ಮಥುರಾದ ಶ್ರೀಕೃಷ್ಣಜನ್ಮಭೂಮಿ ಮುಕ್ತಿಗಾಗಿ ಸಾಧುಗಳಿಂದ ‘ಶ್ರೀಕೃಷ್ಣಜನ್ಮಭೂಮಿ ನಿರ್ಮಾಣ ನ್ಯಾಸ’ದ ಸ್ಥಾಪನೆ

ಶ್ರೀಕೃಷ್ಣಜನ್ಮಭೂಮಿ

ನವ ದೆಹಲಿ – ಪ್ರಧಾನಿ ಮೋದಿಯವರು ಅಯೋಧ್ಯೆಯಲ್ಲಿ ಶ್ರೀರಾಮಮಂದಿರವನ್ನು ನಿರ್ಮಾಣ ಮಾಡಲು ಭೂಮಿಪೂಜೆಯನ್ನು ಮಾಡಿದ ಕೇಲವೇ ದಿನಗಳಲ್ಲಿ ಮಥುರಾದ ಶ್ರೀಕೃಷ್ಣಜನ್ಮಭೂಮಿ ಮುಕ್ತ ಮಾಡಲು ಸಾಧುಗಳು ‘ಶ್ರೀರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ’ನಂತೆಯೇ ‘ಶ್ರೀಕೃಷ್ಣಜನ್ಮಭೂಮಿ ನಿರ್ಮಾಣ ನ್ಯಾಸ’ವನ್ನು ಸ್ಥಾಪಿಸಿದ್ದಾರೆ.

‘ಶ್ರೀಕೃಷ್ಣಜನ್ಮಭೂಮಿ ನಿರ್ಮಾಣ ನ್ಯಾಸ’ದ ಮುಖ್ಯಸ್ಥರಾದ ಆಚಾರ್ಯ ದೇವಮುರಾರಿ ಬಾಪೂ ಇವರು ಈ ಬಗ್ಗೆ ಹೀಗೆಂದರು,

ಮಥುರಾದಲ್ಲಿ ಶ್ರೀಕೃಷ್ಣನ ಜನ್ಮಸ್ಥಳದಲ್ಲಿರುವ ಈದ್ಗಾಹ ಮಸೀದಿ ಮತ್ತು ಅದರ ಪಕ್ಕದ ಭಗವಾನ್ ಶ್ರೀಕೃಷ್ಣ ದೇವಸ್ಥಾನ

೧. ಜುಲೈ ೨೩ ರಂದು ‘ಹರಿಯಾಲಿ ತೀಜ’ ಈ ಹಬ್ಬದ ನಿಮಿತ್ತವಾಗಿಸಿಕೊಂಡು ನ್ಯಾಸದ ನೋಂದಣಿಯನ್ನು ಮಾಡಿದರು. ನ್ಯಾಸದಲ್ಲಿ ೧೪ ರಾಜ್ಯಗಳಲ್ಲಿನ ಹೆಚ್ಚು ಕಡಿಮೆ ೮೦ ಸಂತರ ಸಹಭಾಗ ಇದೆ. ಅದರಲ್ಲಿ ವೃಂದಾವನದ ೧೧ ಸಂತರಿದ್ದಾರೆ.

೨. ಶ್ರೀಕೃಷ್ಣಜನ್ಮಭೂಮಿಯ ಮುಕ್ತಿಗಾಗಿ ಶೀಘ್ರದಲ್ಲೇ ಇತರ ಸಂತರ ಹಾಗೂ ಸಾಧುಗಳನ್ನು ಸೇರಿಸಿಕೊಳ್ಳಲು ಹಸ್ತಾಕ್ಷರ ಅಭಿಯಾನವನ್ನು ನಡೆಸಲಾಗುವುದು. ನಾವು ಈ ಬಗ್ಗೆ ದೇಶದಾದ್ಯಂತ ಚಳುವಳಿಯನ್ನು ಆರಂಭಿಸುವೆವು. ನಾವು ಫೆಬ್ರವರಿ ತಿಂಗಳಲ್ಲಿ ಈ ಅಭಿಯಾನವನ್ನು ಆರಂಭಿಸಿದ್ದೆವು; ಆದರೆ ಸಂಚಾರ ನಿಷೇಧದಿಂದಾಗಿ ನಮಗೆ ಮುಂದೆ ಹೋಗಲು ಆಗಲಿಲ್ಲ.

೩. ಶ್ರೀಕೃಷ್ಣಜನ್ಮಭೂಮಿಯ ಮೇಲೆ ಶಾಹಿ ಈದ್ಗಾಹ ಮಸೀದಿ ನಿಂತಿದೆ. ಔರಂಗಾಜೇಬನು ೧೬೬೯ ರಲ್ಲಿ ಪ್ರಾಚೀನ ಕೇಶವನಾಥ ದೇವಸ್ಥಾನವನ್ನು ಧ್ವಂಸ ಮಾಡಿ ಅಲ್ಲಿ ಶಾಹಿ ಈದ್ಗಾಹ ಮಸೀದಿಯನ್ನು ನಿರ್ಮಿಸಿದ್ದನು.

೪. ‘ಪ್ಲೆಸಸ್ ಆಫ್ ವರ್ಶಿಪ್’ ಈ ಕಾಯ್ದೆಯು ಮೊದಲು ಇಸ್ಲಾಮಿ ಆಕ್ರಮಣಕಾರರಿಂದ ನಾಶವಾಗಿದ್ದ ಹಿಂದೂಗಳ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಸ್ಥಳಗಳ ಮೇಲೆ ಮತ್ತೊಮ್ಮೆ ಹಕ್ಕನ್ನು ಪಡೆಯಲು ಅಡಚಣೆಯಾಗುತ್ತಿದೆ. ಈ ವಿವಾದಿತ ಕಾಯ್ದೆ ಚರ್ಚ್, ಮಸೀದಿ ಹಾಗೂ ದೇವಸ್ಥಾನಗಳಂತಹ ಉಪಾಸನಾಸ್ಥಳಗಳು ಬೇರೆ ಉಪಾಸನಾಸ್ಥಳವಾಗಿ ಮಾರ್ಪಡಲು ನಿರ್ಬಂಧಿಸಿದೆ.

೫. ಇವು ಸಣ್ಣಪುಟ್ಟ ಅಡಚಣೆಗಳಿವೆ ಹಾಗೂ ಯಾವಾಗ ನಾವು ಮುಂದೆ ಹೋಗುವೆವೊ, ಆಗ ನಾವು ಈ ಅಡಚಣೆಗಳನ್ನು ದೂರ ಮಾಡುವೆವು. ಶ್ರೀಕೃಷ್ಣಜನ್ಮಭೂಮಿಯನ್ನು ಸ್ವತಂತ್ರ ಮಾಡುವುದೇ ನಮ್ಮ ಸಂಕಲ್ಪವಾಗಿದೆ ಎಂದು ಹೇಳಿದರು.