ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಅಮೂಲ್ಯ ಮಾರ್ಗದರ್ಶನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಈಶ್ವರನು ಸರ್ವಜ್ಞಾನಿಯಾಗಿದ್ದಾನೆ. ನಮಗೆ ಅವನೊಂದಿಗೆ ಏಕರೂಪವಾಗಬೇಕಿರುವುದರಿಂದ ನಾವು ಯಾವಾಗಲೂ ಕಲಿಯುವ ಸ್ಥಿತಿಯಲ್ಲಿರುವುದು ಆವಶ್ಯಕವಾಗಿದೆ. ಯಾವುದೇ ಕ್ಷೇತ್ರದಲ್ಲಿ ಜ್ಞಾನವನ್ನು ಪ್ರಾಪ್ತಮಾಡಿಕೊಳ್ಳುವುದು, ಇದು ಎಂದಿಗೂ ಮುಗಿಯದ ಪ್ರಕ್ರಿಯೆಯಾಗಿದೆ. ಅಧ್ಯಾತ್ಮವು ಅನಂತದ ಶಾಸ್ತ್ರವಾಗಿದೆ. ನಾವು ಎಷ್ಟೇ ಕಲಿತರೂ ಕಡಿಮೆಯೇ ಇರುತ್ತದೆ. ನಾವು ಕಲಿಯುತ್ತಿರುವಾಗ ‘ನಾನು ಅಜ್ಞಾನಿ ಇದ್ದೇನೆ’, ಎಂಬುದರ ಅರಿವಿಟ್ಟುಕೊಂಡು ಜ್ಞಾನವನ್ನು ಪಡೆಯುವ ಪ್ರಕ್ರಿಯೆ ಮಾಡಬೇಕು. ಇದರಿಂದ ‘ನನ್ನತನ ಕಡಿಮೆಯಾಗುವುದು ಮತ್ತು ಜ್ಞಾನದಲ್ಲಿನ ಚೈತನ್ಯವನ್ನು ಅನುಭವಿಸಲು ಸಾಧ್ಯವಾಗುವುದು’, ಹೀಗೆ ಎರಡೂ ಲಾಭಗಳಾಗುತ್ತವೆ. ಈ ಎರಡೂ ಲಾಭಗಳಿಂದ ಆನಂದವನ್ನು ಅನುಭವಿಸಲು ಸಾಧ್ಯವಾಗುತ್ತದೆ. ತದ್ವಿರುದ್ಧ ಕಲಿಸುವಿಕೆಯಲ್ಲಿ ‘ನನಗೆ ಬರುತ್ತದೆ, ಈ ಅಹಂ ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಜ್ಞಾನದಲ್ಲಿನ ಚೈತನ್ಯವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ಕಲಿಸುವ ಭೂಮಿಕೆಯಲ್ಲಿರುವುದರಿಂದ ಹೆಚ್ಚು ಹಾನಿಯಾಗುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ (೧೦.೯.೨೦೨೧)