ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿಹತ್ಯೆ ಮಾಡುವುದನ್ನು ನಿರ್ಬಂಧ ಹೇರಿ ! – ಗುಜರಾತ ಉಚ್ಚ ನ್ಯಾಯಾಲಯದಿಂದ ರಾಜ್ಯ ಸರಕಾರಕ್ಕೆ ಆದೇಶ

ನವ ದೆಹಲಿ – ಬಕರಿ ಈದ್ ಮುಂಚೆ ಗುಜರಾತ ಉಚ್ಚ ನ್ಯಾಯಾಲಯವು ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಹತ್ಯೆಯ ಮೇಲೆ ನಿರ್ಬಂಧ ಹೇರುವಂತೆ ಆದೇಶ ನೀಡಿದೆ. ಇದರ ಬಗ್ಗೆ ರಾಜಕೋಟದಲ್ಲಿಯ ನಿವಾಸಿಯಾಗಿರುವ ಯಶಶಾಹನು ಅರ್ಜಿಯನ್ನು ಸಲ್ಲಿಸಿದ್ದನು. ಈ ಅರ್ಜಿಯಲ್ಲಿ ಆತ, ‘ಪ್ರತಿವರ್ಷ ಬಕ್ರೀದ್‌ಗೆ ರಸ್ತೆ, ಪಾದಚಾರಿ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಹತ್ಯೆ ಮಾಡಲಾಗುತ್ತದೆ. ಇದರಿಂದ ಗಂಭೀರ ಕಾಯಿಲೆಗಳು ಉಲ್ಬಣಿಸಬಹುದು. ಜುಲೈ ೩೧ ಹಾಗೂ ಆಗಸ್ಟ್ ೧ ಈ ೨ ದಿನಗಳಲ್ಲಿ ಮೇಕೆ, ಕೋಣ, ಕುರಿಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರಬೇಕು. ಪಶು ಚಿಕಿತ್ಸಾ ಅಧಿಕಾರಿಗಳ ಮೂಲಕ ಸೇವನೆಗಾಗಿ ಅಯೋಗ್ಯವಾಗಿರುವಂತಹ ಮಾಂಸಗಳ ಮೇಲೆ ನಿರ್ಬಂಧ ಹೇರಬೇಕು ಎಂಬ ಆದೇಶವನ್ನು ನೀಡಿ’ ಎಂದು ಹೇಳಿದ್ದಾರೆ. ಅದಕ್ಕೆ ಗುಜರಾತ ಉಚ್ಚ ನ್ಯಾಯಾಲಯವು ಈ ಮೇಲಿನ ಆದೇಶವನ್ನು ನೀಡಿದೆ. ಕರ್ಣಾವತಿಯಲ್ಲಿನ ಪೊಲೀಸ ಆಯುಕ್ತರಾದ ಆಶಿಷ ಭಾಟಿಯಾ ಇವರು ಜುಲೈ ೨೫ ರಂದು ಹೊರಡಿಸಿದ ಸುತ್ತೊಲೆಯಲ್ಲಿ ‘ಕೇವಲ ಸಾರ್ವಜನಿಕ ಸ್ಥಳಗಳಲ್ಲಿ ಅಷ್ಟೇ ಅಲ್ಲದೇ, ಜನರಿಗೆ ಸಹಜವಾಗಿ ಕಾಣಿಸುವ ಖಾಸಗಿ ಸ್ಥಳಗಳಲ್ಲಿಯೂ ಪ್ರಾಣಿಹತ್ಯೆ ಮಾಡಬಾರದು’, ಎಂಬ ಆದೇಶವನ್ನು ನೀಡಿದ್ದರು. ‘ಈ ರೀತಿಯ ಆದೇಶವನ್ನು ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ನೀಡಿ. ಇತರರಿಗೆ ಕಾಣಿಸುವಂತೆ ಯಾರೂ ಬಲಿ ಕೊಡಬಾರದು’, ಎಂದು ಸಹ ನ್ಯಾಯಾಲಯವು ಹೇಳಿದೆ.

ಚೆನ್ನೈ ಉಚ್ಚ ನ್ಯಾಯಾಲಯದಿಂದ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿಹತ್ಯೆಯ ಮೇಲೆ ನಿರ್ಬಂಧ

ಚೆನ್ನೈ ಉಚ್ಚ ನ್ಯಾಯಾಲಯವೂ ಬಕ್ರಿದ ಅಥವಾ ಇತರ ಯಾವುದೇ ಧಾರ್ಮಿಕ ಹಬ್ಬಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿಹತ್ಯೆ ಮಾಡುವುದರ ಮೇಲೆ ನಿರ್ಬಂಧ ಹೇರಿದೆ. ಕೇವಲ ಅನುಮತಿ ಪಡೆದಿರುವ ಕಸಾಯಿಖಾನೆಗಳಲ್ಲಿಯೇ ಮೇಕೆಗಳನ್ನು ಕಡಿಯಲಾಗುತ್ತಿದೆ, ಎಂಬುದನ್ನು ಖಚಿತ ಪಡಿಸುವಂತೆ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ.

‘ಮಧುರೈ ಉತ್ತರ ಭಾರತೀಯ ಕಲ್ಯಾಣ ಸಂಘಟನೆ’ಯು ಅವರ ನ್ಯಾಯವಾದಿ ಕೆ.ಆರ್. ಲಕ್ಷ್ಮಣರವರ ಮೂಲಕ ಒಂದು ಸಾರ್ವಜನಿಕ ಹಿತಾಸಕ್ತಿಯನ್ನು ಸಲ್ಲಿಸಿತ್ತು. ಅದರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಡಿದರೆ ಕೊರೋನಾದ ಅಪಾಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂಬ ಭೀತಿಯನ್ನು ಅರ್ಜಿದಾರನು ವ್ಯಕ್ತಪಡಿಸಿದ್ದರು. ಈ ಅರ್ಜಿಯ ಆಲಿಕೆಯನ್ನು ಮಾಡುವಾಗ ಕೆಲವು ಜಾತಿಯ ಪ್ರಾಣಿಗಳ ಹತ್ಯೆ ಮಾಡುವ ಅನುಮತಿಯನ್ನು ನೀಡುವಾಗಲೇ ಹಸು ಹಾಗೂ ಒಂಟೆಯ ಹತ್ಯೆ ಆಗುತ್ತಿಲ್ಲವಲ್ಲ ಎಂದು ಖಚಿತ ಪಡಿಸುವಂತೆ ನ್ಯಾಯಮೂರ್ತಿ ವಿನಿತ ಕೊಠಾರಿ ಹಾಗೂ ಕೃಷ್ಣನ್ ರಾಮಾಸಾಮಿ ಇವರು ಆದೇಶವನ್ನು ನೀಡಿದ್ದಾರೆ.

ಕರ್ನಾಟಕ ಸರಕಾರದಿಂದಲೂ ಪಶುಬಲಿ ನೀಡುವುದರ ಮೇಲೆ ನಿರ್ಬಂಧ

ಕೊರೋನಾದ ಅಪಾಯದ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರವೂ ಜುಲೈ ೨೭ ರಂದು ಇದೇ ರೀತಿಯ ಆದೇಶವನ್ನು ನೀಡುತ್ತಾ ‘ಈದ್ಗಾಹ ಮೈದಾನದಂತಹ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ನಮಾಜು ಪಠಣ ಹಾಗೂ ಪಶುಬಲಿ ನೀಡಲು ನಿರ್ಬಂಧ ಹೇರಿದೆ.