ಭಗವಾನ ಕಾರ್ತಿಕೇಯನ ಸ್ತೋತ್ರವನ್ನು ಅವಮಾನಿಸಿದ ಪೆರಿಯಾರವಾದಿ ಯೂ ಟ್ಯೂಬ್ ಚಾನಲ್‌ನ ಇಬ್ಬರ ಬಂಧನ

ತಮಿಳುನಾಡು ಪೊಲೀಸರ ಸೈಬರ್ ಅಪರಾಧ ಶಾಖೆಯ ಅಧಿಕಾರಿಗಳು ಪೆರಿಯಾರವಾದಿ ಕಾರ್ಯಕರ್ತರಿಂದ ನಡೆಸಲಾಗುತ್ತಿರುವ ಯೂ ಟ್ಯೂಬ್ ಚಾನಲ್ ‘ಕರುಪ್ಪಾರ ಕುಟಮ’ನ (ಕಪ್ಪುವರ್ಣೀಯರ ಸಮೂಹ) ವಿರುದ್ಧ ಅಪರಾಧವನ್ನು ದಾಖಲಿಸಿ ಈ ಪ್ರಕರಣದಲ್ಲಿ ಎಮ್. ಸೆಂಥಿಲ ವಾಸನ ಹಾಗೂ ನಿರೂಪಕ ಸುರೇಂದ್ರನ್ ಇವರನ್ನು ಬಂಧಿಸಿದ್ದಾರೆ.

ಕೊಯಂಬತ್ತೂರು (ತಮಿಳುನಾಡು) ಇಲ್ಲಿ ಅಜ್ಞಾತರಿಂದ ೩ ದೇವಸ್ಥಾನಗಳನ್ನು ಒಡೆದು ಸುಟ್ಟರು

ಜುಲೈ ೧೭ ರ ರಾತ್ರಿ ಅಜ್ಞಾತರು ಟೌನ್ ಹಾಲ್‌ನ ಹತ್ತಿರ ಇರುವ ಮಗಾಲಿಯಮ್ಮನ್ ದೇವಸ್ಥಾನ, ರೈಲು ನಿಲ್ದಾಣದ ಬಳಿ ಇರುವ ವಿನಯನಗರ ದೇವಸ್ಥಾನ ಹಾಗೂ ನಲ್ಲಮಪಲಾಯಮ್‌ನ ಸೆಲವಾ ಪ್ರದೇಶದ ವಿನಯಗರ ದೇವಸ್ಥಾನ ಈ ೩ ಹಿಂದೂ ದೇವಸ್ಥಾನಗಳನ್ನು ಒಡೆದು ಬೆಂಕಿ ಹಚ್ಚಿದರು. ಒಡೆಯುವವರು ಇಲ್ಲಿಯ ಒಂದು ದೇವಸ್ಥಾನದಲ್ಲಿರುವ ತ್ರಿಶೂಲಕ್ಕೂ ಹಾನಿ ಮಾಡಿದ್ದಾರೆ. ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ಮಾಡುತ್ತಿದ್ದಾರೆ.

೫ ಸಾವಿರ ವರ್ಷಗಳ ಹಿಂದೆ ಪ್ರಪ್ರಥಮವಾಗಿ ರಾವಣನು ವಿಮಾನವನ್ನು ಹಾರಿಸಿದ್ದನು ! – ಶ್ರೀಲಂಕಾ ಸರಕಾರದ ಹೇಳಿಕೆ

ಶ್ರೀಲಂಕಾ ಸರಕಾರವು ರಾವಣ ಹಾಗೂ ಆತನ ವಿಮಾನದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಜನರಿಗೆ ಕಾಗದಪತ್ರ ಅಥವಾ ಪುಸ್ತಕಗಳ ಮಾಧ್ಯಮದಿಂದ ಇರುವಂತಹ ಯಾವುದೇ ಪ್ರಕಾರದ ಮಾಹಿತಿಗಳು ಇದ್ದಲ್ಲಿ ಅದನ್ನು ನೀಡಬೇಕು ಎಂದು ಹೇಳಿದೆ. ಈ ಬಗ್ಗೆ ವಿವಿಧ ದಿನಪತ್ರಿಕೆಗಳಲ್ಲಿ ಜಾಹೀರಾತನ್ನು ಪ್ರಕಾಶಿಸಿದೆ.

ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಸಂಚಾರ ನಿಷೇಧ ಜಾರಿಗೊಳಿಸುವುದಿಲ್ಲ ! – ರಮೇಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಸಂಚಾರ ನಿಷೇಧ ಜಾರಿಗೊಳಿಸುವುದಿಲ್ಲ. ರಾಜ್ಯದ ಮುಖ್ಯಮಂತ್ರಿಯವರೂ ಇದರ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿಯವರು ಹೇಳಿದ್ದಾರೆ. ಜುಲೈ ೨೦ ರಂದು ಇದರ ಬಗ್ಗೆ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

‘ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ !

ಭಾರತ ಮತ್ತು ಸಂಪೂರ್ಣ ಜಗತ್ತು ಚೀನಾವನ್ನು ಎಲ್ಲ ದಿಕ್ಕುಗಳಲ್ಲಿ ಮುತ್ತಿಗೆ ಹಾಕಿರುವುದರಿಂದ ಅದು ಬೇರೆ ಪರ್ಯಾಯವಿಲ್ಲದೆ ಮಾಡಿದ ತಾತ್ಕಾಲಿಕ ಕೃತಿ ಇದು; ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ. ಜಗತ್ತು ಮೂರನೆ ಮಹಾಯುದ್ಧದ ಹೊಸ್ತಿಲಿನಲ್ಲಿ ನಿಂತಿದೆ ಹಾಗೂ ಜಗತ್ತಿನ ಎಲ್ಲ ದೇಶಗಳೊಂದಿಗೆ ಗಡಿಯಲ್ಲಿ ಜಗಳವಾಡುವ ಚೀನಾ ಇಂದು ಅದರ ಕೇಂದ್ರ ಬಿಂದುವಾಗಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ರಾಜಕೀಯ ಪಕ್ಷದ ನೇತಾರರು ಮತ್ತು ಕಾರ್ಯಕರ್ತರು ಯಾರೇ ಹಣ ಅಥವಾ ಹುದ್ದೆಯನ್ನು ನೀಡಿದರೆ ಇನ್ನೊಂದು ಪಕ್ಷಕ್ಕೆ ಹೋಗುತ್ತಾರೆ. ತದ್ವಿರುದ್ಧ ಭಕ್ತನು ದೇವರ ಪಕ್ಷವನ್ನು ಬಿಟ್ಟು, ದೇವರ ಚರಣದಲ್ಲಿರುವ ಜಾಗವನ್ನು ಬಿಟ್ಟು ಬೇರೆಕಡೆ ಎಲ್ಲಿಯೂ ಹೋಗುವುದಿಲ್ಲ.

ಆಗಸ್ಟ್ ೫ ರಂದು ಪ್ರಧಾನಿ ಮೋದಿಯವರ ಹಸ್ತದಿಂದ ಅಯೋಧ್ಯೆಯ ರಾಮಮಂದಿರದ ಭೂಮಿ ಪೂಜೆ

ಆಗಸ್ಟ್ ೫ ರಂದು ಅಯೋಧ್ಯೆಯ ರಾಮಮಂದಿರದ ಭೂಮಿ ಪೂಜೆಯನ್ನು ಪ್ರಧಾನಿ ಮೋದಿಯವರ ಹಸ್ತದಿಂದ ನೆರವೇರಲಿದೆ. ಇದು ಜಗತ್ತಿನ ಮೂರನೇ ಅತೀದೊಡ್ಡ ದೇವಸ್ಥಾನವಾಗಲಿದೆ, ಎಂದು ಹೇಳಲಾಗುತ್ತಿದೆ. ಇದರ ಕೆಲಸ ಪೂರ್ಣವಾಗಲು ೩ ವರ್ಷ ತಗಲಬಹುದು.

ಈಗ ಬಿಹಾರದ ಸೀತಾಮಾತಾ ಗುಹೆಯನ್ನೂ ತನ್ನದೆಂದ ನೇಪಾಳ !

ನೇಪಾಳವು ಬಿಹಾರ್‌ನ ಪಶ್ಚಿಮ ಚಂಪಾರಣ ಜಿಲ್ಲೆಯಲ್ಲಿರುವ ‘ಸೀತಾಮಾತಾ ಗುಹೆ’ ಹೆಸರಿನಿಂದ ಗುರುತಿಸುವ ಪ್ರದೇಶವನ್ನು ತನ್ನದೆಂದು ಹೇಳಿಕೊಳ್ಳುತ್ತಿದೆ. ಕೆಲವು ನೇಪಾಳಿ ಸಮಾಜಕಂಟಕರು ಭಾರತ-ನೇಪಾಳ ಗಡಿಯಲ್ಲಿರುವ ಸೀತಾಮಾತಾ ಗುಹೆಯ ಪ್ರದೇಶದಲ್ಲಿ ಹಾಕಲಾಗಿದ್ದ ಕಲ್ಲಿನ ಖಂಬ ಕ್ರಮಸಂಖ್ಯೆ ೪೩೬ ಕಿತ್ತುಹಾಕಿದ್ದಾರೆ.

ಕೊರೋನಾದಿಂದ ಪಾರಾಗಲು ಗೋಮೂತ್ರ ಸೇವಿಸಿ ! – ಭಾಜಪ ಶಾಸಕರ ಸಲಹೆ

‘ಕೊರೋನಾದಿಂದ ಪಾರಾಗಲು ಗೋಮೂತ್ರ ಸೇವಿಸಿ’, ಎಂದು ಪಶ್ಚಿಮ ಬಂಗಾಲದ ಭಾಜಪ ಶಾಸಕ ಹಾಗೂ ಬಂಗಾಲ ಪ್ರದೇಶಾಧ್ಯಕ್ಷ ದಿಲೀಪ ಘೋಷ ಇವರು ಸಲಹೆ ನೀಡಿದ್ದಾರೆ. ಈ ಬಗ್ಗೆ ಒಂದು ‘ವಿಡಿಯೋ’ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ. ಈ ‘ವಿಡಿಯೋ’ದಲ್ಲಿ ಶಾಸಕ ಘೋಷ ಇವರು ಒಂದು ಸಭೆಯಲ್ಲಿ ಆರೋಗ್ಯಕ್ಕಾಗಿ ಮನೆಮದ್ದಿನ ಬಗ್ಗೆ ತಿಳುವಳಿಕೆ ನೀಡುತ್ತಿರುವಂತೆ ಕಂಡುಬರುತ್ತಿದೆ.

ಗುಜರಾತ್‌ನಲ್ಲಿ ಸತತ ೪ ವರ್ಷ ಲೈಂಗಿಕ ಶೋಷಣೆಯನ್ನು ಮಾಡಿದ ಮದರಸಾದ ಮೌಲಾನಾನ ಬಂಧನ

ಇಲ್ಲಿಯ ನಖತರಾಣಾ ತಾಲೂಕಿನ ನಾರಾ ಗ್ರಾಮದಲ್ಲಿಯ ಮದರಸಾದ ಶಿಕ್ಷಕ ಮೌಲಾನಾ ಸಮದುದ್ದೀನ ಹಾಜಿ ಸುಲೆಮಾನ ಜಾಟ ಈತನು ಓರ್ವ ವಿದ್ಯಾರ್ಥಿನಿಯನ್ನು ಸತತ ೪ ವರ್ಷಗಳಿಂದ ಲೈಂಗಿಕ ಶೋಷಣೆಯನ್ನು ಮಾಡಿರುವ ಘಟನೆ ನಡೆದಿದೆ.