ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
ವೃದ್ಧಾಪ್ಯದಲ್ಲಿ ಮಕ್ಕಳು ಗಮನ ನೀಡುವುದಿಲ್ಲ, ಎಂದು ಹೇಳುವ ವೃದ್ಧರೇ, ತಮ್ಮ ಮಕ್ಕಳಿಗೆ ಸಾಧನೆಯ ಸಂಸ್ಕಾರ ನೀಡಲಿಲ್ಲ, ಅದರ ಫಲವೇ ತಮ್ಮ ಇಂದಿನ ಸ್ಥಿತಿಯಾಗಿದೆ. ಅದಕ್ಕೆ ಮಕ್ಕಳ ಜೊತೆಗೆ ತಾವೂ ಜವಾಬ್ದಾರರು !
ವೃದ್ಧಾಪ್ಯದಲ್ಲಿ ಮಕ್ಕಳು ಗಮನ ನೀಡುವುದಿಲ್ಲ, ಎಂದು ಹೇಳುವ ವೃದ್ಧರೇ, ತಮ್ಮ ಮಕ್ಕಳಿಗೆ ಸಾಧನೆಯ ಸಂಸ್ಕಾರ ನೀಡಲಿಲ್ಲ, ಅದರ ಫಲವೇ ತಮ್ಮ ಇಂದಿನ ಸ್ಥಿತಿಯಾಗಿದೆ. ಅದಕ್ಕೆ ಮಕ್ಕಳ ಜೊತೆಗೆ ತಾವೂ ಜವಾಬ್ದಾರರು !
ನಾವು ಕಲಿಯುತ್ತಿರುವಾಗ ‘ನಾನು ಅಜ್ಞಾನಿ ಇದ್ದೇನೆ’, ಎಂಬುದರ ಅರಿವಿಟ್ಟುಕೊಂಡು ಜ್ಞಾನವನ್ನು ಪಡೆಯುವ ಪ್ರಕ್ರಿಯೆ ಮಾಡಬೇಕು. ಇದರಿಂದ ‘ನನ್ನತನ ಕಡಿಮೆಯಾಗುವುದು ಮತ್ತು ಜ್ಞಾನದಲ್ಲಿನ ಚೈತನ್ಯವನ್ನು ಅನುಭವಿಸಲು ಸಾಧ್ಯವಾಗುವುದು’, ಹೀಗೆ ಎರಡೂ ಲಾಭಗಳಾಗುತ್ತವೆ.
ಹಿಂದೂ ಧರ್ಮವನ್ನು ಬಿಟ್ಟು ಉಳಿದ ಧರ್ಮಗಳ ಇತಿಹಾಸ ನೋಡಿದರೆ, ಅದರಲ್ಲಿ ವಿವಿಧ ಕಾಲಘಟ್ಟದಲ್ಲಿ ಲಕ್ಷಾಂತರ ಹತ್ಯೆಗಳ, ಕ್ರೂರತೆಯ, ಬಲಾತ್ಕಾರಗಳ, ಗೆದ್ದ ಪ್ರದೇಶಗಳಲ್ಲಿರುವ ಸ್ತ್ರೀ-ಪುರುಷರನ್ನು ಗುಲಾಮರೆಂದು ಮಾರಾಟ ಮಾಡಿದ ಸಾವಿರಾರು ಉಲ್ಲೇಖಗಳಿವೆ. ಹಿಂದೂ ಧರ್ಮದ ಇತಿಹಾಸದಲ್ಲಿ ಇಂತಹ ಒಂದು ಉದಾಹರಣೆಯೂ ಇಲ್ಲ !
ಮೂರನೇ ಮಹಾಯುದ್ಧದ ಸಮಯದಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಹಿಂದೂಗಳ ರಕ್ಷಣೆ ಮಾಡಲು ಆಗುವುದಿಲ್ಲ; ಏಕೆಂದರೆ ಅವರಲ್ಲಿ ಆಧ್ಯಾತ್ಮಿಕ ಬಲ ಇಲ್ಲ. ಆ ಕಾಲದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಇಂದಿನಿಂದ ಸಾಧನೆ ಮಾಡಿ !’
ಕಳೆದ ೭ ವರ್ಷಗಳಿಂದ ನನಗೆ ಎಲ್ಲಿಯೂ ಹೊರಗೆ ಹೋಗಲು ಸಾಧ್ಯವಾಗಿಲ್ಲ, ಆದರೆ ಕೇವಲ ಕಿಟಕಿಯಿಂದ ಕಾಣಿಸುವ ದೃಶ್ಯವನ್ನು ನೋಡಿ ನಾನು ಆನಂದದಿಂದಿದ್ದೇನೆ.– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಕೆಲಸ ಮಾಡದಿರುವುದು, ಭ್ರಷ್ಟಾಚಾರ ಮಾಡುವುದು, ಇತ್ಯಾದಿಗಳ ಅಭ್ಯಾಸವಾಗಿರುವ ಹೆಚ್ಚಿನ ಪೊಲೀಸರು ಮತ್ತು ಸರಕಾರಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳನ್ನು ಒಂದೇ ಒಂದು ಖಾಸಗಿ ಕಂಪನಿ ಗಳು ಒಂದು ದಿನವೂ ನೌಕರಿಯಲ್ಲಿಡಲಾರವು.
ಹಿಂದಿನ ಯುಗಗಳಲ್ಲಿ ಸ್ವಭಾವದೋಷ ಕಡಿಮೆ ಇದ್ದುದರಿಂದ ಯಾವುದೇ ಸಾಧನಾಮಾರ್ಗದಿಂದ ಸಾಧನೆ ಮಾಡಿ ಸಾಧಕರು ಮುಂದೆ ಹೋಗುತ್ತಿದ್ದರು. ಕಲಿಯುಗದಲ್ಲಿ ಅನೇಕ ಸ್ವಭಾವದೋಷಗಳು ಇರುವುದರಿಂದ ಮೊದಲಿಗೆ ಅದನ್ನು ದೂರ ಮಾಡಬೇಕಾಗುತ್ತದೆ. ಅನಂತರವೇ ಸಾಧನೆ ಮಾಡಲು ಆಗುತ್ತದೆ.
ಮನುಷ್ಯತ್ವವನ್ನು ಕಲಿಸುವ ಸಾಧನೆಯನ್ನು ಬಿಟ್ಟು ಬೇರೆಲ್ಲ ವಿಷಯಗಳನ್ನು ಕಲಿಸುವ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ರಾಷ್ಟ್ರದ ಪರಮಾವಧಿಯ ಅಧೋಗತಿಯಾಗಿದೆ. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ರಾಷ್ಟ್ರ ಹಾಗೂ ಧರ್ಮದ ಬಗೆಗಿನ ನಿರ್ಧಾರವನ್ನು ರಾಷ್ಟ್ರ ಹಾಗೂ ಧರ್ಮ ಪ್ರೇಮಿ ಸಂತರಲ್ಲೇ ಕೇಳಿ ತೆಗೆದುಕೊಳ್ಳಬೇಕು.
`ಜಗತ್ತಿನಾದ್ಯಂತ ಜಿಜ್ಞಾಸುಗಳು ಶಾಶ್ವತ ಆನಂದಪ್ರಾಪ್ತಿಗಾಗಿ ಅಧ್ಯಾತ್ಮ ಕಲಿಯಲು ಜಗತ್ತಿನ ಬೇರೆ ಯಾವುದೇ ದೇಶಕ್ಕೆ ಹೋಗದೆ ಭಾರತಕ್ಕೆ ಬರುತ್ತಾರೆ ಹಾಗೂ ಭಾರತೀಯರು ಕೇವಲ ಸುಖ ಪಡೆಯಲು ಅಮೇರಿಕಾ, ಇಂಗ್ಲೆಂಡ ಇತ್ಯಾದಿ ದೇಶಗಳಿಗೆ ಹೋಗುತ್ತಾರೆ !’