ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಮಾಹಿತಿ
ನವ ದೆಹಲಿ – ಕೊರೋನಾದ ಮೇಲೆ ೨ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಾಣಿಯ ಮೇಲೆ ಅದರ ಯಶಸ್ವಿ ಪ್ರಯೋಗದ ನಂತರ ಮನುಷ್ಯನ ಮೇಲೆಯೂ ಪರೀಕ್ಷಣೆ ಮಾಡಲು ಅನುಮತಿಯನ್ನು ನೀಡಿದೆ. ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ (‘ಐ.ಸಿ.ಎಮ್.ಆರ್.’ನ) ಮಹಾನಿರ್ದೇಶಕ ಬಲರಾಮ ಭಾರ್ಗವ ಇವರು ಮಾಹಿತಿ ನೀಡಿದರು. ಈ ಲಸಿಕೆಯನ್ನು ನಿರ್ಮಿಸಲು ಎಷ್ಟು ಕಾಲಾವಧಿ ಬೇಕಾಗಬಹುದು? ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಅವರು ತಮ್ಮ ಮಾತನ್ನು ಮುಂದುವರೆಸುತ್ತ, ‘ಈ ಲಸಿಕೆಯನ್ನು ಇಲಿ ಹಾಗೂ ಮೊಲದ ಮೇಲೆ ಪ್ರಯೋಗಿಸಲಾಯಿತು. ಎರಡೂ ಲಸಿಕೆಯ ‘ಟೊಕ್ಸಿಟೀ ಸ್ಟಡೀಸ್’ ಯಶಸ್ವಿ ಆಗಿದೆ. ಎರಡೂ ಲಸಿಕೆಗಳನ್ನು ಮನುಷ್ಯರ ಮೇಲೆ ಪರೀಕ್ಷಣೆಯನ್ನು ಮಾಡಲು ಸಿದ್ಧತೆ ಮಾಡಲಾಗಿದ್ದು ಇವೆರಡೂ ಲಸಿಕೆಗಳಿಗಾಗಿ ತಲಾ ೧ ಸಾವಿರ ನಾಗರಿಕರ ಮೇಲೆ ವೈದ್ಯಕೀಯ ಪರೀಕ್ಷಣೆ ಮಾಡಲಾಗುವುದು. ಜಗತ್ತಿನಾದ್ಯಂತ ನಿರ್ಮಾಣವಾಗುವ ಲಸಿಕೆಗಳ ಪೈಕಿ ಶೇ. ೬೦ ರಷ್ಟು ನಿರ್ಮಾಣವು ಭಾರತದಲ್ಲಿ ಆಗುತ್ತಿರುವುದರಿಂದ ಯಾವುದೇ ದೇಶವು ಲಸಿಕೆಯನ್ನು ನಿರ್ಮಿಸಿದ್ದಲ್ಲಿ ಅದಕ್ಕೆ ಭಾರತವನ್ನು ಸಂಪರ್ಕಿಸಬೇಕಾಗುವುದು’ ಎಂದು ಹೇಳಿದರು.