ನೆರೆಯ ಬಗ್ಗೆ ಮಹಾರಾಷ್ಟ್ರ ಹಾಗೂ ಕರ್ನಾಟಕ ಎರಡೂ ರಾಜ್ಯಗಳಲ್ಲಿ ಸಮನ್ವಯವಿದೆ

ಕೊಲ್ಲಾಪುರ – ಸಾರ್ವಜನಿಕ ಆರೋಗ್ಯ ರಾಜ್ಯ ಸಚಿವ ರಾಜೇಂದ್ರ ಪಾಟಿಲ್-ಯಡ್ರಾವಕರ ಹಾಗೂ ಕರ್ನಾಟಕದ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿಯವರು ಆಗಸ್ಟ್ ೮ ರಂದು ಶಿರೋಳ ತಾಲೂಕಿನ ಶಿರದವಾಡದ ಪಂಚಗಂಗಾ ನದಿಯ ನೀರಿನ ಮಟ್ಟ ಹಾಗೂ ನದಿ ತೀರದ ನೆರೆ ಪರಿಸ್ಥಿತಿಯ ಬಗ್ಗೆ ಸದ್ಯದ ಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದರು. ನೆರೆ ಪರಿಸ್ಥಿಯ ವೀಕ್ಷಣೆಯನ್ನು ಮಾಡಿದ ನಂತರ ಮಹಾರಾಷ್ಟ್ರ ಹಾಗೂ ಕರ್ನಾಟಕದ ಉಪಸ್ಥಿತ ಅಧಿಕಾರಿಗಳೊಂದಿಗೆ ಬೊರಗಾವದಲ್ಲಿ ವರದಿಯ ಸಭೆಯನ್ನು ತೆಗೆದುಕೊಳ್ಳಲಾಯಿತು.