ಅಯೋಧ್ಯೆಯಲ್ಲಿನ ಶ್ರೀರಾಮಮಂದಿರದ ಭೂಮಿಪೂಜೆಗಾಗಿ ಸನಾತನ ಸಂಸ್ಥೆಯ ಸಾಧಕರಿಂದ ಸುವರ್ಣದಾನ !
ಸಪ್ತರ್ಷಿ ಜೀವನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳು ಮಾಡಿದ ಆದೇಶದಂತೆ ಸನಾತನ ಸಂಸ್ಥೆಯ ವತಿಯಿಂದ ಶ್ರೀಚಿತ್‌ಶಕ್ತಿ(ಸೌ.) ಅಂಜಲಿ ಗಾಡಗೀಳರವರು ಶ್ರೀರಾಮಮಂದಿರದ ಭೂಮಿಪೂಜೆಗಾಗಿ ಸುವರ್ಣದಾನ ಮಾಡಿದರು. ಅವರು ಅಯೋಧ್ಯೆಯ ಕಾರಸೇವಕಪುರಮ್‌ದಲ್ಲಿ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಮುಖ್ಯಕಾರ್ಯದರ್ಶಿಗಳಾದ ಶ್ರೀ. ಚಂಪತ ರಾಯ್ ಇವರಲ್ಲಿ ಈ ಅರ್ಪಣೆಯನ್ನು ಒಪ್ಪಿಸಿದರು.