ಆಜಾನ್‌ಗಾಗಿ ಬೊಂಗಾವನ್ನು ಉಪಯೋಗಿಸುವ ಬಗ್ಗೆ ವಿರೋಧಿಸಿದ ಹಿಂದೂ ಯುವತಿಗೆ ಮತಾಂಧರಿಂದ ಅತ್ಯಾಚಾರದ ಬೆದರಿಕೆ

ಸರಕಾರಿ ವ್ಯವಸ್ಥೆಯು ಮತಾಂಧರ ಈ ಉದ್ಧಟತನವನ್ನು ಕೇವಲ ನೋಡುತ್ತ ಕುಳಿತುಕೊಳ್ಳುತ್ತದೆ ಎಂಬುದನ್ನು ಗಮನದಲ್ಲಿಡಿ ! ಆದುದರಿಂದ ಈಗ ಎಲ್ಲ ಹಿಂದೂಗಳು ಸಂಘಟಿತರಾಗಿ ಇಂತಹ ಮತಾಂಧರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಒತ್ತಾಯಿಸಬೇಕಿದೆ !

ನವ ದೆಹಲಿ – ಆಜಾನ್‌ಗಾಗಿ ಬೊಂಗಾ ಬಳಸುವುದನ್ನು ವಿರೋಧಿಸಿದ ಹಿಂದೂ ಯುವತಿಗೆ ಮತಾಂಧರು ಅತ್ಯಾಚಾರದ ಬೆದರಿಕೆಯೊಡ್ಡಿದ ಖೇದಕರ ಘಟನೆ ಬೆಳಕಿಗೆ ಬಂದಿದೆ. ಓರ್ವ ಹಿಂದೂ ಯುವತಿಯು ಸಾಮಾಜಿಕ ಮಾಧ್ಯಮಗಳಲ್ಲಿ ಕೈಯಲ್ಲಿ ಫಲಕವನ್ನು ಹಿಡಿದು ಅದರಲ್ಲಿ ‘ಆಜಾನ್ ನೀಡಿ ಆದರೆ ಧ್ವನಿ ಕಡಿಮೆ ಮಾಡಿ. ಧ್ವನಿವರ್ಧಕದಿಂದ ನೀವು ಏನು ಸಾಧಿಸಲಿದ್ದೀರಿ ?’, ಎಂಬ ಸಂದೇಶವನ್ನು ಬರೆದಿರುವ ಚಿತ್ರ ಪ್ರಸಾರವಾಗಿತ್ತು. ಕೆಲವು ದಿನಗಳ ಹಿಂದೆ ಮಸೀದಿಯ ಮೇಲಿನ ಭೋಂಗಾದ ಬಗ್ಗೆ ಆಕ್ಷೇಪವೆತ್ತಿದ ಮುಂಬಯಿಯ ಕರಿಶ್ಮಾ ಭೋಸಲೆಯನ್ನು ಬೆಂಬಲಿಸಿ ಈ ಹಿಂದೂ ಯುವತಿಯ ಛಾಯಾಚಿತ್ರವನ್ನು ಪ್ರಸಾರ ಮಾಡಿದ್ದಳು. ಇದಕ್ಕೆ ಫರದಿನ ಹೆಸರಿನ ‘ಇನ್‌ಸ್ಟಾಗ್ರಾಮ್’ ಬಳಸುವ ಮತಾಂಧನು ಈ ಯುವತಿಯ ಬಗ್ಗೆ ಅತ್ಯಂತ ಅಕ್ಷೇಪಾರ್ಹ ಭಾಷೆಯಲ್ಲಿ ಮಾತನಾಡುತ್ತ, ಆಕೆಯ ಮೇಲೆ ಅತ್ಯಾಚಾರ ಮಾಡುವ ಬೆದರಿಕೆಯೊಡ್ಡಿದನು. ಆತ ತನ್ನ ಮಾತನ್ನು ಮುಂದುವರೆಸುತ್ತ. ‘ನಾನು ಕಟ್ಟರ ಮುಸಲ್ಮಾನನಾಗಿದ್ದೇನೆ ಹಾಗೂ ಯಾರ ಅಪ್ಪನಿಗೂ ಹೆದರುವುದಿಲ್ಲ’ ಎಂದು ಹೇಳಿದ. ಫರದೀನ್‌ನು ಉಪಯೋಗಿಸಿದ ಈ ಆಕ್ಷೇಪಾರ್ಹ ಸಂದೇಶವು ಸದ್ಯ ಪ್ರಸಾರ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಕಳೆದ ತಿಂಗಳೂ ಸುಹೇಲ ಎಂಬ ಮತಾಂಧನು ಆಕ್ಷೇಪಾರ್ಹ ಭಾಷೆಯಲ್ಲಿ ಮಾತನಾಡಿದ್ದನು
ಜೂನ್ ೨೮ ರಂದು ಹಿಂದೂ ಯುವತಿಯು ಇದೇ ರೀತಿಯ ಛಾಯಾಚಿತ್ರವನ್ನು ‘ಟ್ವಿಟರ್’ನಲ್ಲಿಯೂ ಪ್ರಸಾರ ಮಾಡಿದ್ದಳು. ಆಗ ಸುಹೆಲ ಹೆಸರಿನ ಮತಾಂಧನು ಆಕೆಗೆ ಅತ್ಯಂತ ಆಕ್ಷೇಪಾರ್ಹ ಭಾಷೆಯಲ್ಲಿ ಮಾತನಾಡಿದ್ದನು.