ಸಂಬಂಧಪಟ್ಟ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಕರಿಂದ ಆದೇಶ
ದೇವಸ್ಥಾನದಿಂದ ಧ್ವನಿವರ್ಧಕವನ್ನು ತೆಗೆಸುವ ಪೊಲೀಸರು ಮಸೀದಿಯಲ್ಲಿ ಅನಧಿಕೃತವಾಗಿ ಭೋಂಗಾಗಳನ್ನು ತೆಗೆಸಲು ದುರ್ಲಕ್ಷಿಸುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಇಂತಹ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು!
ಜಮಶೇದಪುರ (ಝಾರಖಂಡ) – ಅಯೋಧ್ಯೆಯಲ್ಲಿ ಶ್ರೀರಾಮಜನ್ಮಭೂಮಿಯ ಮೇಲೆ ನಿರ್ಮಿಸಲಾಗುವ ಶ್ರೀರಾಮನ ಭೂಮಿಪೂಜೆಯು ಆಗಸ್ಟ್ ೫ ರಂದು ನಡೆಯುತ್ತಿರುವಾಗ ಸಂಪೂರ್ಣ ದೇಶದಲ್ಲಿ ಆನಂದದ ವಾತಾವರಣವಿತ್ತು. ಈ ದಿನದಂದು ಪಟ್ಟಣದ ಶಾಸ್ತ್ರೀನಗರದಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಧ್ವನಿವರ್ಧಕದಿಂದ ರಾಮಧುನ್ ಹಾಕಾಲಾಗಿತ್ತು; ಆದರೆ ಅಲ್ಲಿಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಧ್ವನಿವರ್ಧಕವನ್ನು ಕೆಳಗಿಳಿಸಿದ ಘಟನೆ ಬೆಳಕಿಗೆ ಬಂದಿದೆ. ಇದರ ಬಗ್ಗೆ ದೇವಸ್ಥಾನ ಸಮಿತಿ ಹಾಗೂ ಭಾಜಪದಿಂದ ವಿರೋಧ ವ್ಯಕ್ತವಾಯಿತು, ಪೊಲೀಸರು, ‘ನಮಗೆ ಸರಕಾರದಿಂದ ಆದೇಶ ಇತ್ತು’ ಎಂದು ಹೇಳಿದ್ದಾರೆ. (ಒಂದುವೇಳೆ ಸರಕಾರದಿಂದ ಆದೇಶ ಇದ್ದಲ್ಲಿ, ರಾಜ್ಯದ ಇತರ ಕಡೆಗಳಲ್ಲಿ ಎಲ್ಲಿಯೂ ಈ ರೀತಿಯ ಕ್ರಮ ಏಕೆ ಕೈಗೊಳ್ಳಲಿಲ್ಲ? ಅಥವಾ ಪೊಲೀಸರು ಉದ್ದೇಶಪೂರ್ವಕವಾಗಿ ಈ ಕೃತಿಯನ್ನು ಮಾಡಿದ್ದಾರೆಯೇ ? ಇದರ ತನಿಖೆಯಾಗಬೇಕು! – ಸಂಪಾದಕರು) ಇನ್ನೊಂದೆಡೆ ಈ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದಾಗ ಪೊಲೀಸ್ ಮಹಾನಿರ್ದೇಶಕರು ಈ ಪ್ರಕರಣದ ಬಗ್ಗೆ ಹಿರಿಯ ಅಧೀಕ್ಷಕರಿಗೆ ಕ್ರಮ ಕೈಗೊಳ್ಳುವಂತೆ ಆದೇಶವನ್ನು ನೀಡಿದ್ದಾರೆ. ಅದೇರೀತಿ ‘ಒಂದುವೇಳೆ ಈ ರೀತಿಯ ಘಟನೆ ಘಟಿಸಿದ್ದರೆ ಜನರ ಧಾರ್ಮಿಕ ಭಾವನೆ ನೋಯಿಸಿದ್ದಲ್ಲಿ, ಕೂಡಲೇ ಕ್ರಮಕೈಗೊಳ್ಳಬೇಕು. ಯಾವ ಪೊಲೀಸರು ಧ್ವನಿವರ್ಧಕ ತೆಗೆದರೋ ಅವರ ಮೇಲೆ ಕ್ರಮ ಕೈಗೊಳ್ಳಬೇಕು’, ಎಂದು ಸಹ ಹೇಳಿದರು.