ಸಾಪ್ತಾಹಿಕ ‘ಸನಾತನ ಪ್ರಭಾತದಲ್ಲಿ ಪ್ರಕಟಿಸಲಾಗುವ ರಜ-ತಮಾತ್ಮಕ ವಾರ್ತೆಗಳಿಂದ ಹಾಗೂ ಲೇಖನಗಳಿಂದ ಪ್ರಕ್ಷೇಪಿತವಾಗವ ನಕಾರಾತ್ಮಕ ಸ್ಪಂದನಗಳಿಂದ ವಾಚಕರಿಗೆ ತೊಂದರೆಯಾಗದಿರಲಿ, ಎಂಬುದಕ್ಕಾಗಿ ‘ಸನಾತನ ಪ್ರಭಾತದ ಪುಟಗಳಿಗೆ ನಾಮಜಪದ ಮಂಡಲ ಹಾಕಲು ಪ್ರಾರಂಭ !

ಹತ್ಯೆ, ಅತ್ಯಾಚಾರ, ಭ್ರಷ್ಟಾಚಾರ, ಗಲಭೆ ಇತ್ಯಾದಿ ರಜ-ತಮಾತ್ಮಕ ವಾರ್ತೆಗಳಿಂದ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ. ಈ ನಕಾರಾತ್ಮಕ ಸ್ಪಂದನಗಳಿಂದ ವಾಚಕರಿಗೆ ತೊಂದರೆಯಾಗದಿರಲೆಂದು ಈ ವಾರದಿಂದ ಸಾಪ್ತಾಹಿಕ ‘ಸನಾತನ ಪ್ರಭಾತದ ಎಲ್ಲ ಪುಟಗಳಿಗೆ ಭಗವಾನ ಶ್ರೀಕೃಷ್ಣನ ನಾಮಜಪದ ಮಂಡಲ ಹಾಕಲು ಪ್ರಾರಂಭಿಸುತ್ತಿದ್ದೇವೆ. ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಹಾಗೂ ಅದಕ್ಕೆ ಸಂಬಂಧಿಸಿದ ಶಕ್ತಿ ಸದಾ ಒಟ್ಟಿಗಿರುತ್ತದೆ, ಈ ಅಧ್ಯಾತ್ಮದ ಸಿದ್ಧಾಂತಕ್ಕನುಸಾರ ದೇವತೆಗಳ ನಾಮಜಪದ ಸ್ಥಳಗಳಲ್ಲಿ ಆಯಾ ದೇವತೆಗಳ ಶಕ್ತಿ ಕಾರ್ಯನಿರತವಾಗಿರುತ್ತದೆ. ನಾಮಜಪದ ಮಂಡಲ ಹಾಕುವುದರಿಂದ ಅದರ ಚೈತನ್ಯದಿಂದಾಗಿ ರಜ-ತಮಾತ್ಮಕ ವಾರ್ತೆಗಳ ಹಾಗೂ ಲೇಖನಗಳ ಮಾಧ್ಯಮದಿಂದ ಪ್ರಕ್ಷೇಪಿತವಾಗುವ ನಕಾರಾತ್ಮಕ ಸ್ಪಂದನವು ಈ ಮಂಡಲದಲ್ಲಿ ಬದ್ಧರಾಗಿ ಅದರಿಂದ ವಾಚಕರಿಗೆತೊಂದರೆಯಾಗುವುದಿಲ್ಲ. – ಸಂಪಾದಕರು

ಸಾಪ್ತಾಹಿಕ ‘ಸನಾತನ ಪ್ರಭಾತ ರಾಷ್ಟ್ರ ಹಾಗೂ ಧರ್ಮಗಳ ಮೇಲಿನ ಆಘಾತಗಳ ಬಗ್ಗೆ ಹಿಂದೂಗಳನ್ನು ತಿಳಿಸಿ ಅದಕ್ಕೆ ಪರಿಹಾರವನ್ನು ಹೇಳಲಾಗುತ್ತದೆ. ಇದನ್ನು ಮಾಡುತ್ತಿರುವಾಗ ವಾಚಕರ ಆಧ್ಯಾತ್ಮಿಕ ಸ್ತರದಲ್ಲಿಯೂ ಕಾಳಜಿಯನ್ನು ವಹಿಸಲಾಗುತ್ತದೆ. ಈ ಘೋರ ಆಪತ್ಕಾಲದಲ್ಲಿಯೂ ಸಾಧಕರು, ವಾಚಕರು, ಹಿತಚಿಂತಕರು ಹಾಗೂ ಜಾಹೀರಾತುಗಳ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಿಯೂ ಕಾಳಜಿಯನ್ನು ವಹಿಸುವ ‘ಸನಾತನ ಪ್ರಭಾತ ನಿಯತಕಾಲಿಕೆಗಳ ಸಂಸ್ಥಾಪಕ-ಸಂಪಾದಕರಾದ ಪರಾತ್ಪರ ಗುರು ಡಾ. ಆಠವಲೆ ಇವರ ಚರಣಗಳಲ್ಲಿ ಕೃತಜ್ಞತೆಗಳು !