ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಭಾಜಪದ ನಾಯಕನ ಅಪಹರಣ

ಕಾಶ್ಮೀರದ ಸೊಪೊರದ ಭಾಜಪ ಮುಖಂಡ ಹಾಗೂ ಅಲ್ಲಿಯ ‘ಮ್ಯುನ್ಸಿಪಲ್ ಕಮಿಟಿ’ಯ ಉಪಾಧ್ಯಕ್ಷ ಮೆಹರಾಜುದ್ದೀನ ಮಲ್ಲಾರನ್ನು ಜುಲೈ ೧೫ ರಂದು ಬೆಳಗ್ಗೆ ಭಯೋತ್ಪಾದಕರು ಅಪಹರಣ ಮಾಡಿರುವ ಘಟನೆ ನಡೆದಿದೆ. ಬೆಳಗ್ಗೆ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಜ್ಞಾತರು ಚತುಶ್ಚಕ್ರ ವಾಹನದಿಂದ ಅಡ್ಡಗಟ್ಟಿ ಅವರ ಅಪಹರಣ ಮಾಡಿದರು.

ರಾಮಜನ್ಮಭೂಮಿಯಲ್ಲಿ ಬೌದ್ಧ ದೇವಸ್ಥಾನವಿತ್ತು ಎಂದು ಹೇಳುತ್ತಾ ಬೌದ್ಧ ಭಿಕ್ಷುವಿನಿಂದ ಆಮರಣ ಉಪವಾಸ

ಅಯೋಧ್ಯೆಯ ರಾಮಮಂದಿರದ ಸ್ಥಳ ಹಾಗೂ ಸಂಪೂರ್ಣ ಪರಿಸರವು ಬೌದ್ಧ ಮಂದಿರದ ಪರಿಸರವಾಗಿದ್ದು ‘ರಾಮಮಂದಿರದ ಸ್ಥಳದಲ್ಲಿ ಪ್ರಾಚೀನ ಬುದ್ಧ ಮಂದಿರವಾಗಿತ್ತು’, ಎಂದು ಭಾರತೀಯ ಬೌದ್ಧ ಭಿಕ್ಷು ಹೇಳಿಕೊಂಡಿದ್ದಾರೆ. ‘ರಾಮಜನ್ಮಭೂಮಿ ಕ್ಷೇತ್ರ ಇದು ಪ್ರಾಚೀನ ಬೌದ್ಧ ಸ್ಥಳವಾಗಿದ್ದು ಅದು ಪ್ರಸಿದ್ಧ ಸಾಕೇತ ಪಟ್ಟಣವಾಗಿತ್ತು. ರಾಮಮಂದಿರದ ಕೆಲಸವನ್ನು ಕೂಡಲೇ ನಿಲ್ಲಿಸಿ ಈ ಸ್ಥಳವನ್ನು ಬುದ್ಧ ಮಂದಿರಕ್ಕೆ ಹಿಂದಿರುಗಿಸಬೇಕು

ಕೊರೋನಾದ ೨ ಭಾರತೀಯ ಲಸಿಕೆಗಳಿಂದ ಪ್ರಾಣಿಗಳ ಮೇಲೆ ಯಶಸ್ವಿ ಪ್ರಯೋಗ ನಡೆಸಿದೆ, ಇನ್ನು ಮನುಷ್ಯರ ಮೇಲೆ ಪರೀಕ್ಷಣೆ ಮಾಡಲಾಗುವುದು

ಕೊರೋನಾದ ಮೇಲೆ ೨ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಾಣಿಯ ಮೇಲೆ ಅದರ ಯಶಸ್ವಿ ಪ್ರಯೋಗದ ನಂತರ ಮನುಷ್ಯನ ಮೇಲೆಯೂ ಪರೀಕ್ಷಣೆ ಮಾಡಲು ಅನುಮತಿಯನ್ನು ನೀಡಿದೆ. ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ (‘ಐ.ಸಿ.ಎಮ್.ಆರ್.’ನ) ಮಹಾನಿರ್ದೇಶಕ ಬಲರಾಮ ಭಾರ್ಗವ ಇವರು ಮಾಹಿತಿ ನೀಡಿದರು. ಈ ಲಸಿಕೆಯನ್ನು ನಿರ್ಮಿಸಲು ಎಷ್ಟು ಕಾಲಾವಧಿ ಬೇಕಾಗಬಹುದು? ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಆಜಾನ್‌ಗಾಗಿ ಬೊಂಗಾವನ್ನು ಉಪಯೋಗಿಸುವ ಬಗ್ಗೆ ವಿರೋಧಿಸಿದ ಹಿಂದೂ ಯುವತಿಗೆ ಮತಾಂಧರಿಂದ ಅತ್ಯಾಚಾರದ ಬೆದರಿಕೆ

ಆಜಾನ್‌ಗಾಗಿ ಬೊಂಗಾ ಬಳಸುವುದನ್ನು ವಿರೋಧಿಸಿದ ಹಿಂದೂ ಯುವತಿಗೆ ಮತಾಂಧರು ಅತ್ಯಾಚಾರದ ಬೆದರಿಕೆಯೊಡ್ಡಿದ ಖೇದಕರ ಘಟನೆ ಬೆಳಕಿಗೆ ಬಂದಿದೆ. ಓರ್ವ ಹಿಂದೂ ಯುವತಿಯು ಸಾಮಾಜಿಕ ಮಾಧ್ಯಮಗಳಲ್ಲಿ ಕೈಯಲ್ಲಿ ಫಲಕವನ್ನು ಹಿಡಿದು ಅದರಲ್ಲಿ ‘ಆಜಾನ್ ನೀಡಿ ಆದರೆ ಧ್ವನಿ ಕಡಿಮೆ ಮಾಡಿ. ಧ್ವನಿವರ್ಧಕದಿಂದ ನೀವು ಏನು ಸಾಧಿಸಲಿದ್ದೀರಿ ?’, ಎಂಬ ಸಂದೇಶವನ್ನು ಬರೆದಿರುವ ಚಿತ್ರ ಪ್ರಸಾರವಾಗಿತ್ತು.

ಪಾಕಿಸ್ತಾನದಲ್ಲಿ ಮತಾಂಧರಿಂದ ಮತ್ತೋರ್ವ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ

ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿ ಮತಾಂಧರಿಂದ ಓರ್ವ ೧೨ ವರ್ಷದ ಹಿಂದೂ ಹುಡುಗಿಯನ್ನು ಅಪಹರಿಸಲಾಗಿದೆ ಎಂದು ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತೆ ರಾಹತ ಆಸ್ಟೀನ್ ಇವರು ಟ್ವೀಟ್ ಮಾಡುವ ಮೂಲಕ ಮಹಿತಿಯನ್ನು ನೀಡಿದ್ದಾರೆ.

ಕಾಂಗ್ರೆಸ್ಸಿನ ರಾಷ್ಟ್ರದ್ವೇಷ !

ಪ್ರಧಾನಮಂತ್ರಿ ಮೋದಿಯವರು ಗಾಯಗೊಂಡಿರುವ ಸೈನಿಕರನ್ನು ಭೇಟಿಯಾಗಿರುವ ಛಾಯಾಚಿತ್ರಗಳು ಮಾಧ್ಯಮಗಳಲ್ಲಿ ಪ್ರಸಾರವಾದಾಗ ಕಾಂಗ್ರೆಸ್ಸಿಗೆ ತೀವ್ರ ಹೊಟ್ಟೆನೋವು ಆರಂಭವಾಯಿತು. ಕಾಂಗ್ರೆಸ್ ಈ ಛಾಯಾಚಿತ್ರಗಳನ್ನು ‘ಪೋಸ್ಟ್‌ಮಾರ್ಟಮ್ ಮಾಡಿ ಏನೋ ರಹಸ್ಯವನ್ನು ಕಂಡು ಹಿಡಿಯಿತಂತೆ.

ಔದ್ಯೋಗೀಕರಣದ ಗಂಭೀರ ದುಷ್ಪರಿಣಾಮಗಳ ಮೇಲೆ ಪ್ರಾಚೀನ ಭಾರತೀಯ ಜೀವನಶೈಲಿಯೇ ಉಪಾಯವಾಗಿದೆ !

‘ವಿಷಾಣುಗಳನ್ನು ಹರಡಲು ಬಿಡುವುದು ಸಾರಿಗೆಸಂಚಾರ ನಿರ್ಬಂಧಕ್ಕಿಂತ ಕಡಿಮೆ ಖರ್ಚಿನದ್ದಾಗಿದೆ ಎಂಬ ಈ ಹೀನ ವಿಚಾರದಲ್ಲಿ ಅನೇಕ ವಿಷಯಗಳು ಸ್ಪಷ್ಟವಾಗುತ್ತವೆ. ಮುಖ್ಯವೆಂದರೆ ಅರ್ಥವ್ಯವಸ್ಥೆಯ ಸಮರ್ಥಕರ ಹಿಂಸಾತ್ಮಕ, ಕ್ರೂರ ಮತ್ತು ಜೀವವಿರೋಧಿ ವೃತ್ತಿ, ಹಾಗೆಯೇ ಪೃಥ್ವಿ ಮತ್ತು ನಿಸರ್ಗದ ಬಗ್ಗೆ ಅಜ್ಞಾನ ಕಂಡುಬರುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಹಿಂದಿನ ಕಾಲದಲ್ಲಿ ಎಲ್ಲರೂ ಸಾಧನೆ ಮಾಡುವವರು ಇದ್ದುದರಿಂದ ಅವರಿಗೆ ‘ಬೇರೆಯವರೊಂದಿಗೆ ಹೇಗೆ ಮಾತನಾಡಬೇಕು ? ಬೇರೆಯವರೊಂದಿಗೆ ಹೇಗೆ ವರ್ತಿಸಬೇಕು ?, ಎಂದು ಕಲಿಸಬೇಕಾಗುತ್ತಿರಲಿಲ್ಲ. ಅವರಲ್ಲಿ ಅದು ಚಿಕ್ಕಂದಿನಿಂದಲೇ ಅಂಗೀಕರಿಸಲ್ಪಡುತ್ತಿತ್ತು. ಆದರೆ ಅದನ್ನು ಈಗ ಎಲ್ಲರಿಗೂ ಕಲಿಸಬೇಕಾಗುತ್ತದೆ !

‘ಸೆಕ್ಯುಲರ್ ಸರಕಾರವು ದೇವಸ್ಥಾನಗಳನ್ನು ನಡೆಸುವುದೆಂದರೆ ನಾಸ್ತಿಕರ ಕೈಯಲ್ಲಿ ಧಾರ್ಮಿಕ ದೇವಸ್ಥಾನಗಳ ಆಡಳಿತವಿರುವಂತಾಗಿದೆ ! – ಟಿ.ಆರ್. ರಮೇಶ, ಅಧ್ಯಕ್ಷರು, ಟೆಂಪಲ್ ವರ್ಶಿಪರ್ಸ್ ಸೊಸೈಟಿ, ತಮಿಳುನಾಡು

ಇದರಲ್ಲಿ ಭಾಗ್ಯನಗರ (ಹೈದರಾಬಾದ್) ಚಿಲ್ಕೂರ್ ಬಾಲಾಜಿ ದೇವಸ್ಥಾನದ ಪ್ರಧಾನ ಅರ್ಚಕ ಸಿ.ಎಸ್. ರಂಗರಾಜನಜಿ, ಕೇರಳದ ‘ಪೀಪಲ್ ಫಾರ್ ಧರ್ಮ ಇದರ ಅಧ್ಯಕ್ಷೆ ಸೌ. ಶಿಲ್ಪಾ ನಾಯರ್, ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಕಿರಣ ಬೆಟ್ಟದಾಪುರ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಉಪಸ್ಥಿತರಿದ್ದರು.

ಆಪತ್ಕಾಲದಿಂದ ಸುರಕ್ಷಿತವಾಗಿ ಪಾರಾಗಲು ಸಾಧನೆಯನ್ನು ಕಲಿಸುವ ಸನಾತನ ಸಂಸ್ಥೆ !

ಹಸಿ ಮಾವಿನ ಕಾಯಿಗಳನ್ನು ಬೇಯಿಸಿ, ಅವುಗಳ ತಿರುಳನ್ನು ತೆಗೆದು ಅದರಲ್ಲಿ ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ಅದರ ಮುರಬ್ಬವನ್ನು ಮಾಡಬಹುದು. ಇದನ್ನು ಗಾಜಿನ ಭರಣಿಯಲ್ಲಿ ಹಾಕಿ ಶೀತಕಪಾಟಿನಲ್ಲಿ ಇಡಬೇಕು. ಇದು ಒಂದರಿಂದ ಒಂದೂವರೆ ವರ್ಷದವರೆಗೆ ಕೆಡುವುದಿಲ್ಲ.