ಪ್ರತಿಯೊಂದು ವಿಷಯವನ್ನು ಹಣದೊಂದಿಗೆ ಹೋಲಿಸುವುದು ಆರ್ಥಿಕ ತಜ್ಞರೆನಿಸಿಕೊಳ್ಳುವವರ ವೈಶಿಷ್ಟ್ಯವಾಗಿದೆ. ಅರ್ಥವ್ಯವಸ್ಥೆಯ ಕೆಲವು ಸಮರ್ಥಕರು, ಕೊರೋನಾವನ್ನು ಹರಡಲು ಬಿಡಬೇಕು, ಆ ಮೇಲೆ ತಾನಾಗಿಯೇ ಯುವಕರಲ್ಲಿ ‘ಸಮೂಹ ಪ್ರತಿಕಾರಶಕ್ತಿ (ಹರ್ಡ್ ಇಮ್ಯುನಿಟಿ) ನಿರ್ಮಾಣವಾಗುತ್ತದೆ ಮತ್ತು ಕೊರೋನಾ ನಿಯಂತ್ರಣಕ್ಕೆ ಬರುತ್ತದೆ ಎಂಬ ಕಲ್ಪನೆಯನ್ನು ಮಂಡಿಸಿದ್ದಾರೆ. ಔದ್ಯೋಗೀಕರಣವೆಂದರೆ ನಮ್ಮ ಪ್ರಗತಿ, ಎಂಬುದು ಎಲ್ಲಕ್ಕಿಂತ ದೊಡ್ಡ ಮೂಢನಂಬಿಕೆಯಾಗಿದೆ. ಇಂದಿನ ಅರ್ಥಶಾಸ್ತ್ರವು ಯಾವುದೇ ಶಾಶ್ವತ ಅಡಿಪಾಯವಿಲ್ಲದ, ಅಸತ್ಯ, ಅವೈಜ್ಞಾನಿಕ, ತರ್ಕಹೀನ, ಅನೈತಿಕ ಹಾಗೂ ಆಧಾರಹೀನ ವಿಷಯ ಮತ್ತು ಸಂಕಲ್ಪನೆಯಾಗಿದೆ. ‘ಭಾರತೀಯ ಜೀವನ ಮತ್ತು ಪೃಥ್ವಿರಕ್ಷಣಾ ಚಳವಳಿಯ ನಿಮಂತ್ರಕರಾದ ವಕೀಲ ಗಿರೀಶ ರಾವುತ್ ಇವರು ಇವೆಲ್ಲ ವಿಷಯಗಳನ್ನು ಚರ್ಚಿಸುವ ಲೇಖನವನ್ನು ಬರೆದಿದ್ದು ಅದನ್ನು ನಾವು ನಮ್ಮ ವಾಚಕರಿಗಾಗಿ ಪ್ರಕಟಿಸುತ್ತಿದ್ದೇವೆ. (ಭಾಗ ೧)
೧. ಭೌತಿಕತೆಯ ಮೇಲೆ ನಿರ್ಮಿಸಿದ ಅರ್ಥವ್ಯವಸ್ಥೆ ಶಾಶ್ವತವಾಗಿರಲು ಸಾಧ್ಯವಿಲ್ಲ !
‘ಧೃ ಧಾರಯತಿ ಇತಿ ಧರ್ಮಃ | ಅಂದರೆ ‘ಯಾವ ಧಾರಣೆಯಿಂದ ಒಳ್ಳೆಯ ಸಂಸ್ಕಾರಗಳು ನಿರ್ಮಾಣವಾಗುತ್ತವೆಯೋ, ಅದನ್ನು ಧರ್ಮ ಎನ್ನುತ್ತಾರೆ. ಪೃಥ್ವಿ ಮಾನವ ಹಾಗೂ ಜೀವಸೃಷ್ಟಿಯ ಧಾರಣೆಯನ್ನು ಮಾಡುತ್ತದೆ. ಪೃಥ್ವಿಯ ವಿರುದ್ಧ, ಅಂದರೆ ಅದರ ಧಾರಣೆ ಮಾಡುವ ಕ್ಷಮತೆಯ ವಿರುದ್ಧ ಆಚರಣೆ ಮಾಡಬಾರದು. ಸ್ವಯಂಚಾಲಿತ ಯಂತ್ರಗಳು, ವಿದ್ಯುತ್ ನಿರ್ಮಾಣ, ಸಿಮೆಂಟ್, ಮೋಟರ್, ಇತರ ವಾಹನಗಳು, ದೂರಚಿತ್ರವಾಹಿನಿ ಇತ್ಯಾದಿ ಎಲ್ಲ ಔದ್ಯೋಗಿಕ ಯುಗಗಳಲ್ಲಿನ ವಿಷಯಗಳ ನಿರ್ಮಾಣ, ಉಪಯೋಗ ಮತ್ತು ಅವುಗಳನ್ನು ನಾಶ ಮಾಡುವುದು ಪೃಥ್ವಿಯ ಧಾರಣೆಯ ವಿನಾಶ ಮಾಡುತ್ತವೆ; ಆದರೆ ಇದೇ ಭೌತಿಕತೆಯ ಮೇಲೆ ಮತ್ತು ಉಪಭೋಗವಾದದ ಮೇಲೆಯೆ ಅರ್ಥಶಾಸ್ತ್ರ ಮತ್ತು ಅರ್ಥವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಅದು ಶಾಶ್ವತವಾಗುವುದು ಎಂದಿಗೂ ಸಾಧ್ಯವಿರಲಿಲ್ಲ.
ಗೌತಮ ಬುದ್ಧರು, ‘ಆಸೆಯೇ ದುಃಖಕ್ಕೆ ಮೂಲ ಎಂದು ಹೇಳುತ್ತಾರೆ. ಭಾರತೀಯ ತತ್ತ್ವಜ್ಞಾನವು ಇಚ್ಛೆಯಿಂದ ಮುಕ್ತಿ ಪಡೆಯುವುದಕ್ಕೆ ಸ್ವಾತಂತ್ರ್ಯವೆಂದು ತಿಳಿದುಕೊಳ್ಳುತ್ತದೆ; ಆದರೆ ಅರ್ಥವ್ಯವಸ್ಥೆಯು ನಿರಂತರವಾಗಿ ಗಾಳಿಯನ್ನು ಹಾಕುತ್ತಾ ಇಚ್ಛೆಗಳ ಕೆಂಡಗಳನ್ನು ಪ್ರಜ್ವಲಿಸಿಡುತ್ತದೆ. ಈಗ ಅದು ಮಹಾಪ್ರಚಂಡ ಜ್ವಾಲೆಯಲ್ಲಿ ರೂಪಾಂತರವಾಗಿದೆ. ಅದು ಜೀವನವನ್ನೇ ಹಾಳು ಮಾಡುತ್ತಿದೆ.
೨. ಕೊರೋನಾದ ಹಿನ್ನೆಲೆಯಲ್ಲಿ ಇಟಲಿ ಮತ್ತು ಇತರ ದೇಶಗಳಲ್ಲಿ ಮಾಡಿದ ‘ಸಮೂಹ ಪ್ರತಿಕಾರಶಕ್ತಿ (ಹರ್ಡ್ ಇಮ್ಯುನಿಟಿಯ) ವಿಫಲ ಪ್ರಯೋಗ !
ಅರ್ಥವ್ಯವಸ್ಥೆಯ ಕೆಲವು ಬೆಂಬಲಿಗರು, ಕೊರೋನಾವನ್ನು ಹರಡಲು ಬಿಡಬೇಕು, ಆಮೇಲೆ ತಾನಾಗಿಯೇ ಯುವಕರಲ್ಲಿ ‘ಸಮೂಹ ಪ್ರತಿಕಾರಶಕ್ತಿ (ಹರ್ಡ್ ಇಮ್ಯುನಿಟಿ) ನಿರ್ಮಾಣವಾಗುವುದು ಮತ್ತು ಕೊರೋನಾ ನಿಯಂತ್ರಣಕ್ಕೆ ಬರುವುದು ಎಂಬ ಕಲ್ಪನೆಯನ್ನು ಮಂಡಿಸಿದ್ದಾರೆ. ಇಂತಹ ಕಲ್ಪನೆಯ ಮೇಲೆ ನಂಬಿಕೆಯನ್ನಿಟ್ಟ ಬ್ರಿಟನ್ ಮತ್ತು ಇತರ ಕೆಲವು ದೇಶಗಳಲ್ಲಿನ ಪರಿಸ್ಥಿತಿ ಕೈಮೀರಿ ಹೋಯಿತು. ಬ್ರಿಟನ್ನಿನ ರಾಜಮನೆತನ ಮತ್ತು ಪ್ರಧಾನಮಂತ್ರಿಯವರಿಗೂ ಕೊರೋನದ ಬಾಧೆಯಾಯಿತು. ಅಲ್ಲಿ ‘ಸಮೂಹ ಪ್ರತಿಕಾರಶಕ್ತಿಯ ವಿಕಾಸವಾಗಲಿಲ್ಲ. ಇಟಲಿಯ ವೈದ್ಯಕೀಯ ವ್ಯವಸ್ಥೆಯು ಜಗತ್ತಿನಲ್ಲಿ ಸರ್ವೋತ್ತಮವೆಂದು ತಿಳಿಯಲಾಗುತ್ತಿತ್ತು; ಆದರೆ ಅಲ್ಲಿ ಮತ್ತು ಜರ್ಮನಿ, ಸ್ಪೇನ್‌ನಲ್ಲಿಯೂ ಅದು ರೋಗಿಗಳ ಸಂಖ್ಯೆಗಳಿಂದಾಗಿ ಕುಸಿಯಿತು; ಏಕೆಂದರೆ ಉಪಭೋಗವಾದಿ ಅರ್ಥವ್ಯವಸ್ಥೆಯ ಅಮಲು ನೆತ್ತಿಗೇರಿತ್ತು. ಅವರು ಆರಂಭದ ಒಂದು ತಿಂಗಳು ಯಾವುದೇ ನಿರ್ಬಂಧವನ್ನು ಪಾಲಿಸಲಿಲ್ಲ, ಅಂದರೆ ಅರ್ಥಸಮರ್ಥಕರು ಹೇಳುವ ಸಮೂಹ ಪ್ರತಿಕಾರಶಕ್ತಿಯ ಪ್ರಯೋಗವು ಅಲ್ಲಿ ನಡೆಯಿತು; ಆದರೆ ಅದು ಸಂಪೂರ್ಣ ವಿಫಲವಾಯಿತು, ಇದನ್ನು ಎಲ್ಲರೂ ಗಂಭೀರವಾಗಿ ಪರಗಣಿಸಬೇಕು ಹಾಗೂ ಅವರ ಮೋಸಗಾರಿಕೆಗೆ ಬಲಿಯಾಗಬಾರದು. ಇಂತಹ ಪ್ರತಿಕಾರಶಕ್ತಿ ಒಬ್ಬೊಬ್ಬ ಮನುಷ್ಯನಿಂದಾಗಿ ಅಥವಾ ಸಮೂಹದಿಂದ ಸಮಾಜದಲ್ಲಿ ನಿರ್ಮಾಣ ವಾಗಲಾರದು. ವಿನಾಕಾರಣ ಜನರು ಸಾಯುವರು. ಇವರ ಅರ್ಥಶಾಸ್ತ್ರವೇ ತಪ್ಪಾಗಿದೆ, ಹಾಗೆಯೇ ಅದು ದುಷ್ಟ ವಿಚಾರಗಳದ್ದಾಗಿದೆ. ಜೀವಕುಲಗಳಲ್ಲಿ ಅನುವಂಶಿಕ (ಜೀನ್ಸ್) ಗುಣಧರ್ಮಗಳು ಹರಿದು ಹೋಗುವುದರಿಂದ ಅನುವಂಶಿಕ ಕ್ಷಮತೆ ಬರುತ್ತದೆ. ಹೀಗೆ ಕೆಲವು ಜೀವಗಳಲ್ಲಿ ಹಾಗೂ ಕೀಟಗಳಲ್ಲಿ ಕೆಲವೇ ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ಅನೇಕ ಪೀಳಿಗೆಗಳು ವೇಗದಿಂದ ಬಂದರೆ ಆಗುತ್ತದೆ. ೧೦೦ ವರ್ಷಗಳಲ್ಲಿ ಮನುಷ್ಯನ ಕೇವಲ ೪ ಪೀಳಿಗೆಗಳಾಗುತ್ತವೆ. ಆದ್ದರಿಂದ ಮನುಷ್ಯನಲ್ಲಿ ಇದು ಅಲ್ಪಾವಧಿಯಲ್ಲಿ ಆಗಲು ಸಾಧ್ಯವಿಲ್ಲ. ‘ಕೊರೋನಾವನ್ನು ಹೆಚ್ಚು ಪ್ರಮಾಣದಲ್ಲಿ ಹರಡಲು ಬಿಡಿರಿ, ಅನಂತರ ಪ್ರತಿಕಾರ ಶಕ್ತಿ ಹೆಚ್ಚಾಗುವುದು, ಎಂದು ಹೇಳುವವರು ತಪ್ಪು ಮಾಡುತ್ತಿದ್ದಾರೆ. ಹೆಚ್ಚು ರೋಗಿಗಳಾದರೆ ವಿಷಾಣುಗಳು ತಾವಾಗಿಯೇ ಪ್ರಭಾವಹೀನವಾಗಿ ಕಡಿಮೆಯಾಗಲು ಹೆಚ್ಚು ಕಠಿಣವಾಗಬಹುದು.
೩. ಕೊರೋನಾದ ಹರಡುವಿಕೆಯನ್ನು ತಪ್ಪಿಸಲು ಸ್ವೀಡನ್ ಮತ್ತು ತುರ್ಕಮೇನಿಸ್ತಾನ ಈ ದೇಶಗಳು ಮಾಡಿದ ಪ್ರಯತ್ನ !
ಸ್ವೀಡನ್‌ನಂತಹ ಕೆಲವು ದೇಶಗಳಲ್ಲಿ ಕೊರೋನಾದ ಹರಡುವಿಕೆ ಕಡಿಮೆಯಿದೆ. ಅದರ ಕಾರಣವೆಂದರೆ ಅವರು ಅರ್ಥವ್ಯವಸ್ಥೆಯ ಜಂಜಾಟದಲ್ಲಿ ಸಿಲುಕಿಕೊಳ್ಳಲಿಲ್ಲ. ಅವರು ಅನೇಕ ವರ್ಷಗಳ ಮೊದಲೆ ಔದ್ಯೋಗಿಕರಣಕ್ಕೆ ಮತ್ತು ಅದರಿಂದ ನಿರ್ಮಾಣವಾಗುವ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಿದ್ದರು. ಅಲ್ಲಿನ ಜನರ ಶ್ವಾಸಮಾರ್ಗ ಮತ್ತು ಪುಪ್ಪುಸಗಳು ಆರೋಗ್ಯವಂತವಾಗಿವೆ. ಅವರು ವಾಹನಗಳನ್ನು ವಿರೋಧಿಸಿ ಸೈಕಲ್‌ಗಳನ್ನು ಉಪಯೋಗಿಸುತ್ತಾರೆ, ಹಾಗೆಯೇ ಅವರು ವಿದೇಶಗಳಿಂದ ಬರುವವರ ವಿರುದ್ಧ ಕಠಿಣ ನಿರ್ಬಂಧಗಳನ್ನು ಹೇರಿದರು. ಆ ದೇಶದಲ್ಲಿ ವಿಶಿಷ್ಟ ವಿಮಾನ ನಿಲ್ದಾಣದಲ್ಲಿಯೆ ಪ್ರವಾಸಿಗರನ್ನು ಇಳಿಸಿ ಅವರ ತಪಾಸಣೆ ಮಾಡಿ ರೋಗಿಗಳನ್ನು ಬೇರೆ ಮಾಡಿದರು; ಆದ್ದರಿಂದ ಅಲ್ಲಿ ಕೊರೋನಾ ಹರಡಲಿಲ್ಲ. ಸ್ವೀಡನ್‌ನ ವಿಷಯದಲ್ಲಿ ಇನ್ನೊಂದು ಮಹತ್ವದ ವಿಷಯವೆಂದರೆ ಈ ದೇಶವು ಕಳೆದ ೨೨೫ ವರ್ಷಕ್ಕಿಂತಲೂ ಹೆಚ್ಚು ಕಾಲ ಯಾವುದೇ ಯುದ್ಧವನ್ನು ಮಾಡಿಲ್ಲ.
ತುರ್ಕಮೆನಿಸ್ತಾನ ದೇಶವು ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಸ್ತರದಲ್ಲಿ ಸೈಕಲ್ ಸ್ಫರ್ಧೆಯನ್ನು ಆಯೋಜಿಸಿತ್ತು. ಸಂಪೂರ್ಣ ದೇಶವು ಇದರಲ್ಲಿ ಭಾಗವಹಿಸಿತ್ತು. ಅವರ ವಕ್ತಾರರು, “ಕೊರೋನಾ ಹರಡುತ್ತಿದೆ ಎಂದು ತಿಳಿದಾಗಲೆ ನಾವು ವಿದೇಶಗಳಿಂದ ಬರುವವರೆಲ್ಲರನ್ನೂ ಜನವಸತಿಯಿಂದ ದೂರವಿರುವ ಒಂದೇ ವಿಮಾನ ನಿಲ್ದಾಣದಲ್ಲಿ ಇಳಿಸುತ್ತಾ ಹೋದೆವು. ಅಲ್ಲಿ ಅವರ ಕೊರೋನಾ ಪರೀಕ್ಷೆ ಮಾಡಿದೆವು ಮತ್ತು ರೋಗಿಗಳನ್ನು ಅಲ್ಲಿಯೆ ಇಟ್ಟು ಚಿಕಿತ್ಸೆ ನೀಡಿದೆವು ಎಂದರು. ಆ ದೇಶ ಮೋಟಾರ್ ಅಥವಾ ಬೈಕ್‌ಗಳ ಸ್ಪರ್ಧೆಯನ್ನಿಡುವ ಬದಲು ಸೈಕಲ್ಗಳ ಸ್ಪರ್ಧೆಯನ್ನಿಡುತ್ತದೆ. ಇದರಿಂದ ಅವರಿಗೆ ಪರಿಸರದ ಬಗ್ಗೆ ಇರುವ ಜಾಗರೂಕತೆಯ ಅರಿವಾಗುತ್ತದೆ; ಆದರೆ ಅರ್ಥವ್ಯವಸ್ಥೆಯ ಬೆಂಬಲಿಗರು ನಮಗೆ ಈ ವಿಷಯವನ್ನು ಹೇಳುವುದಿಲ್ಲ.
೪. ಸಾರಿಗೆಸಂಚಾರ ನಿರ್ಬಂಧವನ್ನು ಅಯೋಗ್ಯವೆಂದು ಹೇಳುವ ಜೀವವಿರೋಧಿ ವೃತ್ತಿ !
ಯಾವ ಎಲ್ಲಕ್ಕಿಂತ ಗಂಭೀರ ವಿಷಯವನ್ನು ಎಲ್ಲ ಮನುಕುಲವು ತೆಗೆದುಕೊಳ್ಳುವ ಆವಶ್ಯಕತೆಯಿದೆಯೋ. ಅದು ಈ ಅರ್ಥಸಮರ್ಥಕರ ಅಯೋಗ್ಯ ಅಮಾನವೀ ವಿಚಾರವಾಗಿವೆ. ‘ವಿಷಾಣುಗಳನ್ನು ಹರಡಲು ಬಿಡುವುದು ಸಾರಿಗೆಸಂಚಾರ ನಿರ್ಬಂಧಕ್ಕಿಂತ ಕಡಿಮೆ ಖರ್ಚಿನದ್ದಾಗಿದೆ ಎಂಬ ಈ ಹೀನ ವಿಚಾರದಲ್ಲಿ ಅನೇಕ ವಿಷಯಗಳು ಸ್ಪಷ್ಟವಾಗುತ್ತವೆ. ಮುಖ್ಯವೆಂದರೆ ಅರ್ಥವ್ಯವಸ್ಥೆಯ ಸಮರ್ಥಕರ ಹಿಂಸಾತ್ಮಕ, ಕ್ರೂರ ಮತ್ತು ಜೀವವಿರೋಧಿ ವೃತ್ತಿ, ಹಾಗೆಯೇ ಪೃಥ್ವಿ ಮತ್ತು ನಿಸರ್ಗದ ಬಗ್ಗೆ ಅಜ್ಞಾನ ಕಂಡುಬರುತ್ತದೆ.
೫. ಹದಿನೇಳನೆಯ ಶತಮಾನದ ಮಧ್ಯದ ನಂತರ ಮಾಡಿದ ಸಂಶೋಧನೆಯ ಭಯಂಕರ ಪರಿಣಾಮ ವೈಜ್ಞಾನಿಕರ ಗಮನಕ್ಕೆ ಬರದಿರುವುದು
ಪ್ರತಿಯೊಂದು ವಿಷಯವನ್ನು ಹಣದಿಂದ ತೂಕ ಮಾಡುವುದು, ಆರ್ಥಿಕ ತಜ್ಞರೆನಿಸಿಕೊಳ್ಳುವವರ ವೈಶಿಷ್ಟ್ಯವಾಗಿದೆ. ಜಗತ್ತಿನಲ್ಲಿ ೧೭೫೬ ರಲ್ಲಿ ಮೊದಲ ಜೇಮ್ಸ್ ವ್ಯಾಟ್‌ನ ಉಗಿಯಿಂದ ನಡೆಯುವ ಸ್ವಯಂಚಾಲಿನ ಯಂತ್ರ ಬಂದಿತು. ಇದರಿಂದ ಉತ್ಪಾದನೆಯ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆಯಾಯಿತು; ಆದರೆ ಇದಕ್ಕೆ ‘ಕ್ರಾಂತಿ ಎಂದು ಹೇಳುವುದು ತಪ್ಪಾಯಿತು. ‘ಕ್ರಾಂತಿಗೆ ಸಕಾರಾತ್ಮಕ ಪ್ರಗತಿಯ ಅಂಗವಿದೆ, ಆದರೆ ಇಲ್ಲಿ ಈ ಯಂತ್ರದ ಸಂದರ್ಭದಲ್ಲಿ ಭಯಂಕರ ತಪ್ಪಾಯಿತು. ಆದರೂ ಸುಖ, ಸೌಲಭ್ಯ, ಆರಾಮ ಮತ್ತು ಪ್ರತಿಷ್ಠೆಯ ಮಾಯಾಜಾಲದಲ್ಲಿ ಮನುಕುಲವು ಸಿಲುಕಿತು. ಜೇಮ್ಸ್ ವ್ಯಾಟ್‌ನ ನಂತರ ಇದರ ಉತ್ಪಾದನೆಯನ್ನು ಪರಿವರ್ತನೆಯ ಆಧಾರದಲ್ಲಿ ಇಂದಿನ ಅರ್ಥಶಾಸ್ತ್ರದ ಜನಕ ಎಡಮ್ ಸ್ಮಿಥ್ (ವೆಲ್ತ ಆಫ್ ದ ನೇಶನ್ಸ್ – ೧೭೭೬), ಅನಂತರ ೧೦೦ ವರ್ಷಗಳ ನಂತರ ತಂತ್ರಜ್ಞಾನದ ಅನೇಕ ಸಂಶೋಧನೆಗಳನ್ನು ಮಾಡಿದ ಔದ್ಯೋಗೀಕರಣ ಮತ್ತು ನಾಗರಿಕರಣಗಳಿಗೆ ತೀವ್ರ ವೇಗಮನ್ನು ನೀಡುವ ಮತ್ತು ಅದರಿಂದ ವಿನಾಶಕ್ಕೆ ಪೃಥ್ವಿವ್ಯಾಪಿ ಪರಿಣಾಮವನ್ನು ನೀಡುವ ಎಡಿಸನ್‌ನಂತಹ ತಂತ್ರಜ್ಞ ಹಾಗೂ ೨೦ ನೇ ಶತಮಾನದಲ್ಲಿ ಬಂದಿರುವ ತಂತ್ರ- ಅರ್ಥದ ಅಲೆಯಲ್ಲಿ ಮನುಕುಲವು ಹರಿದು ಹೋಯಿತು. ಇದನ್ನೇ ಅವರು ಪ್ರಗತಿ ಮತ್ತುವಿಕಾಸವೆಂದು ಒಪ್ಪಿಕೊಳ್ಳತೊಡಗಿದರು. ವ್ಹಾಟ್, ಎಡಮ್ ಸ್ಮಿಥ್ ಅಥವಾ ಎಡಿಸನ್ ಮುಂತಾದವರಿಗೆ ಅವರೇನು ಮಾಡುತ್ತಿದ್ದರೋ ಅಥವಾ ಹೇಳುತ್ತಿದ್ದರೋ, ಅದರ ಪರಿಣಾಮ ಮುಂದೆ ಎಷ್ಟು ಭಯಂಕರವಾಗಬಹುದು, ಎಂಬುದರ ಅರಿವು ಅವರಿಗಿರಲಿಲ್ಲ. ಇದರಿಂದ ತಾಂತ್ರಿಕ ಹಾಗೂ ಆರ್ಥಿಕ ಕೃತಕ ಜಗತ್ತಿನ ಪ್ರಭಾವ ಮತ್ತು ವ್ಯಾಪ್ತಿ ಎಷ್ಟು ಹೆಚ್ಚಾಯಿತೆಂದರೆ, ಅದನ್ನೆ ಜನರು ನಿಜವಾದ ಜಗತ್ತು ಎಂದು ನಂಬಲು ಪ್ರಾರಂಭಿಸಿದರು ಮತ್ತು ಪೃಥ್ವಿಯ ನಿಜವಾದ ಜಗತ್ತಿನ ಅರಿವು ಲೋಪವಾಯಿತು.
೬. ಅರ್ಥವ್ಯವಸ್ಥೆಯು ಮಾನವನ ಅಸ್ತಿತ್ವಕ್ಕಿಂತ ಮಹತ್ವದ್ದಾಗಿದೆಯೇ ?
ಸಂಚಾರನಿಷೇಧದ ಮೂಲಕ ವಿಷಾಣುಗಳ ಹರಡುವಿಕೆ ತಡೆಯುವುದು ದುಬಾರಿ ಉಪಾಯವೆಂದು ಹೇಳುತ್ತಾ, ಕಡಿಮೆ ಖರ್ಚಿನ, ಎಲ್ಲ ಜನರಿಗೆ ಸೋಂಕಾಗಲು ಬಿಡುವ, ಅನೇಕರಿಗೆ ವೇದನೆಗಳನ್ನು ಮತ್ತು ಸಾವನ್ನು ನೀಡುವ ಸಂವೇದನಾಶೂನ್ಯ ಕಲ್ಪನೆಯನ್ನು ಹಮ್ಮಿಕೊಳ್ಳಬೇಕೆಂದು ಹೇಳುವುದನ್ನು ಈ ಹೃದಯಶೂನ್ಯ ಜನರು ಮಾಡುತ್ತಿದ್ದಾರೆ. ಇಲ್ಲಿ ದುಬಾರಿ ಮತ್ತು ಅಗ್ಗ ಎನ್ನುವ ವಿಚಾರವೇ ಬರಬಾರದು; ಆದರೆ ಸಂಚಾರನಿಷೇಧ (‘ಲಾಕ್‌ಡೌನ್) ದುಬಾರಿಯಾಗಿದೆ, ಎನ್ನುವ ಶೋಧವನ್ನಾದರು ಇವರು ಹೇಗೆ ಮಾಡಿದರು ? ಇವರ ಅರ್ಥವ್ಯವಸ್ಥೆಯು ಅಸ್ತಿತ್ವಕ್ಕಿಂತ ಮಹತ್ವದ ವಿಷಯವಾಗಿದೆ. ಆದ್ದರಿಂದ ಅವರಿಗೆ ಯುದ್ಧ, ಉಗ್ರವಾದಿ ಆಕ್ರಮಣಗಳು, ಅಪಘಾತ, ಭೂಕಂಪ, ಕಾಯಿಲೆ ಅಥವಾ ಯಾವುದೇ ಮಾನವನಿರ್ಮಿತ ಅಥವಾ ನೈಸರ್ಗಿಕ ದುರ್ಘಟನೆಗಳಿಗೆ ಅರ್ಥವ್ಯವಸ್ಥೆಯ ವೃದ್ಧಿಯ ಉತ್ಸವದ ಕಾಲ ಅನಿಸುತ್ತದೆ. ಈ ವೃತ್ತಿಯು ಮನುಷ್ಯರಿಗೆ ತಮ್ಮ ಜೀವದ ವಿರುದ್ಧ ನಿಲ್ಲುವ ವಿಕೃತಿಯಾಗಿದೆ.
೭. ಬಡವರಿಗಾಗಿ ಅರ್ಥವ್ಯವಸ್ಥೆಯ ಬೆಂಬಲಿಗರ ತಥಾಕಥಿತ ಕೋಲಾಹಲ
ಇದರ ಅನುಭವವು ೭ ವರ್ಷಗಳ ಹಿಂದೆ ಬಂದಿತು. ಕೃಷಿಕರ ಆತ್ಮಹತ್ಯೆಯಿಂದಾಗಿ ದುಃಖಿತವಾದ ಸರ್ವೋಚ್ಚ ನ್ಯಾಯಾಲಯವು, ‘ಗೋದಾಮ್ ಗಳಲ್ಲಿ ಬಹಳಷ್ಟು ಧಾನ್ಯಸಂಗ್ರಹವಿದೆ. ಇದನ್ನು ಕುಟುಂಬಗಳಿಗೆ ಮತ್ತು ದೇಶದಲ್ಲಿನ ಆಹಾರದ ಅಭಾವದಿಂದ ಸಾಯುತ್ತಿರುವ ಬಡವರಿಗೆ ಧಾನ್ಯವನ್ನು ಉಚಿತವಾಗಿ ಕೊಡಬೇಕು ಎಂದು ಹೇಳಿತು ಅನಂತರ ಅರ್ಥವ್ಯವಸ್ಥೆಯ ಸಮರ್ಥಕರು ತಕ್ಷಣ ಮುಂದೆ ಬಂದರು. ಅಂದಿನ ಅರ್ಥಮಂತ್ರಿ ಚಿದಂಬರಮ್, ‘ಇದರಿಂದ ಅರ್ಥವ್ಯವಸ್ಥೆಯು ಅಪಾಯಕ್ಕೀಡಾಗುವುದು, ‘ಬಡವರು ಉಪವಾಸವಿದ್ದಾರೆ, ಏಕೆಂದರೆ, ಅವರಲ್ಲಿ ಖರೀದಿಸುವ ಶಕ್ತಿ ಇಲ್ಲ, ಖರೀದಿಸುವ ಶಕ್ತಿಯನ್ನು ಹೆಚ್ಚಿಸಲು ನಮಗೆ ಹೆಚ್ಚು ಭೌತಿಕ ವಿಕಾಸ ಮಾಡಲು ಬಿಡಿ ಎಂದು ಹೇಳಿದರು. ನಿಜವಾದ ಸ್ಥಿತಿ ಹೇಗಿದೆಯೆಂದರೆ, ‘ಬಡವರನ್ನು ನೀವು ನಿಮ್ಮ ಖರೀದಿಸುವ ಶಕ್ತಿಯ ಕೃತಕ ವ್ಯವಸ್ಥೆಯಲ್ಲಿ ತಂದಿದ್ದೀರಿ, ಆದುದರಿಂದು ಅವರು ಸಾಯುತ್ತಿದ್ದಾರೆ. ಇಲ್ಲದಿದ್ದರೆ ಈ ದೇಶದಲ್ಲಿ ೧೦ ಸಾವಿರ ವರ್ಷ ಉತ್ತಮ ಕೃಷಿಯಾಯಿತು ಮತ್ತು ಯಾರೂ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ಔದ್ಯೋಗಿಕರಣದಿಂದ ಮತ್ತು ವಿಕಾಸದಿಂದ ಹಾಳಾಗುವ ಮೊದಲು ನಿಸರ್ಗ ಒಳ್ಳೆಯ ರೀತಿಯಲ್ಲಿತ್ತು ಮತ್ತು ಅದು ಯಾರನ್ನೂ, ಅಂದರೆ ಒಂದು ಇರುವೆ ಅಥವಾ ಒಂದು ಆನೆಯನ್ನು ಕೂಡ ಉಪವಾಸ ಸಾಯಲು ಬಿಡುತ್ತಿರಲಿಲ್ಲ. ಜನರು ಒಂದು ವಿಷಯವನ್ನು ಗಮನಿಸಬೇಕು, ‘ಯಾವಾಗ ಕೃಷಿಕರು, ಬಡವರು ದುಃಖಿತರಾಗಿದ್ದರು, ಆಗ ಇತರರು ಸುಖವಾಗಿದ್ದರು. ಈಗ ಎಲ್ಲ ನಗರಗಳಲ್ಲಿನ ಜನರು ಕೂಡ ಕಷ್ಟದಲ್ಲಿದ್ದಾರೆ ಮತ್ತು ನಿಮ್ಮನ್ನು ಸಾಯಿಸಲು ಅರ್ಥವ್ಯವಸ್ಥೆಯು ಮುಂದೆ ಬಂದಿದೆ. – ವಕೀಲ ಗಿರೀಶ ರಾವುತ್, ಆಮಂತ್ರಿತ, ಭಾರತೀಯ ಜೀವನ ಹಾಗೂ ಪೃಥ್ವಿರಕ್ಷಣೆ ಚಳುವಳಿ (೨೮.೪.೨೦೨೦)