ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವೀ ವಿಚಾರ !

ಸಚ್ಚಿದಾನಂದ ಪರಭ್ರಹ್ಮ ಡಾ. ಆಠವಲೆ

ವಿವಿಧ ವಿಷಯಗಳ ತಜ್ಞರು ಮತ್ತು ಸಂತರು ವ್ಯಾವಹಾರಿಕ ಜೀವನದಲ್ಲಿ ನೇತ್ರತಜ್ಞರಿಗೆ ಕಣ್ಣಿನ ರೋಗ ಬರುತ್ತದೆ. ಹೃದಯತಜ್ಞರಿಗೆ ಹೃದಯದಲ್ಲಿ ತೊಂದರೆ ಕಾಣಿಸುತ್ತದೆ. ಮನೋಚಿಕಿತ್ಸಕರಿಗೆ ಮಾನಸಿಕ ರೋಗ ಬರುವುದನ್ನು ನೋಡಿದ್ದೇವೆ; ಆದರೆ ಅಧ್ಯಾತ್ಮದಲ್ಲಿ ಸಂತರು ಇತರರನ್ನು ಆಧ್ಯಾತ್ಮಿಕ ತೊಂದರೆಗಳಿಂದ ಮುಕ್ತಗೊಳಿಸಿದಾಗ ಆಧ್ಯಾತ್ಮಿಕ ತೊಂದರೆಯಾಗುವುದಿಲ್ಲ ಕೆಲವು ಸಂತರಿಗೆ ಶಾರೀರಿಕ ತೊಂದರೆಯಾದರೂ, ಅದು ದೇಹ ಪ್ರಾರಬ್ಧಕ್ಕನುಸಾರ ಆಗುತ್ತದೆ. ಇದರಿಂದ ಸಂತರಿಗೆ ಯಾವುದೇ ಪರಿಣಾಮವಾಗುವುದಿಲ್ಲ !’

ಹಿಂದಿನ ಯುಗಗಳಲ್ಲಿ ಸ್ವಭಾವದೋಷ ಕಡಿಮೆ ಇದ್ದುದರಿಂದ ಯಾವುದೇ ಸಾಧನಾಮಾರ್ಗದಿಂದ ಸಾಧನೆ ಮಾಡಿ ಸಾಧಕರು ಮುಂದೆ ಹೋಗುತ್ತಿದ್ದರು. ಕಲಿಯುಗದಲ್ಲಿ ಅನೇಕ ಸ್ವಭಾವದೋಷಗಳು ಇರುವುದರಿಂದ ಮೊದಲಿಗೆ ಅದನ್ನು ದೂರ ಮಾಡಬೇಕಾಗುತ್ತದೆ. ಅನಂತರವೇ ಸಾಧನೆ ಮಾಡಲು ಆಗುತ್ತದೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ