ಪಾಕಿಸ್ತಾನದಲ್ಲಿ ಮತಾಂಧರಿಂದ ಮತ್ತೋರ್ವ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ

ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ತಥಾಕಥಿತ ದೌರ್ಜನ್ಯದ ಬಗ್ಗೆ ಕೂಡಲೇ ಗಮನ ಹರಿಸುವ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಸತತವಾಗಿ ಆಗುತ್ತಿರುವ ಅಮಾನವೀಯ ದೌರ್ಜನ್ಯದ ಬಗ್ಗೆ ಎಂದೂ ಗಮನ ಹರಿಸುವುದಿಲ್ಲ, ಎಂಬುದನ್ನು ಗಮನದಲ್ಲಿಡಿ ! ಕೇಂದ್ರ ಸರಕಾರವು ಈ ಪೀಡಿತ ಹಿಂದೂಗಳಿಗಾಗಿ ಕಠಿಣ ಹೆಜ್ಜೆ ಇಡಬೇಕು, ಎಂಬುದು ಹಿಂದೂಗಳ ಅಪೇಕ್ಷೆಯಾಗಿದೆ !

ಇಸ್ಲಾಮಾಬಾದ – ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿ ಮತಾಂಧರಿಂದ ಓರ್ವ ೧೨ ವರ್ಷದ ಹಿಂದೂ ಹುಡುಗಿಯನ್ನು ಅಪಹರಿಸಲಾಗಿದೆ ಎಂದು ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತೆ ರಾಹತ ಆಸ್ಟೀನ್ ಇವರು ಟ್ವೀಟ್ ಮಾಡುವ ಮೂಲಕ ಮಹಿತಿಯನ್ನು ನೀಡಿದ್ದಾರೆ.

ಮೀರಪುರದಲ್ಲಿ ನಫೀಸನಗರದಲ್ಲಿ ಜುಲೈ ೧೧ ರಂದು ಈ ಘಟನೆ ನಡೆದಿದೆ. ಇದರ ಹಿಂದೆ ಮಹಮ್ಮದ ಶೌಕತ ಹೆಸರಿನ ಮತಾಂಧನ ಗುಂಪಿನ ಕೈವಾಡ ಇರಬಹುದು ಎಂದು ಆಸ್ಟೀನ್ ಇವರು ಹೇಳಿದ್ದಾರೆ. ಆಸ್ಟೀನ್ ಅವರು ಪ್ರಸಾರ ಮಾಡಿದ ಒಂದು ‘ವಿಡಿಯೋ’ದಲ್ಲಿ ಪೀಡಿತ ಹುಡುಗಿಯ ಕುಟುಂಬದವರು ತಮ್ಮ ವ್ಯಥೆಯನ್ನು ಹೇಳಿದ್ದಾರೆ.