ತಮ್ಮ ವಾಸ್ತು ಹಾಗೂ ಖಾಲಿ ಜಾಗ ಇವುಗಳ ಮಾರಾಟ ಮಾಡುವ ಪ್ರಕ್ರಿಯೆಯನ್ನು ಆದಷ್ಟು ಬೇಗನೇ ಪೂರ್ಣಗೊಳಿಸಿರಿ ಮತ್ತು ಮುಂದಾಗಬಹುದಾದ ಅರ್ಥಿಕ ಹಾನಿಯನ್ನು ತಡೆಗಟ್ಟಿರಿ !
ಕೆಲವು ಸಾಧಕರು ತಮ್ಮ ವೈಯಕ್ತಿಕ ವಾಸ್ತು (ಫ್ಲ್ಯಾಟ್, ಬಂಗಲೆ, ‘ಫಾರ್ಮಹೌಸ್’, ಅಂಗಡಿ, ಗೋಡೌನ್), ಖಾಲಿ ಜಾಗ (ಫ್ಲಾಟ್), ಕೃಷಿಭೂಮಿ ಮುಂತಾದ ಸ್ಥಿರ ಆಸ್ತಿಗಳನ್ನು ಮಾರಾಟ ಮಾಡಲು ನಿರ್ಣಯಿಸಿದ್ದಾರೆ.
೧. ‘ಕೊರೋನಾ’ ರೋಗದಿಂದಾಗಿ ನಾಗರಿಕರ ಖರೀದಿಸಾಮರ್ಥ್ಯ ಮೇಲೆ ಪರಿಣಾಮವಾಗಿರುವುದರಿಂದ ಮುಂಬರುವ ಕಾಲದಲ್ಲಿ ಆಸ್ತಿಗಳ ಮಾರಾಟದಲ್ಲಿ ಅಡಚಣೆಗಳು ಬರುವ ಸಾಧ್ಯತೆ ಇದೆ
ಭಾರತದಲ್ಲಿ ಕೊರೋನಾ ರೋಗದ ಹರಡುವಿಕೆಯ ನಂತರ ಜಾರಿಗೆ ಬಂದ ಲಾಕ್‌ಡೌನ್‌ದಿಂದಾಗಿ ವ್ಯವಸಾಯ, ನೌಕರಿ ಮತ್ತು ಒಟ್ಟಿನಲ್ಲಿ ನಾಗರಿಕರ ಖರೀದಿ ಸಾಮರ್ಥ್ಯದ ಮೇಲೆ (ಖರೀದಿಸುವ ಕ್ಷಮತೆಯ ಮೇಲೆ (‘ಪರ್ಚೆಸಿಂಗ್ ಪವರ್’ದ ಮೇಲೆ) ದೊಡ್ಡ ಪರಿಣಾಮವಾಗಿದೆ. ಇದರಿಂದ ಮುಂಬರುವ ಕಾಲದಲ್ಲಿ ಆರ್ಥಿಕ ಸ್ಥಿತಿ ಕುಸಿಯುವ ಸಾಧ್ಯತೆಯನ್ನು ಅಲ್ಲಗಳೆಯಲು ಆಗುವುದಿಲ್ಲ. ಇದರಿಂದಾಗಿ ಆಸ್ತಿಗಳ ಬೆಲೆಗಳು ದಿನದಿಂದ ದಿನಕ್ಕೆ ಕುಸಿಯಬಹುದು. ಇಂತಹ ಸಮಯದಲ್ಲಿ ಸಾಧಕರಿಗೆ ತಮ್ಮ ಆಸ್ತಿಗಳನ್ನು ಮಾರಾಟ ಮಾಡಲು ಅಡಚಣೆಗಳು ಬರಬಹುದು ಮತ್ತು ಅರ್ಥಿಕ ಹಾನಿಯನ್ನು ಸಹಿಸಕೊಳ್ಳಬೇಕಾಗಬಹುದು, ಇದರ ಹೊರತು ಬೇರೆ ದಾರಿಯೇ ಇಲ್ಲ. ಇದನ್ನು ತಡೆಗಟ್ಟಲು ಸಾಧಕರು ಸ್ಥಿರ ಆಸ್ತಿಯ ಮಾರಾಟದ ವಿಷಯದಲ್ಲಿ ಕೂಡಲೇ ವಿಚಾರ ಮಾಡಿ ನಿರ್ಣಯವನ್ನು ತೆಗೆದುಕೊಳ್ಳಬೇಕು.
೨. ಸ್ಥಿರ ಆಸ್ತಿಗಳ ಮಾರಾಟ ಮಾಡುವಾಗ ಗಮನದಲ್ಲಿಡಬೇಕಾದ ಅಂಶಗಳು
ಅ. ಆಸ್ತಿಗಳ ಮಾರಾಟ ಮಾಡಲು, ಸಾಧ್ಯವಿದ್ದರೆ ಸ್ಥಳೀಯ ‘ಬ್ರೋಕರ್’ರ (‘ಪ್ರಾಪರ್ಟಿ ಡಿಲರ್’ರ) ಸಹಾಯವನ್ನು ಪಡೆಯಬೇಕು. ನೀವು ಆರಿಸಿದ ‘ಬ್ರೋಕರ್’ ವಿಶ್ವಾಸಾರ್ಹ ಆಗಿದ್ದಾನೆಯೇ ? ಅವನು ಮೋಸ ಮಾಡುವವನಾಗಿಲ್ಲವಲ್ಲ ?’, ಎಂದು ಸ್ಥಳೀಯ ಜನರ ಬಳಿ ವಿಚಾರಣೆ ಮಾಡಬೇಕು. ವಾಸ್ತು ಅಥವಾ ಭೂಮಿ ಇವುಗಳಿಗೆ ಅಪೇಕ್ಷಿತ ಬೆಲೆಯನ್ನು ದೊರಕಿಸಿಕೊಳ್ಳಲು ಆಯಾ ಭಾಗದಲ್ಲಿನ ಆಸ್ತಿಗಳ ನಡೆಯುತ್ತಿರುವ ಬೆಲೆಗಳ ಅಧ್ಯಯನ ಮಾಡಬೇಕು ಮತ್ತು ತದನಂತರ ‘ನಮಗೆ ಎಷ್ಟು ಬೆಲೆ ಬರುವುದು ಅಪೇಕ್ಷಿತವಿದೆ ?’, ಎಂಬುದನ್ನು ನಿರ್ಧರಿಸಬೇಕು. ಅಪೇಕ್ಷಿತ ಬೆಲೆ ಸಿಗುತ್ತಿದ್ದರೆ ಮಾರಾಟದ ಪ್ರಕ್ರಿಯೆಯನ್ನು ತಕ್ಷಣ ಪೂರ್ಣಗೊಳಿಸಬೇಕು.
ಆ. ಅಪೇಕ್ಷಿತ ಬೆಲೆ ಬರದಿದ್ದರೆ ‘ಬೆಲೆ ಎಷ್ಟು ಶೇಕಡಾದಷ್ಟು ಕಡಿಮೆಯಿದೆ ?’, ಎಂದು ಸದ್ಯದ ಸ್ಥಿತಿಯಲ್ಲಿನ ಕಾರಣಗಳ ಬಗ್ಗೆ ಅಧ್ಯಯನ ಮಾಡಬೇಕು. ಅಪೇಕ್ಷಿತ ಬೆಲೆಬರಲು ಹೆಚ್ಚು ಸಮಯ ಕಾಯದೇ ಇರುವುದರಲ್ಲಿ ಹೆಚ್ಚಿಗೆ ಸಿಗುವ ಬೆಲೆಗೆ ಮಾರಾಟ ಮಾಡಬೇಕು. ಸಂಭಾವ್ಯ ಆಪತ್ಕಾಲದ ತೀವ್ರತೆ ಮತ್ತು ನಮ್ಮ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪರಿಸ್ಥಿತಿಗನುಸಾರ ಹೊಂದಾಣಿಕೆ ಮಾಡಿಕೊಳ್ಳುವ ಸಿದ್ಧತೆಯನ್ನಿಟ್ಟುಕೊಳ್ಳಬೇಕು.
ತಮ್ಮ ಬಳಿಯಿರುವ ಜಡ ಸಾಹಿತ್ಯಗಳು, ಯಂತ್ರಸಾಮುಗ್ರಿ ಮುಂತಾದವುಗಳನ್ನು ಮಾರಾಟ ಮಾಡಬೇಕಾಗಿದ್ದರೆ, ಅವುಗಳ ಮಾರಾಟದ ಪ್ರಕ್ರಿಯೆಯನ್ನೂ ಬೇಗನೆ ಪೂರ್ಣಗೊಳಿಸಬೇಕು. ‘ಕೊರೋನಾ’ ರೋಗದ ಹರಡುವಿಕೆಯಿಂದಾಗಿ ಸುರಕ್ಷತೆಯ ದೃಷ್ಟಿಯಿಂದ ನೀಡಿದ ಸೂಚನೆಗಳನ್ನು ಪಾಲಿಸಿ ಈ ವ್ಯವಹಾರಗಳನ್ನು ಮಾಡಬೇಕು.
ಸಾಧಕರೇ, ಸ್ಥಿರ (‘ಇಮ್‌ಮೂವೆಬಲ್) ಆಸ್ತಿಯ ಮಾರಾಟದ ವ್ಯವಹಾರಗಳನ್ನು ಬೇಗನೇ ಪೂರ್ಣಗೊಳಿಸಿ ಆಪತ್ಕಾಲವನ್ನು ಎದುರಿಸಲು ಬೇಗನೆ ಸಿದ್ಧರಾಗಿರಿ !