ನವ ದೆಹಲಿ – ಗೂಗಲ್ ಸಂಸ್ಥೆಯು ಚೀನಾದ ೨ ಸಾವಿರದ ೫೦೦ ಕ್ಕೂ ಹೆಚ್ಚು ‘ಯೂ-ಟ್ಯೂಬ್ ಚಾನೆಲ್’ಗಳನ್ನು ತೆಗೆದು ಹಾಕಿದೆ. ಎಪ್ರಿಲ್ ಮತ್ತು ಜೂನ್ ಈ ಕಾಲಾವಧಿಯಲ್ಲಿ ಈ ‘ಚಾನೆಲ್ಸ್’ಗಳನ್ನು ತೆಗೆದುಹಾಕಿದೆ; ಆದರೆ ಗೂಗಲ್ ಅವುಗಳ ಹೆಸರುಗಳನ್ನು ಮಾತ್ರ ಬಹಿರಂಗಪಡಿಸಿಲ್ಲ. ತಂತ್ರಜ್ಞಾನ ಕ್ಷೇತ್ರದಲ್ಲಿನ ತಜ್ಞರು ನೀಡಿದ ಮಾಹಿತಿಗನುಸಾರ, ‘ದಾರಿ ತಪ್ಪಿಸುವ ಮಾಹಿತಿ ಹಾಗೂ ತಪ್ಪಾದ ಅಂಶಗಳನ್ನು ಹಬ್ಬಿಸುತ್ತಿರುವ ಈ ‘ಚಾನೆಲ್ಸ್’ ತೆಗೆಯಲಾಗಿದೆ. ಈ ಹಿಂದೆ ಭಾರತವು ಚೀನಾದ ೫೯ ‘ಆಪ್ಸ್’ ಮೇಲೆ ನಿರ್ಬಂಧ ಹೇರಿತ್ತು, ನಂತರ ಅಮೇರಿಕಾ ಕೂಡ ‘ಟಿಕ್-ಟಾಕ್’ ಈ ಚೀನಾದ ‘ಆಪ್’ ಮೇಲೆ ನಿರ್ಬಂಧ ಹೇರಿತ್ತು.