ಅಖಿಲ ಮನುಕುಲಕ್ಕೆ ಆಪತ್ಕಾಲದಲ್ಲಿ ಜೀವಂತವಾಗಿರಲು ಮಾಡಬೇಕಾದ ಸಿದ್ಧತೆಯ ಬಗ್ಗೆ ಮಾರ್ಗದರ್ಶನ ಮಾಡುವ ಏಕೈಕ ಪರಾತ್ಪರ ಗುರು ಡಾ. ಜಯಂತ ಆಠವಲೆ
ಆಪತ್ಕಾಲದಲ್ಲಿ ಜೀವಂತವಾಗಿರಲು ಮಾಡಬೇಕಾದ ಪೂರ್ವತಯಾರಿ
ನೆರೆ, ಭೂಕಂಪ, ಮೂರನೇ ಮಹಾಯುದ್ಧ, ಕೊರೋನಾ ಮಹಾಮಾರಿಯಂತಹ ಸಂಕಟಗಳು ಮುಂತಾದ ಆಪತ್ಕಾಲದಲ್ಲಿ ಸುರಕ್ಷಿತವಾಗಿ ಉಳಿಯಲು ಮಾಡಬೇಕಾದ ಸಿದ್ಧತೆಯ ಬಗೆಗಿನ ಈ ಲೇಖನಮಾಲೆಯಲ್ಲಿನ ಮೊದಲ ಲೇಖನದಲ್ಲಿ ಒಲೆ, ಗೋಬರ್-ಗ್ಯಾಸ್ ಮುಂತಾದವುಗಳ ಬಗ್ಗೆ ಮಾಹಿತಿಯನ್ನು ನೋಡಿದೆವು. ಎರಡನೆಯ ಲೇಖನದಲ್ಲಿ ತರಕಾರಿ, ಹಣ್ಣುಗಳು ಮುಂತಾದವುಗಳ ತೋಟಗಾರಿಕೆ ಮಾಡುವ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡೆವು. ಈಗ ಈ ಲೇಖನದಲ್ಲಿ ದೀರ್ಘಕಾಲ ಉಳಿಯುವ ಪದಾರ್ಥಗಳ ವಿವೇಚನೆಯನ್ನು ಮಾಡಲಾಗಿದೆ. ಆಪತ್ಕಾಲದಲ್ಲಿ ನಿತ್ಯದಂತೆ ಅಲ್ಪಾಹಾರ ಅಥವಾ ಭೋಜನವನ್ನು ತಯಾರಿಸಲು ಸಾಧ್ಯವಾಗದಿದ್ದರೆ, ಉಪವಾಸಬೀಳುವ ಪ್ರಸಂಗ ಬರಬಾರದೆಂದು, ಮನೆಯಲ್ಲಿ ಮೊದಲೇ ದೀರ್ಘಕಾಲ ಉಳಿಯುವ ಪದಾರ್ಥಗಳನ್ನು ಮಾಡಿಟ್ಟರೆ ಉಪಯೋಗವಾಗುವುದು.
೧. ಆಪತ್ಕಾಲದ ದೃಷ್ಟಿಯಿಂದ ಶಾರೀರಿಕ ಸ್ತರದಲ್ಲಿ ಮಾಡಬೇಕಾದ ವಿವಿಧ ಸಿದ್ಧತೆಗಳು !
೧ ಅ ೫. ಬಹಳಷ್ಟು ಕಾಲ ಹಾಳಾಗದೇ ಚೆನ್ನಾಗಿ ಉಳಿಯುವ ವಿವಿಧ ಆಹಾರ ಪದಾರ್ಥಗಳನ್ನು ಖರೀದಿಸಿ ಸಂಗ್ರಹಿಸಿಡುವುದು ಅಥವಾ ಮನೆಯಲ್ಲಿ ತಯಾರಿಸಿ ಸಂಗ್ರಹಿಸಿಡುವುದು
೧ ಅ ೫ ಎ. ಉಪ್ಪಿನಕಾಯಿ ಮತ್ತು ‘ಟೊಮೆಟೊ ಸಾಸ್
೧ ಅ ೫ ಎ ೧. ಉಪ್ಪಿನಕಾಯಿ
ಅ. ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ಬಹಳಷ್ಟು ದಿನಗಳವರೆಗೆ ಹಾಳಾಗದೇ ಚೆನ್ನಾಗಿರಲು ತೆಗೆದುಕೊಳ್ಳಬೇಕಾದ ಕಾಳಜಿ : ಮುಂದೆ ನಮೂದಿಸಿರುವ ಜಾಗೃತೆಯನ್ನು ವಹಿಸಿ ಉಪ್ಪಿನಕಾಯಿಯನ್ನು ಮನೆಯಲ್ಲಿ ತಯಾರಿಸಿದರೆ, ಮಾವಿನಕಾಯಿ, ನೆಲ್ಲಿಕಾಯಿ, ಹಸಿಮೆಣಸಿನ ಕಾಯಿ, ಹಸಿಶುಂಠಿ ಇತ್ಯಾದಿಗಳ ಉಪ್ಪಿನಕಾಯಿಗಳು ೧-೨ ವರ್ಷಗಳ ವರೆಗೆ ಹಾಳಾಗದೇ ಚೆನ್ನಾಗಿರುತ್ತವೆ. ಲಿಂಬೆಕಾಯಿಯನ್ನು ಬೇಯಿಸಿ ತಯಾರಿಸಿದ ಲಿಂಬೆಕಾಯಿಯ ಉಪ್ಪಿನಕಾಯಿ ಸಾಧಾರಣ ೪-೫ ವರ್ಷಗಳವರೆಗೆ ಚೆನ್ನಾಗಿರುತ್ತವೆ. ರೋಗಪೀಡಿತ ವ್ಯಕ್ತಿಯ ಬಾಯಿಗೂ ಲಿಂಬೆಯ ಉಪ್ಪಿನಕಾಯಿಯಿಂದ ರುಚಿ ಬರುತ್ತದೆ, ಅಲ್ಲದೇ ಅದು ಎಷ್ಟು ಹಳೆಯದಾಗುವುದೋ, ಅಷ್ಟು ಅಧಿಕ ರುಚಿಯಾಗುತ್ತದೆ.
ಅ ೧. ಉಪ್ಪಿನಕಾಯಿಯನ್ನು ತಯಾರಿಸುವ ಮೊದಲು ಕೈಗಳನ್ನು ಸ್ವಚ್ಛ ತೊಳೆದುಕೊಂಡು ಒಣಗಿಸಿಕೊಳ್ಳಬೇಕು. ಉಪ್ಪಿನಕಾಯಿಗಾಗಿ ಉಪಯೋಗಿಸುವ ಮಾವಿನಕಾಯಿ, ಲಿಂಬೆಕಾಯಿ, ನೆಲ್ಲಿಕಾಯಿ, ಹಸಿ ಶುಂಠಿ, ಹಸಿಮೆಣಸಿನಕಾಯಿ ಇತ್ಯಾದಿಗಳನ್ನು ತೊಳೆದುಕೊಂಡು ಸ್ವಚ್ಛ ಬಟ್ಟೆಯಿಂದ ಒರೆಸಿ ಒಣಗಿಸಿಕೊಳ್ಳಬೇಕು. ಉಪ್ಪಿನಕಾಯಿಗಾಗಿ ಉಪಯೋಗಿಸುವ ಪದಾರ್ಥ, ಉದಾ. ಖಾರದ ಪುಡಿ, ಹರಳುಪ್ಪು (ಕಲ್ಲುಪ್ಪು) ಮುಂತಾದವುಗಳನ್ನು ಬಿಸಿ ಮಾಡಿಕೊಳ್ಳಬೇಕು, ಅದರಿಂದ ಅವುಗಳಲ್ಲಿ ನೀರಿನ ತೇವಾಂಶ ಉಳಿಯುವುದಿಲ್ಲ. (ಉಪ್ಪಿನಕಾಯಿಗಳಿಗೆ ಆಯೋಡಿನ್‌ಯುಕ್ತ ಉಪ್ಪು ಬಳಸಿದರೆ ಉಪ್ಪಿನಕಾಯಿ ಬೇಗ ಹಾಳಾಗುವ ಸಾಧ್ಯತೆಯಿರುತ್ತದೆ, ಆದುದರಿಂದ ಕಲ್ಲುಪ್ಪನ್ನು ಉಪಯೋಗಿಸಬೇಕು). ಉಪ್ಪಿನಕಾಯಿಗಾಗಿ ಸಕ್ಕರೆಯನ್ನು ಉಪಯೋಗಿಸುವುದಿದ್ದಲ್ಲಿ, ಸಕ್ಕರೆಯನ್ನು ಕೂಡ ಒಣಗಿಸಿಕೊಳ್ಳಬೇಕು. ಉಪ್ಪಿನಕಾಯಿಯನ್ನು ಹಾಕುವಾಗ ಆವಶ್ಯಕತೆಯೆನಿಸಿದರೆ ಅದರಲ್ಲಿ ‘ಪ್ರಿಸರ್ವೇಟೀವ್ ಉಪಯೋಗಿಸಬಹುದು.
ಅ ೨. ಉಪ್ಪಿನಕಾಯಿಯನ್ನು ಚೀನಿ ಮಣ್ಣಿನ ಭರಣಿಯಲ್ಲಿ ಅಥವಾ ದಪ್ಪ ಗಾಜಿನ ಭರಣಿಯಲ್ಲಿ ಶೇಖರಿಸಬೇಕು.
ಅ ೩. ಉಪ್ಪಿನಕಾಯಿಯನ್ನು ಭರಣಿಯಲ್ಲಿ ತುಂಬಿದ ಬಳಿಕ ಉಪ್ಪಿನ ಕಾಯಿಯ ಮೇಲಿನ ಭಾಗದಲ್ಲಿ ಕಲ್ಲುಪ್ಪು ಹರಡಬೇಕು.
ಅ ೪. ಉಪ್ಪಿನಕಾಯಿಗೆ ಬುರುಸು ಬರಬಾರದೆಂದು ಕೈಗಳ ಎರಡು ಕಾಂಡಗಳ ಎತ್ತರದಷ್ಟು ಎಣ್ಣೆಯ ಒಗ್ಗರಣೆಯನ್ನು ತಣ್ಣಗೆ ಮಾಡಿ ಉಪ್ಪಿನಕಾಯಿಯ ಮೇಲೆ ಹಾಕಬೇಕು.
ಅ ೫. ಉಪ್ಪಿನಕಾಯಿಯ ಭರಣಿಯ ತೆರೆದ ಭಾಗವನ್ನು ಸ್ವಚ್ಛವಾದ ಒಣಗಿದ ಬಟ್ಟೆಯಿಂದ ಒರೆಸಿಕೊಂಡು ಭರಣಿಯ ಮುಚ್ಚಳವನ್ನು ಗಟ್ಟಿಯಾಗಿಮುಚ್ಚಬೇಕು. ಭರಣಿಯ ಮುಚ್ಚಳದ ಮೇಲೆ ಸ್ವಚ್ಛವಾದ ಹತ್ತಿಯ ಬಟ್ಟೆಯನ್ನು ಇಟ್ಟು ಆ ಭರಣಿಯ ಕಂಠವನ್ನು ಹಗ್ಗದಿಂದ ಕಟ್ಟಬೇಕು.
ಅ ೬. ಉಪ್ಪಿನಕಾಯಿಯ ಭರಣಿಯನ್ನು ಒಣಗಿದ ಸ್ಥಳದಲ್ಲಿ ಇಡಬೇಕು.(ಮೊದಲು ಉಪ್ಪಿನಕಾಯಿಯ ಭರಣಿಯನ್ನು ಎತ್ತರದಲ್ಲಿ ಅಥವಾ ದೇವರ ಕೋಣೆಯಲ್ಲಿ ಇಡುತ್ತಿದ್ದರು)
ಅ ೭. ಊಟಕ್ಕೆ ತೆಗೆದುಕೊಳ್ಳುವ ಉಪ್ಪಿನಕಾಯಿಯನ್ನು ಮೇಲಿಂದ ಮೇಲೆ ಮುಖ್ಯ ಸಂಗ್ರಹದ ಭರಣಿಯಿಂದ ತೆಗೆಯಬಾರದು. ವಾರದಲ್ಲಿ ಒಮ್ಮೆ ವಾರಕ್ಕೆ ಸಾಕಾಗುವಷ್ಟು ಉಪ್ಪಿನಕಾಯಿಯನ್ನು ಪ್ರತ್ಯೇಕ ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಬೇಕು. ಸಾಧ್ಯವಾದಷ್ಟು ಸ್ನಾನ ಮಾಡಿ ಮುಖ್ಯ ಸಂಗ್ರಹದ ಭರಣಿಯಿಂದ ಉಪ್ಪಿನಕಾಯಿಯನ್ನು ತೆಗೆಯಬೇಕು. ಉಪ್ಪಿನಕಾಯಿಯನ್ನು ತೆಗೆಯಲು ಉಪಯೋಗಿಸುವ ದೊಡ್ಡ ಚಮಚ, ಉಪ್ಪಿನಕಾಯಿಯನ್ನು ತೆಗೆದಿರುವ ಪಾತ್ರೆ ಮತ್ತು ಉಪ್ಪಿನಕಾಯಿಯ ತೆಗೆಯುವವರ ಕೈಗಳು ಒದ್ದೆಯಾಗಿರಬಾರದು. ಉಪ್ಪಿನಕಾಯಿಯನ್ನು ಭರಣಿಯಿಂದ ತೆಗೆದ ಬಳಿಕ ಅದನ್ನು ಹೊರಗಿನಿಂದ ಸ್ವಚ್ಛವಾಗಿ ಒಣಗಿದ ಬಟ್ಟೆಯಿಂದ ಒರೆಸಬೇಕು ಮತ್ತು ಮೊದಲಿನಂತೆ ಮುಚ್ಚಿಡಬೇಕು.
ಅ ೮. ಮಾಸಿಕ ಸರದಿ ಇರುವ ಸ್ತ್ರೀಯರು ಮುಖ್ಯ ಸಂಗ್ರಹದ ಉಪ್ಪಿನಕಾಯಿಯನ್ನು ಸ್ಪರ್ಶಿಸಬಾರದು. ಗ್ರಹಣಕಾಲದಲ್ಲಿಯೂ ಮುಖ್ಯ ಸಂಗ್ರಹದ ಉಪ್ಪಿನಕಾಯಿಯನ್ನು ಸ್ಪರ್ಶಿಸಬಾರದು. ಸಮುದ್ರದಡದ ಪ್ರದೇಶದ ವಾತಾವರಣ ತೇವಾಂಶದಿಂದ ಕೂಡಿರುತ್ತದೆ. ಇದರಿಂದ ಉಪ್ಪಿನಕಾಯಿಗೆ ಬರುವ ಬುರುಸಿನ ಪ್ರಮಾಣ ಇನ್ನಿತರ ಪ್ರದೇಶಗಳಿಗಿಂತ ಸ್ವಲ್ಪ ಅಧಿಕವಿರುತ್ತದೆ. ಆದುದರಿಂದ ಇಂತಹ ಸ್ಥಳಗಳಲ್ಲಿ ಉಪ್ಪಿನಕಾಯಿ ಉಷ್ಣ ಮತ್ತು ಒಣ ವಾತಾವರಣದ ತುಲನೆಯಲ್ಲಿ ಸ್ವಲ್ಪ ಕಡಿಮೆ ಕಾಲ ಬಾಳಿಕೆ ಬರುತ್ತದೆ. – ಸೌ. ಅರ್ಪಿತಾ ದೇಶಪಾಂಡೆ, ಸನಾತನ ಆಶ್ರಮ, ಮಿರಜ (ಫೆಬ್ರುವರಿ ೨೦೧೯) ಮತ್ತು ಶ್ರೀ. ಪ್ರಸಾದ ಮೈಸಕರ, ರತ್ನಾಗಿರಿ (೮.೮.೨೦೧೯)
೧ ಅ ೫ ಎ ೨ ‘ ಟೊಮೆಟೊ ಸಾಸ್
‘ವಿನೆಗರ (ಪದಾರ್ಥಗಳು ಬಹಳ ಕಾಲದವರೆಗೆ ಹಾಳಾಗದೆ ಚೆನ್ನಾಗಿರಲು ಹಾಕುವ ಅತ್ಯಂತ ಹುಳಿ ದ್ರಾವಣ) ಹಾಕದಿರುವ ‘ಟೊಮೆಟೊ ಸಾಸ್ ಶೀತಕಪಾಟಿನಲ್ಲಿಟ್ಟರೆ ೧ ವರ್ಷದವರೆಗೆ ಹಾಳಾಗದೆ ಚೆನ್ನಾಗಿರುತ್ತದೆ. ವಿನೆಗರ ಹಾಕಿರುವ ‘ಟೊಮೆಟೊ ಸಾಸ್ ಶೀತಕಪಾಟಿನಲ್ಲಿಡದೇ ಹೊರಗಿಟ್ಟರೆ, ಅದು ೬ ತಿಂಗಳವರೆಗೆ ಚೆನ್ನಾಗಿರುತ್ತದೆ ಮತ್ತು ಶೀತಕ ಪಾಟಿನಲ್ಲಿ ಇಟ್ಟರೆ ಸಾಧಾರಣ ಒಂದೂವರೆಯಿಂದ ಎರಡು ವರ್ಷಗಳವರೆಗೆ ಚೆನ್ನಾಗಿರುತ್ತದೆ.
೧ ಅ ೫ ಎ. ಚಟ್ನಿ, ಮೆಂತ್ಯೆದ ಹಿಟ್ಟು ಇತ್ಯಾದಿ ಪದಾರ್ಥಗಳು
೧ ಅ ೫ ಎ ೧. ಮಾವಿನಕಾಯಿ, ನೆಲ್ಲಿಕಾಯಿ ಮತ್ತು ಹುಣಸೆಹಣ್ಣು ಇತ್ಯಾದಿಗಳ ಹಸಿ ಚಟ್ನಿಗಳು
ಅ. ಮಾವಿನಕಾಯಿಯ ಚಟ್ನಿ : ಸಕ್ಕರೆಯ ಹರಳುಗಟ್ಟುವ ಪಾಕವನ್ನು ಮಾಡಬೇಕು. ಅದರಲ್ಲಿ ಆವಶ್ಯಕವಿರುವ ಮಸಾಲೆ ಪದಾರ್ಥಗಳು ಮತ್ತು ಬೇಯಿಸಿದ ಮಾವಿನಕಾಯಿಗಳನ್ನು ಹಾಕಿ ಚಟ್ನಿಯನ್ನು ಮಾಡಬೇಕು. ಇಂತಹ ಚಟ್ನಿಯನ್ನು ಮಧ್ಯಮ ಹಣ್ಣಾಗಿರುವ ಮಾವಿನಹಣ್ಣುಗಳಿಂದಲೂ ಮಾಡಬಹುದು ಮತ್ತು ಸಕ್ಕರೆಯ ಬದಲಾಗಿ ಬೆಲ್ಲದ ಪಾಕವನ್ನು ಉಪಯೋಗಿಸಿಯೂ ಮಾಡಬಹುದು.
ಆ. ನೆಲ್ಲಿಕಾಯಿಯ ಚಟ್ನಿ : ಮಾವಿನಕಾಯಿಗಳಂತೆಯೇ ನೆಲ್ಲಿಕಾಯಿಗಳ ಚಟ್ನಿಯನ್ನು ಮಾಡಬಹುದು.
ಇ. ಹುಣಸೆಹಣ್ಣಿನ ಚಟ್ನಿ : ಹುಣಸೆಹಣ್ಣನ್ನು ಅರ್ಧ ಗಂಟೆ ನೀರಿನಲ್ಲಿ ನೆನಸಿಟ್ಟು, ಅದರ ರಸವನ್ನು ಹಿಂಡಿ ತೆಗೆದುಕೊಳ್ಳಬೇಕು. ಬೆಲ್ಲ ಅಥವಾ ಸಕ್ಕರೆಯ ಹರಳುಗಟ್ಟುವ ಪಾಕವನ್ನು ಮಾಡಿಕೊಂಡು ಅದರಲ್ಲಿ ಹುಣಸೆಯ ರಸ, ಖಾರದ ಪುಡಿ, ಉಪ್ಪು, ಸ್ವಲ್ಪ ಕಾಳುಮೆಣಸಿನ ಪುಡಿ ಮತ್ತು ಕೋತ್ತಂಬರಿ ಕಾಳು-ಜೀರಿಗೆಯ ಪುಡಿಯನ್ನು ಹಾಕಿ ಆ ಮಿಶ್ರಣವನ್ನು ಚೆನ್ನಾಗಿ ಕುದಿಸಬೇಕು. ಎಲ್ಲ ಒಂದಾದ ಬಳಿಕ ‘ಗ್ಯಾಸ ಆರಿಸಬೇಕು.
ಈ ಚಟ್ನಿಗಳನ್ನು ತಣ್ಣಗಾದ ಬಳಿಕ ಗಾಜಿನ ಭರಣಿಗಳಲ್ಲಿ ಇಡಬೇಕು. ಈ ಚಟ್ನಿಗಳನ್ನು ಶೀತಕಪಾಟಿನಲ್ಲಿಟ್ಟರೆ ಒಂದೂವರೆ ವರ್ಷಗಳವರೆಗೆ ಹಾಳಾಗದೆ ಚೆನ್ನಾಗಿರುತ್ತವೆ. ಶೀತಕಪಾಟು ಇಲ್ಲದೇ ೧ ವರ್ಷದವರೆಗೆ ಚೆನ್ನಾಗಿರುತ್ತವೆ. – ಸೌ. ಅರ್ಪಿತಾ ದೇಶಪಾಂಡೆ, ಸನಾತನ ಆಶ್ರಮ, ಮಿರಜ (ಫೆಬ್ರುವರಿ ೨೦೧೯)
೧ ಅ ೫ ಎ ೨. ವಿವಿಧ ರೀತಿಯ ಒಣ ಚಟ್ನಿಪುಡಿಗಳು ಮತ್ತು ಮೆಂತ್ಯೆ ಹಿಟ್ಟು
‘ಶೇಂಗಾಕಾಳು, ಎಳ್ಳು, ಕಾರೆಳ್ಳು (ಎಳ್ಳಿನಂತಹ, ಆದರೆ ಅದಕ್ಕಿಂತ ದೊಡ್ಡದಾಗಿರುವ ಒಂದು ತರಹದ ಕಪ್ಪು ಬೀಜ) ಅಗಸೆ, ಕಡಲೆಬೇಳೆ, ಕೊಬ್ಬರಿ ಇತ್ಯಾದಿಗಳ ಚಟ್ನಿಗಳನ್ನು ಮಾಡಬಹುದು. ಮೆಂತ್ಯೆಯ ಹಿಟ್ಟನ್ನು ಅನ್ನದ ಜೊತೆಗೆ ಕಲೆಸಿಕೊಂಡು ತಿನ್ನಬಹುದು. ಈ ಪದಾರ್ಥಗಳು ಒಣವಿರುವುದರಿಂದ ಸಾಧಾರಣ ೩ ತಿಂಗಳು ಬಾಳಿಕೆ ಬರುತ್ತವೆ.- ಶ್ರೀಮತಿ ಕ್ಷಮಾ ರಾಣೆ, ಸನಾತನ ಆಶ್ರಮ, ರಾಮನಾಥಿ, ಗೋವಾ (ಜನವರಿ ೨೦೨೦)
೧ ಅ ೫ ಓ ಸಂಡಿಗೆ, ಹಪ್ಪಳ ಇತ್ಯಾದಿ ಪದಾರ್ಥ
ಈ ಪದಾರ್ಥ ಸಾಮಾನ್ಯವಾಗಿ ವರ್ಷಪೂರ್ತಿ ಇರುತ್ತದೆ.
೧. ಸಂಡಿಗೆ: ಸಂಡಿಗೆಗಳಿಗೆ ಕೆಲವು ಪ್ರದೇಶಗಳಲ್ಲಿ ‘ವಡೆ ಎಂದೂ ಹೇಳುತ್ತಾರೆ.
ಅ. ಕಲ್ಲಂಗಡಿಗಳ ಬಿಳಿ ತಿರುಳು ಮತ್ತು ಹಸಿರು ಭಾಗ, ಹಾಲುಗುಂಬಳಕಾಯಿ, ಕೆಂಪು ಕುಂಬಳಕಾಯಿ, ಪಪ್ಪಾಯಿ, ಕ್ಯಾಬೇಜ ಹೀಗೆ ವಿವಿಧ ಪ್ರಕಾರದ ತರಕಾರಿ ಹಾಗೂ ಸೊಯಾಬಿನಗಳ ಸಂಡಿಗೆಗಳನ್ನು ಮಾಡಬಹುದು.
ಆ. ಗೆಣಸಿನ ಸಂಡಿಗೆ ಮತ್ತು ಜೋಳದ ಅರಳಿನ ಸಂಡಿಗೆ
ಇ. ಹೆಸರುಬೇಳೆ, ಉದ್ದಿನಬೇಳೆ, ಕಡಲೆಬೇಳೆ, ಮಡಿಕೆ ಕಾಳು ಇತ್ಯಾದಿ ಬೇಳೆಗಳ ಸಂಡಿಗೆಗಳನ್ನು ಮಾಡಬಹುದು. ಈ ಬೇಳೆಗಳನ್ನು ಒಂದುಗೂಡಿಸಿಯೂ ಸಂಡಿಗೆಗಳನ್ನು ಮಾಡಬಹುದು.
ಸಂಡಿಗೆಗಳ ಪಲ್ಯಯನ್ನೂ ಮಾಡುತ್ತಾರೆ. ಹಾಲುಗುಂಬಳಕಾಯಿ, ಕೆಂಪುಗುಂಬಳಕಾಯಿಯಂತಹ ತರಕಾರಿಗಳ ಸಂಡಿಗೆಗಳನ್ನು ತಯಾರಿಸುವಾಗ ಅದರಲ್ಲಿ ಉಪ್ಪು ಹಾಕಬಾರದು. ಏಕೆಂದರೆ ಉಪ್ಪಿನಿಂದ ಮುಂದೆ ಪಲ್ಯಯನ್ನು ಮಾಡುವಾಗ ಅಡಚಣೆಯಾಗುತ್ತದೆ. ಊಟದಲ್ಲಿ ನಂಚಿಕೊಳ್ಳಲು ಸಂಡಿಗೆಗಳನ್ನು ತಯಾರಿಸುವುದಿದ್ದರೆ ಅದರಲ್ಲಿ ಉಪ್ಪು ಹಾಕಬೇಕು. – ಸೌ. ಛಾಯಾ ವಿವೇಕ ನಾಫಡೆ, ಸನಾತನ ಆಶ್ರಮ, ರಾಮನಾಥಿ, ಗೋವಾ (ಮೆ ೨೦೨೦)
೨ ಚಿಪ್ಸ : ‘ಗೆಣಸಿನ ಚಿಪ್ಸ್ ಮತ್ತು ಬಟಾಟೆಯ ಚಿಪ್ಸ್
೩. ಹಪ್ಪಳ : ಉದ್ದು, ಹೆಸರು, ಅಕ್ಕಿ, ರಾಗಿ ಮತ್ತು ಅವಲಕ್ಕಿಯ ಹಪ್ಪಳ, ಹಾಗೆಯೇ ಹಲಸಿನ ತೊಳೆಯ ಹಪ್ಪಳ
೪. ಜೋಳ, ಅಕ್ಕಿ, ಸಬ್ಬಕ್ಕಿ ಮತ್ತು ಬಟಾಟೆ ಇವುಗಳ ಹಪ್ಪಳ ಹಾಗೆಯೇ ಗೋಧಿಯ ಸಂಡಿಗೆ
೫. ಸಂಡಿಗೆ ಮೆಣಸು (ಮೆಣಸಿನಕಾಯಿ) ಅಥವಾ ಮೊಸರುಗಾಯಿ
– ಸೌ. ಅರ್ಪಿತಾ ದೇಶಪಾಂಡೆ, ಸನಾತನ ಆಶ್ರಮ, ಮೀರಜ (ಫೆಬ್ರುವರಿ ೨೦೧೯)
೬. ಹಲಸಿನ ಬೀಜ
೧ ಅ ೫. ಔ. ನೀರಡಿಕೆ ಮತ್ತು ಸ್ವಲ್ಪ ಮಟ್ಟಿಗೆ ಹಸಿವನ್ನು ನಿವಾರಿಸುವ ಪೇಯಗಳು
೧ ಅ ೫ ಔ ೧. ಲಿಂಬೆ, ಕಿತ್ತಳೆ ಮತ್ತು ಮೋಸಂಬಿಗಳ ಪೇಯಗಳು
‘ಲಿಂಬೆಯ ರಸದಲ್ಲಿ ಸಮಪ್ರಮಾಣದಲ್ಲಿ ಸಕ್ಕರೆಯನ್ನು ಹಾಕಿ ಅದನ್ನು ಗಾಜಿನ ಭರಣಿಯಲ್ಲಿ ತುಂಬಿಡಬೇಕು ಮತ್ತು ಅದರಲ್ಲಿನ ಸಕ್ಕರೆ ಕರಗುವವರೆಗೆ ಅದನ್ನು ಬಿಸಿಲಿಗೆ ಇಡಬೇಕು. ಬಿಸಿಲಿನ ತೀವ್ರತೆಗನು ಸಾರ ಸಕ್ಕರೆ ಕರಗಲು ಸಾಧಾರಣವಾಗಿ ೧೫ ರಿಂದ ೩೦ ದಿನಗಳು ತಗಲುತ್ತವೆ. ಲಿಂಬೆಯ ಪೇಯ ಮಾಡುವ ಪದ್ಧತಿಯಂತೆಯೇ ಕಿತ್ತಳೆ ಮತ್ತು ಮೋಸಂಬಿಯ ಪೇಯಗಳನ್ನು ಮಾಡಬಹುದು. ಈ ಪೇಯಗಳನ್ನು ಶೀತಕಪಾಟಿನಲ್ಲಿ ಇಡದೆಯೂ ೨-೩ ವರ್ಷಗಳವರೆಗೆ ಹಾಳಾಗದೇ ಚೆನ್ನಾಗಿ ಉಳಿಯುತ್ತವೆ. ಈ ಪೇಯಗಳನ್ನು ಶೀತ ಕಪಾಟಿನಲ್ಲಿ ಇಟ್ಟರೆ ಅವುಗಳ ರುಚಿ ಬದಲಾಗುತ್ತದೆ. ಆದ್ದರಿಂದ ಅವುಗಳನ್ನು ಶೀತಕಪಾಟಿನಲ್ಲಿ ಇಡುವುದಿಲ್ಲ.
೧ ಅ ೫ ಔ ೨. ಮಾವಿನ ಕಾಯಿಯ ಮುರಬ್ಬ
ಹಸಿ ಮಾವಿನ ಕಾಯಿಗಳನ್ನು ಬೇಯಿಸಿ, ಅವುಗಳ ತಿರುಳನ್ನು ತೆಗೆದು ಅದರಲ್ಲಿ ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ಅದರ ಮುರಬ್ಬವನ್ನು ಮಾಡಬಹುದು. ಇದನ್ನು ಗಾಜಿನ ಭರಣಿಯಲ್ಲಿ ಹಾಕಿ ಶೀತಕಪಾಟಿನಲ್ಲಿ ಇಡಬೇಕು. ಇದು ಒಂದರಿಂದ ಒಂದೂವರೆ ವರ್ಷದವರೆಗೆ ಕೆಡುವುದಿಲ್ಲ. ಹೀಗೆ ಪ್ರದೇಶಗಳಿಗೆ (ಉದಾ : ಸಮುದ್ರದ ದಡದಲ್ಲಿ ‘ಕೋಕಮ್ ಶರಬತ್ತು) ಮತ್ತು ಹಣ್ಣುಗಳ ಫಸಲಿನ ಸಮಯದಲ್ಲಿ ವಿವಿಧ ಹಣ್ಣುಗಳ ಹಾಳಾಗದೇ ಚೆನ್ನಾಗಿ ಉಳಿಯುವ ಪೇಯಗಳನ್ನು ಮಾಡಿ ಇಟ್ಟುಕೊಳ್ಳಬಹುದು. – ಸೌ. ಅರ್ಪಿತಾ ದೇಶಪಾಂಡೆ, ಸನಾತನ ಆಶ್ರಮ, ಮೀರಜ (ಫೆಬ್ರುವರಿ ೨೦೧೯)
೧ ಅ ೫ ಅಂ. ಅಧಿಕ ಪೌಷ್ಟಿಕಾಂಶಗಳಿರುವ ಬಿಸ್ಕತ್ತುಗಳು
೫ ವರ್ಷಗಳವರೆಗೆ ಕೆಡದಿರುವ ‘ಸೆಲ್ಫ ಲೈಫ್ ಚಾಕೊಲೇಟ್, ಒಣಗಿದ ಹಣ್ಣುಗಳು ಇತ್ಯಾದಿ ಪದಾರ್ಥಗಳು ಆಪತ್ಕಾಲದಲ್ಲಿ ಕೆಲವೊಮ್ಮೆ ಅಕಸ್ಮಿಕವಾಗಿ ಸ್ಥಳಾಂತರವಾಗಬೇಕಾಗುತ್ತದೆ ಮತ್ತು ಅಲ್ಲಿ ಕೆಲವು ಕಾರಣಗಳಿಂದ ಸಿಲುಕಿಕೊಂಡಿದ್ದರೆ, ಅಂತಹ ಸಮಯದಲ್ಲಿ ಕೆಲವೊಮ್ಮೆ ತಿನ್ನಲು ಆಹಾರವೂ ದೊರೆಯುವುದಿಲ್ಲ. ಇಂತಹ ಸ್ಥಿತಿಯಲ್ಲಿ ಮೇಲಿನ ಪದಾರ್ಥಗಳು ಚೆನ್ನಾಗಿ ಉಪಯೋಗವಾಗಬಹುದು. (ಮುಂದುವರಿಯುವುದು)
(ಆಧಾರ : ಸನಾತನದ ಮುಂಬರುವ ಗ್ರಂಥ ಮಾಲಿಕೆ ‘ಆಪತ್ಕಾಲದಲ್ಲಿ ಜೀವರಕ್ಷಣೆಗಾಗಿ ಮಾಡಬೇಕಾದ ಪೂರ್ವ ಸಿದ್ಧತೆ)
(ಪ್ರಸ್ತುತ ಲೇಖನಮಾಲೆಯ ಸರ್ವಾಧಿಕಾರವು (ಕಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆಯ ಬಳಿಯಿದೆ.)
(ಈ ಲೇಖನವನ್ನು www.sanatan.org ಈ ಜಾಲತಾಣದಲ್ಲಿ ಓದಿರಿ.)