ಅಪರಾಧಗಳಲ್ಲಿ ಜಾತಿಧರ್ಮ!

ಈಗ ನಮ್ಮ ದೇಶದಲ್ಲಿನ ಬಲಾತ್ಕಾರ, ಹಿಂದುತ್ವನಿಷ್ಠರ ಹತ್ಯೆ, ಇದರೊಂದಿಗೆ ಈಗ ಮುಸಲ್ಮಾನ ಯುವತಿಯರೊಂದಿಗೆ ಪ್ರೇಮಸಂಬಂಧವನ್ನಿಡುವ ಹಿಂದೂ ಯುವಕರ ಹತ್ಯೆ ಮುಂತಾದ ವಾರ್ತೆಗಳು ಪ್ರತಿದಿನ ಓದುತ್ತೇವೆ. ಇಂತಹ ವಾರ್ತೆಗಳ ಕಡೆಗೆ ೧ – ೨ ನಿಮಿಷ ನೋಡಿ ‘ಮನಸ್ಸಿಗೆ ಏನು ಅರಿವಾಗುತ್ತದೆ ? ಇಂತಹ ಸೂಕ್ಷ್ಮ ಪ್ರಯೋಗಗಳನ್ನು ಮಾಡಲು ಕೆಲವು ದಿನಗಳ ಹಿಂದೆ ನಾವು ದೈನಿಕ ಸನಾತನ ಪ್ರಭಾತದ ವಾಚಕರಿಗೆ ಹೇಳಿದ್ದೆವು ಮತ್ತು ನಂತರ ಈ ಪ್ರಯೋಗಗಳ ಉತ್ತರವನ್ನೂ ನೀಡಿದ್ದೆವು. ‘ಇಂತಹ ವಾರ್ತೆಗಳನ್ನು ನೋಡಿದಾಗ ಅವುಗಳಲ್ಲಿ ನಕಾರಾತ್ಮಕ ಸ್ಪಂದನಗಳ ಅರಿವಾಗುತ್ತದೆ; ಏಕೆಂದರೆ ಅನ್ಯಾಯ ಮತ್ತು ಅತ್ಯಾಚಾರಗಳನ್ನು ಮಾಡುವುದು, ತಾಮಸಿಕ ಕೃತಿಯಾಗಿದೆ, ಎಂಬುದನ್ನು ನಾವು ಆ ಉತ್ತರಗಳಲ್ಲಿ ಹೇಳಿದ್ದೇವೆ. ಲೌಕಿಕ ದೃಷ್ಟಿಯಲ್ಲಿ ಅಥವಾ ಬೌದ್ಧಿಕ ಮತ್ತು ಮಾನಸಿಕ ದೃಷ್ಟಿಯಿಂದಲೂ ಈ ಉತ್ತರಗಳು ಎಲ್ಲರಿಗೂ ಒಪ್ಪಿಗೆಯಾಗಿವೆ. ಹೀಗಿದ್ದರೂ ಬಲಾತ್ಕಾರ ಅಥವಾ ಹತ್ಯೆಗಳ ಎಲ್ಲ ಘಟನೆಗಳನ್ನು ಹಾಥರಸ ಪ್ರಕರಣದಂತೆ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ, ಎಂಬುದು ಮಾತ್ರ ವಾಸ್ತವಿಕ ಸ್ಥಿತಿಯಾಗಿದೆ. ದೇಶದಲ್ಲಿ ಯಾವುದಾದರೊಂದು ತಾಮಸಿಕ ಘಟನೆ ಘಟಿಸಿದರೆ, ‘ಆ ಘಟನೆಗೆ ಎಷ್ಟು ಮಹತ್ವವನ್ನು ನೀಡಬೇಕು, ಎಂಬುದನ್ನು ರಾಜಕಾರಣಿಗಳು ತಮ್ಮ ರಾಜಕೀಯ ಲಾಭದ ದೃಷ್ಟಿಯಲ್ಲಿ ನಿರ್ಧರಿಸುತ್ತಾರೆ ಮತ್ತು ಪ್ರಸಿದ್ಧಿಮಾಧ್ಯಮಗಳು ಅವುಗಳಿಗೆ ಸಿಗಬಹುದಾದ ಟೀಆರ್‌ಪಿಯ ಮೇಲಿನಿಂದ ನಿರ್ಧರಿಸುತ್ತವೆ. ಇದರಿಂದಲೇ ಹಾಥರಸದಂತಹ ಪ್ರಕರಣ ದೇಶದಾದ್ಯಂತ ಪ್ರಸಿದ್ಧವಾಯಿತು, ತದ್ವಿರುದ್ಧ ರಾಜಸ್ಥಾನದ ಕರೌಲಿಯ ಒಂದು ಮಂದಿರದ ಪೂಜಾರಿಯನ್ನು ಭೂವಿವಾದದಿಂದ ಜೀವಂತ ಸುಟ್ಟುಹಾಕಿರುವ ಘಟನೆಗೆ ಅತ್ಯಲ್ಪ ಪ್ರಮಾಣದಲ್ಲಿ ಪ್ರಸಿದ್ಧಿ ಸಿಕ್ಕಿತು ಮತ್ತು ರಾಜಕೀಯ ಕ್ಷೇತ್ರ ದಲ್ಲಿಯೂ ಆ ವಿಷಯದಲ್ಲಿ ಧ್ವನಿಯೆತ್ತುವವರಿಲ್ಲ.

ಜಾತಿ ನೋಡಿ ಪ್ರಸಿದ್ಧಿ!

ಹಾಥರಸ ಪ್ರಕರಣದಲ್ಲಿ, ಯಾವ ಹುಡುಗಿಯ ಅತ್ಯಾಚಾರವಾಗಿ ಹತ್ಯೆಯಾಗಿತೋ ಅವಳು ಹಿಂದುಳಿದ ಸಮಾಜದವಳಾಗಿದ್ದಳು ಮತ್ತು ಹಿಂದುತ್ವನಿಷ್ಠ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿ ಆಗಿರುವ ಉತ್ತರಪ್ರದೇಶದಲ್ಲಿನದ್ದಾಗಿತ್ತು. ತದ್ವಿರುದ್ಧ ಅಕ್ಟೋಬರ ೯ ರಂದು ಕರೌಲಿ, ರಾಜಸ್ಥಾನದಲ್ಲಿ ಯಾರನ್ನು ಜೀವಂತ ಸುಡಲಾಗಿತ್ತು, ಅವರು ಹಿಂದೂ ಪೂಜಾರಿಗಳಾಗಿದ್ದರು. ಪೂಜಾರಿಯನ್ನು ಹತ್ಯೆ ಮಾಡಿದವರು ಹಿಂದುಳಿದ ಸಮಾಜದ ಜನರಾಗಿದ್ದರು ಎಂದು ಹೇಳಲಾಗುತ್ತದೆ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ಸರಕಾರವಿದೆ. ಯಾವುದಾದರೊಂದು ಪ್ರಕರಣವು ಪ್ರಸಿದ್ಧಿ ಪಡೆಯಲು ಅದರ ಹಿಂದೆ ಇಂತಹ ಲೆಕ್ಕಾಚಾರಗಳಿರುತ್ತವೆ. ಈ ಲೆಕ್ಕಾಚಾರವನ್ನು ಒಂದು ಪಂಗಡದ ಮತಗಳಿಗಾಗಿ ಇಷ್ಟರವರೆಗೆ ಅಧಿಕಾರದಲ್ಲಿರುವ ಕಾಂಗ್ರೆಸ್ಸಿಗೆ ಮತ್ತು ಅದರ ಬೆಂಬಲಿಗರಿಗೆ ಚೆನ್ನಾಗಿ ಮಾಡಲು ಬರುತ್ತದೆ. ದೀರ್ಘಕಾಲ ಅಧಿಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಇದೇ ಲೆಕ್ಕಾಚಾರವನ್ನು ಉಪಯೋಗಿಸಿತು ಮತ್ತು ‘ಹಿಂದುಳಿದವರು ಹಿಂದೆಯೇ ಹೇಗೆ ಉಳಿಯಬಹುದು ? ಎನ್ನುವ ಕಾರಣಕ್ಕಾಗಿ ಅವರು ಸ್ವಾವಲಂಬಿ ಗಳಾಗದಂತೆ ನೋಡಿಕೊಂಡರು. ಅವರು ಇದೇ ನೀತಿಯನ್ನು ಮುಸಲ್ಮಾನರ ವಿಷಯದಲ್ಲಿಯೂ ಉಪಯೋಗಿಸಿದರು. ‘ನಮ್ಮನ್ನು ಉಪಯೋಗಿಸಿಕೊಳ್ಳಲಾಗುತ್ತದೆ, ಎಂಬುದು ಕೆಲವು ಮುಸಲ್ಮಾನರಿಗೆ ತಿಳಿಯಿತು. ಇನ್ನೊಂದೆಡೆ ‘ಮುಸಲ್ಮಾನರ ಮೇಲೆ ದೌರ್ಜನ್ಯವಾಗುತ್ತಿವೆ, ಎಂದು ಬೊಬ್ಬೆ ಹೊಡೆಯುತ್ತಾ ಎಮ್.ಐ.ಎಮ್. ನಂತಹ ಕಟ್ಟರತೆಯನ್ನು ಜೋಪಾನ ಮಾಡುವ ರಾಜಕೀಯ ಪಕ್ಷಗಳು ಹುಟ್ಟಿಕೊಂಡವು. ಕಾಂಗ್ರೆಸ್ಸಿನ ವಿಚಾರ ಶೈಲಿಯ ಜನರು ಅವರಿಗೆ ನೀರುಗೊಬ್ಬರ ಹಾಕುವ ಕಾರ್ಯ ವನ್ನು ಮಾಡಿದರು. ಇಲ್ಲಿಂದ ಅವರಿಗೆ ರಾಜಾಶ್ರಯ ಸಿಗುತ್ತಾ ಹೋಯಿತು. ಸಮಾಜಘಾತಕ ಘಟಕಗಳನ್ನು ಅಧ್ಯಯನ ಮಾಡಿದರೆ ಗಮನಕ್ಕೆ ಬರುವುದೇನೆಂದರೆ, ಯಾವುದಾದರೊಂದು ಸಮಾಜವನ್ನು ಓಲೈಸಿದರೆ ಆ ಸಮಾಜವೂ ಉದ್ಧಟವಾಗುತ್ತದೆ. ಗಲಭೆಯಂತಹ ಘಟನೆಗಳಿರಲಿ ಅಥವಾ ಯಾರನ್ನಾದರೂ ಜೀವಂತ ಸುಡುವ ಅಮಾನವೀಯ ಘಟನೆಯಿರಲಿ, ‘ನಮಗೆ ಯಾರೂ ಏನೂ ಮಾಡಲಾರರು , ಎನ್ನುವ ಭ್ರಮೆ ಉತ್ಪನ್ನವಾದರೆ, ಅವರಿಂದ ಗಂಭೀರ ಅಪರಾಧಗಳಾಗಲು ಪ್ರಾರಂಭವಾಗುತ್ತವೆ.

ಜಾತಿರಾಜಕಾರಣ!

ಮಹಾರಾಷ್ಟ್ರದಲ್ಲಿನ ಪಾಲ್ಘರ್‌ನಲ್ಲಿ ಒಂದು ಜನಸಮುದಾಯದ ಜನರು ಸಂತರನ್ನು ಸಾಯುವವರೆಗೆ ಹೊಡೆದರು. ಅದೇ ರೀತಿ ಅನೇಕ ಪೂಜಾರಿಗಳನ್ನು, ಮಹಂತರನ್ನು ಮಂದಿರಗಳಲ್ಲಿ ಅಥವಾ ಮಠಗಳಲ್ಲಿ ನುಗ್ಗಿ ಹತ್ಯೆಯನ್ನು ಮಾಡಲಾಯಿತು. ಪಾಲ್ಘರ್ನಲ್ಲಿನ ಪ್ರಕರಣದಲ್ಲಿ ಮಿಶನರಿಗಳಿಂದ ಅಲ್ಲಿನ ವಿಶಿಷ್ಟ ಸಮಾಜವನ್ನು ಸಂತರ ವಿರುದ್ಧ ಉದ್ರೇಕಿಸಲಾಯಿತು ಮತ್ತು ಹತ್ಯಾಕಾಂಡವನ್ನು ಮಾಡಲಾಯಿತು. ರಾಜಸ್ಥಾನದ ಕರೌಲಿಯಲ್ಲಿ ಪೂಜಾರಿಯ ಕ್ರೂರ ಹತ್ಯೆಯ ಹಿಂದೆಯೂ ಇಂತಹ ಜಾತಿಯ ರಾಜಕಾರಣವಿದೆ. ಪೂಜಾರಿಗಳು ಮಂದಿರದ ಭೂಮಿಯನ್ನು ಆಕ್ರಮಿಸುವವರನ್ನು ತಡೆದಿದ್ದರು. ಸ್ಥಳೀಯ ಹಿಂದುಳಿದ ಸಮಾಜದ ಜನರು ಈ ಮಂದಿರವನ್ನು ಪಡೆಯಲು ಪ್ರಯತ್ನಿಸುತ್ತಿದ್ದರು. ಈ ಜನರನ್ನು ಕೇವಲ ‘ಭೂ ಮಾಫಿಯಾ ಎಂದು ಹೇಳಿ ಈ ಘಟನೆಯನ್ನು ದುರ್ಲಕ್ಷಿಸಲು ಸಾಧ್ಯವಿಲ್ಲ. ಈ ಘಟನೆಗೆ ವಿವಿಧ ಕಾರಣಗಳಿವೆ. ಸಮಾಜಹಿತದ ದೃಷ್ಟಿಯಲ್ಲಿ ಅವುಗಳನ್ನು ಅಧ್ಯಯನ ಮಾಡುವುದು ಆವಶ್ಯಕವಾಗಿದೆ. ನಮಗೆ ಸಿಕ್ಕಿದ ಮಾಹಿತಿಗನುಸಾರ ಇಲ್ಲಿ ಭೀಮ ಆರ್ಮಿ ಸಂಘಟನೆ ಹಿಂದುಳಿದವರನ್ನು ಉದ್ರೇಕಿಸುತ್ತಿದೆ ಮತ್ತು ಹಿಂದೂ ಧರ್ಮದ ಬಗ್ಗೆ ದ್ವೇಷವನ್ನು ಹರಡುತ್ತಿದೆ. ಇಂತಹ ದ್ವೇಷದಿಂದಲೇ ಹೀಗೆ ಮೈಮೇಲೆ ಪೆಟ್ರೋಲ್ ಸುರಿದು ಕೊಲ್ಲುವಂತಹ ಕ್ರೌರ್ಯಗಳು ನಡೆಯುತ್ತವೆ. ಈ ಕ್ರೌರ್ಯದ ಹಿಂದೆ ಹೇಗೆ ದ್ವೇಷವಿದೆಯೋ, ಹಾಗೆಯೇ ರಾಜಕೀಯ ಬೆಂಬಲವೂ ಇರಬಹುದು ! ಅದಿಲ್ಲದೇ ಇಂತಹ ಕ್ರೌರ್ಯವನ್ನು ಮಾಡಲು ಬಲ ಎಲ್ಲಿಂದ ಬರುತ್ತದೆ ? ಇದು ಓಲೈಕೆಯಿಂದ ಮಾನವನು ಹೇಗೆ ರಾಕ್ಷಸನಾಗುತ್ತಾನೆ ?

ಎಂಬುದನ್ನು ತೋರಿಸುವ ಘಟನೆಯಾಗಿದೆ. ಹೀಗಿದ್ದರೂ ಈ ಘಟನೆಗೆ ಕೆಲವು ಬೆರಳೆಣಿಕೆಯಷ್ಟೇ ಪ್ರಸಾರಮಾಧ್ಯಮಗಳ ಹೊರತು ಯಾರೂ ಪ್ರಸಿದ್ಧಿಯನ್ನು ನೀಡಲಿಲ್ಲ. ‘ಟೈಮ್ ನೌ ಈ ವಾರ್ತಾವಾಹಿನಿಯಲ್ಲಿ ‘ಗಾಂಧಿ ಕುಟುಂಬದವರು ಈಗ ರಾಜಸ್ಥಾನದ ಪೂಜಾರಿಗಾಗಿ ಧ್ವನಿಯೆತ್ತುವರೇ ?, ಎನ್ನುವ ‘ಟ್ಯಾಗ್‌ಲೈನ್ ನೀಡಲಾಯಿತು ಮತ್ತು ಕೆಲವು ‘ಕಾಂಗ್ರೆಸ್ಸಿನ ರಾಜಸ್ಥಾನದಲ್ಲಿ ಪಾಲ್‌ಘರ್‌ನ ಪುನರಾವೃತ್ತಿ, ‘ಗಾಂಧಿಗಳ ಮೌನದ ಬಗ್ಗೆ ಪ್ರಶ್ನೆಚಿಹ್ನೆ, ಇಂತಹ ಶೀರ್ಷಿಕೆಯನ್ನು ನೀಡಿದವು. ಇದರಿಂದ ಗಾಂಧಿ ಬಂಧು-ಭಗಿನಿಯರ ಆಟ ಬೆಳಕಿಗೆ ಬರುತ್ತದೆ. ಪೂಜಾರಿಯ ಕುಟುಂಬದವರು ಅವರ ಮೃತದೇಹದ ಅಂತಿಮ ಸಂಸ್ಕಾರ ಮಾಡಲು ನಿರಾಕರಿಸಿದರು. ಆದರೆ ಅವರಿಗೆ ಧೈರ್ಯಕೊಡಲು ಒಬ್ಬ ಗಾಂಧಿವಾದಿಯೂ ಅಲ್ಲಿ ತಲುಪಲಿಲ್ಲ. ಇಂತಹ ಪಕ್ಷವು ಭಾರತದಲ್ಲಿ ಸ್ವಾತಂತ್ರ್ಯದ ನಂತರ ಹೆಚ್ಚಿನಕಾಲ ಆಡಳಿತ ನಡೆಸಿತು, ಇದಕ್ಕಿಂತ ದುರ್ಭಾಗ್ಯದ ವಿಷಯ ಇನ್ನೇನಿರಬಹುದು ?

ಭೀಕರ ಕಾಲದ ನಾಂದಿ!

ಇತ್ತೀಚೆಗೆ ಮುಸಲ್ಮಾನ ಯುವತಿಯರನ್ನು ಪ್ರೇಮಿಸಿದ ಹಿಂದೂ ಯುವಕರ ಹತ್ಯೆಯ ಘಟನೆಗಳು ಹೆಚ್ಚಾಗುತ್ತಿವೆ. ಹಿಂದೂಗಳ ವಿಷಯದಲ್ಲಿ ಸದ್ಯ ನಡೆಯುತ್ತಿರುವ ಈ ಘಟನೆಗಳು ಹಿಂದೂಗಳಿಗೆ ಮುಂಬರುವ ಭೀಕರ ಕಾಲದ ಸಂಕೇತವಾಗಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಇದರ ಕಾರಣವೇನೆಂದರೆ, ಹಾಥರಸ ಪ್ರಕರಣದಿಂದ ಗಲಭೆಯನ್ನು ಎಬ್ಬಿಸುವ ಷಡ್ಯಂತ್ರ ರೂಪಿಸಿದ್ದಕ್ಕಾಗಿ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಮತಾಂಧರ ಸಂಘಟನೆಯ ೪ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಈ ಮತಾಂಧರಿಗೆ ಭಾರತದಲ್ಲಿ ಇಂತಹ ಹಿಂದೂ ವಿರೋಧಿ ವಾತಾವರಣವನ್ನು ಸೃಷ್ಟಿಸಲು, ಗಲಭೆಗಳನ್ನು ಎಬ್ಬಿಸಲು ಪೋಷಕ ವಾತಾವರಣವನ್ನು ಮಾಡಿಡಲು ಹೇಳಿರಬಹುದು. ಭವಿಷ್ಯದಲ್ಲಿ ಹಿಂದೂಗಳಿಗೆ ಹಾನಿಯನ್ನುಂಟು ಮಾಡುವ ಇಂತಹ ಅಂತರರಾಷ್ಟ್ರೀಯ ಷಡ್ಯಂತ್ರಗಳನ್ನು ಎದುರಿಸಲು ಹಿಂದೂಗಳು ಏನು ಸಿದ್ಧತೆಯನ್ನು ಮಾಡಿದ್ದಾರೆ ? ಕನಿಷ್ಟ ಮತಾಂಧರ ಷಡ್ಯಂತ್ರಗಳನ್ನು ಗುರುತಿಸುವುದು, ಸಂಘಟಿತರಾಗಿರುವುದು, ಪ್ರತಿಯೊಂದು ಹಿಂದೂವಿರೋಧಿ ಘಟನೆಯನ್ನು ಖಂಡಿಸುವುದು, ಇಷ್ಟಾದರೂ ಮಾಡಬಹುದು.