ಕಾಂಗ್ರೆಸ್ಸಿನ ರಾಷ್ಟ್ರದ್ವೇಷ !

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ೨ ದಿನಗಳ ಹಿಂದೆ ಸಮುದ್ರಮಟ್ಟದಿಂದ ೧೧ ಸಾವಿರ ಅಡಿಗಳಷ್ಟು ಎತ್ತರದಲ್ಲಿರುವ ಲೇಹ್‌ದಲ್ಲಿ ಚೀನಾ ಮಾಡುತ್ತಿರುವ ಕುಚೇಷ್ಟೆಯ ಹಿನ್ನೆಲೆಯನ್ನು ಗಮನಿಸಿ ಸುರಕ್ಷೆಗಾಗಿ ನೇಮಿಸಲಾದ ಭಾರತೀಯವ ಸೈನಿಕರನ್ನು ಭೇಟಿಯಾಗಿ ಅವರ ಮನೋಬಲವನ್ನು ಹೆಚ್ಚಿಸಿದರು. ಗಲವಾನ ಕಣಿವೆಯಲ್ಲಿ ಚೀನಾದ ಉದ್ಧಟತನಕ್ಕೆ ಪ್ರತ್ಯುತ್ತರ ನೀಡುವಾಗ ಗಾಯಗೊಂಡಿರುವ ಸೈನಿಕರನ್ನು ಭೇಟಿಯಾಗಿ “ಎಲ್ಲ ಭಾರತೀಯರು ನಿಮ್ಮ ಜೊತೆಗಿದ್ದಾರೆ, ಎಂದು ಉದ್ಗಾರ ಮಾಡಿದರು. ಪ್ರಧಾನಮಂತ್ರಿ ಮೋದಿಯವರು ಗಾಯಗೊಂಡಿರುವ ಸೈನಿಕರನ್ನು ಭೇಟಿಯಾಗಿರುವ ಛಾಯಾಚಿತ್ರಗಳು ಮಾಧ್ಯಮಗಳಲ್ಲಿ ಪ್ರಸಾರವಾದಾಗ ಕಾಂಗ್ರೆಸ್ಸಿಗೆ ತೀವ್ರ ಹೊಟ್ಟೆನೋವು ಆರಂಭವಾಯಿತು. ಕಾಂಗ್ರೆಸ್ ಈ ಛಾಯಾಚಿತ್ರಗಳನ್ನು ‘ಪೋಸ್ಟ್‌ಮಾರ್ಟಮ್ ಮಾಡಿ ಏನೋ ರಹಸ್ಯವನ್ನು ಕಂಡು ಹಿಡಿಯಿತಂತೆ. ಮೋದಿಯವರು ಸೈನಿಕರನ್ನು ಭೇಟಿಯಾದ ಆಸ್ಪತ್ರೆಯನ್ನು ಮೋದಿಯವರು ಬರುವರೆಂದು ಇತ್ತೀಚೆಗಷ್ಟೆ ಕಟ್ಟಲಾಗಿದೆಯಂತೆ. ಇಲ್ಲಿ ಕೇವಲ ಮಂಚಗಳು ಮಾತ್ರ ಇವೆ, ವೈದ್ಯಕೀಯ ಉಪಕರಣಗಳನ್ನಿಡಲು ಯಾವುದೇ ವ್ಯವಸ್ಥೆಯಿಲ್ಲ. ಆಸ್ಪತ್ರೆಯಲ್ಲಿ ಕೆಮೆರಾವನ್ನು ನೇತಾಡಿಸಿ ಇಡಲಾಗಿದೆ. ಆದ್ದರಿಂದ ಈ ಆಸ್ಪತ್ರೆ ಮತ್ತು ಮೋದಿಯವರ ಭೇಟಿಯೆಂದರೆ ಛಾಯಾಚಿತ್ರಗಳನ್ನು ತೆಗೆಯಲು ಮಾಡಿದ ಒಂದು ತೋರಿಕೆಯಾಗಿದೆ, ಪ್ರಚಾರದ ಒಂದು ಪದ್ಧತಿಯಾಗಿದೆ, ಎಂದು ಕಾಂಗ್ರೆಸ್ಸಿನ ಅನೇಕ ಟ್ವೀಟ್‌ಗಳಿಂದ ಹೇಳಲಾಗುತ್ತಿದೆ.

ಕಾಂಗ್ರೆಸ್ಸಿನ ಕುಸಂಸ್ಕೃತಿ !

ಕಾಂಗ್ರೆಸ್ಸಿಗೆ ರಾಷ್ಟ್ರೀಯ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ನಿರ್ಣಯದಲ್ಲಿ ಅಥವಾ ಕೃತಿಯಲ್ಲಿ ಏನಾದರೂ ಒಂದು ಕೊರತೆಯನ್ನು ಹುಡುಕಿ ಅದರ ಮಹತ್ವವನ್ನು ಹೇಳುವುದು, ಇದು ಕಾಂಗ್ರೆಸ್ಸಿಗೆ ಚೆನ್ನಾಗಿ ತಿಳಿಯುತ್ತದೆ. ಚೀನಾ ಗಾಲ್ವಾನ್ ಕಣಿವೆಯಲ್ಲಿ ನುಸುಳಿರುವ ಬಗ್ಗೆ ಮತ್ತು ಅಲ್ಲಿ ಎರಡೂ ದೇಶಗಳ ಸೈನಿಕರಲ್ಲಿ ನಡೆದಿರುವ ಚಕಮಕಿಯ ವಿಷಯದಲ್ಲಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯು ಪ್ರಾರಂಭದಿಂದಲೇ ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡಿ ತನ್ನ ಮುಖಕ್ಕೆ ಮಸಿ ಬಳಿದುಕೊಂಡಿದ್ದಾರೆ. ಪ್ರಧಾನಮಂತ್ರಿ ಮೋದಿಯವರು ಆಸ್ಪತ್ರೆಗೆ ರೋಗಿಗಳನ್ನು ಭೇಟಿ ಮಾಡಿರುವ ವಿಷಯದಲ್ಲಿ ಕಾಂಗ್ರೆಸ್ ಮಾಡಿದ ಅಪಪ್ರಚಾರದ ವಿಷಯದಲ್ಲಿ ಸ್ವತಃ ಸೈನ್ಯಾಧಿಕಾರಿಗಳೇ ಸ್ಪಷ್ಟೀಕರಣ ನೀಡಿದ್ದಾರೆ. ಅವರು ಹೇಳಿದ್ದೇನೆಂದರೆ, ಇದು ಆಸ್ಪತ್ರೆಯ ಒಂದು ಭಾಗವಾಗಿದೆ ಹಾಗೂ ‘ಕಾನ್ಫರೆನ್ಸ್ ಹಾಲ್‌ನಲ್ಲಿ ಈ ವ್ಯವಸ್ಥೆಯನ್ನು ಮಾಡಲಾಗಿದೆ. ಸೈನಿಕರಿಗೆ ಅತ್ಯುತ್ತಮ ಸೌಲಭ್ಯಗಳನ್ನು ನೀಡುವ ಪ್ರಯತ್ನವಿರುತ್ತದೆ, ಎಂದು ಸಹ ಸೈನ್ಯವು ಸ್ಪಷ್ಟಪಡಿಸಿದೆ. ‘ಕೇವಲ ಛಾಯಾಚಿತ್ರ ತೆಗೆಯಲು ಈ ವ್ಯವಸ್ಥೆ ಮಾಡಲಾಗಿದೆ, ಎಂಬ ಕಾಂಗ್ರೆಸ್ಸಿಗರ ಹೇಳಿಕೆಯು ಸೈನಿಕರ ಶೌರ್ಯದ ಮೇಲೆ ಮತ್ತು ದೇಶದ ವ್ಯವಸ್ಥೆಯ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸುವ ವಿಷಯವಾಗಿದೆ, ಎನ್ನುವಷ್ಟು ಅರಿವು ಕಾಂಗ್ರೆಸ್ಸಿಗೆ ಇಲ್ಲದಿದ್ದರೂ ನಾಗರಿಕರಿಗಿದೆ. ‘#ಚಾಯವಾಲಾಎಮ್.ಬಿ.ಬಿ.ಎಸ್. ಹೀಗೆ ‘ಟ್ರೆಂಡ್ ನಡೆಸಲಾಗುತ್ತಿದ್ದು ಅದರಲ್ಲಿ ನಿರಾಧಾರ ಆರೋಪ ಮಾಡುವ ಟ್ವೀಟ್ ಮಾಡಲಾಗುತ್ತದೆ. ಛಾಯಾಚಿತ್ರಗಳನ್ನು ತೆಗೆಯುವ ಆಯೋಜನೆ, ಆಂದೋಲನವನ್ನು ಹಮ್ಮಿಕೊಳ್ಳುವುದು, ಬಹುಶಃ ಕಾಂಗ್ರೆಸ್ಸಿನ ಕಾರ್ಯಪದ್ಧತಿಯೇ ಆಗಿರುವುದರಿಂದ ಅವರಿಗೆ ಇತರರು ಸಹ ಅದೇ ರೀತಿ ಮಾಡುತ್ತಾರೆ, ಎಂದು ಅನಿಸಿರಬಹುದು. ಆದ್ದರಿಂದ ಕಾಂಗ್ರೆಸ್ಸಿನ ನೀಚಬುದ್ಧಿಯನ್ನು ಎಷ್ಟು ತೆಗಳಿದರೂ ಕಡಿಮೆಯೇ ಆಗಿದೆ. ಇಂತಹ ವರ್ತನೆಯಿಂದ ಕಾಂಗ್ರೆಸ್ ಟೀಕೆಗೆ ಗುರಿಯಾಗುತ್ತಿದೆ ಹಾಗೂ ಜನರ ಮನಸ್ಸಿನಿಂದ ದೂರವಾಗುತ್ತಿದೆ, ಎಂಬುದು ಮಾತ್ರ ಖಚಿತ !

ಮಾರ್ಕ್ಸ್‌ವಾದದ ಏಕಾಧಿಪತ್ಯ !

ರಶ್ಯಾದ ಸಂಸತ್ತಿನಲ್ಲಿ ಸ್ವೀಕೃತವಾದ ಸಂವಿಧಾನ ತಿದ್ದುಪಡಿಗನುಸಾರ ರಶ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮೀರ್ ಪುತೀನ್ ಇವರು ೨೦೩೬ ರ ವರೆಗೆ ಈ ಹುದ್ದೆಯಲ್ಲಿರುವರು. ಪುತೀನ್ ಇವರ ಆಡಳಿತಕಾಲವು ೨೦೨೪ ರಲ್ಲಿ ಮುಗಿಯಲಿಕ್ಕಿತ್ತು. ಈಗ ಅವರಿಗೆ ಎರಡು ಅವಧಿಗಳ ಅಧಿಕಾರ ಅಂದರೆ ೧೨ ವರ್ಷಗಳ  ಕಾಲಾವಧಿಯು ಹೆಚ್ಚುವರಿಯಾಗಿ ದೊರಕಿದೆ. ಇದಕ್ಕೂ ಮೊದಲು ಜನಾಭಿಪ್ರಾಯವನ್ನು ತೆಗೆದುಕೊಳ್ಳಲಾಗಿತ್ತಂತೆ ! ಸಂವಿಧಾನ ತಿದ್ದುಪಡಿಯು ಅವಿರೋಧವಾಗಿ ಸಮ್ಮತಿಸಲ್ಪಟ್ಟಿದೆ. ಯಾವುದಾದರೊಂದು ದೇಶದ ಸಂಸತ್ತಿನಲ್ಲಿ ಕಾನೂನನ್ನು ಬದಲಾಯಿಸಿ ಒಬ್ಬ ವ್ಯಕ್ತಿಯನ್ನು ಸೀಮಾತೀತ ಸಮಯದ ತನಕ ಅಧಿಕಾರದಲ್ಲಿಡುವುದು ಇತರರ ದೃಷ್ಟಿಯಲ್ಲಿ ಚಿಂತೆಯ ವಿಷಯವಲ್ಲದಿದ್ದರೂ, ರಶ್ಯಾದ ಮಾರ್ಕ್ಸ್‌ವಾದದ ತತ್ತ್ವಕ್ಕನುಸಾರ ರಾಜ್ಯಾಡಳಿತವಿರುವ ರಶ್ಯಾವು ಆ ತತ್ತ್ವವನ್ನು ಉಲ್ಲಂಘಿಸಿದಂತಾಗುವುದಿಲ್ಲವೇ ? ಎಲ್ಲೆಡೆ ಸಮಾನತೆಯನ್ನು ಸ್ಥಾಪಿಸುವುದು, ಸಾಧನ-ಸಂಪತ್ತನ್ನು ಸಮಾನವಾಗಿ ಹಂಚುವುದು, ಯಾವುದೇ ವ್ಯಕ್ತಿಯೊಂದಿಗೆ ತಾರತಮ್ಯ ಮಾಡದಿರುವುದು, ಇವೆಲ್ಲ ಮಾರ್ಕ್ಸ್‌ವಾದದ ತತ್ತ್ವಜ್ಞಾನದ ಅಂಗಗಳಾಗಿದೆ. ಮಾರ್ಕ್ಸ್‌ವಾದಕ್ಕನುಸಾರ ಶ್ರೀಮಂತ-ಬಡವ ಎನ್ನುವ ವ್ಯತ್ಯಾಸವಿರಬಾರದು. ಇದೇ ನ್ಯಾಯವನ್ನು ಹುದ್ದೆಗಳಿಗೂ ಅನ್ವಯಗೊಳಿಸಬಹುದು. ಕಟ್ಟರ್ ಸಾಮ್ಯವಾದಿಗಳೆಂದು ಹೇಳಿಸಿಕೊಳ್ಳುವ ರಶ್ಯಾ ಮತ್ತು ಚೀನಾದಲ್ಲಿ ಇತರರ ಹಾಗೆ ರಾಷ್ಟ್ರಾಧ್ಯಕ್ಷ, ಗೃಹಮಂತ್ರಿ, ವಿದೇಶಮಂತ್ರಿ ಇತ್ಯಾದಿ ಹುದ್ದೆಗಳಿವೆ. ಆಯಾಯ ಹುದ್ದೆಗೆ ಆವಶ್ಯಕವಿರುವ ಅಧಿಕಾರವನ್ನು ವಹಿಸಿಕೊಡಲಾಗಿದೆ. ಜನಸಾಮಾನ್ಯರಿಗಿಂತ ತುಂಬಾ ಹೆಚ್ಚು ಸಾಮರ್ಥ್ಯವನ್ನು ಈ ಹುದ್ದೆಗಳಿಗೆ ಕೊಡಲಾಗಿದೆ. ಆದ್ದರಿಂದ ಇಲ್ಲಿ ಸಾಮ್ಯವಾದ ಹೇಗೆ ಅನ್ವಯವಾಗುತ್ತದೆ ?, ಎಂಬುದು ಅರಿವಾಗುವುದಿಲ್ಲ. ಶೋಷಿತ ಹಾಗೂ ವಂಚಿತ ಘಟಕಗಳಿಗೆ ನ್ಯಾಯವನ್ನು ದೊರಕಿಸಿಕೊಡುವ ನೆಪದಲ್ಲಿ ಸಮಾನತೆಯನ್ನು ಸ್ಥಾಪಿಸುವ ನೆಪದಲ್ಲಿ ಸಾಮ್ಯವಾದಿಗಳು ಲಕ್ಷಗಟ್ಟಲೆ ಜನರನ್ನು ಸಂಹಾರ ಮಾಡಿದ್ದಾರೆ. ‘ಸಾಮ್ಯವಾದವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ ಅದು ರಕ್ತರಂಜಿತ ಹಿಂಸೆಯೆ ಆಗಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಸಾಮ್ಯವಾದದ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯು ಮಾರಕವಾಗಿದೆ. ಯಾರು ಪ್ರಜಾಪ್ರಭುತ್ವ ಪ್ರತಿನಿಧಿಸುತ್ತಾರೊ, ಅವರನ್ನು ಕೊಲೆ ಮಾಡುವುದು ಅಥವಾ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು, ಇದುವೇ ಸಾಮ್ಯವಾದಿಗಳ ಕಾರ್ಯಪದ್ಧತಿಯಾಗಿದೆ ! ನೇಪಾಳವು ಇದರ ಇತ್ತೀಚೆಗಿನ ಉದಾಹರಣೆಯಾಗಿದೆ. ಸಾಮ್ಯವಾದಿಗಳು ಅಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಗೊಳಿಸಿ ನೇಪಾಳವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಈಗ ಅಲ್ಲಿ ದಬ್ಬಾಳಿಕೆಯ ಆಡಳಿತ ನಡೆಯುತ್ತದೆ.

ಇವೆಲ್ಲವುಗಳ ಕಾರಣಮೀಮಾಂಸೆಯನ್ನು ಹೇಳುವ ಉದ್ದೇಶವೆಂದರೆ, ರಶ್ಯಾದಲ್ಲಿ ಅನೇಕ ವರ್ಷಗಳವರೆಗೆ ಪುತೀನ್ ಅಧಿಕಾರದಲ್ಲಿರುವುದೆಂದರೆ, ಅದೊಂದು ರೀತಿಯಲ್ಲಿ ಅವರ ಏಕಾಧಿಪತ್ಯ ಅಥವಾ ರಾಜ್ಯಾಡಳಿತ ಮತ್ತು ಸರ್ವಾಧಿಕಾರವೇ ಆಗುತ್ತದೆ. ಚೀನಾದಲ್ಲಿಯೂ ಇದೇ ವ್ಯವಸ್ಥೆಯನ್ನು ಮಾಡಿದ್ದು ರಾಷ್ಟ್ರಾದ್ಯಕ್ಷ ಶೀ ಜೀನ್‌ಪಿಂಗ್ ಅನಿರ್ಧಿಷ್ಠ ಕಾಲ ಹುದ್ದೆಯಲ್ಲಿರಬಹುದಾಗಿದೆ. ಅವರು ಸಂವಿಧಾನದಲ್ಲಿ ಅಂತಹ ತಿದ್ದುಪಡಿಯನ್ನು ಮಾಡಿಕೊಂಡಿದ್ದಾರೆ. ಎರಡೂ ಸಾಮ್ಯವಾದಿ ಅಧಿಕಾರರೂಢರ ಇಂತಹ ವರ್ತನೆಯು ಆಶ್ಚರ್ಯಚಕಿತವಷ್ಟೇ ಅಲ್ಲದೇ ಸಾಮ್ಯವಾದದ ಹೆಸರಿನಲ್ಲಿ ತಮ್ಮ ಏಕಾಧಿಪತ್ಯವನ್ನು ಸ್ಥಾಪಿಸುವ ಶಿಸ್ತುಬದ್ಧ ಪ್ರಯತ್ನವಾಗಿದೆ. ಚೀನಾ ಶೀ ಜೀನ್‌ಪಿಂಗ್ ಇವರ ಅಧಿಪತ್ಯದಲ್ಲಿ ವಿಸ್ತಾರವಾದಿ ಭೂಮಿಕೆಯಿಂದ ನೆರೆಕರೆಯ ದೇಶಗಳನ್ನು ವಕ್ರದೃಷ್ಟಿಯಲ್ಲಿ ನೋಡುವ ಪ್ರಯತ್ನ ಮಾಡುತ್ತಿದೆ. ಪುತೀನ್ ಇವರ ಮನಸ್ಸಿನಲ್ಲಿ ಏನಿದೆ ಎನ್ನುವುದು ಸ್ವಲ್ಪ ಸಮಯದಲ್ಲಿಯೆ ಕಂಡುಬರಲಿದೆ. ಆದರೂ ಸಾಮ್ಯವಾದವನ್ನು ಸಾಮ್ಯವಾದಿಗಳು ದುರುಪಯೋಗಿಸಿದ್ದಾರೆ ಹಾಗೂ ಶೀಘ್ರದಲ್ಲಿಯೇ ಅದು ಅಸ್ತವಾಗಲಿಕ್ಕಿದೆ, ಎಂಬುದು ಸೂರ್ಯಪ್ರಕಾಶದಷ್ಟೇ ಸ್ಪಷ್ಟವಾಗಿದೆ.