‘ಸೆಕ್ಯುಲರ್ ಸರಕಾರವು ದೇವಸ್ಥಾನಗಳನ್ನು ನಡೆಸುವುದೆಂದರೆ ನಾಸ್ತಿಕರ ಕೈಯಲ್ಲಿ ಧಾರ್ಮಿಕ ದೇವಸ್ಥಾನಗಳ ಆಡಳಿತವಿರುವಂತಾಗಿದೆ ! – ಟಿ.ಆರ್. ರಮೇಶ, ಅಧ್ಯಕ್ಷರು, ಟೆಂಪಲ್ ವರ್ಶಿಪರ್ಸ್ ಸೊಸೈಟಿ, ತಮಿಳುನಾಡು

 

ಮುಂಬೈ – ‘ಡಾ. ಸುಬ್ರಮಣಿಯನ್ ಸ್ವಾಮಿಯವರ ಅರ್ಜಿಯ ಮೇರೆಗೆ ಸರ್ವೋಚ್ಚ ನ್ಯಾಯಾಲಯವು ನೀಡಿರುವ ಆದೇಶದ ಪ್ರಕಾರ ದೇವಸ್ಥಾನಗಳಲ್ಲಿ ಯಾವುದೇ ಅವ್ಯವಹಾರ ನಡೆದರೆ, ಸರಕಾರವು ಅದನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಅದನ್ನು ಸ್ವತಃ ನಡೆಸಲು ಸಾಧ್ಯವಿಲ್ಲ, ಆದರೆ ಸಮಸ್ಯೆಯನ್ನು ಪರಿಹರಿಸಲು ಮಾತ್ರ ದೇವಸ್ಥಾನಗಳನ್ನು ಸ್ವಾಧೀನಪಡಿಸಿಕೊಳ್ಳಬಹುದು. ವಾಸ್ತವದಲ್ಲಿ, ಸೆಕ್ಯುಲರ್ ಸರಕಾರವು ದೇವಸ್ಥಾನಗಳನ್ನು ಸ್ವಾಧೀನ ಪಡಿಸಿಕೊಳ್ಳುತ್ತಿದೆ ಮತ್ತು ನಡೆಸುತ್ತಿದೆ. ಇಂದು ಸರಕಾರವು ಲಕ್ಷಾಂತರ ಎಕರೆ ದೇವಸ್ಥಾನದ ಭೂಮಿಯನ್ನು ಬಳಸುತ್ತದೆ. ಅದಕ್ಕಾಗಿ ಸರಕಾರವು ದೇವಸ್ಥಾನಗಳಿಗೆ ಪ್ರತಿ ವರ್ಷ ಪ್ರತಿ ಎಕರೆಗೆ ೨ ರೂಪಾಯಿಯಷ್ಟು ಕಡಿಮೆ ಹಣವನ್ನು ನೀಡಿ ಆ ಸ್ಥಳದಲ್ಲಿ ಕೋಟಿ ರೂಪಾಯಿಗಳನ್ನುಗಳಿಸುತ್ತದೆ. ಇಂದಿನ ಮಾರುಕಟ್ಟೆ ಬೆಲೆಯಲ್ಲಿ ದೇವಸ್ಥಾನದ ಭೂಮಿಗೆ ಸರಿಯಾಗಿ ಬಾಡಿಗೆ ನೀಡಿದರೆ, ಅದು ೧ ಬಿಲಿಯನ್ ಡಾಲರ್ (೭ ಸಾವಿರದ ೫೦೦ ಕೋಟಿ ರೂ.ಗಳಿಗಿಂತ ಹೆಚ್ಚು) ಇರುವುದು. ಇದರಿಂದ ದೇವಸ್ಥಾನಗಳಿಗೆ ತಮ್ಮದೇ ಆದ ಸಂಸ್ಥೆಗಳು, ಗೋಶಾಲೆಗಳು ಮತ್ತು ಪಾಠಶಾಲೆಗಳನ್ನು ನಡೆಸಲು ಸಾಧ್ಯವಾಗುತ್ತದೆ. ‘ಸೆಕ್ಯುಲರ್ ಸರಕಾರವು ದೇವಸ್ಥಾನಗಳನ್ನು ನಡೆಸುವುದೆಂದರೆ ದೇವಸ್ಥಾನಗಳನ್ನು ನಾಸ್ತಿಕರಿಗೆ ನೀಡುವಂತಿದೆ ಎಂದು ತಮಿಳುನಾಡಿನ ‘ಟೆಂಪಲ್ ವರ್ಶಿಪರ್ಸ ಸೊಸೈಟಿಯ ಅಧ್ಯಕ್ಷರಾದ ಶ್ರೀ. ಟಿ.ಆರ್. ರಮೇಶ ಇವರು ಹೇಳಿದರು.

ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ ‘ಜಾತ್ಯತೀತ ಸರಕಾರ ಹಿಂದೂ ದೇವಸ್ಥಾನಗಳನ್ನು ಏಕೆ ನಿಯಂತ್ರಿಸುತ್ತದೆ ? ಎಂಬ ವಿಶೇಷದಲ್ಲಿ ಪರಿಸಂವಾದದಲ್ಲಿ ಅವರು ಮಾತನಾಡುತ್ತಿದ್ದರು. ಇದರಲ್ಲಿ ಭಾಗ್ಯನಗರ (ಹೈದರಾಬಾದ್) ಚಿಲ್ಕೂರ್ ಬಾಲಾಜಿ ದೇವಸ್ಥಾನದ ಪ್ರಧಾನ ಅರ್ಚಕ ಸಿ.ಎಸ್. ರಂಗರಾಜನಜಿ, ಕೇರಳದ ‘ಪೀಪಲ್ ಫಾರ್ ಧರ್ಮ ಇದರ ಅಧ್ಯಕ್ಷೆ ಸೌ. ಶಿಲ್ಪಾ ನಾಯರ್, ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಕಿರಣ ಬೆಟ್ಟದಾಪುರ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಉಪಸ್ಥಿತರಿದ್ದರು.

ಆ ಸಮಯದಲ್ಲಿ ಶ್ರೀ. ಸಿ.ಎಸ್ ರಂಗರಾಜನಜಿಯವರು ಮಾತನಾಡುತ್ತಾ, “ದೇವಸ್ಥಾನಗಳಲ್ಲಿ ಸರಕಾರಿ ಅಧಿಕಾರಿಗಳ ನೇಮಕದಿಂದ ಅಲ್ಲಿನ ಭಕ್ತಿ ಮಾಯವಾಗುತ್ತಿದೆ. ಭಕ್ತಿಯ ಮಾರ್ಗವನ್ನು ಕಲಿಸಲು ದೇವಸ್ಥಾನಗಳನ್ನು ಸುರಕ್ಷಿತವಾಗಿಡಬೇಕು. ಸರಕಾರವು ದೇವಸ್ಥಾನಗಳಲ್ಲಿನ ಸಂಪತ್ತನ್ನು ನೋಡಿ ದೇವಸ್ಥಾನಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದರೆ, ದೇವಸ್ಥಾನಗಳಲ್ಲಿನ ದಾನಪೆಟ್ಟಿಗೆಗಳನ್ನು ತೆಗೆದುಹಾಕಿದರೆ, ಸರಕಾರವು ಸರಿ ದಾರಿಗೆ ಬರುವುದು, ಎಂದರು.

ದೇವಸ್ಥಾನ ಸರಕಾರಿಕರಣದ ವಿರುದ್ಧ ನ್ಯಾಯಾಂಗ ಹೋರಾಟ ಮಾಡುವ ಹಿರಿಯ ವಕೀಲ ಕಿರಣ ಬೆಟ್ಟದಾಪುರ ಇವರು ಮಾತನಾಡುತ್ತಾ, “ಬೆಂಗಳೂರಿನಲ್ಲಿ ವಿಧಾನಸೌಧದ ಕಟ್ಟಡವನ್ನು ಪ್ರಭು ಅರಳಿ ಮುನೇಶ್ವರ ದೇವಸ್ಥಾನಕ್ಕೆ ಸೇರಿದ ೬೦ ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ. ಸರಕಾರ ಭೂಮಿಯನ್ನು ಕಬಳಿಸಿ ಅಲ್ಲಿ ವಿಧಾನಸೌಧವನ್ನು ನಿರ್ಮಿಸಿತು. ಕರ್ನಾಟಕದಲ್ಲಿ ೩೫ ಸಾವಿರ ದೇವಸ್ಥಾನಗಳ ಸರಕಾರಿಕರಣವಾಗಿದ್ದು ದೇವನಿಧಿಯನ್ನು ಸರಿಯಾಗಿ ಬಳಸುತ್ತಿಲ್ಲ. ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ, ಎಂದರು.

ಈ ವೇಳೆ ಸೌ. ಶಿಲ್ಪಾ ನಾಯರ್ ಇವರು ಮಾತನಾಡುತ್ತಾ, “ಕೇರಳದ ಜಾತ್ಯತೀತ ಕಮ್ಯುನಿಸ್ಟ್ ಸರಕಾರ ಹಿಂದೂಗಳ ಧಾರ್ಮಿಕ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ. ಜಾತ್ಯತೀತ ಸರಕಾರದ ನಿರ್ಲಕ್ಷ್ಯದಿಂದಾಗಿ ಲಕ್ಷಾಂತರ ಎಕರೆ ದೇವಸ್ಥಾನದ ಭೂಮಿಯನ್ನು ಕಸಿದುಕೊಳ್ಳಲಾಗಿದೆ. ಕೊಚ್ಚಿ ದೇವಸ್ವಂ ಬೋರ್ಡ ಅಂತರ್ಗತ ಬರುವ ೫೫ ಸಾವಿರ ಎಕರೆ ಭೂಮಿ, ಗುರುವಾಯೂರ್ ದೇವಸ್ವಂ ಬೋರ್ಡನ ದೇವಸ್ಥಾನಗಳ ೧೩ ಸಾವಿರ ೫೦೦ ಎಕರೆ, ಕೂಡಲಮಣಿಕಂ ದೇವಸ್ಥಾನದ ೭೫ ಸಾವಿರ ಎಕರೆ ಮತ್ತು ಮಲಬಾರ್ ದೇವಸ್ವಂ ಬೋರ್ಡ್‌ನ ೨ ಲಕ್ಷ ಎಕರೆ ಭೂಮಿಯನ್ನು ಸಮಾಜಕಂಟಕರು ಕಬಳಿಸಿದ್ದಾರೆ.  ಇದೆಲ್ಲವನ್ನೂ ತಡೆಯಲು ದೇವಸ್ಥಾನಗಳ ನಿರ್ವಹಣೆಯನ್ನು ಭಕ್ತರಿಗೆ ಬಿಡಬೇಕು, ಎಂದರು

ಶ್ರೀ. ರಮೇಶ ಶಿಂದೆಯವರು ಮಾತನಾಡುತ್ತಾ. ಧರ್ಮದ ಪ್ರಚಾರ ಮಾಡುವುದು ದೇವಸ್ಥಾನಗಳ ಮುಖ್ಯ ಉದ್ದೇಶವಾಗಿದೆ. ಚರ್ಚ್‌ನಲ್ಲಿ ಬೈಬಲ್ ಮತ್ತು ಮಸೀದಿಯಲ್ಲಿ ಕುರಾನ್ ಕಲಿಸಿದರೆ, ದೇವಸ್ಥಾನಗಳಲ್ಲಿ ಭಗವದ್ಗೀತೆಯನ್ನು ಏಕೆ ಕಲಿಸುತ್ತಿಲ್ಲ ? ದೇವಸ್ಥಾನಗಳ ಮೂಲಕ ಹಿಂದೂ ಧರ್ಮದ ಪ್ರಚಾರ ಮಾಡಲು ‘ದೇವಸ್ಥಾನ ಮತ್ತು ಸಂಸ್ಕೃತಿ ಸಂರಕ್ಷಣಾ ಆಂದೋಲನ ಎಂಬ ರಾಷ್ಟ್ರವ್ಯಾಪಿ ಆಂದೋಲನವನ್ನು ಸ್ಥಾಪಿಸಲಾಗುತ್ತಿದೆ. ಈ ಸಮಯದಲ್ಲಿ, ಮಲಯಾಳಂ ಭಾಷೆಯಲ್ಲಿ ಸನಾತನ ಸಂಸ್ಥೆಯ Sಚಿಟಿಚಿಣಚಿಟಿ.oಡಿg ಈ ಜಾಲತಾಣವನ್ನು ಶ್ರೀ. ಸಿ.ಎಸ್. ರಂಗರಾಜನಜಿಯವರು ಲೋಕಾರ್ಪಣೆ ಮಾಡಿದರು.

‘ಫೇಸ್‌ಬುಕ್ ಮತ್ತು ‘ಯೂ ಟ್ಯೂಬ್ ಮೂಲಕ ೫೨ ಸಾವಿರಕ್ಕಿಂತ ಹೆಚ್ಚು ಜನರು ಈ ಕಾರ್ಯಕ್ರಮ ನೋಡಿದರು ಹಾಗೂ ೧ ಲಕ್ಷ ೮೦ ಸಾವಿರಕ್ಕಿಂತ ಹೆಚ್ಚು ಜನರವರೆಗೆ ವಿಷಯ ತಲುಪಿತು.