೧. ಈಗ ಸಂವಿಧಾನದಲ್ಲಿ ‘ಹಿಂದೂ ರಾಷ್ಟ್ರ’ ಪದವನ್ನು ಸೇರಿಸಿ !
ಸಂವಿಧಾನದ ಪ್ರಸ್ತಾವನೆಯಲ್ಲಿ ಅನಂತರ ಸೇರಿಸಿದ ‘ಸಮಾಜವಾದ’ ಮತ್ತು ‘ಜಾತ್ಯತೀತತೆ’ ಈ ಎರಡೂ ಪದಗಳನ್ನು ತೆಗೆದುಹಾಕಲು ನ್ಯಾಯವಾದಿ ಬಲರಾಮ ಸಿಂಹ ಮತ್ತು ಕರುಣೇಶಕುಮಾರ ಶುಕ್ಲಾ ಇವರು ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರ ಮೂಲಕ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ.
೨. ಢೋಂಗಿ ಜಾತ್ಯತೀತವಾದಿಗಳ ವಿರೋಧವನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !
ಪ್ರಧಾನಮಂತ್ರಿ ಮೋದಿಯವರು ಅಧಿಕೃತವಾಗಿ ರಾಮಮಂದಿರದ ಭೂಮಿಪೂಜೆಗಾಗಿ ಹೋಗುವುದು ಅವರು ಸಂವಿಧಾನಬದ್ಧವಾಗಿ ಸ್ವೀಕರಿಸಿದ ಪ್ರಮಾಣವಚನದ ಉಲ್ಲಂಘನೆಯಾಗುವುದು. ‘ಜಾತ್ಯತೀತತೆ’ಯು ಸಂವಿಧಾನದ ಮೂಲ ಅಂಗವಾಗಿದೆ, ಎಂದು ಟ್ವೀಟ್ ಮಾಡಿ ಅಸದುದ್ದೀನ ಓವೈಸಿಯವರು ಪ್ರಧಾನಮಂತ್ರಿ ಮೋದಿಯವರನ್ನು ವಿರೋಧಿಸಿದ್ದಾರೆ.
೩. ಕೇರಳ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಮತಾಂಧಪ್ರೇಮವನ್ನು ತಿಳಿಯಿರಿ !
‘ಅಂತರಜಾತೀಯ ದಂಪತಿಗಳ ವಿವಾಹದ ಮುಂಚಿನ ಮಾಹಿತಿಯನ್ನು ದಿನಪತ್ರಿಕೆಯಲ್ಲಿ ಪ್ರಕಟಿಸಿದ್ದರಿಂದ ಅನೇಕ ಧಾರ್ಮಿಕ ಸಂಘಟನೆಗಳು ಆ ವಿವಾಹಕ್ಕೆ ‘ಲವ್ ಜಿಹಾದ್’ ರೂಪವನ್ನು ನೀಡಿ ಸಮಾಜದಲ್ಲಿ ಶಾಂತಿಯನ್ನು ಭಂಗಗೊಳಿಸಲು ಪ್ರಯತ್ನಿಸುತ್ತಿವೆ’, ಎಂದು ಹೇಳುತ್ತ ಕೇರಳ ಸರಕಾರವು ಈ ಷರತ್ತನ್ನು ಹಿಂಪಡೆದಿದೆ.
೪. ಇಂತಹ ಘಟನೆಗಳನ್ನು ತಡೆಯಲು ಈಗ ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ !
ಶ್ರೀ ದುರ್ಗಾಮಾತೆಯ ಮೂರ್ತಿಯ ಸ್ಥಾಪನೆಯ ವಿವಾದ ಪ್ರಕರಣದಲ್ಲಿ ಉತ್ತರಪ್ರದೇಶದ ಬಹರಾಯೀಚ್‌ದಲ್ಲಿನ ಬಿಬಿಯಾಪುರ ಗ್ರಾಮದಲ್ಲಿ ಜುಲೈ ೨೭ ರಂದು ೬೦ ವರ್ಷದ ಹಿಂದುತ್ವನಿಷ್ಠ ಶಂಭೂಲಾಲ ಇವರನ್ನು ಮತಾಂಧರು ಗುಂಡಿಕ್ಕಿ ಕೊಂದರು.
೫. ಇಂತಹ ದೇಶದ್ರೋಹಿ ಪ್ರತ್ಯೇಕತಾವಾದಿಗಳನ್ನು ಸೆರೆಮನೆಗೆ ಅಟ್ಟಿ !
ಕಾಶ್ಮೀರದ ೯೦ ವರ್ಷದ ಪ್ರತ್ಯೇಕತಾವಾದಿ ನಾಯಕ ಸಯ್ಯದ ಅಲಿ ಶಾಹ ಗಿಲಾನಿ ಇವರಿಗೆ ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪುರಸ್ಕಾರ ‘ನಿಶಾನ-ಎ-ಪಾಕಿಸ್ತಾನ’ ನೀಡಲು ಶಿಫಾರಸ್ಸು ಮಾಡುವ ಠರಾವನ್ನು ಪಾಕಿಸ್ತಾನದ ಸಂಸತ್ತು ಸಮ್ಮತಗೊಳಿಸಿತು.
೬. ಇಲ್ತಿಜಾ ಮುಫ್ತಿ ಇವರನ್ನೂ ಗೃಹಬಂಧನದಲ್ಲಿಡಿ !
೧ ವರ್ಷದಿಂದ ಗೃಹಬಂಧನದಲ್ಲಿರುವ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರ ಮಗಳಾದ ಇಲ್ತಿಜಾ ಮುಫ್ತಿ ಇವರು, ನಮಗೆ ಆಗಸ್ಟ್ ೫ ಇದು ‘ಕರಾಳ ದಿನವಾಗಿದೆ, ಎಂದು ಹೇಳಿದ್ದಾರೆ. ೩೭೦ ಕಲಮ್‌ನ್ನು ತೆಗೆದುಹಾಕಿ ಒಂದು ವರ್ಷ ಪೂರ್ಣವಾಗುತ್ತಿದೆ.
೭. ರಾಜಧಾನಿ ದೆಹಲಿಯ ಹಿಂದೂಗಳ ಸ್ಥಿತಿಯನ್ನು ತಿಳಿಯಿರಿ !
ದೆಹಲಿಯ ಬಾಬರಪೂರ ವಿಧಾನಸಭೆ ಚುನಾವಣಾಕ್ಷೇತ್ರದ ಮೋಹನಪುರಿ, ಮೌಜಪೂರ ಮತ್ತು ನೂರ-ಎ-ಇಲಾಹಿ ಈ ಪ್ರದೇಶಗಳಲ್ಲಿ ವಾಸಿಸುವ ಹಿಂದೂಗಳು ತಮ್ಮ ಮನೆಗಳ ಮೇಲೆ ‘ನಿರ್ದಿಷ್ಟ ಧರ್ಮದವರ ಭಯದಿಂದ ಈ ಮನೆಯನ್ನು ಮಾರಾಟ ಮಾಡಲಿಕ್ಕಿದೆ, ಎಂಬ ಫಲಕವನ್ನು ಹಾಕಿರುವುದು ಗಮನಕ್ಕೆ ಬಂದಿದೆ.