551 ನಗರಗಳಲ್ಲಿ ಗೌಪ್ಯ ಸಾಮಗ್ರಿಗಳನ್ನು (ಪ್ರಶ್ನೆಪತ್ರಿಕೆಗಳನ್ನು) ತಲುಪಿಸುವ ಜವಾಬ್ದಾರಿ

ನವದೆಹಲಿ – ರಾಷ್ಟ್ರೀಯ ಅರ್ಹತಾ ಪರೀಕ್ಷೆ ಅಂದರೆ ‘ನೀಟ್’ ಮರುಪರೀಕ್ಷೆಗಾಗಿ ಗೌಪ್ಯ ಸಾಮಗ್ರಿಗಳನ್ನು ತಲುಪಿಸುವ ಜವಾಬ್ದಾರಿಯನ್ನು ಕೇಂದ್ರೀಯ ಅರೆಸೇನಾ ಪಡೆಗಳಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳ ಮೇಲೆ ವಹಿಸಲಾಗಿದೆ. ಈ ಪಡೆಗಳು 551 ನಗರಗಳಲ್ಲಿ ಗೌಪ್ಯ ಪರೀಕ್ಷಾ ಸಾಮಗ್ರಿಗಳನ್ನು ಸುರಕ್ಷಿತವಾಗಿ ಮತ್ತು ಯಾವುದೇ ರೀತಿಯ ಸೋರಿಕೆಯಾಗದಂತೆ ತಲುಪಿಸುವುದನ್ನು ಖಚಿತಪಡಿಸಲಿವೆ. ಪರೀಕ್ಷೆಯ ಗೌಪ್ಯ ಸಾಮಗ್ರಿಗಳನ್ನು ಸಾಗಿಸುವ ವಿಮಾನಗಳಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಸೈನಿಕರು ಇರಲಿದ್ದಾರೆ. ‘ರಾಷ್ಟ್ರೀಯ ಪರೀಕ್ಷಾ ಸಂಸ್ಥೆ’ಯ ಅಂದರೆ ‘ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ’ಯ ಮಹಾನಿರ್ದೇಶಕರು ಮಾಡಿದ ವಿನಂತಿಯ ಮೇರೆಗೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ದೇಶದಾದ್ಯಂತ ಇರುವ ಪರೀಕ್ಷಾ ಕೇಂದ್ರಗಳಲ್ಲಿ ಜೂನ್ 21 ರಂದು ‘ನೀಟ್’ ಮರುಪರೀಕ್ಷೆ ನಡೆಯಲಿದೆ.
ಗೌಪ್ಯ ಪರೀಕ್ಷಾ ಸಾಮಗ್ರಿಗಳನ್ನು ಕರ್ಣಾವತಿ ಮತ್ತು ಭಾಗ್ಯನಗರದ ಮೂಲ ಕೇಂದ್ರಗಳಿಂದ ದೇಶದಾದ್ಯಂತದ 551 ನಗರಗಳಿಗೆ ತಲುಪಿಸಲಾಗುವುದು. ಸಾಮಗ್ರಿಗಳ ಸಾಗಣೆ ಮತ್ತು ನಿರ್ವಹಣೆಯ ಈ ಪ್ರಮುಖ ಹಂತಗಳಲ್ಲಿ ಎರಡು ಹಂತದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ.
ಮುಂದಿನ ವರ್ಷದ ವೇಳೆಗೆ ಒಂದು ಅಥವಾ ಎರಡು ರಾಜ್ಯಗಳನ್ನು ಹೊರತುಪಡಿಸಿ ಇಡೀ ಈಶಾನ್ಯ ಭಾರತದಿಂದ ‘ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ’ಯನ್ನು ಹಿಂಪಡೆಯಬಹುದು! : Northeast AFSPA Exit
‘ನ್ಯೂಸ್ ಕ್ಲಿಕ್’ ಮೇಲಿನ ಕ್ರಮ ರದ್ದುಗೊಳಿಸಿದ ದೆಹಲಿ ಉಚ್ಚ ನ್ಯಾಯಾಲಯ!
ನಾಶಿಕ್: ಸಿಂಹಸ್ಥ ಕುಂಭಮೇಳದ ಧ್ವಜಸ್ತಂಭ ಶಿಲಾನ್ಯಾಸ ಪೂಜಾ ಸಮಾರಂಭ !
ಪ್ರಪಂಚ ಅಸ್ಥಿರವಾಗಿದ್ದರೂ; ಭಾರತ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆ! – ಪ್ರಧಾನಮಂತ್ರಿ
‘ಅಗ್ನಿ-೬’ ಕ್ಷಿಪಣಿಯ ಸಂಭಾವ್ಯ ಪರೀಕ್ಷೆಯ ಮುನ್ನ ಒಡಿಶಾದ ೧೧ ಸಾವಿರ ನಾಗರಿಕರ ತಾತ್ಕಾಲಿಕ ಸ್ಥಳಾಂತರ!
ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ ಪುಸ್ತಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ೨೦ ಪುಟಗಳ ಪಾಠ! – ದಾದಾ ಭುಸೆ, ಶಿಕ್ಷಣ ಸಚಿವರು