೭ ವರ್ಷಗಳಿಂದ ಹೊರಗೆ ಎಲ್ಲಿಯೂ ಹೋಗಲಾಗದ ಕಾರಣ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗಾದ ಲಾಭ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ನನಗೆ ಮುಂಚೆ ಮರಗಳು, ಗುಡ್ಡಗಳು ಇವೆಲ್ಲ ಒಂದೇ ಜಾಗದಲ್ಲಿ ನಿಂತಿರುತ್ತವೆ. ಅವುಗಳಿಗೆ ಆ ಬಗ್ಗೆ ಬೇಸರವಾಗುವುದಿಲ್ಲವೇ ಎಂದು ಅನಿಸುತ್ತಿತ್ತು. ನನ್ನ ಅನಾರೋಗ್ಯವು ನನಗೆ ಇದರ ಉತ್ತರವನ್ನು ನೀಡಿತು. ಕಳೆದ ೭ ವರ್ಷಗಳಿಂದ ನನಗೆ ಎಲ್ಲಿಯೂ ಹೊರಗೆ ಹೋಗಲು ಸಾಧ್ಯವಾಗಿಲ್ಲ, ಆದರೆ ಕೇವಲ ಕಿಟಕಿಯಿಂದ ಕಾಣಿಸುವ ದೃಶ್ಯವನ್ನು ನೋಡಿ ನಾನು ಆನಂದದಿಂದಿದ್ದೇನೆ. ಆ ಸಮಯದಲ್ಲಿ ಪರಿಸ್ಥಿತಿಯನ್ನು ದೂರದೇ ಆ ಸ್ಥಿತಿಯನ್ನು ಸ್ವೀಕರಿಸಿ ಆನಂದದಿಂದ ಹೇಗಿರಬಹುದು ಎಂದು ನಾನು ಕಲಿತೆನು ಎಂದು ಸಹ ಹೇಳಬಹುದು. ಹೊರಗೆ ಹೋಗಲಾಗದ ಕಾರಣ ನನಗೆ ಇನ್ನೊಂದು ಲಾಭವಾಯಿತು, ಅದೆಂದರೆ ಅಲ್ಲಿ-ಇಲ್ಲಿ ವ್ಯರ್ಥ ಹೋಗುವ ಸಮಯವು ಉಳಿದ ಕಾರಣ ನಾನು ಗ್ರಂಥಗಳ ಬರವಣಿಗೆಯ ಕಡೆಗೆ ಗಮನವನ್ನು ಕೆಂದ್ರೀಕರಿಸಬಹುದಾಗಿದೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨.೧೦.೨೦೧೪)