ಆಪತ್ಕಾಲದಿಂದ ಸುರಕ್ಷಿತವಾಗಿ ಪಾರಾಗಲು ಸಾಧನೆಯನ್ನು ಕಲಿಸುವ ಸನಾತನ ಸಂಸ್ಥೆ !

ಅಖಿಲ ಮನುಕುಲಕ್ಕೆ ಆಪತ್ಕಾಲದಲ್ಲಿ ಜೀವಂತವಾಗಿರಲು ಮಾಡಬೇಕಾದ ಸಿದ್ಧತೆಯ ಬಗ್ಗೆ ಮಾರ್ಗದರ್ಶನ ಮಾಡುವ ಏಕೈಕ ಪರಾತ್ಪರ ಗುರು ಡಾ. ಜಯಂತ ಆಠವಲೆ

ಸಂಕಲನ : ಪರಾತ್ಪರ ಗುರು ಡಾ. ಜಯಂತ ಆಠವಲೆ

ಆಪತ್ಕಾಲದಲ್ಲಿ ಜೀವಂತವಾಗಿರಲು ಮಾಡಬೇಕಾದ ಪೂರ್ವತಯಾರಿ

ಆಪತ್ಕಾಲದ ಲೇಖನ ಮಾಲಿಕೆಯ ಈ ಭಾಗದಲ್ಲಿ ನಾವು ಕೌಟುಂಬಿಕ ಸ್ತರದಲ್ಲಿ ಬೇಕಾಗುವ ನಿತ್ಯೋಪಯೋಗಿ ವಸ್ತುಗಳ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ. ಆ ವಸ್ತುಗಳು ಯಾವವು, ಋತುಮಾನಕ್ಕೆ ಅನುಗುಣವಾಗಿ ಬೇಕಾಗುವ ವಸ್ತುಗಳು, ಸಂರಕ್ಷಣೆಗಾಗಿ ಬೇಕಾಗುವ ವಸ್ತುಗಳು ಇತ್ಯಾದಿಗಳ ಕುರಿತು ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ.  ಲೇಖನ – ೭

೧. ಆಪತ್ಕಾಲದ ದೃಷ್ಟಿಯಿಂದ ಶಾರೀರಿಕ ಸ್ತರದಲ್ಲಿ ಮಾಡಬೇಕಾದ ವಿವಿಧ ಸಿದ್ಧತೆಗಳು

೧ ಉ. ಕುಟುಂಬಕ್ಕೆ ಬೇಕಾಗುವ ನಿತ್ಯೋಪಯೋಗಿ ವಸ್ತುಗಳನ್ನು, ಹಾಗೆಯೇ ಕೆಲವೊಂದು ಸಮಯದಲ್ಲಿ ಬೇಕಾಗುವ ವಸ್ತುಗಳನ್ನು ಈಗಿನಿಂದಲೇ ಖರೀದಿಸಿ !

ಆಪತ್ಕಾಲದ ದೃಷ್ಟಿಯಿಂದ ಯಾವೆಲ್ಲ ವಸ್ತುಗಳು ಮನೆಯಲ್ಲಿರಬೇಕು ಎಂಬುದು ನಮಗೆ ಒಂದೇ ಸಲಕ್ಕೆ ಹೊಳೆಯುವುದಿಲ್ಲ. ವಾಚಕರಿಗೆ ಇಂತಹ ವಸ್ತುಗಳನ್ನು ಖರೀದಿಸಲು ಸುಲಭವಾಗಬೇಕೆಂದು ಮುಂದೆ ವಿವಿಧ ವಸ್ತುಗಳ ಪಟ್ಟಿಯನ್ನು ಕೊಡಲಾಗಿದೆ. ಕುಟುಂಬದಲ್ಲಿನ ಸದಸ್ಯರ ಸಂಖ್ಯೆ, ಅವರ ವಯಸ್ಸು ಮತ್ತು ಮನೆಯಲ್ಲಿನ ಕೋಣೆಗಳ ಸಂಖ್ಯೆಗಳಿಗನುಸಾರ ಅವುಗಳಲ್ಲಿನ ಆವಶ್ಯಕ ವಸ್ತುಗಳನ್ನು ಯೋಗ್ಯ ಪ್ರಮಾಣದಲ್ಲಿ ಖರೀದಿಸಿಡಬೇಕು. ಮುಂದಿನ ವಸ್ತುಗಳನ್ನು ಬಿಟ್ಟು ಬೇರೆ ವಸ್ತುಗಳು ನೆನಪಾದರೆ ಅವುಗಳನ್ನೂ ಖರೀದಿಸಬೇಕು.

೧ ಉ ೧. ನಿತ್ಯ ಬೇಕಾಗುವ ವಸ್ತುಗಳು : ದಂತಮಂಜನ, ಗಡ್ಡ ತೆಗೆಯುವ ಸಾಮಾನುಗಳು, ಕೂದಲು ಕತ್ತರಿಸುವ ಸಾಮಾನುಗಳು, ಸ್ನಾನದ ಮತ್ತು ಬಟ್ಟೆ ಒಗೆಯುವ ಸಾಬೂನು, ಕೂದಲುಗಳಿಗೆ ಹಚ್ಚುವ ಎಣ್ಣೆ, ಕುಂಕುಮ, ಕನ್ನಡಿ, ಸೀರಣಿಗೆ, ಬಾಚಣಿಕೆ, ‘ನೈಲ್ ಕಟರ್, ಕನ್ನಡಕ (ನಿತ್ಯ ಬಳಸುವ ಕನ್ನಡಕ ಒಡೆಯಬಹುದು.), ಇಸ್ತ್ರೀ (ಆದಷ್ಟು ಕೆಂಡ ಹಾಕಿ ಉಪಯೋಗಿಸುವ), ಹಾಸಿಗೆ-ಹೊದಿಕೆ, ಕಸಬರಿಕೆ, ಸ್ನಾನಗೃಹದ ಸ್ವಚ್ಛತೆಗೆ ಬೇಕಾಗುವ ವಸ್ತುಗಳು, ಲೇಖನಿ (ಪೆನ್ ಮತ್ತು ಪೆನ್ಸಿಲ್), ಚಪ್ಪಲಿ ಇತ್ಯಾದಿ. (ದಂತಮಂಜನ, ಸ್ನಾನದ ಸಾಬೂನು (೭ ಸುಗಂಧ), ಕೇಶತೈಲ ಮತ್ತು ಕುಂಕುಮ ಇವುಗಳು ಸನಾತನದ ಸಾತ್ತ್ವಿಕ ಉತ್ಪಾದನೆಯಲ್ಲಿ ಉಪಲಬ್ಧವಿದೆ – ಸಂಕಲನಕಾರರು)

೧ ಉ ೨. ಅಡುಗೆಕೋಣೆಗೆ ಸಂಬಂಧಿಸಿದ ವಸ್ತುಗಳು : ಇಕ್ಕಳ (ಬಳಸುತ್ತಿರುವ ಇಕ್ಕಳ ಮುರಿಯಬಹುದು.), ಒರಳುಕಲ್ಲು, ಈಳಿಗೆಮಣೆ ಅಥವಾ ಚಾಕುಗಳನ್ನು ಮೊನಚುಗೊಳಿಸುವ ಕಲ್ಲು ಇತ್ಯಾದಿ

೧ ಉ ೩. ಋತುಗಳಿಗನುಸಾರ ಬೇಕಾಗುವ ವಸ್ತುಗಳು

ಅ. ಬೇಸಿಗೆಯಲ್ಲಿ ಬೇಕಾಗುವ ವಸ್ತುಗಳು : ಗಾಳಿ ಹಾಕಿಕೊಳ್ಳಲು ಬೀಸಣಿಗೆ, ತಂಪು ಕನ್ನಡಕ (ಗಾಗಲ್), ಬಿಸಿಲಿನಲ್ಲಿ ತಿರುಗಾಡುವಾಗ ಮುಖ ಮತ್ತು ಕುತ್ತಿಗೆಯನ್ನು ಮುಚ್ಚಿಕೊಳ್ಳಲು ಬೇಕಾಗುವ ದೊಡ್ಡ ವಸ್ತ್ರ (ಸ್ಕಾರ್ಫ್), ಟೋಪಿ ಇತ್ಯಾದಿ.

ಆ. ಮಳೆಗಾಲದಲ್ಲಿ ಬೇಕಾಗುವ ವಸ್ತುಗಳು : ಛತ್ರಿ, ‘ರೈನಕೋಟ್, ಮಳೆಗಾಲದ ಪಾದರಕ್ಷೆಗಳು ಇತ್ಯಾದಿ.

ಇ. ಚಳಿಗಾಲದಲ್ಲಿ ಬೇಕಾಗುವ ವಸ್ತುಗಳು : ‘ಸ್ವೆಟರ್, ಕೈಗವಸುಗಳು, ಕಾಲುಚೀಲಗಳು, ಶಾಲು, ಮಫ್ಲರ್, ಕಂಬಳಿ (ಬ್ಲಾಂಕೆಟ್) ಇತ್ಯಾದಿ.

೧ ಉ ೪. ಮನೆಯಲ್ಲಿ ಕಡ್ಡಾಯವಾಗಿ ಇರಬೇಕಾದ ವಸ್ತುಗಳು

ಅ. ಮನೆಯಲ್ಲಿ ಸಣ್ಣ ದುರಸ್ತಿಗಳಿಗಾಗಿ ಉಪಯುಕ್ತ ವಸ್ತುಗಳು : ಮೊಳೆಗಳು, ಸುತ್ತಿಗೆ, ‘ಸ್ಪಾನರ್, ಬ್ಲೇಡ್, ಇಕ್ಕಳ, ‘ಸ್ಕ್ರೂಡ್ರೈವರ್, ‘ಕಟರ್, ಸಣ್ಣ ಹಲಗೆ ಕತ್ತರಿಸುವ ಗರಗಸ, ಹಲಗೆಯ ಅಂಚನ್ನು ಉಜ್ಜಲು ‘ಪಾಲಿಶ್ ಪೇಪರ್, ಕತ್ತರಿ, ‘ಮೀಟರ್ ಟೇಪ್ ಇತ್ಯಾದಿ

ಆ. ಹೊಲಿಗೆಯ ವಸ್ತುಗಳು : ಸೂಜಿ-ದಾರ, ಗುಂಡಿಗಳು, ಕತ್ತರಿ, ‘ಮೆಶರ್ ಟೇಪ್ (ಬಟ್ಟೆ ಅಳೆಯಲು), ಹೊಲಿಗೆ ಯಂತ್ರ ಇತ್ಯಾದಿ

ಇ. ಉಪದ್ರವಿ ಪ್ರಾಣಿಗಳನ್ನು ನಿರ್ಬಂಧಿಸುವ ವಸ್ತುಗಳು : ಸೊಳ್ಳೆ, ಇಲಿ, ತಿಗಣೆ, ಇರುವೆ, ಹೇನು, ಸೀರು (ಹೇನುಗಳ ಮೊಟ್ಟೆ) ಇತ್ಯಾದಿಗಳನ್ನು ನಿರ್ಬಂಧಿಸುವ ಔಷಧಿಗಳು; ಇಲಿ ಬೋನು, ಸೊಳ್ಳೆಪರದೆ ಇತ್ಯಾದಿ

ಈ. ಮನೆಯಲ್ಲಿ ಹೆಚ್ಚುವರಿ ಇರಬೇಕಾದಂತಹ ವಸ್ತುಗಳು : ಸ್ನಾನದ ಬಕೇಟ್ ಮತ್ತು ‘ಮಗ್, ಬಟ್ಟೆ ನೆನೆಸಿಡುವ ‘ಟಬ್, ಬಟ್ಟೆ ಒಗೆಯುವ ‘ಬ್ರಶ್, ವಿದ್ಯುತ್‌ಗೆ ಸಂಬಂಧಿತ ವಸ್ತುಗಳು (ವಿದ್ಯುತ್ ದೀಪಗಳು, ದಂಡ ದೀಪ (ಟ್ಯೂಬ್ಸ್), ವಿದ್ಯುತ್ ಜೋಡಿಸುವ ‘ಟೂಪಿನ್, ‘ತ್ರೀಪಿನ್ ಮತ್ತು ‘ಹೋಲ್ಡರ್), ಕಾಲುಗಳಲ್ಲಿ ಹಾಕಿಕೊಳ್ಳುವ ‘ಸ್ಲಿಪರ್ನ ಪಟ್ಟಿಗಳು ಇತ್ಯಾದಿ

ಉ. ಇತರ ವಸ್ತುಗಳು : ಸರಕಾರದ ವತಿಯಿಂದ ಆಕಾಶವಾಣಿಯಲ್ಲಿ ನೀಡಲಾಗುವ ಸೂಚನೆಗಳನ್ನು ಕೇಳಲು ಸಣ್ಣ ರೇಡಿಯೋ (ಟ್ರಾನ್ಸಿಸ್ಟರ್) ಅಥವಾ ರೇಡಿಯೋ, ಕೀ ಕೊಡುವ ಗಡಿಯಾರ, ಉತ್ಪಾದನೆಯ ದಿನಾಂಕದಿಂದ ಮುಂದೆ ೧೦ ವರ್ಷಗಳ ಕಾಲ ನಡೆಯುವ ಸ್ವಯಂಚಾಲಿತ (ಆಟೋಮ್ಯಾಟಿಕ್) ಗಡಿಯಾರ, ಹಗ್ಗ, ತೆಂಗಿನ ನಾರು, ಬಟ್ಟೆಗಳನ್ನು ಒಣಗಿಸಲು ಬೇಕಾಗುವ ಹಗ್ಗ, ಸೈಕಲ್‌ನಲ್ಲಿ ಗಾಳಿ ತುಂಬಲು ‘ಪಂಪ್, ವಿದ್ಯುತ್‌ಪ್ರವಾಹ ತಪಾಸಣೆ ಮಾಡಲು ‘ಟೆಸ್ಟರ್ ಇತ್ಯಾದಿ.

೧ ಉ ೫. ರೋಗಿಗಳಿಗೆ ಉಪಯುಕ್ತ ವಸ್ತುಗಳು : ಉಷ್ಣಮಾಪಕ (ಥರ್ಮಾ ಮೀಟರ್), ಶರೀರಕ್ಕೆ ಕಾವು ಕೊಡಲು ಬಿಸಿ ನೀರಿನ ರಬ್ಬರಿನ ಚೀಲ, ಆಯುರ್ವೇದೀಯ ಗುಳಿಗೆಗಳನ್ನು ಚೂರ್ಣ ಮಾಡಲು ಸಣ್ಣ ಒರಳುಕಲ್ಲು, ‘ಕಮೋಡ್ನ ಕುರ್ಚಿ, ಡೈಪರ್ (ಮಲ-ಮೂತ್ರ ಶೋಷಿಸಿಕೊಳ್ಳುವ ವಸ್ತ್ರಗಳು) ಇತ್ಯಾದಿ.

೧ ಉ ೬. ಸ್ವರಕ್ಷಣೆಗಾಗಿ ಉಪಯುಕ್ತ ವಸ್ತುಗಳು : ಆಪತ್ಕಾಲದಲ್ಲಿ ಅರಾಜಕ ಸ್ಥಿತಿ ಅಥವಾ ದಂಗೆಯಂತಹ ಸಮಸ್ಯೆಗಳು ಉದ್ಭವಿಸಬಹುದು. ಇಂತಹ ಸಮಯದಲ್ಲಿ ಸಮಾಜಕಂಟಕರಿಂದ ರಕ್ಷಣೆಯಾಗಲು ಈ ವಸ್ತುಗಳು ಉಪಯುಕ್ತವಾಗುವವು – ‘ಪೆಪ್ಪರ್ ಸ್ಪ್ರೇ (ಮೆಣಸಿನಕಾಯಿಯ ರಸ ತುಂಬಿದ ಸಣ್ಣ ಸಿಂಪಡನೆ), ಲಾಠಿ, ದಂಡಸರಪಳಿ ಇತ್ಯಾದಿ.

೧ ಉ ೭. ಆಧ್ಯಾತ್ಮಿಕ ಉಪಾಯಗಳಿಗೆ ಸಾತ್ತ್ವಿಕ ಉತ್ಪಾದನೆಗಳು : ಸನಾತನ ನಿರ್ಮಿತ ಕುಂಕುಮ, ಅತ್ತರ್, ಗೋಮೂತ್ರ ಅರ್ಕ, ಊದುಬತ್ತಿ, ಕರ್ಪೂರ, ದೇವತೆಗಳ ಚಿತ್ರಗಳು, ದೇವತೆಗಳ ನಾಮಪಟ್ಟಿಗಳು ಇತ್ಯಾದಿ. ಆಧ್ಯಾತ್ಮಿಕ ಉಪಾಯಗಳ ಬಗ್ಗೆ ವಿವರವಾದ ಮಾಹಿತಿಗಾಗಿ ಮುಂದಿನ ಕೊಂಡಿಗೆ ಭೇಟಿ ನೀಡಿ – www.sanatan.org/kannada/spiritual – remedies ಅಥವಾ ಆಧ್ಯಾತ್ಮಿಕ ಉಪಾಯಗಳ ಬಗ್ಗೆ ಸನಾತನದ ಸಾಧಕರಿಂದ ತಿಳಿದುಕೊಳ್ಳಿ !

೧ ಉ ೮. ಕೆಲವು ಕಾಲಾವಧಿಗಾಗಿ ಮನೆ ಬಿಟ್ಟು ಇತರ ಕಡೆ ಸ್ಥಳಾಂತರ ವಾಗಬೇಕಾದಲ್ಲಿ ಉಪಯುಕ್ತವಾಗುವ ವಸ್ತುಗಳು : ಪ್ರವಾಹದಂತಹ ಪ್ರಸಂಗಗಳಲ್ಲಿ ಸರಕಾರದ ಸೂಚನೆ ದೊರಕಿದ ನಂತರ ಕೆಲವು ಸಮಯದಲ್ಲಿಯೇ ಮನೆ ಬಿಟ್ಟು ಹೋಗಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವ ವಸ್ತುಗಳು ಜೊತೆಯಲ್ಲಿರಬೇಕು ಎಂಬುದರ ಸರ್ವಸಾಮಾನ್ಯ ಪಟ್ಟಿಯನ್ನು ಮುಂದೆ ಕೊಡಲಾಗಿದೆ. ಇದರಿಂದ ಕೊನೆಕ್ಷಣದಲ್ಲಿ ಗಡಿಬಿಡಿಯಾಗುವುದಿಲ್ಲ ಮತ್ತು ‘ಮನೆಯಿಂದ ಹೊರಬರುವಾಗ ಮಹತ್ವದ ವಸ್ತುಗಳು ಮನೆಯಲ್ಲೇ ಉಳಿಯಲಾರದು.

ಅ. ಎಲ್ಲ ವಸ್ತುಗಳನ್ನು ತುಂಬಿಸಲು ಗಟ್ಟಿಯಾದ ಮತ್ತು ಸಾಗಾಣಿಕೆಗೆ ಸುಲಭವಾದ ದೊಡ್ಡ ಚೀಲ ಮತ್ತು ಬೆನ್ನಿನ ಮೇಲೆ ಹಾಕಿಕೊಳ್ಳುವ ಚೀಲ (ಸ್ಯಾಕ್)

ಆ. ದಂತಮಂಜನ, ಗಡ್ಡ ತೆಗೆಯುವ ಸಾಮಾನುಗಳು, ಸಾಬೂನು, ಸಣ್ಣ ಕನ್ನಡಿ, ಬಾಚಣಿಕೆ, ನಿತ್ಯ ಬಳಸುವ ಬಟ್ಟೆಗಳು, ಹಾಸಿಗೆ-ಹೊದಿಕೆ ಮತ್ತು ನಿಯಮಿತವಾಗಿ ತೆಗೆದುಕೊಳ್ಳುವ ಔಷಧಿಗಳು

ಇ. ಸಾಮಾನ್ಯವಾಗಿ ೩ ದಿನ ಸಾಕಾಗುವಷ್ಟು ಒಣ ತಿಂಡಿ ಮತ್ತು ಕುಡಿಯುವ ನೀರು

ಈ. ನೀರನ್ನು ಶುದ್ಧಗೊಳಿಸಲು ‘ಕ್ಲೋರಿನ್ ಎಂಬ ಔಷಧ

ಉ. ಸಂಚಾರವಾಣಿ ಮತ್ತು ಅದರ ಚಾರ್ಜರ್, ಪವರ್ ಬ್ಯಾಂಕ್ ಮತ್ತು ಸಂಚಾರವಾಣಿ ಕ್ರಮಾಂಕಗಳನ್ನು ಬರೆದಿರುವ ಪುಸ್ತಕ

ಊ. ‘ಸೆಲ್ಗಳಿಂದ ನಡೆಯುವ ಬ್ಯಾಟರಿ ಮತ್ತು ಹೆಚ್ಚಿನ ಪ್ರಕಾಶಬೀರುವ ವಿದ್ಯುತ್‌ನ ಬ್ಯಾಟರಿ

ಎ. ಮೇಣದಬತ್ತಿ ಮತ್ತು ವಾತಾವರಣದಲ್ಲಿ ಆರ್ದ್ರತೆಯಿದ್ದರೂ ಅಥವಾ ನೀರು ತಾಗಿದರೂ ಉರಿಯುವ ಬೆಂಕಿಪೆಟ್ಟಿಗೆ

ಏ. ಮಹತ್ವದ ಕಾಗದಪತ್ರಗಳ (ಉದಾ. ರೇಷನ್ ಕಾರ್ಡ್, ಆಧಾರ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಇವುಗಳ) ಜೆರಾಕ್ಸ್ ಪ್ರತಿಗಳು ಅಥವಾ ಮೂಲ ಪ್ರತಿಗಳು ಮತ್ತು ‘ಎಟಿಎಮ್ ಕಾರ್ಡ್

ಐ. ಪ್ರಥಮ ಚಿಕಿತ್ಸೆಯ ಸಾಹಿತ್ಯಗಳು, ಹಾಗೆಯೇ ಮೂಗು ಮತ್ತು ಬಾಯಿ ಮುಚ್ಚಲು ‘ಮಾಸ್ಕ್ಗಳು

ಒ. ದಪ್ಪ ದಾರ, ದಿಕ್ಸೂಚಿ ಮತ್ತು ಎಲ್ಲರನ್ನೂ ಎಚ್ಚರಿಸಲು ಸೀಟಿ

ಓ. ಆಕಾಶವಾಣಿಯಲ್ಲಿ ನೀಡಲಾಗುವ ಸರಕಾರಿ ಸೂಚನೆ, ವಾರ್ತೆಗಳು ಇತ್ಯಾದಿಗಳನ್ನು ಕೇಳಲು ‘ಸಣ್ಣ ರೇಡಿಯೋ (ಟ್ರಾನ್ಸಿಸ್ಟರ್)

ಔ. ಆಧ್ಯಾತ್ಮಿಕ ಉಪಾಯಗಳ ಸಾಹಿತ್ಯ

೧ ಉ ೯. ಭೂಕಂಪ, ಪ್ರವಾಹ ಇತ್ಯಾದಿ ಆಪತ್ಕಾಲದಲ್ಲಿ ಉಪಯುಕ್ತ ವಸ್ತುಗಳು

ಅ. ಡೇರೆ, ದೊಡ್ಡ ತಾಡಪತ್ರೆ (ಟಾರ್ಪಾಲಿನ್) ಮತ್ತು ಪ್ಲಾಸ್ಟಿಕ್‌ನ ದೊಡ್ಡ ದಪ್ಪ ಹಾಳೆ : ಕೆಲವೊಮ್ಮೆ ತಾತ್ಕಾಲಿಕ ನಿವಾಸವೆಂದು ಡೇರೆ ಉಪಯುಕ್ತವಾಗಿದೆ. ಮನೆಯ ಹೊರಗೆ ತೆಗೆದಿಡುವ ವಸ್ತುಗಳು ನೆನೆಯಬಾರದೆಂದು ತಾಡಪತ್ರೆ, ಪ್ಲಾಸ್ಟಿಕ್‌ನ ದಪ್ಪ ಹಾಳೆ ಇತ್ಯಾದಿಗಳು ಬೇಕಿವೆ.

ಆ. ಜೀವರಕ್ಷಕ ಕವಚ (ಲೈಫ್ ಜಾಕೆಟ್) ಮತ್ತು ಸಣ್ಣ ದೋಣಿ : ಪ್ರವಾಹದಂತಹ ಸ್ಥಿತಿ ಉದ್ಭವಿಸುವ ಸ್ಥಳಗಳಲ್ಲಿರುವ ವ್ಯಕ್ತಿಗಳಿಗೆ ಈ ವಸ್ತುಗಳು ಉಪಯುಕ್ತವಾಗಿವೆ. ಈ ವಸ್ತುಗಳು ‘ಆನ್‌ಲೈನ್ನಲ್ಲಿ ಸಿಗುತ್ತವೆ. ಸಣ್ಣ ದೋಣಿ ಖರೀದಿಸಿದ ನಂತರ ಅದನ್ನು ನಡೆಸಲೂ ಕಲಿಯಬೇಕು.

ಇ. ‘ಗ್ಯಾಸ್ ಮಾಸ್ಕ್ (Gas Mask) ಮತ್ತು ‘ಪೋರ್ಟಬಲ್ ಆಕ್ಸಿಜನ್ ಮಾಸ್ಕ್ ಟ್ಯಾಂಕ್ (Portable Oxygen Mask Tank) : ವಿಷಕಾರಿ ವಾಯುವಿನ ಸೋರುವಿಕೆಯಾದಲ್ಲಿ ‘ಗ್ಯಾಸ್ ಮಾಸ್ಕ್ ಉಪಯುಕ್ತವಾಗುತ್ತದೆ. ಇದನ್ನು ಬಳಸಿ ವ್ಯಕ್ತಿಗೆ ಸುರಕ್ಷಿತ ಸ್ಥಳಕ್ಕೆ ಹೋಗಲು ಸಾಧ್ಯವಾಗುತ್ತದೆ. ‘ಪೋರ್ಟಬಲ್ ಆಕ್ಸಿಜನ್ ಮಾಸ್ಕ್ ಟ್ಯಾಂಕ್ನಿಂದ ರೋಗಿಗೆ ತುರ್ತಾಗಿ ಆಮ್ಲಜನಕ ಕೊಡಲು ಆಗುವುದರಿಂದ ಅವನ ಪ್ರಾಣ ರಕ್ಷಣೆಯಾಗಲು ಸಾಧ್ಯವಾಗುತ್ತದೆ. ‘ಗ್ಯಾಸ್ ಮಾಸ್ಕ್ ಮತ್ತು ‘ಪೋರ್ಟಬಲ್ ಆಕ್ಸಿಜನ್ ಮಾಸ್ಕ್ ಟ್ಯಾಂಕ್ಗಳು ‘ಆನ್‌ಲೈನ್ನಲ್ಲಿ ಸಿಗುತ್ತವೆ.

ಈ. ‘ವಾಕಿ-ಟಾಕಿ (Walkie Talkie) ಮತ್ತು ‘ಹ್ಯಾಮ್ ರೇಡಿಯೋ (Ham Radio) : ಇವು ನಿಸ್ತಂತು ಸಂಪರ್ಕಯಂತ್ರಗಳಾಗಿವೆ. ದೂರವಾಣಿ ಮತ್ತು ಸಂಚಾರವಾಣಿಯು ಕಡಿತವಾದರೆ, ಸರಕಾರದ ಅನುಮತಿ ಪಡೆದು ‘ವಾಕಿ-ಟಾಕಿ ಮತ್ತು ‘ಹ್ಯಾಮ್ ರೇಡಿಯೋಗಳನ್ನು ಬಳಸಬಹುದು. ‘ವಾಕಿ-ಟಾಕಿ ಮತ್ತು ‘ಹ್ಯಾಮ್ ರೇಡಿಯೋಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಜ್ಞರಿಂದ ಪಡೆದುಕೊಳ್ಳಬೇಕು.

ಉ. ಇತರ ವಸ್ತುಗಳು : ಹಣೆಯಲ್ಲಿ ಕಟ್ಟುವ ಬ್ಯಾಟರಿ (ಇದರಿಂದ ಎರಡೂ ಕೈಗಳು ಮುಕ್ತವಾಗಿರುತ್ತವೆ.), ಸಣ್ಣ ದುರ್ಬೀನು, ‘ಸಿಗ್ನಲಿಂಗ್ ಮಿರರ್ (ಈ ಸಣ್ಣ ಕನ್ನಡಿಯ ಹೊಳೆಯುವಿಕೆಯಿಂದ ನಾವು ಸಿಲುಕಿ ಕೊಂಡ ಸ್ಥಳವು ದೂರದವರೆಗಿನ ವ್ಯಕ್ತಿಗಳ ಗಮನಕ್ಕೆ ಬರುತ್ತದೆ.), ‘ಪ್ಯಾರಾ ಕಾರ್ಡ್ (Para cord- ಹೆಚ್ಚು ಭಾರ ಸಹಿಸುವ ಕ್ಷಮತೆಯಿರುವ ಹಗ್ಗ), ‘ರೈನ್ ಪಾಂಚೊ’ (Rain Poncho – ಟೋಪಿಯಿರುವ ದೊಡ್ಡ ‘ರೈನ್‌ಕೋಟ್), ವ್ಯಕ್ತಿಯು ಸಂಕಟದಲ್ಲಿ ಸಿಲುಕಿದಾಗ (ಉದಾ. ಭೂಕಂಪದಿಂದ ಮಣ್ಣಿನಡಿ ಸಿಲುಕಿದಾಗ) ಇತರರ ಗಮನ ಸೆಳೆಯಲು ದೊಡ್ಡ ಧ್ವನಿ ಮಾಡುವ ಯಂತ್ರ (Emergency Personal Alarm) ಮತ್ತು ‘ಥರ್ಮಲ್ ಬ್ಲಾಂಕೆಟ್ (ಅತಿ ಚಳಿಯಿರುವ ಪ್ರದೇಶದಲ್ಲಿ ಉಪಯುಕ್ತ)

೧ ಉ ೧೦. ಪ್ರಸ್ತುತ ಲೇಖನದಲ್ಲಿ ಇತರೆಡೆ ಸೂಚಿಸಿದ ವಸ್ತುಗಳು?: ಆಪತ್ಕಾಲದ ವಿಚಾರ ಮಾಡಿದಾಗ ಆಹಾರಧಾನ್ಯಗಳು, ನೀರು, ವಿದ್ಯುತ್, ಪ್ರವಾಸ ಇತ್ಯಾದಿಗಳಿಗೆ ಸಂಬಂಧಿಸಿದ ವಸ್ತುಗಳನ್ನೂ (ಉದಾ. ಧಾನ್ಯ ಸಂರಕ್ಷಕ ಔಷಧಿ, ನೀರಿನ ಟ್ಯಾಂಕ್) ಖರೀದಿಸಿಡಬೇಕಾಗುತ್ತದೆ. ಇಂತಹ ವಸ್ತುಗಳ ಹೆಸರುಗಳನ್ನು ಲೇಖನ ‘೫ ರಲ್ಲಿ ನೀಡಲಾಗಿದೆ.

೧ ಉ ೧೧. ಮನೆಯಲ್ಲಿನ ವಸ್ತು, ಉಪಕರಣ ಇತ್ಯಾದಿಗಳ ದುರಸ್ತಿಗಾಗಿ ಬೇಕಾಗುವ ಬಿಡಿಭಾಗಗಳನ್ನು ಇಟ್ಟುಕೊಳ್ಳುವುದು, ಹಾಗೆಯೇ ತಜ್ಞರಿಂದ ಆ ವಸ್ತು, ಉಪಕರಣ ಇತ್ಯಾದಿಗಳ ದುರಸ್ತಿ ಮಾಡುವುದನ್ನೂ ಕಲಿತುಕೊಳ್ಳುವುದು : ಆಪತ್ಕಾಲದಲ್ಲಿ ಮನೆಯಲ್ಲಿನ ಫ್ಯಾನ್, ನಲ್ಲಿ, ಮಿಕ್ಸರ್ ಇವುಗಳಂತಹ ವಸ್ತುಗಳು ಹಾಳಾಗಬಹುದು. ಅವುಗಳ ದುರಸ್ತಿಗಾಗಿ ತಗಲುವ ಬಿಡಿಭಾಗಗಳು ಆಪತ್ಕಾಲದಲ್ಲಿ ಪೇಟೆಯಲ್ಲಿ ಸಿಗುವುದು ಕಠಿಣವಾಗುವುದು ಮತ್ತು ದುರಸ್ತಿ ಮಾಡುವ ತಂತ್ರಜ್ಞರೂ (ಮೆಕ್ಯಾನಿಕ್) ಸಿಗುವುದು ಕಠಿಣವಾಗುವುದು. ಇದಕ್ಕಾಗಿ ಇಂತಹ ವಸ್ತುಗಳ ಬಿಡಿ ಭಾಗಗಳನ್ನು ಮೊದಲೇ ಖರೀದಿಸಿಡಬೇಕು, ಹಾಗೆಯೇ ಆ ವಸ್ತುಗಳ ದುರುಸ್ತಿ ಮಾಡುವುದನ್ನು ಸಾಧ್ಯವಿದ್ದಷ್ಟು ಕಲಿತುಕೊಳ್ಳಬೇಕು.

ಮನೆಯಲ್ಲಿನ ಕೆಲವು ವಸ್ತುಗಳ ಬಿಡಿಭಾಗಗಳನ್ನು, ಹಾಗೆಯೇ ಆ ವಸ್ತುಗಳ ‘ದುರಸ್ತಿಯ ಬಗ್ಗೆ ಏನು ಕಲಿತುಕೊಳ್ಳಬೇಕು ? ಎಂದು ಮುಂದೆ ಕೆಲವು ಕಡೆಗಳಲ್ಲಿ ನೀಡಲಾಗಿದೆ.

೧ ಉ ೧೧ ಅ. ಅಡುಗೆಕೋಣೆಗೆ ಸಂಬಂಧಿತ ವಸ್ತುಗಳ ಬಿಡಿಭಾಗಗಳು : ‘ಪ್ರೆಶರ್ ಕುಕರ್ನ ಸೀಟಿ ಮತ್ತು ‘ಗ್ಯಾಸ್ಕೆಟ್ (ಪ್ರೆಶರ್ ಕುಕರ್‌ನ ಮುಚ್ಚಳ ಗಟ್ಟಿಯಾಗಿ ಕೂರಲು ಹಾಕುವ ರಬ್ಬರ್‌ನ ಚಕ್ರ), ‘ಮಿಕ್ಸರ್ಗೆ ಬೇಕಾಗುವ ‘ಕಾರ್ಬನ್ ಬ್ರಶ್ (ಮಿಕ್ಸರ್‌ನ ‘ಮೋಟಾರ್ನ ವಿದ್ಯುತ್ ಪ್ರವಾಹದ ವಾಹಕ), ಅಡುಗೆಯ ‘ಗ್ಯಾಸ್ನ ನಳಿಕೆ (ಪೈಪ್) ಇತ್ಯಾದಿ.

೧ ಉ ೧೧ ಆ. ಪ್ರಕಾಶ ಬೀರುವ ಪಾರಂಪರಿಕ ಸಾಧನಗಳ ಬಿಡಿಭಾಗಗಳು : ಚಿಮಣಿ ಮತ್ತು ಕಂದೀಲುಗಳ ಗಾಜು, ಬತ್ತಿ, ತಿರುಗಣೆ (ಚಿಮಣಿ ಮತ್ತು ಕಂದೀಲುಗಳಲ್ಲಿ ಜ್ಯೋತಿಯನ್ನು ಸಣ್ಣದು-ದೊಡ್ಡದು ಮಾಡುವ ಕೀ) ಇತ್ಯಾದಿ

೧ ಉ ೧೧ ಇ. ವಿದ್ಯುತ್‌ಜೋಡಣೆಗೆ ಸಂಬಂಧಿಸಿದ ವಸ್ತುಗಳ ಬಿಡಿ ಭಾಗಗಳು : ದಂಡದೀಪದ (‘ಟ್ಯೂಬ್‌ಲೈಟ್ನ) ‘ಸ್ಟಾರ್ಟರ್, ‘ಇನ್ಸುಲಿನ್ ಟೇಪ್ (ಅಂಟುಪಟ್ಟಿ), ‘ಫ್ಯೂಸ್ ವೈರ್ ಮತ್ತು ಫ್ಯೂಸ್, ವಿದ್ಯುತ್‌ನ ಬಟನ್‌ಗಳು, ‘ಎಕ್ಸಟೆನ್ಷನ್ ವೈರ್, ಸಾದಾ ‘ವೈರ್, ‘ಸೀಲಿಂಗ್ ಫ್ಯಾನ್ನ ‘ರೆಗ್ಯುಲೇಟರ್ ಇತ್ಯಾದಿ. ದಂಡದೀಪದ ‘ಸ್ಟಾರ್ಟರ್, ವಿದ್ಯುತ್ ಬಟನ್ ಇತ್ಯಾದಿ ವಸ್ತುಗಳ ಬದಲಾವಣೆ; ‘ಫ್ಯೂಸ್ ವೈರ್ ಹಾಕುವುದು ಇತ್ಯಾದಿ ವಿಷಯಗಳನ್ನು ಕಲಿತುಕೊಳ್ಳಬೇಕು.

೧ ಉ ೧೧ ಈ. ನಲ್ಲಿ ಜೋಡಿಸಲು ಸಂಬಂಧಿಸಿದ ಬಿಡಿಭಾಗಗಳು : ನಲ್ಲಿ, ‘ವಾಶರ್, ‘ಟೆಫಲಾನ್ ಟೇಪ್ನಲ್ಲಿ ದುರಸ್ತಿಗಾಗಿ ಬೇಕಾಗುವ ‘ಸ್ಪಾನರ್ಗಳು, ‘(M-seal)’, ‘ಗ್ಲೂ ಸ್ಟಿಕ್ (ಈ ಪ್ಲಾಸ್ಟಿಕ್‌ನ ದಂಟನ್ನು (ಸ್ಟಿಕ್) ಕರಗಿಸಿ ಪ್ಲಾಸ್ಟಿಕ್‌ನ ನೀರಿನ ನಲ್ಲಿಗೆ ಬಿದ್ದಿರುವ ತೂತಿನ ಮೇಲೆ ಹಚ್ಚಿದರೆ ಆ ತೂತು (ಲೀಕೇಜ್) ಮುಚ್ಚಬಹುದು.), ಸೈಕಲ್‌ನ ಹಳೆಯ ‘ಟ್ಯೂಬ್ನ ಕತ್ತರಿಸಿದ ಪಟ್ಟಿಗಳು (ಇವುಗಳನ್ನು ನೀರಿನ ಸೋರುವಿಕೆ ನಿಲ್ಲಿಸಲು ಬಳಸಬಹುದು.), ನೀರಿನ ನಲ್ಲಿ (ಪೈಪ್) ಇತ್ಯಾದಿ

೧ ಉ ೧೧ ಉ. ವಾಹನಗಳಿಗೆ ಸಂಬಂಧಿಸಿದ ಬಿಡಿಭಾಗಗಳು : ತಮ್ಮಲ್ಲಿರುವ ಸೈಕಲ್, ಸೈಕಲ್‌ರಿಕ್ಷಾ, ದ್ವಿಚಕ್ರ, ಚತುಷ್ಚಕ್ರ, ಎತ್ತಿನಗಾಡಿ, ಕುದುರೆಗಾಡಿ ಇತ್ಯಾದಿ ವಾಹನಗಳ ಕೆಲವು ಬಿಡಿಭಾಗಗಳನ್ನು ಖರೀದಿಸಿಡಬಹುದು, ಉದಾ. ಸೈಕಲ್ ಇದ್ದರೆ ಟೈರ್, ಟ್ಯೂಬ್, ‘ಪಂಕ್ಚರ್ ಹಾಕುವ ಸಾಮಗ್ರಿಗಳು ಇತ್ಯಾದಿ.

ತಮ್ಮಲ್ಲಿರುವ ವಾಹನಗಳ ನಿರ್ವಹಣೆ ಮತ್ತು ದುರಸ್ತಿ ಮಾಡುವುದನ್ನೂ ಕಲಿತುಕೊಳ್ಳಬೇಕು, ಉದಾ. ಸೈಕಲ್ ಇದ್ದರೆ, ಅದರ ‘ಪಂಕ್ಚರ್ ಹಾಕುವುದನ್ನು ಕಲಿತುಕೊಳ್ಳಬೇಕು. (ಮುಂದುವರಿಯುವುದು)

(ಆಧಾರ : ಸನಾತನದ ಮುಂಬರುವ ಗ್ರಂಥ ಮಾಲಿಕೆ ‘ಆಪತ್ಕಾಲದಲ್ಲಿ ಜೀವರಕ್ಷಣೆಗಾಗಿ ಮಾಡಬೇಕಾದ ಪೂರ್ವ ಸಿದ್ಧತೆ)

(ಪ್ರಸ್ತುತ ಲೇಖನಮಾಲೆಯ ಕೃತಿಸ್ವಾಮ್ಯ (ಕಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆಯ ಬಳಿಯಿದೆ.)

(ಈ ಲೇಖನವನ್ನು www.sanatan.org ಈ ಜಾಲತಾಣದಲ್ಲಿ ಓದಿರಿ.)