ಕಾಂಗ್ರೆಸ್ ಶಾಸಕರ ಹಿಂದೂವಿರೋಧಿ ಬೇಡಿಕೆಯನ್ನು ಅರಿತುಕೊಳ್ಳಿರಿ !

ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ

೧. ಅಂತಹವರ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕು !

ತಮಿಳುನಾಡಿನ ಕೊಯಮುತ್ತೂರದಲ್ಲಿ ಜುಲೈ ೧೭ ರಂದು ರಾತ್ರಿ ಅಜ್ಞಾತರು ಟೌನ್‌ಹಾಲ್ ಹತ್ತಿರ ಇರುವ ಮಗಾಲಿಯಮ್ಮನ ಮಂದಿರ, ರೈಲು ನಿಲ್ದಾಣದ ಹತ್ತಿರದ ವಿಜಯನಗರ ಮಂದಿರ ಮತ್ತು ನಲ್ಲಮಪಲಾಯಮದ ಸೆಲ್ವಾ ಪ್ರದೇಶದಲ್ಲಿರುವ ವಿಜಯನಗರ ಮಂದಿರ ಈ ೩ ಹಿಂದೂ ಮಂದಿರಗಳನ್ನು ಧ್ವಂಸ ಮಾಡಿ ಅವುಗಳಿಗೆ ಬೆಂಕಿ ಹಚ್ಚಿದರು.

೨. ಉಗ್ರರಿಗೆ ಧರ್ಮ ಇರುತ್ತದೆ ಎಂಬುದನ್ನು ಗಮನದಲ್ಲಿಡಿ !

ರಾಷ್ಟ್ರವಾದಿ ವಿಚಾರವುಳ್ಳ ‘ಜನಮ ಟಿವಿ ವಾಹಿನಿಯ ಎಲ್ಲ ಸಿಬ್ಬಂದಿಗಳಿಗೆ ಇಸ್ಲಾಮ್‌ಗೆ ಮತಾಂತರವಾಗಿ ಇಲ್ಲದಿದ್ದರೆ ಸಾಯಲು ಸಿದ್ಧರಾಗಿ ಎಂದು ಜಿಹಾದಿ ಉಗ್ರ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಕೇರಳದ ಶಾಖೆಯು ಬೆದರಿಕೆಯೊಡ್ಡಿದೆ.

೩. ಜಿಹಾದಿ ಉಗ್ರರು ಮಾಡಿದ ಪಾಪದ ಫಲ ಅಂದರೆ ಕೊರೋನಾ ಎಂದು ತಿಳಿಯಬೇಕೇ ?

ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದ ಶಫಿಕುರ್ಹಮಾನ ಬರ್ಕ್ ಇವರು ಕೊರೋನಾ ಇದು ಯಾವುದೇ ಕಾಯಿಲೆಯಾಗಿರದೇ, ನಿಮ್ಮ ಪಾಪಗಳಿಗೆ ಅಲ್ಲಾನು ನೀಡಿದ ಶಿಕ್ಷೆಯಾಗಿದೆ. ಅಲ್ಲಾಹನಿಗೆ ಪ್ರಾರ್ಥನೆ ಮಾಡುವುದರಿಂದ ಈ ಸಂಕಟವೂ ದೂರವಾಗುವುದು’ ಎಂದು ಹೇಳಿದ್ದಾರೆ.

೪. ಅಫಘಾನಿ ಮತ್ತು ರೋಹಿಂಗ್ಯಾ ಮುಸಲ್ಮಾನರ ಕಪಟತನವನ್ನು ತಿಳಿಯಿರಿ !

ಪೌರತ್ವ ತಿದ್ದುಪಡಿ ಕಾನೂನಿನ ಮೂಲಕ ಭಾರತೀಯ ಪೌರತ್ವವನ್ನು ಪಡೆಯಲು ಈಗ ಅಫ್ಘಾನಿ ಮತ್ತು ರೋಹಿಂಗ್ಯಾ ಮುಸಲ್ಮಾನರು ಕ್ರೈಸ್ತ ಧರ್ಮಕ್ಕೆ ಮತಾಂತರವಾಗುತ್ತಿರುವುದು ಬೆಳಕಿಗೆ ಬಂದಿದೆ. ಇದಕ್ಕಾಗಿ ಇದುವರೆಗೆ ೨೫ ಅಫ್ಘಾನಿ ಮುಸಲ್ಮಾನರು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದಾರೆ.

೫. ಆಡಳಿತವರ್ಗವು ಹಿಂದೂಗಳ ಧರ್ಮಗುರುಗಳ ಸಲಹೆ ಏಕೆ ಪಡೆಯುವುದಿಲ್ಲ  ?

ಮಹಾರಾಷ್ಟ್ರದ ಮುಂಬಯಿ ಮಹಾನಗರ ಪಾಲಿಕೆಯು ಕೊರೊನಾದ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ಶ್ರೀಗಣೇಶ ಮೂರ್ತಿಗಳ ವಿಸರ್ಜನೆಯನ್ನು ಮುಂದೂಡಲು ಸಾಧ್ಯವಿದ್ದರೆ ಮಾಘ ಗಣೇಶೋತ್ಸವ ಅಥವಾ ಮುಂದಿನ ವರ್ಷ ವಿಸರ್ಜನೆಯ ಸಮಯದಲ್ಲಿ ಮೂರ್ತಿಗಳ ವಿಸರ್ಜನೆಯನ್ನು ಮಾಡಬೇಕು, ಎಂದು ಕರೆ ನೀಡಿದೆ.

೬. ಕಾಂಗ್ರೆಸ್ ಶಾಸಕರ ಹಿಂದೂವಿರೋಧಿ ಬೇಡಿಕೆಯನ್ನು ಅರಿತುಕೊಳ್ಳಿರಿ !

ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಇವರು ‘ನಾಗರಪಂಚಮಿಗೆ ಹಿಂದೂಗಳು ನಾಗದೇವತೆಗೆ ಹಾಲು ಎರೆಯುವುದು ಅವೈಜ್ಞಾನಿಕವಾಗಿದೆ. ಇದರ ಬದಲು ಈ ಹಾಲನ್ನು ಬಡ ಮಕ್ಕಳಿಗೆ ಮತ್ತು ರೋಗಿಗಳಿಗೆ ಕೊಡಿ, ಎಂದು ಕರೆ ನೀಡಿದ್ದರು.

೭. ಪಾಕ್ ಬೆಂಬಲಿಗರಾದ ಖಾಲಿಸ್ತಾನಿ ಉಗ್ರರು ಈಗ ಮೌನವೇಕೆ ?

ಪಾಕಿಸ್ತಾನದ ಲಾಹೋರ ನಗರದಲ್ಲಿ ಪ್ರಾಚೀನ ‘ಭಾಯಿತಾರೂ ಸಿಂಹ ಗುರುದ್ವಾರವು ಒಂದು ಮಸೀದಿ ಆಗಿದೆ, ಇಲ್ಲಿ ಸಿಕ್ಖ್‌ರು ಬರಬಾರದು ಎಂದು ಮತಾಂಧರು ಬೆದರಿಕೆಯೊಡ್ಡಿದ್ದಾರೆ.