತ್ಸವ’ ಇದು ಅಂತಹ ಒಂದು ಅವಕಾಶವಾಗಿದೆ. ಪೂರ್ಣ ವರ್ಷದಾದ್ಯಂತ ಶಿಷ್ಯನಿಗೆ ಶ್ರೀಗುರುಗಳ ಬಗ್ಗೆ ಎಷ್ಟು ಭಾವವು ಜಾಗೃತವಾಗುತ್ತದೋ, ಅದಕ್ಕಿಂತಲೂ ಎಷ್ಟೋ ಹೆಚ್ಚು ಪಟ್ಟುಗಳಲ್ಲಿ ಜನ್ಮೋತ್ಸವದ ಸಮಯದಲ್ಲಿ ಜಾಗೃತವಾಗುತ್ತದೆ. ಅದಕ್ಕೆ ‘ಶ್ರೀ ಗುರುಗಳಿಗಾಗಿ ಏನು ಮಾಡಲಿ ಮತ್ತು ಏನು ಬೇಡ ?’, ಎಂದಾಗುತ್ತದೆ; ಆದುದರಿಂದ ಜನ್ಮೋತ್ಸವವು ಶಿಷ್ಯನ ಆಧ್ಯಾತ್ಮಿಕ ಉನ್ನತಿಗಾಗಿ ಈಶ್ವರನಿಯೋಜಿತ ದೈವೀ ಅವಕಾಶವಾಗಿದೆ.
೨. ಶ್ರೀ ಗುರುಗಳ ಜನ್ಮೋತ್ಸವವನ್ನು ಹೇಗೆ ಆಚರಿಸಬೇಕು ?
ಶ್ರೀ ಗುರುಗಳ ‘ಜನ್ಮೋತ್ಸವ’ಕ್ಕೆ ‘ಉತ್ಸವ’, ಎಂದು ಹೇಳಲಾಗಿದೆ. ‘ಉತ್ಸವ’ವೆಂದ ಕೂಡಲೇ, ‘ಉತ್ಸಾಹ’ವು ಬಂದೇ ಬಿಡುತ್ತದೆ ! ‘ಉತ್ಸವ’ವು ಇದು ಮನಸ್ಸಿನ ಉತ್ಸಾಹವರ್ಧಕ ಸ್ಥಿತಿಯಾಗಿದೆ. ಆದುದರಿಂದ ಜನ್ಮೋತ್ಸವದ ಮೊದಲು ಅದು ಮನಸ್ಸಿನಲ್ಲಿ ಆಚರಣೆಯಾಗತೊಡಗುತ್ತದೆ.
೨ ಅ. ಶ್ರೀ ಗುರುಗಳ ಜನ್ಮೋತ್ಸವವು ಮೊದಲಿಗೆ ಶಿಷ್ಯನ ಮನಸ್ಸಿನಲ್ಲಿ ಆಚರಣೆಯಾಗುವುದು : ಶ್ರೀ ಗುರುಗಳ ಜನ್ಮೋತ್ಸವವು ಸ್ಥೂಲದಲ್ಲಿ ಆಚರಿಸುವ ಮೊದಲು ಅದು ಶಿಷ್ಯನ ಮನಸ್ಸಿನಲ್ಲಿ ಆಚರಣೆಯಾಗುತ್ತಿರುತ್ತದೆ. ಶಿಷ್ಯನ ಮನಸ್ಸು ಆ ಆನಂದದಲ್ಲಿ ಮುಳುಗುತ್ತಿರುತ್ತದೆ. ಅವನಿಗೆ ಏನಾದರೂ ಮಾಡಿ ‘ನಾವು ಈ ಆನಂದವನ್ನು ವ್ಯಕ್ತಪಡಿಸಬೇಕು’, ಎಂದೆನಿಸುತ್ತದೆ. ಅವನ ಮನಸ್ಸಿನಲ್ಲಿ ತುಂಬಿಕೊಂಡ ಈ ಆನಂದವು ಮುಂದೆ ಈ ‘ಉತ್ಸವದ’ ರೂಪವನ್ನು ಧಾರಣೆ ಮಾಡುತ್ತದೆ.
೨ ಆ. ಪ್ರತಿಯೊಬ್ಬ ಶಿಷ್ಯನು ತನ್ನ ಪ್ರಕೃತಿಗನುಸಾರ ಜನ್ಮೋತ್ಸವದ ಸೇವೆಯನ್ನು ಮಾಡಿ ತನ್ನ ಆನಂದವನ್ನು ವ್ಯಕ್ತಪಡಿಸುತ್ತಿರುವುದು : ‘ವ್ಯಕ್ತಿಗಳೆಷ್ಟೋ ಅಷ್ಟು ಪ್ರಕೃತಿಗಳು !’ ಈ ನ್ಯಾಯಕ್ಕನುಸಾರ ಶ್ರೀ ಗುರುಗಳ ಶಿಷ್ಯರೂ ವಿಭಿನ್ನ ಪ್ರಕೃತಿಯವರಾಗಿರುತ್ತಾರೆ. ಎಲ್ಲರ ಆನಂದವನ್ನು ವ್ಯಕ್ತ ಪಡಿಸುವ ಸ್ವರೂಪವೂ ವಿಭಿನ್ನವಾಗಿರುತ್ತದೆ. ‘ಎಲ್ಲ ಪ್ರಕಾರದ ಶಿಷ್ಯರಿಗೆ ತಮ್ಮ ಪ್ರಕೃತಿಗನುಸಾರ ಶ್ರೀಗುರುಗಳ ಬಗೆಗಿರುವ ಕೃತಜ್ಞತೆಯನ್ನು ವ್ಯಕ್ತ ಪಡಿಸಿ ಆನಂದವನ್ನು ಪಡೆಯಲು ಸಾಧ್ಯವಾಗಬೇಕೆಂದು’, ಜನ್ಮೋತ್ಸವವನ್ನು ಆಚರಿಸಲಾಗುತ್ತದೆ. ಆದುದರಿಂದ ಜನ್ಮೋತ್ಸವದ ನಿಮಿತ್ತ ಶ್ರೀಗುರುಗಳ ಪ್ರತಿಮೆಗೆ ಅರ್ಪಿಸಲು ಹೂವುಗಳ ಹಾರವನ್ನು ತಯಾರಿಸುತ್ತಾರೆ ಮತ್ತು ಕೆಲವರು ಶ್ರೀ ಗುರುಗಳ ಮಹಿಮೆಯನ್ನು ಕೊಂಡಾಡುತ್ತಾರೆ. ಕೆಲವರು ‘ಶ್ರೀ ಗುರುಗಳ ಬೋಧನೆಯು ಎಲ್ಲರಿಗೂ ತಿಳಿಯಬೇಕು’, ಎಂದು ಅವರ ಕುರಿತು ಲೇಖನ ಬರೆಯುತ್ತಾರೆ ಮತ್ತು ಕೆಲವರು ಶ್ರೀ ಗುರುಗಳ ಧರ್ಮಪ್ರಸಾರದ ಕಾರ್ಯವನ್ನು ಎಲ್ಲರವರೆಗೆ ತಲುಪಿಸುತ್ತಾರೆ. ಈ ರೀತಿ ಎಲ್ಲ ಶಿಷ್ಯರಿಗೆ ಆನಂದ ಸಿಗುತ್ತದೆ.
೩. ಕೃತಜ್ಞತೆ
‘ಗುರುದೇವರೇ, ಮೇಲಿನ ಎಲ್ಲ ಬರವಣಿಗೆಯು, ನನ್ನ ಮನಸ್ಸು-ಬುದ್ಧಿಯ ಆಚೆಯದ್ದಾಗಿದೆ. ಇದೆಲ್ಲವೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ನನ್ನ ಮೇಲೆ ಮಾಡಿದ ಕೃಪೆಯ ಬರವಣಿಗೆಯಾಗಿದೆ.
‘ಶ್ರೀಗುರುಚರಣಾರ್ಪಣಮಸ್ತು !’
– ಶ್ರೀ. ವಿನಾಯಕ ಶಾನಭಾಗ, ಚೆನ್ನೈ (೧೧.೪.೨೦೨೧)