ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
‘ಕಲಿಯುಗದಲ್ಲಿ ಮಾನವನಿಂದ ಅಲ್ಲ ಬದಲಾಗಿ ಈಶ್ವರನಿಂದ ಚುನಾಯಿತನಾಗಬೇಕು, ಎಂದು ಸಾಧಕರ ಇಚ್ಛೆ ಇರುತ್ತದೆ.
ಭಾರತಕ್ಕೆ ಮೂರನೇ ಮಹಾ ಯುದ್ಧವನ್ನು ಅಂತರ್ಬಾಹ್ಯ ಹೋರಾಡ ಬೇಕಿದ್ದರಿಂದ ಅದರ ಸಿದ್ಧತೆಯನ್ನು ಈಗಿನಿಂದಲೇ ಮಾಡುವುದು ಆವಶ್ಯಕ !
‘ಸದ್ಯ ಚೀನಾ, ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶ ಇವುಗಳ ಭಾರತದ ವಿರುದ್ಧ ಚಟುವಟಿಕೆಗಳಲ್ಲಿ ಹೆಚ್ಚಳವಾಗಿದೆ. ಶತ್ರುರಾಷ್ಟ್ರಗಳು ಕ್ಯಾತೆ ತೆಗೆಯುವುದರಿಂದ ಮೂರನೇ ಮಹಾಯುದ್ಧ ಎಂದೂ ಸಂಭವಿಸಬಹುದು ಇಂತಹ ಸ್ಥಿತಿ ಇದೆ. ಅಲ್ಲದೇ ಭಾರತದಲ್ಲಿ ಮತಾಂಧರಿಂದ ಭಾರತವಿರೋಧಿ ಚಟುವಟಿಕೆಗಳು ಮತ್ತು ಹಿಂದೂಗಳ ಮೇಲಾಗುವ ದೌರ್ಜನ್ಯಗಳಲ್ಲಿಯೂ ಹೆಚ್ಚಳವಾಗಿದೆ. ಇದೆಲ್ಲ ಸ್ಥಿತಿ ನೋಡಿದರೆ ಮುಂಬರುವ ಸಮಯದಲ್ಲಿ ಮೂರನೇ ಮಹಾಯುದ್ಧವನ್ನು ಅಂತರ್ಬಾಹ್ಯ ಎರಡೂ ಸ್ತರಗಳಲ್ಲಿ ಹೋರಾಡಬೇಕಾಗಬಹುದು. ಇದಕ್ಕಾಗಿ ಭಾರತ ಇಂದಿನಿಂದಲೇ ಸಿದ್ಧತೆ ಮಾಡುವುದು ಆವಶ್ಯಕವಾಗಿದೆ !
‘ರಾಜಕಾರಣಿಗಳು ಆರಿಸಿ ಬರಲು ಜನರಿಗೆ ಸಂತೋಷ ಪಡಿಸಬೇಕಾಗುತ್ತದೆ. ಬದಲಾಗಿ ಸಾಧನೆ ಮಾಡುವವರನ್ನು ಈಶ್ವರನು ಸ್ವತಃ ಆಯ್ಕೆ ಮಾಡುತ್ತಾನೆ !
ವ್ಯಕ್ತಿಗತ ಜೀವನಕ್ಕಾಗಿ ಹೆಚ್ಚು ಹಣ ಸಿಗುತ್ತದೆ ಎಂದು ಎಲ್ಲರೂ ಆನಂದದಿಂದ ಹೆಚ್ಚು ಸಮಯ (ಓವರ್ ಟೈಮ್) ಕೆಲಸ ಮಾಡುತ್ತಾರೆ; ಆದರೆ ರಾಷ್ಟ್ರ ಮತ್ತು ಧರ್ಮ ಇವುಗಳಿಗಾಗಿ ೧ ಗಂಟೆ ಸೇವೆ ಮಾಡಲು ಯಾರೂ ಸಿದ್ಧ ಇರುವುದಿಲ್ಲ !
‘ಹಿಂದಿನ ಕಾಲದಲ್ಲಿ ಎಲ್ಲರೂ ಸಾಧನೆ ಮಾಡುವವರು ಇದ್ದುದರಿಂದ ಅವರಿಗೆ ‘ಬೇರೆಯವರೊಂದಿಗೆ ಹೇಗೆ ಮಾತನಾಡಬೇಕು ? ಬೇರೆಯವರೊಂದಿಗೆ ಹೇಗೆ ವರ್ತಿಸಬೇಕು ?, ಎಂದು ಕಲಿಸಬೇಕಾಗುತ್ತಿರಲಿಲ್ಲ. ಅವರಲ್ಲಿ ಅದು ಚಿಕ್ಕಂದಿನಿಂದಲೇ ಅಂಗೀಕರಿಸಲ್ಪಡುತ್ತಿತ್ತು. ಆದರೆ ಅದನ್ನು ಈಗ ಎಲ್ಲರಿಗೂ ಕಲಿಸಬೇಕಾಗುತ್ತದೆ !
‘ಹಿಂದೂ ರಾಷ್ಟ್ರದಲ್ಲಿ (ಈಶ್ವರೀ ರಾಜ್ಯದಲ್ಲಿ) ನಿಯತಕಾಲಿಕೆಗಳು, ದೂರಚಿತ್ರವಾಹಿನಿಗಳು, ಜಾಲತಾಣಗಳು ಇತ್ಯಾದಿಗಳನ್ನು ಕೇವಲ
ಧರ್ಮಶಿಕ್ಷಣ ಮತ್ತು ಸಾಧನೆ ಇವುಗಳ ಸಂದರ್ಭದಲ್ಲಿ ಬಳಸಲಾಗು ವುದು. ಇದರಿಂದ ಅಪರಾಧಿಗಳು ಇರುವುದಿಲ್ಲ ಮತ್ತು ಎಲ್ಲರೂ ಭಗವಂತನ ಅನುಸಂಧಾನದಲ್ಲಿ ಇದ್ದುದರಿಂದ ಅನಂದದಲ್ಲಿ ಇರುತ್ತಾರೆ.