ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಭಾಜಪದ ನಾಯಕನ ಅಪಹರಣ

ಕಾಶ್ಮೀರದಲ್ಲಿ ಪ್ರತಿದಿನ ಭಯೋತ್ಪಾದಕರನ್ನು ಕೊಲ್ಲಲಾಗುತ್ತಿದ್ದರೂ ಈ ರೀತಿಯ ಘಟನೆಗಳು ನಡೆಯುತ್ತಿವೆ, ಇದರ ಅರ್ಥ ಈಗಲೂ ಭಯೋತ್ಪಾದಕರ ಆತಂಕವಿದೆ, ಎಂಬುದು ಸ್ಪಷ್ಟವಾಗುತ್ತದೆ. ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಾಶ ಮಾಡಲು ಪಾಕಿಸ್ತಾನವನ್ನು ನಾಶ ಮಾಡುವುದನ್ನು ಬಿಟ್ಟರೆ ಬೇರೆ ಪರ್ಯಾಯ ಇಲ್ಲ !

ಭಾಜಪ ಮುಖಂಡ ಮೆಹರಾಜುದ್ದೀನ ಮಲ್ಲಾ

ಶ್ರೀನಗರ (ಜಮ್ಮು-ಕಾಶ್ಮೀರ) – ಕಾಶ್ಮೀರದ ಸೊಪೊರದ ಭಾಜಪ ಮುಖಂಡ ಹಾಗೂ ಅಲ್ಲಿಯ ‘ಮ್ಯುನ್ಸಿಪಲ್ ಕಮಿಟಿ’ಯ ಉಪಾಧ್ಯಕ್ಷ ಮೆಹರಾಜುದ್ದೀನ ಮಲ್ಲಾರನ್ನು ಜುಲೈ ೧೫ ರಂದು ಬೆಳಗ್ಗೆ ಭಯೋತ್ಪಾದಕರು ಅಪಹರಣ ಮಾಡಿರುವ ಘಟನೆ ನಡೆದಿದೆ. ಬೆಳಗ್ಗೆ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಜ್ಞಾತರು ಚತುಶ್ಚಕ್ರ ವಾಹನದಿಂದ ಅಡ್ಡಗಟ್ಟಿ ಅವರ ಅಪಹರಣ ಮಾಡಿದರು. ಪೊಲೀಸರು ಅವರನ್ನು ಹುಡುಕುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಭಯೋತ್ಪಾದಕರು ಬಾಂದಿಪೊರಾದಲ್ಲಿಯ ಭಾಜಪದ ಮುಖಂಡ ಶೇಖ ವಸೀಮ ಬಾರಿ ಹಾಗೂ ಅವರ ಸಹೋದರ ಮತ್ತು ತಂದೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.