ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವೀ ವಿಚಾರ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಕ್ರೂರತೆಯ ಇತಿಹಾಸವಿಲ್ಲದ ಜಗತ್ತಿನ ಏಕೈಕ ಧರ್ಮವೆಂದರೆ ಹಿಂದೂ ಧರ್ಮ !

ಧರ್ಮ ಇರುವುದು ಒಂದೇ ಮತ್ತು ಅದುವೇ ಹಿಂದೂ ಧರ್ಮ. ಇತರ ಎಲ್ಲವೂ ಪಂಥಗಳಾಗಿವೆ. ಹಿಂದೂ ಧರ್ಮವನ್ನು ಬಿಟ್ಟು ಉಳಿದ ಧರ್ಮಗಳ (ಪಂಥಗಳ) ಇತಿಹಾಸ ನೋಡಿದರೆ, ಅದರಲ್ಲಿ ವಿವಿಧ ಕಾಲಘಟ್ಟದಲ್ಲಿ ಲಕ್ಷಾಂತರ ಹತ್ಯೆಗಳ, ಕ್ರೂರತೆಯ, ಬಲಾತ್ಕಾರಗಳ, ಗೆದ್ದ ಪ್ರದೇಶಗಳಲ್ಲಿರುವ ಸ್ತ್ರೀ-ಪುರುಷರನ್ನು ಗುಲಾಮರೆಂದು ಮಾರಾಟ ಮಾಡಿದ ಸಾವಿರಾರು ಉಲ್ಲೇಖಗಳಿವೆ. ಆದರೆ ಅನಾದಿ ಕಾಲದಿಂದಿರುವ ಹಿಂದೂ ಧರ್ಮದ ಇತಿಹಾಸದಲ್ಲಿ ಇಂತಹ ಒಂದೇ ಒಂದು  ಉದಾಹರಣೆಯೂ ಇಲ್ಲ !

ದಿಶಾಹೀನ ಬುದ್ದಿಜೀವಿಗಳು ಮತ್ತು ಆಧುನಿಕತಾವಾದಿಗಳು !

ಯಾವ ರೀತಿ ಕಣ್ಣಿಲ್ಲದವನು ನನ್ನ ಹಿಂದೆ ಬನ್ನಿ ಎಂದು ಹೇಳಿದ್ದನ್ನು ಕೇಳಿ ಅವನ ಹಿಂದೆ ಹೋಗಿ ಗುಂಡಿಗೆ ಬೀಳುತ್ತಾರೋ, ಅದೇ ರೀತಿ ಬುದ್ಧಿಜೀವಿ ಮತ್ತು ಆಧುನಿಕತಾವಾದಿಗಳ ವಿಷಯದಲ್ಲಿದೆ. ಅವರು ದಿಶಾಹೀನತೆಯಿಂದ ತಾವೂ ಗುಂಡಿಗೆ ಬೀಳುತ್ತಾರೆ ಮತ್ತು ಅವರ ಜೊತೆಗೆ ಅವರ ಹಿಂದೆ ಹೋಗುವವರೂ ಸಹ ಬೀಳುತ್ತಾರೆ !

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ