ಶ್ರೀರಾಮಮಂದಿರವನ್ನು ಭೂಕಂಪ ನಿರೋಧಕವಾಗಿ ನಿರ್ಮಿಸುವುದರಿಂದ ಅದು ಸಾವಿರಾರು ವರ್ಷ ಬಾಳಲಿದೆ! – ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್

ಕೇವಲ ಭೂಕಂಪ ನಿರೋಧಕ ಮಾತ್ರವಲ್ಲದೇ, ಮತಾಂಧರ ವಿರೋಧದಿಂದಲೂ ರಕ್ಷಣೆಯಾಗಲು ಹಿಂದೂಗಳು ಪ್ರಯತ್ನಿಸಬೇಕು!

ಅಯೋಧ್ಯೆ (ಉತ್ತರಪ್ರದೇಶ)- ಇಲ್ಲಿ ನಿರ್ಮಿಸಲಾಗುವ ಶ್ರೀರಾಮಮಂದಿರವು ಬಲವಾದ ಭೂಕಂಪವನ್ನೂ ಎದುರಿಸಬಲ್ಲದಂತೆ ನಿರ್ಮಿಸಲಾಗುವುದು. ಈ ದೇವಸ್ಥಾನವು ಕಡಿಮೆ ಪಕ್ಷ ೨ ಸಾವಿರ ವರ್ಷಗಳ ತನಕ ಸಹಜವಾಗಿ ಬಾಳಿಕೆ ಬರುವುದು, ಎಂದು ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ’ನ ಪ್ರಧಾನ ಕಾರ್ಯದರ್ಶಿ ಚಂಪತ ರಾಯ ಇವರು ಹೇಳಿದರು. ಮೂಲಗಳಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ ದೇವಸ್ಥಾನದ ಅಡಿಪಾಯ ೨೦೦ ಅಡಿಯಷ್ಟು ಆಳವಿರಲಿದೆ.

ಚಂಪತ ರಾಯ

ಚಂಪತ ರಾಯ ಅವರು ಮುಂದಿನಂತೆ ಹೇಳಿದ್ದಾರೆ,

೧. ದೊಡ್ಡ ದೊಡ್ಡ ನದಿಗಳ ಮೇಲೆ ಕಟ್ಟಿರುವ ಸೇತುವೆಗಳ ಕಂಬದಂತೆಯೇ ಈ ದೇವಸ್ಥಾನದ ಕಂಬವು ಗಟ್ಟಿಮುಟ್ಟಾಗಿರುವುದು ಹಾಗೂ ಅದನ್ನು ಆಳವಾಗಿ ಅಗೆದು ಕಟ್ಟಲಾಗುವುದು. ಆದ್ದರಿಂದ ಯಾವುದೇ ನೈಸರ್ಗಿಕ ವಿಪತ್ತುಗಳನ್ನು ಎದುರಿಸುತ್ತ ದೇವಸ್ಥಾನ ಸಾವಿರಾರು ವರ್ಷಗಳವರೆಗೆ ಸಹಜವಾಗಿ ಬಾಳಿಕೆ ಬರುವುದು.

೨. ಅಡಿಪಾಯಕ್ಕಾಗಿ ಅಗೆಯುವ ಕೆಲಸ ಆರಂಭವಾಗಿದ್ದು ಸದ್ಯ ಮಳೆಗಾಲ ಇರುವುದರಿದ ಅದು ೧-೨ ತಿಂಗಳಲ್ಲಿ ಪೂರ್ಣವಾಗಲಿದೆ. ಅಡಿಪಾಯ ಅಗೆಯುವ ನೀಲನಕ್ಷೆ ‘ಐಐಟಿ ಚೆನ್ನೈ’ ನಿರ್ಮಿಸಿದೆ; ಆದರೆ ಅದು ನಮ್ಮ ತನಕ ತಲುಪಿಲ್ಲ. ಧಾರ್ಮಿಕ ಪರಂಪರೆಯನ್ನು ಪಾಲಿಸುತ್ತಾ ‘ದೇವಸ್ಥಾನದ ನೆರಳು ಭೂಮಿಯ ಮೇಲೆ ಬೀಳದಂತೆ’ ನೋಡಿಕೊಳ್ಳಲಾಗುವುದು.

೩. ‘ಟ್ರಸ್ಟ್’ನ ಇಲಾಖೆಯಲ್ಲಿ ಸದ್ಯ ೪೨ ಕೋಟಿ ಜಮೆಯಾಗಿದೆ. ಈ ಹಣ ಲಕ್ಷಗಟ್ಟಲೆ ಜನರು ನೀಡಿದ ಒಂದು ರೂಪಾಯಿಯಿಂದ ಒಂದು ಕೋಟಿ ರೂಪಾಯಿಯ ದೇಣಿಗೆಯ ತನಕ ಜಮೆಯಾಗಿದೆ ಎಂದು ಹೇಳಿದ್ದಾರೆ.