ಇಡೀ ದೇಶ ತೆರೆದಿರುವಾಗ ಧಾರ್ಮಿಕಸ್ಥಳಗಳು ಏಕೆ ಮುಚ್ಚಿವೆ ? – ಸರ್ವೋಚ್ಚ ನ್ಯಾಯಾಲಯ

ಅರ್ಜಿದಾರರಾದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ಜಾರ್ಖಂಡ್‌ನ ದೇವಘರ್‌ನಲ್ಲಿರುವ ವೈದ್ಯನಾಥ ಧಾಮ್ ದೇವಸ್ಥಾನ

ನವ ದೆಹಲಿ – ಸಂಚಾರ ನಿಷೇಧ ಸಡಿಲಗೊಳಿಸಿ ಇಡೀ ದೇಶ ತೆರೆದಿರುವಾಗ ಕೇವಲ ದೇವಸ್ಥಾನ, ಮಸೀದಿ, ಚರ್ಚ್ ಹಾಗೂ ಇತರ ಧಾರ್ಮಿಕ ಸ್ಥಳಗಳು ಏಕೆ ಮುಚ್ಚಿವೆ ?, ಎಂಬ ಪ್ರಶ್ನೆಯನ್ನು ಕೇಳುತ್ತಾ ಸರ್ವೋಚ್ಚ ನ್ಯಾಯಾಲಯವು ‘ಝಾರಖಂಡನ ದೇವಘರದಲ್ಲಿಯ ವೈದ್ಯನಾಥ ಧಾಮ ದೇವಸ್ಥಾನದಲ್ಲಿ ಸೀಮಿತ ಸಂಖ್ಯೆಯಲ್ಲಿ ಭಕ್ತರಿಗೆ ದರ್ಶನದ ಅನುಮತಿಯನ್ನು ನೀಡಬಹುದು’, ಎಂದು ಅದೇಶ ನೀಡಿದೆ.

೧. ‘ಸರಕಾರವು ಮುಂಬರುವ ಹುಣ್ಣಿಮೆಗೆ ಹಾಗೂ ಭಾದ್ರಪದ ತಿಂಗಳಲ್ಲಿ ಭಕ್ತರಿಗಾಗಿ ದೇವಸ್ಥಾನದಲ್ಲಿ ದರ್ಶನಕ್ಕಾಗಿ ಹೋಗುವ ವ್ಯವಸ್ಥೆ ಮಾಡಬೇಕು. ಬೇಕಿದ್ದರೆ ಸರಕಾರವು ‘ಈ-ಟೋಕನ್’ನ ಪರ್ಯಾಯವನ್ನು ಉಪಯೋಗಿಸಬಹುದು’, ಎಂದೂ ನ್ಯಾಯಾಲಯವು ನಿರ್ದೇಶನ ನೀಡಿದೆ.

೨. ಇಲ್ಲಿ ಶ್ರಾವಣ ಮಾಸದಲ್ಲಿ ನಡೆಯುವ ಜಾತ್ರೆಯಲ್ಲಿ ಭಕ್ತರಿಗಾಗಿ ದರ್ಶನದ ಅನುಮತಿ ಸಿಗಬೇಕೆಂದು ಅರ್ಜಿಯನ್ನು ಸಲ್ಲಿಸಲಾಗಿತ್ತು. ಝಾರಖಂಡ ಉಚ್ಚ ನ್ಯಾಯಾಲಯವು ಜುಲೈ ೩ ರಂದು ‘ಈ-ದರ್ಶನ’ದ ಅನುಮತಿಯನ್ನು ನೀಡಿದ್ದರು. (ಕೆಳ ನ್ಯಾಯಾಲಯದ ನಿರ್ಣಯವನ್ನು ಮೇಲಿನ ನ್ಯಾಯಾಲಯವು ಬದಲಾಯಿಸುತ್ತದೆ, ಹೀಗೆ ಅನೇಕ ಬಾರಿ ನೋಡಲು ಸಿಕ್ಕಿದೆ. ಆದ್ದರಿಂದ ‘ಒಂದು ವೇಳೆ ಕಾನೂನು ಹಾಗೂ ಕಲಂ ಒಂದೇ ರೀತಿ ಇದ್ದಲ್ಲಿ, ಅದಕ್ಕೆ ಬೇರೆ ಬೇರೆ ನಿರ್ಣಯ ಹೇಗೆ ನೀಡಲಾಗುತ್ತದೆ ?’ ಎಂದು ಜನಸಾಮಾನ್ಯರಿಗೆ ಪ್ರಶ್ನೆ ಬರುತ್ತದೆ – ಸಂಪಾದಕರು) ಈ ನಿರ್ಧಾರದ ಬಗ್ಗೆ ಭಾಜಪದ ಶಾಸಕ ನಿಶಿಕಾಂತ ದುಬೆಯವರು ಪ್ರಶ್ನಿಸಿದ್ದರು.

೩. ‘ಭಕ್ತರಿಗೆ ದೇವಸ್ಥಾನದಲ್ಲಿ ಪೂಜೆಗಾಗಿ ಅನುಮತಿ ನೀಡಿದರೆ ಕೊರೋನಾದ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ದೇವಸ್ಥಾನದಲ್ಲಿ ದರ್ಶನಕ್ಕಾಗಿ ವಿವಿಧ ಸ್ಥಳಗಳಿಂದ ಭಕ್ತರು ಬರುತ್ತಾರೆ. ಇಂತಹ ಸ್ಥಿತಿಯಲ್ಲಿ ಅವರನ್ನು ನಿಯಂತ್ರಿಸುವುದು ಕಠಿಣವಾಗುತ್ತದೆ’, ಎಂದು ರಾಜ್ಯ ಸರಕಾರದ ಅಭಿಪ್ರಾಯವಾಗಿತ್ತು.

‘ಈ-ದರ್ಶನ’ ಇದು ದರ್ಶನವಾಗಿರುವುದಿಲ್ಲ, ಬದಲಾಗಿ ಪ್ರತ್ಯಕ್ಷ ದೇವಸ್ಥಾನಕ್ಕೆ ಹೋಗಿ ದೇವರಲ್ಲಿ ಪ್ರಾರ್ಥಿಸುವ ಭಾವನೆಯೇ ಬೇರೆಯಾಗಿರುತ್ತದೆ ! – ಸರ್ವೋಚ್ಚ ನ್ಯಾಯಾಲಯ

ಈ ಸಮಯದಲ್ಲಿ ರಾಜ್ಯ ಸರಕಾರವು ‘ಈ-ದರ್ಶನ’ ಆರಂಭವಾಗಿರುವ ಬಗ್ಗೆ ತಿಳಿಸಿದಾಗ ನ್ಯಾಯಾಲಯವು ‘ಈ-ದರ್ಶನ ಅಂದರೆ ದೇವರ ದರ್ಶನ ಅಲ್ಲ. ಪ್ರತ್ಯಕ್ಷ ದೇವಸ್ಥಾನಕ್ಕೆ ಹೋಗಿ ದೇವರಲ್ಲಿ ಪ್ರಾರ್ಥನೆ ಮಾಡುವುದರ ಹಿಂದಿನ ಭಾವನೆಗಳು ಬೇರೆಯೇ ಇರುತ್ತವೆ’, ಎಂದು ಸ್ಪಷ್ಟ ಪಡಿಸಿತು. (ಇದು ಸರಕಾರಕ್ಕ್ಕೆ ಏಕೆ ತಿಳಿಯುವುದಿಲ್ಲ ? – ಸಂಪಾದಕರು)