ಅಯೋಧ್ಯೆಯಲ್ಲಿನ ಶ್ರೀರಾಮಮಂದಿರದ ಭೂಮಿಪೂಜೆಗಾಗಿ ಸನಾತನ ಸಂಸ್ಥೆಯ ಸಾಧಕರಿಂದ ಸುವರ್ಣದಾನ !

ಕೈಲಾಸ ಪರ್ವತ, ಕೈಲಾಸ ಚರಣಸ್ಪರ್ಶ, ಕೈಲಾಸ ಗೌರಿಕುಂಡ ಇಲ್ಲಿಯ ಮಣ್ಣು ಮತ್ತು ಮಾನಸ ಸರೋವರದ ಜಲವನ್ನು ಶ್ರೀಚಿತ್‌ಶಕ್ತಿ(ಸೌ.)ಅಂಜಲಿ ಗಾಡಗೀಳ ಇವರ ಹಸ್ತದಿಂದ ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಮುಖ್ಯ ಕಾರ್ಯದರ್ಶಿಗಳಾದ ಚಂಪತ ರಾಯ್ ಇವರಿಗೆ ಒಪ್ಪಿಸಲಾಯಿತು !

ಶ್ರೀಚಿತ್‌ಶಕ್ತಿ(ಸೌ.) ಅಂಜಲೀ ಗಾಡಗೀಳ

ಅಯೋಧ್ಯೆ(ಉತ್ತರಪ್ರದೇಶ)- ಸಪ್ತರ್ಷಿ ಜೀವನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳು ಮಾಡಿದ ಆದೇಶದಂತೆ ಸನಾತನ ಸಂಸ್ಥೆಯ ವತಿಯಿಂದ ಶ್ರೀಚಿತ್‌ಶಕ್ತಿ(ಸೌ.) ಅಂಜಲಿ ಗಾಡಗೀಳರವರು ಶ್ರೀರಾಮಮಂದಿರದ ಭೂಮಿಪೂಜೆಗಾಗಿ ಸುವರ್ಣದಾನ ಮಾಡಿದರು. ಅವರು ಅಯೋಧ್ಯೆಯ ಕಾರಸೇವಕಪುರಮ್‌ದಲ್ಲಿ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಮುಖ್ಯಕಾರ್ಯದರ್ಶಿಗಳಾದ ಶ್ರೀ. ಚಂಪತ ರಾಯ್ ಇವರಲ್ಲಿ ಈ ಅರ್ಪಣೆಯನ್ನು ಒಪ್ಪಿಸಿದರು. ಈ ಸಮಯದಲ್ಲಿ ಶ್ರೀಚಿತ್‌ಶಕ್ತಿ(ಸೌ.) ಅಂಜಲಿ ಗಾಡಗೀಳರವರು ಶ್ರೀರಾಮಮಂದಿರದ ಭೂಮಿಪೂಜೆಗಾಗಿ ಕೈಲಾಸ ಪರ್ವತ, ಕೈಲಾಸ ಚರಣಸ್ಪರ್ಶ, ಕೈಲಾಸ ಗೌರಿಕುಂಡ ಇಲ್ಲಿಯ ಮಣ್ಣು ಮತ್ತು ಮಾನಸ ಸರೋವರದ ಜಲವನ್ನು ಸಹ ಶ್ರೀ. ಚಂಪತ ರಾಯ್ ಇವರಿಗೆ ಒಪ್ಪಿಸಿದರು.


ಕಳೆದ ಕೆಲವು ದಿನಗಳಿಂದ ಭಾರತದಲ್ಲಿನ ಅನೇಕ ಪವಿತ್ರ ನದಿಗಳ ತೀರ್ಥ ಮತ್ತು ವಿಶೇಷ ಕ್ಷೇತ್ರಗಳ ಮಣ್ಣು ಅಯೋಧ್ಯೆಗೆ ಬರುತ್ತಿದೆ. ಶ್ರೀ. ಚಂಪತ ರಾಯ್ ಇವರು ಜುಲೈ ೩೧ ರಂದು ಭಾರತಾದ್ಯಂತ ಬಂದಿರುವ ಪವಿತ್ರ ತೀರ್ಥ ಮತ್ತು ಮಣ್ಣುಗಳನ್ನು ಶ್ರೀಚಿತ್‌ಶಕ್ತಿ(ಸೌ.) ಅಂಜಲೀ ಗಾಡಗೀಳ ಇವರಿಗೆ ತೋರಿಸಿದರು. ಶ್ರೀಚಿತ್‌ಶಕ್ತಿ(ಸೌ.) ಅಂಜಲಿ ಗಾಡಗೀಳರವರು ಈ ಎಲ್ಲವುಗಳ ಭಾವಪೂರ್ಣವಾಗಿ ದರ್ಶನ ಪಡೆದರು. ಅಯೋಧ್ಯೆಯ ಭೇಟಿಯ ಸಮಯದಲ್ಲಿ ಶ್ರೀಚಿತ್‌ಶಕ್ತಿ(ಸೌ.) ಅಂಜಲಿ ಗಾಡಗೀಳರವರು ಶರಯೂ ನದಿಯ ಆರತಿಯ ಸಮಯಕ್ಕೂ ಉಪಸ್ಥಿತರಿದ್ದರು. ಈ ಸಮಯದಲ್ಲಿ ಅವರೊಂದಿಗೆ ಹಿಂದುತ್ವನಿಷ್ಠ ವೈದ್ಯ ರಾಮಪ್ರಕಾಶ ಪಾಂಡೆಯವರು ಸಹ ಉಪಸ್ಥಿತರಿದ್ದರು.

ಭೂಮಿಪೂಜೆಗಾಗಿ ಭಾರತಾದ್ಯಂತ ಬಂದಿರುವ ಪವಿತ್ರ ತೀರ್ಥ ಹಾಗೂ ಮಣ್ಣಿನ ಭಾವಪೂರ್ಣ ದರ್ಶನವನ್ನು ಪಡೆಯುತ್ತಿರುವ ಶ್ರೀಚಿತ್‌ಶಕ್ತಿ(ಸೌ.) ಅಂಜಲೀ ಗಾಡಗೀಳ

ಶ್ರೀರಾಮಜನ್ಮಭೂಮಿಯು ನೂರಾರು ವರ್ಷಗಳಿಂದ ರಾಮಮಂದಿರದ ನಿರೀಕ್ಷೆಯಲ್ಲಿದೆ. ದೈವೀ ಯೋಜನೆಗನುಸಾರ ಆ ಕ್ಷಣ ಸಮೀಪಿಸಿದೆ. ಕೊರೊನಾದಿಂದಾಗಿ ಸಂಚಾರ ಸಾರಿಗೆಯ ಸಾಧನಗಳು ಸೀಮಿತ ಇರುವಾಗ ಮತ್ತು ಬಾಹ್ಯ ಪ್ರತಿಕೂಲತೆಯಿಂದಾಗಿ ವಸ್ತುಗಳು ಲಭ್ಯವಾಗುವುದು ಕಠಿಣ ಇರುವಾಗಲೂ ಈ ಶ್ರೀರಾಮಮಂದಿರದ ಭೂಮಿಪೂಜೆಗಾಗಿ ಅರ್ಪಣೆ ಮಾಡುವ ಸೌಭಾಗ್ಯ ದೊರಕುವುದು, ಇದು ಕೇವಲ ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಾಗಿದೆ. ಪರಾತ್ಪರ ಗುರು ಡಾ. ಆಠವಲೆ ಮತ್ತು ಎಲ್ಲಾ ಸಾಧಕರ ಪರವಾಗಿ ಶ್ರೀಚಿತ್‌ಶಕ್ತಿ(ಸೌ.) ಅಂಜಲಿ ಗಾಡಗೀಳ ಇವರು ಅಯೋಧ್ಯೆಯಲ್ಲಿ ಉಪಸ್ಥಿತರಿದ್ದಾರೆ. ಸನಾತನ ಸಂಸ್ಥೆಗೆ ಈ ಭವ್ಯ ಈಶ್ವರೀ ಕಾರ್ಯದಲ್ಲಿ ಸಹಭಾಗಿಯಾಗುವ ಅವಕಾಶ ದೊರಕುತ್ತಿದೆ, ಇದಕ್ಕಾಗಿ ಪ್ರಭು ಶ್ರೀರಾಮ ಮತ್ತು ಮಹರ್ಷಿಗಳ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !