ಡ್ರೋನ್ ಯುದ್ಧದಲ್ಲಿ ಆಶ್ಚರ್ಯಕರವಾಗಿ ಬಾನೆತ್ತರಕ್ಕೆ ಹಾರಿದ ಭಾರತ !

೧೫ ಜನವರಿ ೨೦೨೧ ರಂದು ಭಾರತದ ಸೈನಿಕ ದಿನಾಚರಣೆಯನ್ನು ಆಚರಿಸಲಾಯಿತು. ಅದರಲ್ಲಿ ಭಾರತೀಯ ಸೈನ್ಯವು ಪಥಸಂಚಲನವನ್ನು ಮಾಡಿತು. ಆ ದಿನ ಸೈನ್ಯವು ಡ್ರೋನ್‌ ಯುದ್ಧದ ಪ್ರದರ್ಶನವನ್ನು ಮಾಡಿತು.

ಭಾರತದ ಮುತ್ಸದ್ದಿತನದ ಪ್ರಭಾವ : ನೇಪಾಳ ಪುನಃ ಭಾರತದ ಪರ !

ಭಾರತವು ಲಿಪು ಲೇಖದಿಂದ ಹಾದು ಹೋಗುವ ಕೈಲಾಸ ಮಾನಸ ಸರೋವರ ‘ಲಿಂಕ್ ರೋಡ್ ನ ಉದ್ಘಾಟನೆ ಮಾಡಿತು. ಅದಕ್ಕೆ ತಕ್ಷಣವೇ ನೇಪಾಳ ಆಕ್ಷೇಪವನ್ನು ವ್ಯಕ್ತಪಡಿಸಿತು. ನೇಪಾಳವು ಭಾರತಕ್ಕೆ ಯುದ್ಧದ ದೃಷ್ಟಿಯಿಂದ ಮಹತ್ವದ್ದಾಗಿರುವ ಕಾಲಾಪಾನಿ, ಲಿಪುಲೇಖ ಮತ್ತು ಲಿಂಪಿಯಾಧುರಾ ಈ ಸಂಪೂರ್ಣ ೩೫ ಕಿಲೋಮೀಟರ್ ಪ್ರದೇಶದ ಮೇಲೆ ತನ್ನ ಹಕ್ಕಿದೆಯೆಂದು ಹೇಳಿತು.

‘ವಿವಿಐಪಿಗಳ ಭದ್ರತೆಯ ಅತಿರೇಕ ಮತ್ತು ಜನಸಾಮಾನ್ಯರ ರಕ್ಷಣೆಯತ್ತ ನಿರ್ಲಕ್ಷ್ಯ !

ರಾಜಕೀಯ ಪಕ್ಷಗಳ ನಾಯಕರು ಮತ್ತು ಅವರ ಪ್ರವಾಸಗಳಲ್ಲಿ ಪೊಲೀಸ ಪಡೆಗಳನ್ನು ಉಪಯೋಗಿಸುವುದರಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅನೇಕ ಬಾರಿ ಪೊಲೀಸರಿಂದ ನಿರ್ಲಕ್ಷವಾಗುತ್ತದೆ. ಕೇಂದ್ರ ಸರಕಾರವು ‘ವಿಐಪಿ ಸುರಕ್ಷತೆಯಿಂದ ‘ಎನ್‌ಎಸ್‌ಜಿ (ರಾಷ್ಟ್ರೀಯ ಭದ್ರತಾ ಪಡೆ) ಹಿಂಪಡೆಯಲು ನಿರ್ಣಯಿಸಿತು.

ಚೀನಾದ ‘ಸೂಪರ್ ಸೋಲ್ಜರ್ಸ್ (ಅಸಾಧಾರಣ ಸೈನಿಕರು) ಮತ್ತು ಭಾರತ !

ಚೀನಾ ಲಡಾಖ್‌ನಲ್ಲಿ ಸೇನಾಕಾರ್ಯಾಚರಣೆಯನ್ನು ನಡೆಸಿ ಭಾರತವನ್ನು ಸೋಲಿಸಲು ಕಳೆದ ೭ ತಿಂಗಳುಗಳಿಂದ ಪ್ರಯತ್ನಿಸಿ ಸಂಪೂರ್ಣ ಸೋತಿದೆ. ಆದುದರಿಂದ ಈಗ ಚೀನಾವು ಸೇನಾ ಕಾರ್ಯಾಚರಣೆಯನ್ನು ಬಿಟ್ಟು ಇತರ ಕ್ರಮಗಳನ್ನು ಅನುಸರಿಸಿ ಭಾರತ-ಚೀನಾ ಗಡಿಯಲ್ಲಿ ನಿರಂತರ ಉದ್ವಿಗ್ನದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ.

ಯುದ್ಧದಲ್ಲಿ ಕುಶಲ ನೇತೃತ್ವದ ಮಹತ್ವ ! 

ಭಾರತ-ಚೀನಾ ಯುದ್ಧದ ಸಮಯದಲ್ಲಿ ಭಾರತೀಯ ಸೈನ್ಯದ ಸ್ಥಿತಿ ಚೆನ್ನಾಗಿರಲಿಲ್ಲ. ಭಾರತದಲ್ಲಿ ಅತ್ಯಂತ ಹಳೆಯ ಶಸ್ತ್ರಗಳಿದ್ದವು. ಭಾರತದ ಕಡೆ ಸೆಂಚೂರಿಯನ್ ಮತ್ತು ಶೆರಮಾನ್ ನಿರ್ಮಿತ ಟ್ಯಾಂಕ್‌ಗಳಿದ್ದವು. ಅವುಗಳನ್ನು ಎರಡನೆಯ ಮಹಾಯುದ್ಧದಲ್ಲಿ ಉಪಯೋಗಿಸಲಾಗಿತ್ತು. ಅವುಗಳನ್ನು ಭಾರತ ಬಿಟ್ಟು ಜಗತ್ತಿನಲ್ಲಿ ಬೇರೆ ಯಾರೂ ಬಳಸುತ್ತಿರಲಿಲ್ಲ.

‘ವಿದೇಶಿ ದೇಣಿಗೆ (ನಿಯಂತ್ರಣ) ಮಸೂದೆ ಹಾಗೂ ಸ್ವಯಂಸೇವಿ ಸಂಸ್ಥೆಗಳು !

ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ‘ವಿದೇಶಿ ದೇಣಿಗೆ (ನಿಯಂತ್ರಣ) ಮಸೂದೆ ೨೦೨೦ ಈ ಮಸೂದೆಯನ್ನು ಸಮ್ಮತಿಸಲಾಯಿತು. ಸಾಮಾಜಿಕ ಕಾರ್ಯದ ಹೆಸರಿನಲ್ಲಿ ವಿದೇಶಗಳಿಂದ ಭಾರತಕ್ಕೆ ಸಾವಿರಾರು ಕೋಟಿ ರೂಪಾಯಿಗಳು ಬರುತ್ತಿದ್ದವು. ಈ ಹಣದ ಬಲದಿಂದ ದೇಶದಲ್ಲಿ ಉಗ್ರವಾದವನ್ನು ಹೆಚ್ಚಿಸಲು ಮತ್ತು ಹಿಂಸಾಚಾರವನ್ನು ನಡೆಸುವ ಪ್ರಯತ್ನಗಳು ನಡೆಯುತ್ತಿದ್ದವು ಮತ್ತು ಉತ್ತರ ಪೂರ್ವ ಹಾಗೂ ಆದಿವಾಸಿ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮತಾಂತರದ ಕಾರ್ಯ ನಡೆಯುತ್ತಿತ್ತು.

ರಾಷ್ಟ್ರದ ಭದ್ರತೆ ಮತ್ತು ಭಾರತದ ಮುಂದಿರುವ ವಿವಿಧ ಸವಾಲುಗಳು

ಕೆಲವು ದಿನಗಳ ಹಿಂದೆ ಎನ್.ಐ.ಎ. (ರಾಷ್ಟ್ರೀಯ ತನಿಖಾದಳ) ಐಸಿಸ್‌ನ ಕೆಲವು ಭಯೋತ್ಪಾದಕರನ್ನು ಬಂಧಿಸಿತು. ದೇಶದಲ್ಲಿ ಹಿಂಸಾತ್ಮಕ  ಕೃತ್ಯಗಳನ್ನು ಮಾಡುವ ಮೊದಲೇ ಅವರನ್ನು ಬಂಧಿಸುವಲ್ಲಿ ಯಶಸ್ಸು ಸಿಕ್ಕಿತು. ಹಿಂದೆ ಭಯೋತ್ಪಾದಕರು ದೇಶದಲ್ಲಿ ಎಲ್ಲಿ ಬೇಕಾದಲ್ಲಿ ಆಕ್ರಮಣ ಮಾಡುತ್ತಿದ್ದರು ಮತ್ತು ಅದರಲ್ಲಿ ನೂರಾರು ಜನರು ಸಾಯುತ್ತಿದ್ದರು.

ಚೀನಾದ ಶಿನ್‌ಜಿಯಾಂಗ್‌ನಲ್ಲಿ ಮುಸಲ್ಮಾನರ ಮೇಲಾಗುತ್ತಿರುವ ದೌರ್ಜನ್ಯಗಳು !

ಚೀನಾದಲ್ಲಿ ಟಿಬೇಟಿಯನ್ನರ ಸ್ಥಿತಿ ಉಯಿಘರ್ ಮುಸಲ್ಮಾನರಂತೆಯೇ ಇದೆ. ಟಿಬೇಟಿಯನ್ನರು ಅತ್ಯಂತ ಶಾಂತ ಮತ್ತು ಸಹಿಷ್ಣುಗಳಾಗಿದ್ದಾರೆ; ಆದರೆ ಚೀನಾ ಅವರ ಮೇಲೆ ಅಪಾರ ಪ್ರಮಾಣದಲ್ಲಿ ದೌರ್ಜನ್ಯವೆಸಗುತ್ತದೆ. ಟಿಬೇಟಿಯನ್ನರ ಮಠಗಳನ್ನು ನೆಲಸಮಗೊಳಿಸಲಾಗಿದೆ. ದೊಡ್ಡ ಮಠಗಳ ಸ್ಥಳದಲ್ಲಿ ‘ಶಾಪಿಂಗ್ ಮಾಲ್ಗಳನ್ನು ಕಟ್ಟಲಾಗಿದೆ. ಅಲ್ಲಿ ಪ್ರವಾಸೀತಾಣಗಳನ್ನು ವಿಕಸಿತಗೊಳಿಸಲಾಗಿದೆ. ಆದ್ದರಿಂದ ಈ ಪರಿಸರದಲ್ಲಿ ಪಾವಿತ್ರ್ಯವು ಸಂಪೂರ್ಣ ನಾಶವಾಗಿದೆ.

ಲಡಾಖ್‌ನಲ್ಲಿ ರಕ್ಷಣೆಯ ದೃಷ್ಟಿಯಿಂದ ಚೀನಾಗಿಂತ ಒಂದು ಹೆಜ್ಜೆ ಮುಂದಿರುವ ಭಾರತೀಯ ಸೈನ್ಯ !

ಮೊಟ್ಟಮೊದಲು ಭಾರತೀಯ ಸೈನ್ಯವು ಎತ್ತರದಲ್ಲಿರುವ ಅನೇಕ ಗುಡ್ಡಗಳನ್ನು ವಶಕ್ಕೆ ತೆಗೆದುಕೊಂಡು ಅಲ್ಲಿ ಸೈನಿಕರನ್ನು ನಿಯೋಜಿಸಿತು. ಹಿಂದೆ ಚೀನಾದ ಸೈನ್ಯವು ಅತಿಕ್ರಮಣ ಮಾಡುವಾಗ ರಸ್ತೆಯ ಮೇಲೆ ಬಂದು ಭಾರತದ ಭೂಮಿಯಲ್ಲಿ ನುಗ್ಗಲು ಪ್ರಯತ್ನಿಸುತ್ತಿತ್ತು. ಅವರಲ್ಲಿ ಯಾವುದೇ ಗುಡ್ಡದ ಮೇಲೆ ಹೋಗುವ ಇಚ್ಛೆ ಎಂದಿಗೂ ಇರಲಿಲ್ಲ.

ಲಡಾಖ್‌ನಲ್ಲಿನ ಪರಾಕ್ರಮದ ಗೌರವಾನ್ವಿತರು : ಎಸ್.ಎಫ್.ಎಫ್.’ (ಸ್ಪೆಶಲ್ ಫ್ರಂಟಿಯರ್ ಫೋರ್ಸ್) ಸೈನಿಕರು !

‘ಲಡಾಖ್‌ನಲ್ಲಿ ಪೆಂಗಾಂಗ್ ತ್ಸೋ ಸರೋವರದ ದಕ್ಷಿಣದಲ್ಲಿ ಆಗಸ್ಟ್ ೨೯ ಮತ್ತು ೩೦ ರಂದು ಚೀನಾದ ೫೦೦ ರಿಂದ ೬೦೦ ಸೈನಿಕರು ಭಾರತೀಯ ಪ್ರದೇಶದೊಳಗೆ ನುಗ್ಗಲು ಪ್ರಯತ್ನಿಸುತ್ತಿರುವುದು ಭಾರತೀಯ ಸೈನಿಕರಿಗೆ ಕಾಣಿಸಿತು. ಆಗ ಭಾರತೀಯ ಸೈನಿಕರು ಅವರನ್ನು ಒಳಗೆ ಬರಲು ಬಿಟ್ಟರು, ಆ ಮೇಲೆ ಹೋರಾಟ ಆರಂಭವಾಯಿತು.