ಸಾಧಕರೇ, ಪ್ರಾಣಾಯಾಮ, ವ್ಯಾಯಾಮ ಮತ್ತು ಯೋಗಾಸನಗಳನ್ನು ನಿಯಮಿತವಾಗಿ ಮಾಡಿ ಶರೀರದ ಪ್ರತಿಕಾರ ಕ್ಷಮತೆಯನ್ನು ಹೆಚ್ಚಿಸಿ ಹಾಗೂ ಆಪತ್ಕಾಲವನ್ನು ಎದುರಿಸಲು ತಮ್ಮ ಶರೀರ ಮತ್ತು ಮನಸ್ಸು ಇವುಗಳನ್ನು ಸದೃಢಗೊಳಿಸಿ !
ನಾವು ದಿನಪೂರ್ತಿ ಧನ ಸಂಪಾದನೆಗಾಗಿ ದೇಹವನ್ನು ಸವೆಸುತ್ತೇವೆ. ಹಾಗೆ ಮಾಡದಿದ್ದರೆ ನಮ್ಮ ಮನೆಯನ್ನು ನಡೆಸಲು ಸಾಧ್ಯವಿಲ್ಲ. ವ್ಯಾವಹಾರಿಕ ದೃಷ್ಟಿಯಿಂದ ಇದು ಹೇಗೆ ಆವಶ್ಯಕವಿದೆಯೋ, ಹಾಗೆಯೇ ನಮ್ಮ ದೇಹವನ್ನು ನಡೆಸಲು ಅದರಲ್ಲಿ ಯೋಗ್ಯ ಪ್ರಮಾಣದಲ್ಲಿ ಪ್ರಾಣಶಕ್ತಿ (ಚೇತನಾಶಕ್ತಿ) ಪ್ರವಹಿಸುವುದು ಮತ್ತು ಅದನ್ನು ನಿಯಂತ್ರಣದಲ್ಲಿಡುವುದು ಅತ್ಯಾವಶ್ಯಕವಾಗಿದೆ.