ರಾಮಜನ್ಮಭೂಮಿಯಲ್ಲಿ ಬೌದ್ಧ ದೇವಸ್ಥಾನವಿತ್ತು ಎಂದು ಹೇಳುತ್ತಾ ಬೌದ್ಧ ಭಿಕ್ಷುವಿನಿಂದ ಆಮರಣ ಉಪವಾಸ

ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ಎಲ್ಲ ದಾವೆಗಳನ್ನು ವಜಾಗೊಳಿಸಿ ‘ರಾಮಜನ್ಮಭೂಮಿ ಭಗವಾನ ಶ್ರೀರಾಮನದ್ದೇ ಆಗಿತ್ತು’, ಎಂದು ತೀರ್ಪನ್ನು ನೀಡಿರುವ ಹಿನ್ನಲೆಯಲ್ಲಿ ಈ ರೀತಿಯ ಆಂದೋಲನವನ್ನು ಕೇವಲ ಪ್ರಸಿದ್ಧಿಗಾಗಿಯೇ ಮಾಡಲಾಗುತ್ತದೆ, ಎಂಬುದು ಸ್ಪಷ್ಟವಾಗುತ್ತದೆ !

ಅಯೋಧ್ಯೆ (ಉತ್ತರಪ್ರದೇಶ) – ಅಯೋಧ್ಯೆಯ ರಾಮಮಂದಿರದ ಸ್ಥಳ ಹಾಗೂ ಸಂಪೂರ್ಣ ಪರಿಸರವು ಬೌದ್ಧ ಮಂದಿರದ ಪರಿಸರವಾಗಿದ್ದು ‘ರಾಮಮಂದಿರದ ಸ್ಥಳದಲ್ಲಿ ಪ್ರಾಚೀನ ಬುದ್ಧ ಮಂದಿರವಾಗಿತ್ತು’, ಎಂದು ಭಾರತೀಯ ಬೌದ್ಧ ಭಿಕ್ಷು ಹೇಳಿಕೊಂಡಿದ್ದಾರೆ. ‘ರಾಮಜನ್ಮಭೂಮಿ ಕ್ಷೇತ್ರ ಇದು ಪ್ರಾಚೀನ ಬೌದ್ಧ ಸ್ಥಳವಾಗಿದ್ದು ಅದು ಪ್ರಸಿದ್ಧ ಸಾಕೇತ ಪಟ್ಟಣವಾಗಿತ್ತು. ರಾಮಮಂದಿರದ ಕೆಲಸವನ್ನು ಕೂಡಲೇ ನಿಲ್ಲಿಸಿ ಈ ಸ್ಥಳವನ್ನು ಬುದ್ಧ ಮಂದಿರಕ್ಕೆ ಹಿಂದಿರುಗಿಸಬೇಕು’, ಅದಕ್ಕಾಗಿ ಬೌದ್ಧ ಭಿಕ್ಷುಗಳು ಜುಲೈ ೧೪ ರಿಂದ ಅಮರಣ ಉಪವಾಸವನ್ನು ಆರಂಭಿಸಿದ್ದಾರೆ. ರಾಮಜನ್ಮಭೂಮಿ ಖಟ್ಲೆಯ ಸಮಯದಲ್ಲಿ ಬೌದ್ಧರೂ ಇದರ ಬಗ್ಗೆ ಅರ್ಜಿಯನ್ನು ಸಲ್ಲಿಸಿದ್ದರು.

ರಾಮಜನ್ಮಭೂಮಿಯ ನೆಲಸಮಗೊಳಿಸುವಾಗ ಬೌದ್ಧ ದೇವಸ್ಥಾನದ ಅವಶೇಷಗಳು ಸಿಕ್ಕಿವೆ ಎಂದು ಹೇಳಿಕೊಂಡಿದ್ದಾರೆ

ರಾಮಜನ್ಮಭೂಮಿಯ ಮೇಲೆ ರಾಮಮಂದಿರದ ಕೆಲಸ ಆರಂಭಿಸಿದಾಗ ಅಲ್ಲಿ ನೆಲಸಮ ಮಾಡುತ್ತಿದ್ದರು. ಆ ಸಮಯದಲ್ಲಿ ಭೂಮಿಯಲ್ಲಿ ಪ್ರಾಚೀನ ದೇವಸ್ಥಾನದ ಅವಶೇಷಗಳು ಸಿಕ್ಕಿದ ವಾರ್ತೆ ಪ್ರಸಿದ್ಧಿಯಾಗಿತ್ತು; ಆದರೆ ‘ಆ ಎಲ್ಲ ಅವಶೇಷಗಳು ರಾಮಮಂದಿರದ್ದಾಗಿರದೇ ಅದು ಬೌದ್ಧ ದೇವಸ್ಥಾನದ್ದಾಗಿತ್ತು’, ಎಂದು ಬೌದ್ಧ ಭಿಕ್ಷು ಹೇಳಿಕೊಂಡಿದ್ದಾರೆ. ‘ಭೂಮಿಯಲ್ಲಿ ಸಿಕ್ಕಿರುವ ವಿಶಿಷ್ಟಪ್ರಕಾರದ ಖಂಬ, ಅದರಲ್ಲಿಯ ಆಕೃತಿ ಹಾಗೂ ಚಕ್ರ ಇವು ಬೌದ್ಧ ದೇವಸ್ಥಾನಗಳಲ್ಲಿ ಕಂಡು ಬರುತ್ತವೆ’, ಎಂದು ಈ ಭಿಕ್ಷು ಹೇಳಿಕೊಂಡಿದ್ದಾರೆ, ಅದೇರೀತಿ ‘ಉತ್ಖನನಕ್ಕಾಗಿ ರಾಮಜನ್ಮಭೂಮಿಯ ಕ್ಷೇತ್ರದ ಸ್ಥಳವನ್ನು ‘ಯುನೆಸ್ಕೋ’ದ ವಶಕ್ಕೆ ನೀಡಬೇಕು’, ಎಂದೂ ಅವರು ಆಗ್ರಹಿಸಿದ್ದಾರೆ.